Asianet Suvarna News Asianet Suvarna News

ಅರೆನಗ್ನ ನಟಿಯರನ್ನೆಲ್ಲಾ ಹಿಂದಿಕ್ಕಿದ 'ಅನಿಮಲ್' ಬೆತ್ತಲೆ ರಾಣಿ ತೃಪ್ತಿಗೆ ಸಿಕ್ತು ಇನ್ನೊಂದು ಪ್ರತಿಷ್ಠಿತ ಸ್ಥಾನ!

ಅನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾದ ನಟಿ ತೃಪ್ತಿ ಡಿಮ್ರಿಯ ಪಾಪ್ಯುಲಾರಿಟಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ  ಇನ್ನೊಂದು ಪ್ರತಿಷ್ಠಿತ ಸ್ಥಾನ ಸಿಕ್ಕಿದೆ. 
 

Animal Tripti Dimri has secured top 1 position in IMDb Internet Movie Database suc
Author
First Published Dec 13, 2023, 12:47 PM IST

ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್​​ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್​ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್​ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್​ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್​ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್​ ಮೀಡಿಯಾ ಕೂಡ ಸರ್ಚ್​ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣ ಏನು ಎಂದು ಬೇರೆ ಹೇಳಬೇಕಾಗಿಲ್ಲ. ಅದೇ ಅನಿಮಲ್​ ಚಿತ್ರ. ಸಿನಿಮಾಗಳಲ್ಲಿ ಯಾವುದೇ ಮುಜುಗರ ಪಟ್ಟುಕೊಳ್ಳದೇ ಧಾರಾಳವಾಗಿ ದೇಹ ಪ್ರದರ್ಶನ ಮಾಡುವ, ಸ್ತನಗಳ ಗಾತ್ರಗಳನ್ನು ದೊಡ್ಡದಾಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ  ಮಾಡಿಕೊಂಡು ಹೋದಲ್ಲಿ, ಬಂದಲ್ಲಿ ಅದರ ಪ್ರದರ್ಶನ ಮಾಡುವ ಬಹುತೇಕ ನಟಿಯರನ್ನು ಸೈಡ್​ಗೆ ಹಾಕಿದ್ದಾರೆ ತೃಪ್ತಿ ಡಿಮ್ರಿ.  ಇದೆಲ್ಲಾ ಸಾಧ್ಯವಾಗಿಸಿದ್ದು ಸಂಪೂರ್ಣ ಬೆತ್ತಲೆ ದೃಶ್ಯ. ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್​ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ. 

ಅಷ್ಟಕ್ಕೂ, ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ. ಡಿಸೆಂಬರ್​ 1ರಂದು ಬಿಡುಗಡೆಯಾದ ಈ ಚಿತ್ರ 13 ದಿನಕ್ಕೆ ಕಾಲಿಟ್ಟಿದೆ. ಇದಾಗಲೇ ಚಿತ್ರ 800 ಕೋಟಿ ರೂಪಾಯಿಗಳನ್ನು ವಿಶ್ವಾದ್ಯಂತ ಬಾಚಿಕೊಂಡಿದೆ. ಹಲವು ಸೂಪರ್​ಹಿಟ್​, ಬ್ಲಾಕ್​ಬಸ್ಟರ್​ ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿ ಮುನ್ನುಗ್ಗುತ್ತಿದೆ. ಮಿತಿ ಮೀರಿದ ಅಶ್ಲೀಲತೆ, ಹಿಂಸಾಚಾರ, ಕೌಟುಂಬಿಕ ದೌರ್ಜನ್ಯ, ರಕ್ತಪಾತ ಇವುಗಳನ್ನು ಎಂಜಾಯ್​ ಮಾಡುತ್ತಿರುವ ಪ್ರೇಕ್ಷಕರು ದಿನದಿಂದ ದಿನಕ್ಕೆ ಈ ಚಿತ್ರದತ್ತ ವಾಲುತ್ತಿದ್ದಾರೆ. ಚಿತ್ರದ ಹಲವಾರು ಹಿಂಸಾತ್ಮಕ, ಅಶ್ಲೀಲ ದೃಶ್ಯಗಳಿಗೆ ಸೆನ್ಸಾರ್​ ಮಂಡಳಿ ಕತ್ತರಿ ಹಾಕಿ ಅಡಲ್ಟ್​ ಸರ್ಟಿಫಿಕೇಟ್​ ನೀಡಿದ್ದು ಸುತ್ತಿಯಾಗುತ್ತಿದ್ದಂತೆಯೇ ಜನರು ಈ ಚಿತ್ರ ನೋಡಲು ಮತ್ತಷ್ಟು ಉತ್ಸುಕರಾಗುತ್ತಿದ್ದಾರೆ. 

ರಣಬೀರ್​ ಜೊತೆ ಬೆತ್ತಲಾದಾಗ ಉದ್ವೇಗಗೊಂಡೆ, ಕೈ ಉಜ್ಜಿಕೊಳ್ತಿದ್ದನ್ನು ಅಪ್ಪ ಗಮನಿಸಿ ಹೀಗೆ ಕೇಳಿದ್ರು...

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ದಂಪತಿಯಾಗಿ ಕಾಣಿಸಿಕೊಂಡಿದ್ದರೆ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ಹಾಡೊಂದರ ಟ್ರೇಲರ್​ ರಿಲೀಸ್​ ಆದಾಗ ರಶ್ಮಿಕಾ ಮಂದಣ್ಣನವರ ಹಸಿಬಿಸಿ ದೃಶ್ಯದಿಂದ ಭಾರಿ ಸುದ್ದಿಯಾಗಿತ್ತು. ಆದರೆ ಈಕೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೋರ್ವ ನಟಿ ತೃಪ್ತಿ ಡಿಮ್ರಿ ಮತ್ತು ರಣಬೀರ್​ ಕಪೂರ್​ ಅವರ ಸಂಪೂರ್ಣ ಬೆತ್ತಲೆ ದೃಶ್ಯದ ಸುದ್ದಿಯಾಗುತ್ತಿದ್ದಂತೆಯೇ ರಶ್ಮಿಕಾ ಸೈಡ್​ಗೆ ಹೋಗಿದ್ದಾರೆ, ಎಲ್ಲೆಲ್ಲೂ ತೃಪ್ತಿಯದ್ದೇ ಮಾತು. ರಾತ್ರೋರಾತ್ರಿ ಈಕೆ ರಶ್ಮಿಕಾ ಮಂದಣ್ಣನವರ ನ್ಯಾಷನಲ್​ ಕ್ರಷ್​ ಪಟ್ಟವನ್ನೂ ಕಿತ್ತುಕೊಂಡಿದ್ದಾರೆ. ಈಕೆಯ ಇನ್​ಸ್ಟಾಗ್ರಾಮ್​ ಖಾತೆಯ ಫಾಲೋವರ್ಸ್​​ ಸಂಖ್ಯೆ ದಿಢೀರನೆ ಐದಾರು ಪಟ್ಟು ಹೆಚ್ಚಾಗಿದೆ.

ಇವುಗಳ ನಡುವೆಯೇ ಇದೀಗ ಮತ್ತೊಂದು ಬಿರುದು ಈ ಬೆತ್ತಲೆ ರಾಣಿಯ ಕಿರೀಟಕ್ಕೆ ಸೇರಿದೆ. ಅದೇನೆಂದರೆ IMDb (Internet Movie Database) ಎಂಬ ಹೆಸರಾಂತ ಇಂಟರ್ನೆಟ್ ಮೂವಿ ಡೇಟಾಬೇಸ್, ಇತ್ತೀಚೆಗೆ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡಿದೆ. ಈ ಸ್ಥಾನದಲ್ಲಿ ಎಲ್ಲಾ ನಟ-ನಟಿಯರನ್ನು ಮೀರಿ ತೃಪ್ತಿ ಡಿಮ್ರಿ ನಂ.1 ಸ್ಥಾನಕ್ಕೆ ಏರಿದ್ದಾರೆ. ಕುತೂಹಲದ ವಿಷಯ ಏನೆಂದರೆ, ಅನಿಮಲ್​ ಚಿತ್ರದ  ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ನಟಿ ತೃಪ್ತಿಯ ಅದೃಷ್ಟ ಖುಲಾಯಿಸಿದೆ. ಈಕೆ ಬೆತ್ತಲಾಗುತ್ತಿದ್ದಂತೆಯೇ ಬೇರೆ ಚಿತ್ರಗಳಿಂದಲೂ ಒಳ್ಳೆಯ ಆಫರ್​ಗಳು ಬರುತ್ತಿವೆ. ಇನ್ನು ಉಳಿದ ನಟಿಯರು ಮುಂದೆ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಸಿನಿ ರಸಿಕರನ್ನು ಕಾಡುತ್ತಿದೆ. 

ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

Follow Us:
Download App:
  • android
  • ios