Asianet Suvarna News Asianet Suvarna News

ಹಾಲಿವುಡ್​ನಲ್ಲಿ ಹಲ್​ಚಲ್​ ಸೃಷ್ಟಿಸಲಿದ್ದಾರೆ 'ಮೋದಿ'! ಶುರುವಾಯ್ತು ಶೂಟಿಂಗ್​: ಏನಿದರ ಕಥೆ?

ಹಾಲಿವುಡ್​ನಲ್ಲಿ ಬಹು ನಿರೀಕ್ಷಿತ ಮೋದಿ ಚಿತ್ರದ ಶೂಟಿಂಗ್​ ಶುರುವಾಗಿದೆ. ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಬಹುದಾದ ಈ ಚಿತ್ರದಲ್ಲಿರುವ ಕಥೆಯೇನು?
 

Johnny Depp Shoots Modi With Al Pacino Filming Begins In Budapest suc
Author
First Published Oct 1, 2023, 11:31 AM IST | Last Updated Oct 1, 2023, 11:31 AM IST

ಹಾಲಿವುಡ್​ನಲ್ಲಿ ಬಹು ನಿರೀಕ್ಷಿತ 'ಮೋದಿ' ಸಿನಿಮಾಕ್ಕೆ ಶೂಟಿಂಗ್​ ಶುರುವಾಗಿದೆ. ಕೆಲ ತಿಂಗಳ ಹಿಂದೆ ಖ್ಯಾತ ಹಾಲಿವುಡ್ ನಟ ಜಾನಿ ಡೆಪ್ (Johnny Depp)ದೊಡ್ಡ ಘೋಷಣೆ ಮಾಡಿದ್ದರು. ಮೋದಿ ಸಿನಿಮಾ ಶುರು ಮಾಡುವುದಾಗಿ ಹೇಳಿದ್ದರು. ಸುಮಾರು 25 ವರ್ಷಗಳ ನಂತರ ಜಾನಿ ಡೆಪ್ ನಟನೆಯನ್ನು ತೊರೆದು ಮತ್ತೆ ನಿರ್ದೇಶನ ಮಾಡಲು ನಿರ್ಧರಿಸಿದ್ದು, ಇದೀಗ ಅವರ ಆಯ್ಕೆ ಮಾಡಿಕೊಂಡಿರುವ ಕಥೆ ಮೋದಿಯವರದ್ದು. ಇದೇನು ಕಥೆ ಎನ್ನುವುದಕ್ಕೂ ಮೊದಲು ಜಾರಿ ಡೆಪ್​ ಅವರ ಕುರಿತು ಒಂದಿಷ್ಟು ಹೇಳಲೇಬೇಕು. ಅದೇನೆಂದರೆ,  ಜಾನಿ ಡೆಪ್  1997ರಲ್ಲಿ ದಿ ಬ್ರೇವ್ ಚಿತ್ರವನ್ನು ನಿರ್ದೇಶಿಸಿದ್ದರು. ಖುದ್ದು ಈ ಚಿತ್ರದಲ್ಲಿ ನಟಿಸಿದ್ದರು ಕೂಡ. ಆದರೆ ಇವರು ಸಕತ್​ ಸುದ್ದಿ ಮಾಡಿದ್ದು, ವಿಚ್ಛೇದನದಿಂದಾಗಿದೆ. ಜಾನಿ ಡೆಪ್ ಮಾಜಿ ಪತ್ನಿ ಅಂಬರ್ ಹರ್ಡ್ ಅವರ ಕಾನೂನು ಕ್ಷೇತ್ರದಲ್ಲಿ ಹೆಸರು ಮಾಡಿದವರು.  ಈ ಸ್ಟಾರ್ ದಂಪತಿಯ ಜಗಳ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.  ಅವೆಲ್ಲಾ ತಣ್ಣಗಾಗುತ್ತಿದ್ದಂತೆಯೇ ಈಗ ನಟ   ದೊಡ್ಡ ಪರದೆಯ ಮೇಲೆ ಕಮ್​ಬ್ಯಾಕ್​ ಆಗಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ  MODI ಎಂದು ಹೆಸರಿಡಲಾಗಿದೆ. ಇದರ ಶೂಟಿಂಗ್​ ಇದಾಗಲೇ ಆರಂಭವಾಗಿದೆ.

ಹಾಗಿದ್ದ ಮೇಲೆ ಈ ಮೋದಿ ಯಾರು ಎನ್ನುವುದು ಈಗಿರುವ ಕುತೂಹಲ. ಸದ್ಯ ಜಗತ್ತಿದಾನದ್ಯಂತ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತೇ ಹೆಚ್ಚು ಚರ್ಚೆಯಾಗುತ್ತಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಬಳಿಕ, ಭಾರತದತ್ತ ಇಡೀ ವಿಶ್ವವೇ ಕಣ್ಣುನೆಟ್ಟಿದೆ.  ಆದ್ದರಿಂದ ಸಾಮಾನ್ಯವಾಗಿ ಮೋದಿ ಎಂದಾಕ್ಷಣ ಪ್ರಧಾನಿ ನರೇಂದ್ರ ಮೋದಿಯವರ ನೆನಪಾಗುತ್ತದೆ. ಆದರೆ ಈ ಚಿತ್ರ ಅವರ ಕುರಿತು ಅಲ್ಲವೇ ಅಲ್ಲ. ಹಾಗಿದ್ದರೆ, ಕುಖ್ಯಾತಿ ಗಳಿಸಿರೋ ಲಲಿತ್​ ಮೋದಿ, ನೀರವ್​ ಮೋದಿನಾ ಎಂದು ಕೇಳಿದರೆ ಅದೂ ಅಲ್ಲ. ಅಷ್ಟಕ್ಕೂ ಭಾರತಕ್ಕೂ, ಹಾಲಿವುಡ್​ನ ಈ ಮೋದಿಗೂ ಸಂಬಂಧವೇ ಇಲ್ಲ. ಆದರೆ ಇದು ಬಯೋಪಿಕ್​ ಎನ್ನುವುದು ನಿಜ. ಇದು  ಇಟಾಲಿಯನ್ ಕಲಾವಿದ ಅಮೆಡಿಯೊ ಮೋದಿಗ್ಲಿಯಾನಿ  ಅವರ ಜೀವನವನ್ನು ಆಧರಿಸಿದೆ ಎನ್ನಲಾಗಿದೆ. ಎಮಿಡಿಯೊ ಮೋದಿಗ್ಲಿಯಾನಿ ಒಬ್ಬ ಮಹಾನ್ ವರ್ಣಚಿತ್ರಕಾರ ಮತ್ತು ಶಿಲ್ಪಿ.

ನಿರ್ಮಾಪಕ ಮಂಚಕ್ಕೆ ಕರೆದ, ಹೆದರಿ ಮೇಕಪ್‌ ಆರ್ಟಿಸ್ಟ್‌ ಜೊತೆ ಮಲಗಿದ್ದೆ: ಕರಾಳ ದಿನ ನೆನೆದ ಇಶಾ ಗುಪ್ತಾ

20ನೇ ಶತಮಾನದ ಆರಂಭದಲ್ಲಿ ಪ್ರಸಿದ್ಧವಾಗಿದ್ದವರು ಇಟಲಿಯ ಚಿತ್ರಕಾರ ಅಮೆಡಿಯೋ ಮೋದಿಗ್ಲಿಯಾನಿ.  ಆಧುನಿಕ ಶೈಲಿಯ ಚಿತ್ರಗಳನ್ನು ರಚಿಸುವ ಮೂಲಕ ಇವರು ವಿಶ್ವಖ್ಯಾತಿ ಗಳಿಸಿದ್ದರು.  ಆದರೆ ದುರದೃಷ್ಟವಶಾತ್​ ಆ ಕಲಾಕೃತಿಗಳಿಗೆ ಅಂದಿನ ಕಾಲದಲ್ಲಿ ಸೂಕ್ತ ಮನ್ನಣೆಯೇ ಸಿಕ್ಕಿರಲಿಲ್ಲ. ಬದುಕಿರುವಾಗ ಅವರಿಗೆ ಸಿಗದ ಮಾನ್ಯತೆ ಅವರ ಮರಣದ ನಂತರ ಸಿಕ್ಕಿತ್ತು. ಅವರು ಸಾವನ್ನಪ್ಪಿದ ಬಳಿಕ  ಚಿತ್ರಗಳಿಗೆ ಜನಪ್ರಿಯತೆ ಸಿಕ್ಕಿತು. ಮೋದಿಗ್ಲಿಯಾನಿ ಅವರು ಬದುಕಿದ್ದು ಕೇವಲ 35 ವರ್ಷ. ಆದರೆ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರು ಮಾಡಿದ ಸಾಧನೆ ಮಾತ್ರ ಅಪಾರ. ಅವರ ಜೀವನದ ಕಥೆಯೇ ಕುತೂಹಲವಾದದ್ದು. ಈ ಚಿಕ್ಕ ವಯಸ್ಸಿನ ಅವರ ಇಂಟರೆಸ್ಟಿಂಗ್​ ಜೀವನ ಕಥೆಯನ್ನು ತೆರೆಯ ಮೇಲೆ ತರಲು ಸಿದ್ಧರಾಗಿದ್ದು, ಇದರ ಶೂಟಿಂಗ್​ ಆರಂಭವಾಗಿದೆ.
 

ಜಾನಿ ಡೆಪ್​ ನಿರ್ದೇಶನದಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಹೆಸರಾಂತ ಕಲಾವಿದ ಅಲ್​ ಪಚಿನೋ ಅವರು ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ. ಚಿತ್ರದಲ್ಲಿ ಮೋದಿಗ್ಲಿಯಾನಿ ಜೀವನದಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಕುರಿತು ವಿವರಣೆ ನೀಡಲಾಗಿದೆ. ಪ್ಯಾರಿಸ್‌ನಲ್ಲಿ ನಡೆದ 1 ನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಮೋದಿಯವರ ವರ್ಣಚಿತ್ರಗಳಿಂದ ಆದ ನೆರವುಗಳನ್ನು ಇದರಲ್ಲಿ ಬಿಂಬಿಸಲಾಗಿದೆ. ಸಿನಿಮಾದಲ್ಲಿ ಜಾನ್ ಡೆಪ್ ಕಾಸ್ಟಿಂಗ್ ಕೂಡ ಮಾಡಿದ್ದಾರೆ ಎಂದು ನಿರ್ದೇಶಕ ಡೆಪ್​ ತಿಳಿಸಿದ್ದಾರೆ. ಈ ಚಿತ್ರ ಮಾಡಲು ತಮ್ಮ  ತಂದೆ ರಾಬರ್ಟ್ ಪಾಮರ್​ ಸ್ಪೂರ್ತಿ ಎನ್ನುತ್ತಾರೆ ಡೆಪ್. ಅಂದಹಾಗೆ ಡೆಪ್​ ಅವರ ಪೋಷಕರು 1978ರಲ್ಲಿ ವಿಚ್ಛೇದನ ಪಡೆದರು. ಆಗ ನಟನಿಗೆ 15 ವರ್ಷ. ನಂತರ ನಟನ ತಾಯಿ ರಾಬರ್ಟ್ ಪಾಮರ್ ಎಂಬರವನ್ನು ಮದುವೆಯಾದರು.  

ಕನ್ನಡದ ಬೆಡಗಿ ಜ್ಯೋತಿ ರೈ ಗುಟ್ಟಾಗಿ ಇನ್ನೊಂದ್‌ ಮದ್ವೆಯಾದ್ರಾ? ಕೊರಳಲ್ಲಿ ತಾಳಿ, ಪಕ್ಕದಲ್ಲಿ ನಿರ್ದೇಶಕ!
 

Latest Videos
Follow Us:
Download App:
  • android
  • ios