Asianet Suvarna News Asianet Suvarna News

ಅಮೆರಿಕದಲ್ಲೂ ಧೂಳೆಬ್ಬಿಸಿದ JAILER : ಒಂದು ಮಿಲಿಯನ್​ ಡಾಲರ್​ ಗಳಿಸಿ ದಾಖಲೆ!

ಇಂದು ಬಿಡುಗಡೆಗೊಂಡಿರುವ ಜೈಲರ್​ ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕದಲ್ಲಿಯೂ ಧೂಳೆಬ್ಬಿಸಿದೆ. ಏನಿದು ವರದಿ? 
 

Jailer Box Office Day 1 HISTORIC Near 1 dollar Million Mark in USA suc
Author
First Published Aug 10, 2023, 5:01 PM IST | Last Updated Aug 10, 2023, 5:01 PM IST

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ (jailer) ಚಿತ್ರ ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿರುವ  ಧೂಳೆಬ್ಬಿಸುತ್ತಿದೆ.  ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ತಮಿಳು ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ರಜನಿ ಅವರೊಂದಿಗೆ ನಟಿಸಿರುವ ಜೈಲರ್ ಚಿತ್ರ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಬಿಡುಗಡೆಯಾಗಿದ್ದು, ಚಿತ್ರ ನೋಡಲು ತಲೈವಾ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.    ಕನ್ನಡ ಚಿತ್ರರಂಗದ ಶಿವರಾಜ್‌ಕುಮಾರ್, ಮಲಯಾಳಂ ಚಿತ್ರರಂಗದ ನಟ ಮೋಹನ್‌ಲಾಲ್, ಬಾಲಿವುಡ್​ ಸ್ಟಾರ್ಸ್​ಗಳಾದ ಜಾಕಿ ಶ್ರಾಫ್, ಸುನೀಲ್ ವಿನಾಯಕನ್, ರಮ್ಯಾ ಕೃಷ್ಣ, ಯೋಗಿ ಬಾಬು, ವಸಂತ ರವಿ, ತಮನ್ನಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲ ಚಿತ್ರರಂಗದ ಸ್ಟಾರ್‌ಗಳು ಇಲ್ಲಿರೋದರಿಂದ ಇದು ಪ್ಯಾನ್ ಇಂಡಿಯಾ ಸಿನಿಮಾ ರೀತಿ ಆಗಿದೆ.  

‘ಜೈಲರ್​’ ಸಿನಿಮಾಗೆ ನೆಲ್ಸನ್​ ದಿಲೀಪ್​ಕುಮಾರ್​ ಅವರು ನಿರ್ದೇಶನ ಮಾಡಿದ್ದು, ‘ಸನ್​ ಪಿಕ್ಚರ್ಸ್​’ ಮೂಲಕ ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಚಿತ್ರವು ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಯೊಂದನ್ನು ಸೃಷ್ಟಿಸಿದೆ. ಅಮೆರಿಕ  ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್’​ ಚಿತ್ರವು ಹೊಸ ದಾಖಲೆ ಬರೆದಿದ್ದು, ಒಂದು ಮಿಲಿಯನ್ ಡಾಲರ್​​ ಮಾರ್ಕ್ ಅನ್ನು ತಲುಪಿದೆ. 2023 ರಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಜೈಲರ್​ ಪಾತ್ರವಾಗಿದೆ.  ಜೈಲರ್ ಚಿತ್ರದ ಕಾವಾಲಾ (Kaavaalaa) ಹಾಡು ಇದಾಲೇ ಪಕ್ಕಾ ಮಾಸ್ ಸಾಂಗ್ ಆಗಿದೆ. ಇಡೀ ಹಾಡನ್ನ ಆದಿವಾಸಿ ಸೆಟ್‌ನಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಹಾಡು ರಿಲೀಸ್ ಆದ ಒಂದೇ ಗಂಟೆಯಲ್ಲಿ 1 ಮಿಲಿಯನ್‌ಗೂ ಅಧಿಕ ವೀವ್ಸ್ ಬಂದಿತ್ತು. ಇದೀಗ ಮತ್ತೊಂದು ದಾಖಲೆಯತ್ತ ಜೈಲರ್​ ಹೋಗಿದೆ. 

JAILER ಚಿತ್ರಕ್ಕೆ ರಜನಿಕಾಂತ್​ ಈ ಪರಿ ಸಂಭಾವನೆನಾ? ಶಿವರಾಜ್​ಕುಮಾರ್, ತಮನ್ನಾ​ ಪಡೆದದ್ದೆಷ್ಟು?

Pinkvilla ವರದಿಯ ಪ್ರಕಾರ, ಬುಧವಾರ (ಆಗಸ್ಟ್ 9) ಮಧ್ಯಾಹ್ನ 3 ಗಂಟೆಗೆ,  ಮೂರು ರಾಷ್ಟ್ರೀಯ ಸರಪಳಿಗಳಾದ PVR, Inox ಮತ್ತು Cinepolis ನಲ್ಲಿ ಜೈಲರ್​ ಚಿತ್ರ ಸುಮಾರು ಒಂದೂವರೆ ಲಕ್ಷ ಟಿಕೆಟ್‌ ಮಾರಾಟವಾಗಿದೆ. ಈ ಚಿತ್ರವು ತಮಿಳುನಾಡಿನಲ್ಲಿ ಆರಂಭಿಕ ದಿನವೊಂದರಲ್ಲೇ 13 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ವಾರಾಂತ್ಯದ ಮಾರಾಟವು 30 ಕೋಟಿಗೂ ಹೆಚ್ಚು ಸಂಗ್ರಹವಾಗಿದೆ. ವರದಿಯ ಪ್ರಕಾರ, ಚಿತ್ರವು ತಮಿಳುನಾಡಿನಲ್ಲಿ 20 ರಿಂದ 23 ಕೋಟಿ ರೂಪಾಯಿಗಳ ಆರಂಭಿಕ ದಿನದ ಗುರಿಯನ್ನು ಹೊಂದಿದೆ ಮತ್ತು ದೇಶಾದ್ಯಂತ ಸುಮಾರು 40 ಕೋಟಿ ರೂಪಾಯಿಗಳ  ಆದಾಯ ಗಳಿಸಿದೆ. 

ಇತ್ತ ಜೈಲರ್​ ಅಬ್ಬರಿಸುತ್ತಿದ್ದರೆ, ಅತ್ತ ದೇವರ ಮೇಲೆ ಅಪಾರವಾದ ಭಕ್ತಿ ಉಳ್ಳ ರಜನೀಕಾಂತ್​ (Rajinikanth) ಅವರು,  ಈಗ ಹಿಮಾಲಯಕ್ಕೆ ತೆರಳಿದ್ದಾರೆ. ಮನಸ್ಸಿನ ಶಾಂತಿಗಾಗಿ ಮೇಲಿಂದ ಮೇಲೆ ಹಿಮಾಲಯಕ್ಕೆ ಹೋಗುವ ನಟನಿಗೆ ಕೋವಿಡ್​ ಕಾಣಿಸಿಕೊಂಡ ನಂತರ ಹಿಮಾಲಯಕ್ಕೆ ಹೋಗಲು ಅವರಿಗೆ ಸಾಧ್ಯವಾಗಿರಲಿಲ್ಲ. ನಾಲ್ಕು ವರ್ಷದ ಗ್ಯಾಪ್​ ಬಳಿಕ ಅವರು ಮತ್ತೆ ಹಿಮಾಲಯಕ್ಕೆ ಹೋಗಿದ್ದಾರೆ.  

ರಜನಿಕಾಂತ್‌ 'ಜೈಲರ್' ಸಿನಿಮಾ ನೋಡಬೇಕಾ ?: ಟಿಕೆಟ್‌ ದರ ಎಷ್ಟು ಗೊತ್ತಾ ?

Latest Videos
Follow Us:
Download App:
  • android
  • ios