12ನೇ ವಯಸ್ಸಲ್ಲೇ ಅಶ್ಲೀಲ ವೆಬ್​ಸೈಟ್​ಗಳಲ್ಲಿ ಅಪ್​ಲೋಡ್​ ಆಗಿತ್ತು ಜಾಹ್ನವಿ ಕಪೂರ್​ ಫೋಟೋಗಳು. ಈ ಕುರಿತು ನಟಿ ಹೇಳಿದ್ದೇನು?  

ಬಾಲಿವುಡ್​ ಎವರ್​ಗ್ರೀನ್​ ತಾರೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್​, ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಅಲ್ಲದಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಇವರದ್ದೇ ಹವಾ. ಸದಾ ಹಾಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡು ಜಾಹ್ನವಿ ಹಲವು ಬಾರಿ ಟ್ರೋಲ್​ಗೆ ಒಳಗಾಗಿರೋದೂ ಇದೆ. ಶ್ರೀದೇವಿ ಪುತ್ರಿಯಾಗಿ ನಿಮಗೆ ಇದೆಲ್ಲಾ ಶೋಭೆ ತರುವುದಿಲ್ಲ ಎಂದು ಹೇಳಿಸಿಕೊಂಡಿರುವುದೂ ಆಗಿದೆ. ಅದೇನೇ ಇದ್ದರೂ ಇಂದಿನ ಚಿತ್ರನಟಿಯರ ಬಗ್ಗೆ ಬೇರೆ ಹೇಳಬೇಕಾಗಿಲ್ಲವಲ್ಲ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡರೇನೇ ತಮಗೆ ಬೆಲೆ ಎನ್ನುವಂಥ ಸ್ಥಿತಿ ಅವರದ್ದು. ಇದೀಗ ನಟಿ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ, ಜಾಹ್ನವಿ ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ಇವರ ಫೋಟೋಗಳು ಪೋರ್ನ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಆಗಿತ್ತಂತೆ!

Add Asianetnews Kannada as a Preferred SourcegooglePreferred

ಜಾಹ್ನವಿ ಅವರಿಗೆ ಈಗ ವಯಸ್ಸು 27.ಆದರೆ 12 ವರ್ಷದ ಬಾಲಕಿ ಆಗಿದ್ದಾಗಲೇ ಅಶ್ಲೀಲ ವೆಬ್​ಸೈಟ್​ಗಳಲ್ಲಿ ಅವರ ಫೋಟೋಗಳನ್ನು ಕಿಡಿಗೇಡಿಗಳು ಹಾಕಿದ್ದರು. ಈ ಕುರಿತು ನಟಿ, ತಮ್ಮ ಮುಂಬರುವ ಚಿತ್ರ ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದ ಸಲುವಾಗಿ ಕರಣ್​ ಜೋಹರ್​ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕೆಲವರು ನನ್ನ ಅನುಮತಿಯಿಲ್ಲದೆ ನನ್ನ ಮತ್ತು ಅವರ ಸಹೋದರಿಯ ಫೋಟೋಗಳನ್ನು ತೆಗೆದುಕೊಂಡಿದ್ದರು. ಅವುಗಳನ್ನು ಮಾರ್ಫಿಂಗ್ ಮಾಡಿ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಹಾಕಿದ್ದರು. ಆದರೆ ಇದು ಮಾರ್ಫ್‌ ಮಾಡಿದ ಚಿತ್ರಗಳು ಎಂದು ಹಲವರಿಗೆ ತಿಳಿದೇ ಇರಲಿಲ್ಲ. ನಿಜ ಎಂದು ನಂಬಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ ನನಗೆ ತುಂಬಾ ಆಘಾತವಾಗಿತ್ತು. ನನ್ನ ಫ್ರೆಂಡ್ಸ್‌ಕೂಡ ಗೇಲಿ ಮಾಡುತ್ತಿದ್ದರು. ಆ ವಯಸ್ಸಿನಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದೇ ಇರಲಿಲ್ಲ ಎಂದಿದ್ದಾರೆ. 

51 ವರ್ಷವಾದ್ರೂ ಸಿತಾರಾ ಸಿಂಗಲ್​ ಯಾಕೆ? ನಟಿಯ ಬದುಕಿನ ಆ ಕರಾಳ ಅಧ್ಯಾಯ ಬಹಿರಂಗ...

ನನ್ನನ್ನು ಆಗ ಮೀಡಿಯಾಗಳೂ ಕೆಟ್ಟದ್ದಾಗಿ ಬಿಂಬಿಸಿದವು. ಅಪ್ಪ-ಅಮ್ಮನ ಜೊತೆ ನಾನು ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋಗಳು ಅವು. ಅವುಗಳನ್ನು ಮಾರ್ಫಿಂಗ್ ಮಾಡಿ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಹಾಕಿದ್ದರು ಎಂದು ತಿಳಿಸಿದ್ದಾರೆ. ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದಲ್ಲಿ ಜಾನ್ವಿ ಕಪೂರ್​ ಅವರು ನಟಿಸಿದ್ದಾರೆ. ಮೇ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಟ ರಾಜ್​ಕುಮಾರ್​ ರಾವ್​ ಜೊತೆ ಜಾಹ್ನವಿ ಕಪೂರ್​ ತೆರೆಹಂಚಿಕೊಂಡಿದ್ದಾರೆ. ಚಿತ್ರದ ಕುರಿತು ಕರಣ್​ ಜೋಹರ್​ ಅವರ ಸಂದರ್ಶನ ನಡೆಸಿದ್ದಾರೆ.

ಅಂದಹಾಗೆ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಕೆಲ ವರ್ಷಗಳಿಂದ ಈಕೆ ಉದ್ಯಮಿ ಶಿಖರ್​ ಪಹರಿಯಾ (Shikhar Pahariya) ಜೊತೆ ಸುತ್ತಾಟ ಮಾಡುತ್ತಿದ್ದಾರೆ. ದೇಶ-ವಿದೇಶ ತಿರುಗುತ್ತಿದ್ದಾರೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್​ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್​ ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್​ ಫ್ರೆಂಡ್​ (Boy Friend) ಜೊತೆ ಟ್ರಿಪ್​ಗೆ ಹೋಗಿರುವ ಫೋಟೋಗಳು ವೈರಲ್​ ಆಗಿದ್ದವು.

Sanjay Leela Bhansali:ರೇಷನ್​ನಲ್ಲಿ ಕ್ಯೂ ನಿಲ್ಲೋ ಮಹಿಳೆಯರಿಗಿಂತ ನನಗೆ ವೇಶ್ಯೆಯರ ಮೇಲೆ ಹೆಚ್ಚು ವ್ಯಾಮೋಹ, ಏಕೆಂದ್ರೆ...