Asianet Suvarna News Asianet Suvarna News

ನಿರ್ಮಾಪಕ ಮಂಚಕ್ಕೆ ಕರೆದ, ಹೆದರಿ ಮೇಕಪ್‌ ಆರ್ಟಿಸ್ಟ್‌ ಜೊತೆ ಮಲಗಿದ್ದೆ: ಕರಾಳ ದಿನ ನೆನೆದ ಇಶಾ ಗುಪ್ತಾ

ನಿರ್ಮಾಪಕ ಹಾಗೂ ಸಹ ನಿರ್ಮಾಪಕ ಹೇಗೆ ತಮಗೆ ಲೈಂಗಿಕ ಬೇಡಿಕೆ ಇಟ್ಟರು, ಹೇಗೆ ತಾವು ಅದರಿಂದ ಪಾರಾದೆವು ಎಂದು ನಟಿ ಇಶಾ ಗುಪ್ತಾ ಬಹಿರಂಗಪಡಿಸಿದ್ದಾರೆ. 
 

Actress Esha Gupta shares her HORRIFYING casting couch experience suc
Author
First Published Sep 30, 2023, 5:42 PM IST

ಇದಾಗಲೇ ಹಲವಾರು ತಾರೆಯರು ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಟಿಯರು ಮಾತ್ರವಲ್ಲದೇ ಕೆಲವು ನಟರಿಗೂ ಈ ಕೆಟ್ಟ ಅನುಭವ ಆಗಿದ್ದಿದೆ. ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ ತಮ್ಮ ಜೊತೆ ಮಲಗಲು ನೇರವಾಗಿ ಆಹ್ವಾನವಿತ್ತ ನಟರು, ನಿರ್ದೇಶಕರು, ನಿರ್ಮಾಪಕರು ಮುಂತಾದವರ ಬಗ್ಗೆ ಇದಾಗಲೇ ಹಲವರು ಮಾತನಾಡಿದ್ದು, ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ಅದರಲ್ಲಿಯೂ ಬಾಲಿವುಡ್‌ನಲ್ಲಿ ಸದಾ ಅವಕಾಶ ಸಿಗಬೇಕು ಎಂದರೆ ಇದು ಅನಿವಾರ್ಯ, ಇಲ್ಲದಿದ್ದರೆ ಚಿತ್ರರಂಗದಿಂದಲೇ ಹೊರಹಾಕಲಾಗುತ್ತದೆ ಎನ್ನುವ ಮಾತುಗಳನ್ನೂ ಆಡಿದ್ದಾರೆ. ಇದೀಗ ತಮಗಾಗಿರುವ ನೋವನ್ನು ತೋಡಿಕೊಂಡಿದ್ದಾರೆ ನಟಿ ಇಶಾ ಗುಪ್ತಾ.

ಸದಾ  ಬೋಲ್ಡ್​ ಅಭಿನಯ ಹಾಗೂ ಹಾಟ್‌ ಲುಕ್​ನಿಂದ ಸದ್ದು ಮಾಡ್ತಿರೋ ಬೆಡಗಿ ಇಶಾ ಗುಪ್ತಾ ಕಾಸ್ಟಿಂಗ್‌ ಕೌಚ್‌ ಕುರಿತು ಮಾತನಾಡಿದ್ದಾರೆ. ಸ್ಪಾಟ್‌ಬಾಯ್‌ ಮ್ಯಾಗಝೀನ್‌ಗೆ ಅವರು ನೀಡಿರುವ ಸಂದರ್ಶನದಲ್ಲಿ ಎರಡು ಬಾರಿ ತಮಗಾಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ. ನಿರ್ಮಾಪಕ ಮತ್ತು ಸಹ ನಿರ್ಮಾಪಕ ಹೇಗೆ ತಮ್ಮನ್ನು ಮಂಚಕ್ಕೆ ಕರೆದರು ಅದನ್ನು ಒಪ್ಪದಿದ್ದಾಗ ಹೇಗೆ ನಡೆದುಕೊಳ್ಳಲಾಯಿತು ಎನ್ನುವುದನ್ನು ನಟಿ ಹೇಳಿದ್ದಾರೆ. ಸಹ-ನಿರ್ಮಾಪಕರ ಮಾತನ್ನು ನಾನು ನಿರಾಕರಿಸಿದಾಗ ನನ್ನನ್ನು ಸಿನಿಮಾದಿಂದ ಹೊರ ಹಾಕಿದರು. ಇದಾದ ನಂತರ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಲಿಲ್ಲ ಎಂದಿದ್ದಾರೆ.  ಸಹ ನಿರ್ಮಾಪಕನ  ಲೈಂಗಿಕ ಬೇಡಿಕೆ ನಿರಾಕರಿಸಿದೆ. ಆತ ನನ್ನನ್ನು ಆ ಸಿನಿಮಾದಲ್ಲಿ ಬಳಿಕ ನೋಡಲು ಬಯಸಲಿಲ್ಲ.  ಇದಾದ ಬಳಿಕ ಹಲವು ಸಿನಿಮಾ ತಯಾರಕರು ನನಗೆ ಅವಕಾಶ ನೀಡಲಿಲ್ಲ. ನಾನು ಅವರಿಗೆ ಏನಾದರೂ ನೀಡದೆ ಇದ್ದರೆ ಇವಳಿಗ್ಯಾಕೆ ಅವಕಾಶ ನೀಡಬೇಕು ಎಂದು ಇತರರು ಮಾತನಾಡುವ ವಿಷಯ ನನ್ನ ಗಮನಕ್ಕೆ ಬಂದಿತ್ತು ಎಂದು ಇಶಾ ಗುಪ್ತಾ ಹೇಳಿದ್ದಾರೆ.

ಕನ್ನಡದ ಬೆಡಗಿ ಜ್ಯೋತಿ ರೈ ಗುಟ್ಟಾಗಿ ಇನ್ನೊಂದ್‌ ಮದ್ವೆಯಾದ್ರಾ? ಕೊರಳಲ್ಲಿ ತಾಳಿ, ಪಕ್ಕದಲ್ಲಿ ನಿರ್ದೇಶಕ!

ಇನ್ನೊಂದು ದಿನ,  ಹೊರಾಂಗಣ ಶೂಟಿಂಗ್‌ ನಡೆಸಿ ಕೊಠಡಿಯಲ್ಲಿದ್ದ ವೇಳೆ  ಹಲವು ಬಾರಿ ಯಾರೋ ಬಾಗಿಲು ಬಡಿದಿದ್ದರು. ನಂತರ ತೆರೆದಾಗ ನಿರ್ಮಾಪಕರು ಲೈಂಗಿಕ ಬೇಡಿಕೆ ಇಟ್ಟರು. ಈ ಘಟನೆ ನಡೆದ ಸಂದರ್ಭದಲ್ಲಿ ಒಬ್ಬಳಿಗೆ ಉಳಿದುಕೊಳ್ಳಲು ಭಯವಾಯಿತು. ಮೇಕಪ್‌ ಆರ್ಟಿಸ್ಟ್‌ಗೆ ಕಾಲ್‌ ಮಾಡಿ ನನ್ನ ರೂಂನಲ್ಲಿ ಉಳಿದುಕೊಳ್ಳಲು ತಿಳಿಸಿದೆ. ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಂದ ಬಚಾವ್‌ ಆಗಲು ನಾನು ನನ್ನ ಮೇಕಪ್ ಆರ್ಟಿಸ್ಟ್‌ನನ್ನು ನನ್ನ ಕೋಣೆಯಲ್ಲಿ ಮಲಗಲು ಕರೆದೆ.  ಅಂದು ಅವರ ಜೊತೆನೇ ಮಲಗಿದೆ ಎಂದು ಆ ದಿನ ನೆನಪಿಸಿಕೊಂಡಿದ್ದಾರೆ ನಟಿ.  

 ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆ ಇಲ್ಲದೇ ಬಂದವರಿಗೆ ಇದು ಮಾಮೂಲು,  ಸ್ಟಾರ್ ಮಕ್ಕಳ ಜೊತೆ ಅವರು ಈ ರೀತಿ ಮಾಡಲ್ಲ. ಅವರ ಅಪ್ಪ-ಅಮ್ಮನ ಭಯ ಇರುತ್ತದೆ. ಆದರೆ ನಮ್ಮಂಥವರನ್ನು ಹೇಗಾದರೂ ಬಳಸಿಕೊಳ್ಳಬಹುದು ಎಂದು ನೋಡುತ್ತಾರೆ. ಇದಕ್ಕೆ ಹಲವರು ಒಪ್ಪುತ್ತಾರೆ, ಚಿತ್ರರಂಗದಲ್ಲಿ ಸಕ್ಸಸ್‌ ಕಾಣಲು ಇವೆಲ್ಲಾ ಮಾಮೂಲು ಎಂದು ಹೇಳುತ್ತಾರೆ ಇಶಾ.  ಇನ್ನು ಇಶಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, 2012ರಲ್ಲಿ ಜನ್ನತ್‌ 2 ಸಿನಿಮಾದ ಮೂಲಕ ಇವರು ಬಾಲಿವುಡ್‌ಗೆ ಪ್ರವೇಶಿಸಿದರು. ರಾಜ್‌ 3ಡಿ, ಗೋರಿ ತೇರೇ ಪ್ಯಾರ್‌ ಮೇನ್‌, ಹಮ್‌ಶಕಲ್ಸ್‌, ಬೇಬಿ, ರುಸ್ತುಂ, ಟೋಟಲ್‌ ಧಮಾಲ್‌, ಪಾಲ್ತಾನ್‌, ಬಾದ್‌ಶಾಹೋ ಇತ್ಯಾದಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಶಾಲೆಯಲ್ಲಿದ್ದಾಗಲೇ ಪೋರ್ನ್‌ ವೆಬ್‌ಸೈಟ್‌ನಲ್ಲಿ ಜಾಹ್ನವಿ ಕಪೂರ್‌: ಶಾಕಿಂಗ್‌ ವಿಷ್ಯ ಹೇಳಿದ ಶ್ರೀದೇವಿ ಪುತ್ರಿ!
 

Follow Us:
Download App:
  • android
  • ios