ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್‌ಗೆ ಕೊರೋನಾ ಪಾಸಿಟಿವ್ ವೈರಸ್ ಕುರಿತು ಕೆಲವೇ ದಿನ ಹಿಂದೆ ಕನ್ನಡದಲ್ಲಿ ಜಾಗೃತಿ ಮೂಡಿಸಿದ್ದ ನಟ

ಕೆಲವೇ ದಿನಗಳ ಹಿಂದೆ ಕನ್ನಡದಲ್ಲಿ ಮಾತನಾಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದ ಜೂನಿಯರ್ ಎನ್‌ಟಿಆರ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಟಾಲಿವುಡ್ ನಟ ಕೆಲವೇ ದಿನ ಹಿಂದೆ ಜಾಗೃತಿ ವಿಡಿಯೋ ಒಂದನ್ನು ಶೇರ್ ಮಾಡಿದ್ದರು.

ತೆಲುಗು ಸೂಪರ್‌ ಸ್ಟಾರ್ ಜೂನಿಯರ್ ಎನ್‌ಟಿಆರ್‌ಗೆ ಕೋವಿಡ್ -19 ದೃಢಪಟ್ಟಿದೆ. ತಮ್ಮ ಅಭಿಮಾನಿಗಳಿಗೆ ಇದನ್ನು ತಿಳಿಸಲು ಮತ್ತು ಅವರು ಚೆನ್ನಾಗಿದ್ದಾರೆ ಎಂದು ಹೇಳಲು ನಟ ಟ್ವೀಟ್ ಮಾಡಿದ್ದಾರೆ.

ಕೊರೋನಾ ತಡೆಗೆ ಕನ್ನಡದಲ್ಲೇ ಸಲಹೆ ಕೊಟ್ಟ ಟಾಲಿವುಡ್ ಸೂಪರ್‌ಸ್ಟಾರ್

ನನಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಪ್ಲೀಸ್ ಚಿಂತಿಸಬೇಡಿ, ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ನನ್ನ ಕುಟುಂಬ ಮತ್ತು ನಾನು ನಮ್ಮನ್ನು ಪ್ರತ್ಯೇಕಿಸಿಕೊಂಡು ಕ್ವಾರೆಂಟೈನ್‌ನಲ್ಲಿದ್ದೇವೆ. ನಾವು ವೈದ್ಯರ ಮೇಲ್ವಿಚಾರಣೆಯಲ್ಲಿ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದೇವೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ. ಸುರಕ್ಷಿತವಾಗಿರಿ ಎಂದಿದ್ದಾರೆ.

Scroll to load tweet…

ಆಲಿಯಾ ಭಟ್ ತೆಲುಗಿನಲ್ಲಿ, ರಾಮ್ ಚರಣ್ ತಮಿಳಿನಲ್ಲಿ, ಅಜಯ್ ದೇವಗನ್ ಹಿಂದಿಯಲ್ಲಿ, ಜೂನಿಯರ್ ಎನ್‌ಟಿಆರ್ ಕನ್ನಡದಲ್ಲಿ, ಎಸ್‌ಎಸ್‌ ರಾಜಮೌಳಿ ಮಲಯಾಳಂನಲ್ಲಿ ಕೊರೋನಾ ಕುರೊತು ವಿಡಿಇಯೋ ಮೂಲಕ ಜಾಗೃತಿ ಮೂಡಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

Scroll to load tweet…

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona