ಶಾಲೆಯಲ್ಲಿದ್ದಾಗಲೇ ಪೋರ್ನ್‌ ವೆಬ್‌ಸೈಟ್‌ನಲ್ಲಿ ಜಾಹ್ನವಿ ಕಪೂರ್‌: ಶಾಕಿಂಗ್‌ ವಿಷ್ಯ ಹೇಳಿದ ಶ್ರೀದೇವಿ ಪುತ್ರಿ!

ನಟಿ ಜಾಹ್ನವಿ ಕಪೂರ್‌ ಅವರು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ಅವರ ಫೋಟೋಗಳು ಪೋರ್ನ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಆಗಿತ್ತಂತೆ. ಈ ಕುರಿತು ನಟಿ ಹೇಳಿದ್ದೇನು? 
 

Janhvi Kapoor  shocking statement that her morphed images were circulated at school suc

ಬಾಲಿವುಡ್‌ನ ಬ್ಯೂಟಿ ಕ್ವೀನ್​ (Bollywood Queen) ಎಂದೇ ಹೆಸರು ಮಾಡಿ 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್​ (Jahnavi Kapoor) ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ.  2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 25 ವರ್ಷದ ಜಾಹ್ನವಿ ಕಪೂರ್​,  ಮಿಲಿ ಚಿತ್ರದಲ್ಲಿಯೂ  ಪ್ರಶಂಸೆ ಗಳಿಸಿದವರು. ಇವರು ಸೌತ್​ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು.  ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India)ಹೀರೋ ಎನ್​ಟಿಆರ್​ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.  

ಸದಾ ಹಾಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡು ಜಾಹ್ನವಿ ಹಲವು ಬಾರಿ ಟ್ರೋಲ್​ಗೆ ಒಳಗಾಗಿರೋದೂ ಇದೆ. ಶ್ರೀದೇವಿ ಪುತ್ರಿಯಾಗಿ ನಿಮಗೆ ಇದೆಲ್ಲಾ ಶೋಭೆ ತರುವುದಿಲ್ಲ ಎಂದು ಹೇಳಿಸಿಕೊಂಡಿರುವುದೂ ಆಗಿದೆ. ಅದೇನೇ ಇದ್ದರೂ ಇಂದಿನ ಚಿತ್ರನಟಿಯರ ಬಗ್ಗೆ ಬೇರೆ ಹೇಳಬೇಕಾಗಿಲ್ಲವಲ್ಲ.  ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡರೇನೇ ತಮಗೆ ಬೆಲೆ ಎನ್ನುವಂಥ ಸ್ಥಿತಿ ಅವರದ್ದು. ಇದೀಗ ನಟಿ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ, ಜಾಹ್ನವಿ ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ಇವರ ಫೋಟೋಗಳು ಪೋರ್ನ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಆಗಿತ್ತಂತೆ!

ಮೊಬೈಲ್​ ಸಂಖ್ಯೆ ಬದಲಿಸಿ ಪತಿಯಿಂದ ವಂಚನೆ! ಮೋಸ ಹೋದೆನೆಂದು ಬಿಕ್ಕಿಬಿಕ್ಕಿ ಅಳ್ತಿರೋ ಮಹಾಲಕ್ಷ್ಮಿ

ಹೌದು. ಈ ಆಘಾತಕಾರಿ ವಿಷಯವನ್ನು ನಟಿ ಬಹಿರಂಗಪಡಿಸಿದ್ದಾರೆ.  ಕೆಲವರು ನನ್ನ ಅನುಮತಿಯಿಲ್ಲದೆ ನನ್ನ ಮತ್ತು ಅವರ ಸಹೋದರಿಯ ಫೋಟೋಗಳನ್ನು ತೆಗೆದುಕೊಂಡಿದ್ದರು. ಅವುಗಳನ್ನು  ಮಾರ್ಫಿಂಗ್ ಮಾಡಿ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಹಾಕಿದ್ದರು. ಆದರೆ ಇದು ಮಾರ್ಫ್‌ ಮಾಡಿದ ಚಿತ್ರಗಳು ಎಂದು ಹಲವರಿಗೆ ತಿಳಿದೇ ಇರಲಿಲ್ಲ. ನಿಜ ಎಂದು ನಂಬಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ ನನಗೆ ತುಂಬಾ ಆಘಾತವಾಗಿತ್ತು. ನನ್ನ ಫ್ರೆಂಡ್ಸ್‌ಕೂಡ ಗೇಲಿ ಮಾಡುತ್ತಿದ್ದರು. ಆ ವಯಸ್ಸಿನಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದೇ ಇರಲಿಲ್ಲ ಎಂದಿದ್ದಾರೆ. 
 
ಜಾಹ್ನವಿಯವರ ಸಿನಿ ಪಯಣದ ಕುರಿತು ಹೇಳುವುದಾದರೆ ಇವರು,  ಇತ್ತೀಚೆಗೆ ಕರಣ್ ಜೋಹರ್ ಅವರ ‘ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ‘ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು .  ಸದ್ಯ ‘ಮಿಸ್ಟರ್ ಅಂಡ್ ಮಿಸೆಸ್ ಮಾಹಿ’, ‘ದೇವ್ರಾ’, ‘ಬಡೆ ಮಿಯಾನ್ ಚೋಟೆ ಮಿಯಾನ್ 2’ ಮತ್ತು ಉಲ್ಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಜೊತೆಗೆ,  ತೆಲುಗು ಚಿತ್ರದಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ಅಖಿಲ್ ಏಜೆಂಟ್ ನಂತರ ವಂಶಿ ಯುವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಆರ್‌ಆರ್‌ಆರ್ ನಂತರ ಎನ್‌ಟಿಆರ್ ಮತ್ತೊಮ್ಮೆ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಪರಿಣಿತಿ-ರಾಘವ್​ ಮದ್ವೆಯ ರೋಚಕ ವಿಡಿಯೋ ವೈರಲ್​: ಹನಿಮೂನ್​ ಕ್ಯಾನ್ಸಲ್​!

Latest Videos
Follow Us:
Download App:
  • android
  • ios