Asianet Suvarna News Asianet Suvarna News

ಜಮ್ಮು ಕಾಶ್ಮೀರ: ಸಿನಿಮಾ ಚಿತ್ರೀಕರಣಕ್ಕೆ ಹೊಸ ನೀತಿ ಘೋಷಣೆ!

ಜಮ್ಮು ಕಾಶ್ಮೀರ ರಾಜ್ಯಪಾಲ ಮನೋಜ್ ಸಿನ್ಹಾ ಸಿನಿಮಾ ಚಿತ್ರೀಕರಣಲ್ಲಿ ಹೊಸ ನೀತಿ ಜಾರಿಗೊಳಿಸಿದ್ದಾರೆ.  
 

Jammu and Kashmir new film policy in presence of Aamir Khan Rajkumar Hirani vcs
Author
Bangalore, First Published Aug 7, 2021, 12:52 PM IST

ಭೂಲೋಕದಲ್ಲಿರುವ ಸ್ವರ್ಗವೇ ಜಮ್ಮು ಕಾಶ್ಮೀರ. ಯಾವುದೇ ಭಾಷೆ ಚಿತ್ರವಾಗಿರಲಿ ರೊಮ್ಯಾಂಟಿಕ್ ಹಾಡು, ಸೀನ್ ಎಂದಾಕ್ಷಣ ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುತ್ತಾರೆ. ಇತ್ತೀಚಿಗೆ ಬಿಗ್ ಬಜೆಟ್ ಕಾನ್ಸೆಪ್ಟ್ ಬಂದಿರುವ ಕಾರಣ ಚಿತ್ರತಂಡಗಳು ವಿದೇಶಕ್ಕೆ ಹಾರುತ್ತವೆ. ಇಲ್ಲವಾದರೆ ಆರಿಸಿಕೊಳ್ಳುವುದು ಕಾಶ್ಮೀರಾವನ್ನು ಭಾರತದ ಭೂಲೋಕದ ಸ್ವರ್ಗದಲ್ಲಿಯೇ ಅದ್ಭುತವಾಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಕೆಲವು ಕಾರಣಗಳಿಂದ ಚಿತ್ರೀಕರಣ ರದ್ದುಗೊಳ್ಳಿಸಲಾಗಿತ್ತು. ಆದರೀಗ ಜಮ್ಮು ಕಾಶ್ಮೀರ ರಾಜ್ಯಪಾಲ ಮನೋಜ್ ಸನ್ಹಾ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿರುವ ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲು ಸಿನಿಮಾ ನೀತಿಯನ್ನು ಬಿಡುಗಡೆ ಮಾಡಿದ್ದಾರೆ. 

ಆರ್ಟಿಕಲ್ 370 ತೆಗೆದು 2 ವರ್ಷ: ಶ್ರೀನಗರದಲ್ಲಿ ವೀರ ಯೋಧರಿಗಾಗಿ ವಿಶೇಷ ಕಾರ್ಯಕ್ರಮ

ಹೊಸ ನೀತಿ ಘೋಷಣೆ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್‌ ಕುಮಾರ್ ಹಿರಾನಿ ಹಾಗೂ ನಟ ಆಮೀರ್ ಖಾನ್ ಭಾಗಿಯಾಗಿದ್ದರು.  ಕೆಲವು ದಿನಗಳ ಹಿಂದೆ ಆಮೀರ್‌ ಈ ಬಗ್ಗೆ ಅಧಿಕಾರಿಗಳನ್ನು ಮತ್ತು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಇಂಥದ್ದೊಂದು ನೀತಿ ಘೋಷಣೆಯಾಗುವ ಹಿಂದೆ ಆಮೀರ್ ಪಾತ್ರವೂ ಇದೆ ಎನ್ನಲಾಗಿದೆ. 

 

ಹೊಸ ನೀತಿಯಲ್ಲಿ ಏನಿದೆ:
- ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಪಡೆಯುವ ವ್ಯವಸ್ಥೆಯನ್ನ ಸರಳಗೊಳಿಸಲಾಗಿದೆ. ಅಲ್ಲದೇ ಸರ್ಕಾರವೂ ಕೆಲವು ಸೌಕರ್ಯಗಳನ್ನು ಸಹ ಒದಗಿಸಲಿದೆ.
-ಜಮ್ಮು ಕಾಶ್ಮೀರಕ್ಕೆ ಬರುವ ಸಿನಿಮಾ ಕಾರ್ಮಿಕರಿಗೆ ವಿಶೇಷ ಭತ್ಯೆಯನ್ನೂ ಸಹ ಘೋಷಿಸಲಾಗಿದೆ. ಸ್ಥಳೀಯ ಸಿನಿ ನಿರ್ಮಾಣದಲ್ಲಿ ಭಾಗಿಯಾಗುವ ಕಾರ್ಮಿಕರನ್ನೂ ಇದರೊಂದಿಗೆ ಸೇರಿಸಿದ್ದಾರೆ.  
- ಸದ್ಯಕ್ಕೆ ಮುಚ್ಚಿರುವ ಚಿತ್ರಮಂದಿರಗಳನ್ನು ತೆರೆಯಲಾಗುತ್ತದೆ. ಮುಂಬರುವ ದಿನಗಳಲ್ಲಿ ಮಲ್ಟಿಫ್ಲೆಕ್ಸ್‌ಗಳನ್ನು ಕಣಿವೆ ರಾಜ್ಯದಲ್ಲಿ ಕಾರ್ಯರಂಭ ಮಾಡಲು ಸೂಕ್ತ ಅವಕಾಶವನ್ನು ಮಾಡಿಕೊಡಬಹುದಾಗಿದೆ. 
-  ಇಡೀ ಜಮ್ಮು ಕಾಶ್ಮೀರದಲ್ಲಿ 1 ಪಿವಿರ್‌ ಇದ್ದು, ಇದ್ದ 10 ಚಿತ್ರಮಂದಿರಗಳನ್ನು ಆಸ್ಪತ್ರೆಗಳಾಗಿ ಬಲಾಯಿಸಲಾಗಿತ್ತು. ಹಾಳಾಗಿರುವ ಚಿತ್ರಮಂದಿರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.
- ಜಮ್ಮು ಕಾಶ್ಮಿರದಲ್ಲಿ ಸಿನಿಮೋತ್ಸವಗಳನ್ನು ಆಚರಣೆ ಮಾಡಲು ಸಿನಿಮಾ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ.
- ಸ್ಥಳೀಯರು ನಿರ್ಮಾಣ ಮಾಡಿದ ಸಿನಿಮಾಗಳನ್ನು ಸಂಗ್ರಹಿಸುವ ಹಾಗೂ ಜಮ್ಮು ಕಾಶ್ಮೀರಕ್ಕಾಗಿ ಸಿನಿಮಾ ಬೋರ್ಡ್ ಸ್ಥಾಪಿಸುವ ಗುರಿ ನೀತಿಯಲ್ಲಿದೆ. ಅಲ್ಲದೇ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದೂ ಇದೆ.

Follow Us:
Download App:
  • android
  • ios