* ನೆಟ್‌ಫ್ಲಿಕ್ಸ್‌ ನಿರ್ಮಿತ 2 ಚಿತ್ರಗಳಿಗೆ ದಾಖಲೆ ಮೊತ್ತಕ್ಕೆ ಸಹಿ* ಡೇನಿಯಲ್‌ ಕ್ರೇಗ್‌ ಸಂಭಾವನೆ 743 ಕೋಟಿ ರು.: ವಿಶ್ವದ ಅತಿ ದುಬಾರಿ ನಟ!

ವಾಷಿಂಗ್ಟನ್‌(ಆ.22): ಜೇಮ್ಸ್‌ ಬಾಂಡ್‌ ಖ್ಯಾತಿಯ ಹಾಲಿವುಡ್‌ ನಟ ಡೇನಿಯಲ್‌ ಕ್ರೇಗ್‌ ಅವರು ಅತಿ ಗರಿಷ್ಠ ಸಂಭಾವನೆ ಪಡೆಯುವ ಹಾಲಿವುಡ್‌ ನಟ ಎನ್ನಿಸಿಕೊಂಡಿದ್ದಾರೆ. ಅವರು ತಮ್ಮ ಮುಂದಿನ 2 ಚಿತ್ರಗಳಿಗೆ 743 ಕೋಟಿ ರು. ಸಂಭಾವನೆ ಪಡೆಯುವ ಡೀಲ್‌ಗೆ ಸಹಿ ಹಾಕಿದ್ದಾರೆ.

ಡೇನಿಯಲ್‌ ಅವರಿಗೆ ನೆಟ್‌ಫ್ಲಿಕ್ಸ್‌ ಕಂಪನಿ ತನ್ನ ಎರಡು ಚಿತ್ರಗಳಾದ ನೈವ್‌್ಸ ಔಟ್‌-2 ಹಾಗೂ ನೈವ್‌್ಸ ಔಟ್‌-3 ಚಿತ್ರಗಳಿಗಾಗಿ ಇಷ್ಟೊಂದು ಭಾರೀ ದಾಖಲೆಯ ಮೊತ್ತವನ್ನು ನೀಡಲಿದೆ.

ಈ ಮೊತ್ತದೊಂದಿಗೆ ಕ್ರೇಗ್‌ ಅವರು ಲಿಯೋನಾರ್ಡೋ ಡಿ ಕ್ಯಾಪ್ರಿಯೋ ಹಾಗೂ ಜೆನ್ನಿಫರ್‌ ಲಾರೆನ್ಸ್‌ ಅವರಂಥ ಘಟಾನುಘಟಿಗಳನ್ನು ಸಂಭಾವನೆಯೊಂದಿಗೆ ಹಿಂದಿಕ್ಕಿದ್ದಾರೆ. ಡಿ ಕ್ಯಾಪ್ರಿಯೋ ಅವರು ನೆಟ್‌ಫ್ಲಿಕ್ಸ್‌ನದ್ದೇ ಆದ ‘ಡೋಂಟ್‌ ಲುಕ್‌ ಅಪ್‌’ ಚಿತ್ರಕ್ಕೆ 223 ಕೋಟಿ ರು. ಹಾಗೂ ಲಾರೆನ್ಸ್‌ ಅವರಿಗೆ 186 ಕೋಟಿ ರು. ಪಡೆದಿದ್ದಾರೆ.

ಇನ್ನು ಡೇನಿಯಲ್‌ ನಂತರದಲ್ಲಿ ನಟ ಡ್ವೈನ್‌ ಜಾನ್ಸನ್‌ ಇದ್ದು, ಅವರು 370 ಕೋಟಿ ರು.ಗಳನ್ನು ಅಮೆಜಾನ್‌ ಪ್ರೈಮ್‌ ನರ್ಮಿತ ರೆಡ್‌ ಒನ್‌ ಚಿತ್ರಕ್ಕೆ ಪಡೆದಿದ್ದಾರೆ. ಕೊರೋನಾದಿಂದ ವಿಶ್ವದ ಹಲವೆಡೆ ಚಿತ್ರರಂಗ ನಲುಗಿದ್ದರೂ ಈ ನಟರು ಮಾತ್ರ ಭರ್ಜರಿ ಲಾಭ ಮಾಡಿಕೊಳ್ಳುತ್ತಿರುವುದು ವಿಶೇಷ.