Jayaprada Birthday: ಅಪ್ರತಿಮ ಸುಂದರಿ ಬಾಳಲ್ಲಿ ಬಿರುಗಾಳಿ- ಮದ್ವೆಯಾದ್ರೂ ಸಿಗಲಿಲ್ಲ ಪತ್ನಿಯ ಸ್ಥಾನಮಾನ!

ಅಪ್ರತಿಮ ಸುಂದರಿ ಎಂದು ಹೆಸರು ಪಡೆದಿದ್ದ ನಟಿ ಜಯಪ್ರದಾ ಅವರ ಬಾಳಲ್ಲಿ ಮದುವೆಯೇ ಬಿರುಗಾಳಿಯಾಯಿತು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ತಿರೋ ನಟಿಯ ಜೀವನದ ಕಥೆಯೇನು?
 

Jaya Prada birthday actress married to father of 3 children but could get wife position here is why

ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ, ಅಪ್ರತಿಮ ಸುಂದರಿ ಎಂದು ಹೆಸರು ಪಡೆದ ಜಯಪ್ರದಾ (Jayaprada) ಅವರ ಹುಟ್ಟುಹಬ್ಬ ಇಂದು (ಏಪ್ರಿಲ್ 3). 1962 ರಲ್ಲಿ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ ಲಲಿತಾ ರಾಣಿ, ಜಯಪ್ರದಾ ಆಗಿ ಬದಲಾಗಿದ್ದು,  ಇಂದು  61ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದಾರೆ.  80 90ರ ದಶಕದಲ್ಲಿ ಭಾರತೀಯ ಚಿತ್ರರಂಗ ಆಳಿದ ಕೆಲವೇ ಕೆಲವು ಪ್ರಮುಖ ನಟಿಯಲ್ಲಿ ಈಕೆ ಒಬ್ಬರು. ನಟಿ, ನೃತ್ಯಗಾತಿ ಮಾತ್ರವಲ್ಲದೇ  ಸಂಸದೆಯಾಗಿಯೂ ಗುರುತಿಸಿಕೊಂಡವರು.  ತೆಲುಗು ದೇಶಂ ಪಕ್ಷದಿಂದ ಆರಂಭವಾದ ಇವರ ರಾಜಕೀಯ ಜೀವನದಲ್ಲಿ ಎರಡು ಬಾರಿ ಲೋಕಸಭಾ ಮತ್ತು ಒಂದು ಭಾರಿ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ  ದಕ್ಷಿಣ ಭಾರತದ ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 

14 ವರ್ಷದವರಿದ್ದಾಗಲೇ ಶಾಲೆಯ ಕಾರ್ಯಕ್ರಮದಲ್ಲಿ ಇವರ ನೃತ್ಯ ನೋಡಿದ ಒಬ್ಬ ನಿರ್ದೇಶಕ ತಮ್ಮ ಚಿತ್ರದಲ್ಲಿ ಮೂರು ನಿಮಿಷದ ಒಂದು ಡಾನ್ಸ್​ನಲ್ಲಿ (Dance) ನಟಿಸುವಂತೆ ಕೇಳಿಕೊಂಡಿದ್ದರು.  ಜಯಾ ಈ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದು, ಅದಕ್ಕೆ 10 ರೂಪಾಯಿ ಪಡೆದಿದ್ದಾರೆ. ಮೊದಲ ಚಿತ್ರದಲ್ಲೇ ಜಯಪ್ರದಾ ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡಿ ನಿರ್ದೇಶಕರು ಎಷ್ಟು ಪ್ರಭಾವಿತರಾಗಿದ್ದರೆಂದರೆ ಅವರಿಗೆ ಚಿತ್ರಗಳ ಆಫರ್ ಬರತೊಡಗಿತು. ಕೇವಲ 17 ನೇ ವಯಸ್ಸಿನಲ್ಲಿ, ಅವರು ದಕ್ಷಿಣದ ಟಾಪ್ ನಟಿಯರಲ್ಲಿ ಒಬ್ಬರು ಎನಿಸಿದರು. ಜಯಪ್ರದಾ ಅವರಿಗೆ ಸಿನಿಮಾದಲ್ಲಿ ನಟಿಸುವುದು ಇಷ್ಟವಿರಲಿಲ್ಲ. ಆದರೂ ಪಾಲಕರ ಒತ್ತಾಯದ ಮೇರೆಗೆ  ತೆಲುಗು ಚಿತ್ರ 'ಭೂಮಿಕೋಸಂ'ನಲ್ಲಿ ಜಯಪ್ರದಾ ನೃತ್ಯ ಮಾಡಲು ಒಪ್ಪಿಕೊಂಡರು.

ಗಾಯಕ ಕುಮಾರ್​ ಸನು ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ ಮೀನಾಕ್ಷಿ ಶೇಷಾದ್ರಿ!

 ಈ ಚಿಕ್ಕ ವಯಸ್ಸಿನಲ್ಲಿಯೇ  ಹಲವು ಚಿತ್ರಗಳಲ್ಲಿ ನಟಿಸಿ ಸ್ಚಾರ್ ನಟಿಯೆಂದು ಹೆಸರು ಪಡೆದವರು ಜಯಪ್ರದಾ.  ಇದಾದ ನಂತರ ಜಯಪ್ರದಾ ಹಿಂತಿರುಗಿ ನೋಡಲಿಲ್ಲ. 1979 ರಲ್ಲಿ 'ಸರ್ಗಮ್' ಚಿತ್ರದಲ್ಲಿ ಕಾಣಿಸಿಕೊಂಡಾಗ ತೆಲುಗು ನಟಿಯ ಜಾದೂ ಬಾಲಿವುಡ್‌ನಲ್ಲಿಯೂ ಹಿಡಿತ ಸಾಧಿಸಿತು. ಸೌಂದರ್ಯ ಮತ್ತು ನೃತ್ಯದ ಅದ್ಭುತ ಸಂಗಮವನ್ನು ತೆರೆಯ ಮೇಲೆ ನೋಡಿದ ಪ್ರೇಕ್ಷಕರು ಬೆರಗಾದರು. ಸಾಹಸಸಿಂಹ ವಿಷ್ಣುವರ್ಧನ್‌ರ `ಈ ಬಂಧನ' ಚಿತ್ರದ ಮೂಲಕ ಕನ್ನಡಕ್ಕೆ ಮತ್ತೆ ಬಂದಿದ್ದ ಇವರು ನಟ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಮಿಂಚಿದ್ದರು. ಕನ್ನಡದಲ್ಲಿ ಇವರು ನಟಿಸಿದ ಮೊದಲ ಚಿತ್ರ ಡಾ.ರಾಜಕುಮಾರ್‌ರವರು ಅಭಿನಯಿಸಿದ `ಸನಾದಿ ಅಪ್ಪಣ್ಣ', (Sanadi Appanna) ನಂತರ ರಾಜ್ ಜೊತೆ `ಹುಲಿಯ ಹಾಲಿನ ಮೇವು',`ಕವಿರತ್ನ ಕಾಳಿದಾಸ' (Kaviratna Kalidasa) ಸೂಪರ್​ಹಿಟ್​ ಎನಿಸಿದ್ದವು. ಡಾ. ರಾಜ್‌ ಅವರ ಕೊನೆಯ ಚಿತ್ರ `ಶಬ್ಧವೇದಿ'ಯಲ್ಲೂ ಕೂಡ ಇವರೇ ನಾಯಕಿಯಾಗಿ ನಟಿಸಿದ್ದು ವಿಶೇಷ.

ದಕ್ಷಿಣದ ಜೊತೆಗೆ ಬಾಲಿವುಡ್ (Bollywood) ಚಿತ್ರಗಳಿಂದಲೂ ಅವರಿಗೆ ಆಫರ್‌ಗಳು ಬರಲಾರಂಭಿಸಿದವು. ಅವರು ರಿಷಿ ಕಪೂರ್ ಅವರೊಂದಿಗೆ ತಮ್ಮ ಮೊದಲ ಹಿಂದಿ ಚಲನಚಿತ್ರ ಸರ್ಗಮ್ ಅನ್ನು ಮಾಡಿದರು, ಅದು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಜಯಪ್ರದಾ ತಮ್ಮ ವೃತ್ತಿ ಜೀವನದಲ್ಲಿ ಧರ್ಮೇಂದ್ರ, ಅಮಿತಾಭ್ ಬಚ್ಚನ್, ರಿಷಿ ಕಪೂರ್, ಮಿಥುನ್ ಚಕ್ರವರ್ತಿ, ಸನ್ನಿ ಡಿಯೋಲ್, ಸಂಜಯ್ ದತ್, ಜೀತೇಂದ್ರ, ರಾಜೇಶ್ ಖನ್ನಾ, ಶತ್ರುಘ್ನ ಸಿನ್ಹಾ, ಶಶಿ ಕಪೂರ್ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಚಲನಚಿತ್ರಗಳ ಜೊತೆಗೆ, ಜಯಪ್ರದಾ ತಮ್ಮ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಇವರ ಮದುವೆಯ ಬಗ್ಗೆ ಬಹಳ ವರ್ಷಗಳ ಚರ್ಚೆಯಾಗಿತ್ತು.  ಇವರು ತಮ್ಮ ಮದುವೆಯ ಕನಸನ್ನೂ ನನಸು ಮಾಡಿಕೊಂಡಳು ಆದರೆ ಹೆಂಡತಿಯ ಸ್ಥಾನಮಾನವನ್ನು ಸಾಧಿಸಲಾಗಲಿಲ್ಲ. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಜಯಪ್ರದಾ ಅವರು ಒಮ್ಮೆ ಕೆಟ್ಟ ದಿನಗಳನ್ನು ಅನುಭವಿಸಬೇಕಾಯಿತು. ಆ ಸಂದರ್ಭದಲ್ಲಿ  ನಿರ್ಮಾಪಕ ಶ್ರೀಕಾಂತ್ ನಹತಾ (Shreekanth Nahata) ಅವರು ಜಯಪ್ರದಾ ಅವರಿಗೆ  ಸಾಕಷ್ಟು ಸಹಾಯ ಮಾಡಿದರು.

ಕ್ರಮೇಣ ಜಯಪ್ರದಾ ಮತ್ತು ಶ್ರೀಕಾಂತ್ ನಹತಾ ಉತ್ತಮ ಸ್ನೇಹಿತರಾದರು.  ನಂತರ ಇಬ್ಬರೂ ಪ್ರೀತಿಸಲು ಶುರು ಮಾಡಿದರು.  ಈ ಪ್ರೀತಿ ಮದುವೆಯವರೆಗೂ ತಲುಪಿತ್ತು. ಆದರೆ ಜಯಪ್ರದಾ ಅವಿವಾಹಿತೆಯಾಗಿದ್ದರೂ, ಶ್ರೀಕಾಂತ್ ನಹತಾ ಮದುವೆಯಾಗಿ 3 ಮಕ್ಕಳ ತಂದೆಯಾಗಿದ್ದರು. ಇದರ ನಂತರ ಜಯಪ್ರದಾ ಅವರಿಗೆ ತಿಳಿಯಿತು. ಆದರೂ ಮನಸ್ಸು ಕೊಟ್ಟಾಗಿತ್ತು. ಜಯಪ್ರದಾ ಎಲ್ಲವನ್ನೂ ಪಣಕ್ಕಿಟ್ಟು ಶ್ರೀಕಾಂತ್​ ಅವರನ್ನು ಮದುವೆಯಾದರು.  ಮೊದಲ ಪತ್ನಿಗೆ ವಿಚ್ಛೇದನ ನೀಡದೇ 1986ರಲ್ಲಿ ಮೂರು ಮಕ್ಕಳ ತಂದೆ ಶ್ರೀಕಾಂತ್ ನಹತಾ ಜಯಪ್ರದಾ ಅವರನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಮದುವೆಯ ನಂತರ, ಜಯಪ್ರದಾ ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದರು ಮತ್ತು ಅವರ ವೃತ್ತಿಜೀವನವು ಕ್ರಮೇಣ ಕೊನೆಗೊಂಡಿತು.

Neetu Shetty: 'ಮದುವೆ ವಿಡಿಯೋ' ಶೇರ್​ ಮಾಡಿ ಅಭಿಮಾನಿಗಳ ತಬ್ಬಿಬ್ಬು ಮಾಡಿದ ನಟಿ

ಸುದ್ದಿ ಪ್ರಕಾರ ಜಯಪ್ರದಾ ದಾಂಪತ್ಯ ಜೀವನವೂ ಚೆನ್ನಾಗಿರಲಿಲ್ಲ. ಶ್ರೀಕಾಂತ್ ಅವರ ಮೊದಲ ಹೆಂಡತಿ ಮತ್ತು ಮಕ್ಕಳು ಒಟ್ಟಿಗೆ ವಾಸಿಸುತ್ತಿದ್ದರಿಂದ ಅವರು  ಗಂಡನ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ ಎಂಬುದೇ ಇದಕ್ಕೆ ದೊಡ್ಡ ಕಾರಣ. ಶ್ರೀಕಾಂತ್ ಕೂಡ ಹೆಂಡತಿ ಮಕ್ಕಳನ್ನು ಬಿಟ್ಟು ಜಯಾ ಜೊತೆ ಒಂಟಿಯಾಗಿ ಇರಲು ಇಷ್ಟಪಡಲಿಲ್ಲ. ಈ ಮೂಲಕ ಜಯಪ್ರದಾ ಮದುವೆಯಾದ ನಂತರವೂ ಒಂಟಿಯಾಗಿಯೇ ಉಳಿದುಕೊಂಡಿದ್ದು, ಆಕೆಗೆ ಇನ್ನೂ ಪತ್ನಿಯ ಸ್ಥಾನಮಾನ ಸಿಕ್ಕಿಲ್ಲ. ಮದುವೆಯ ನಂತರ ಜಯಪ್ರದಾ ಅವರಿಗೆ  ಮಕ್ಕಳಾಗಲಿಲ್ಲ, ಆದ್ದರಿಂದ ಅವರು ತಮ್ಮ ಸಹೋದರಿಯ ಮಗನನ್ನು ದತ್ತು ಪಡೆದರು.
 

Latest Videos
Follow Us:
Download App:
  • android
  • ios