ಕನ್ನಡಿಗರಿಗೆ ಟಾಲಿವುಡ್ ನಟನ ಸಲಹೆ | ಕೊರೋನಾ ವಿರುದ್ಧ ಜೂನಿಯರ್ ಎನ್‌ಟಿ ಆರ್ ಕೊಟ್ಟ ಟಿಪ್ಸ್ 

ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಕನ್ನಡದಲ್ಲೇ ಕನ್ನಡಿಗರಿಗೆ ಕೊರೋನಾ ವಿರುದ್ಧ ಟಿಪ್ಸ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ದೈನಂದಿನ ಪ್ರಕರಣ 40 ಸಾವಿರಕ್ಕೂ ಮೇಲ್ಪಟ್ಟು ಏರಿಕೆಯಾಗುತ್ತಿದ್ದು ಈ ಸಂದರ್ಭದಲ್ಲಿ ನಟ ಕಾಳಜಿ ವ್ಯಕ್ತಪಡಿಸಿದ್ದಾರೆ.

"

ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ದೊಡ್ಡ ಅಸ್ತ್ರವಾಗಿದೆ. ಮಾಸ್ಕ್ ಸದಾ ಧರಿಸಿ, ಕೈಗಳನ್ನು ಸ್ವಚ್ಛಗೊಳಿಸಿ. ಪಬ್ಲಿಕ್‌ನಲ್ಲಿ ಓಡಾಡುವಾಗ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಿ ಎಂದಿದ್ದಾರೆ.

AIADMK ಪಕ್ಷದ ಚಿಹ್ನೆ ಡಿಸೈನ್ ಮಾಡಿದ್ದ ನಟ ಪಾಂಡು ಕೊರೋನಾದಿಂದ ಸಾವು

ಆಲಿಯಾ ಭಟ್ ತೆಲುಗಿನಲ್ಲಿ, ರಾಮ್ ಚರಣ್ ತಮಿಳಿನಲ್ಲಿ, ಅಜಯ್ ದೇವಗನ್ ಹಿಂದಿಯಲ್ಲಿ, ಜೂನಿಯರ್ ಎನ್‌ಟಿಆರ್ ಕನ್ನಡದಲ್ಲಿ, ಎಸ್‌ಎಸ್‌ ರಾಜಮೌಳಿ ಮಲಯಾಳಂನಲ್ಲಿ ಕೊರೋನಾ ಕುರೊತು ವಿಡಿಇಯೋ ಮೂಲಕ ಜಾಗೃತಿ ಮೂಡಿಸಿದ್ದಾರೆ.

View post on Instagram

ಕರ್ನಾಟಕದಲ್ಲಿ ಬುಧವಾರ 50112 ಕೊರೋನಾ ಪಾಸಿಟಿವ್ ಪ್ರಕರನಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ ಮಾತ್ರ 23106 ಪ್ರಕರಣ ದೃಢಪಟ್ಟಿದೆ. ದಾಖಲೆಯ 346 ಸಾವು ದಾಖಲೆಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona