Asianet Suvarna News Asianet Suvarna News

ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ಗೆ ಜಗಪತಿ ಬಾಬು ವಿಲನ್‌!

ಪ್ರಭಾಸ್ 'ಸಲಾರ್' ಅಡ್ಡಕ್ಕೆ ಎಂಟ್ರಿ ಕೊಟ್ಟ ಜಗಪತಿ ಬಾಬು. ದೊಡ್ಡ ತಾರಾ ಬಳಗವನ್ನೇ ಸೇರಿಸುತ್ತಿದ್ದಾರೆ ಪ್ರಶಾಂತ್.

Jagapathi Babu to play villain role in Prabhas Salaar film vcs
Author
Bengaluru, First Published Aug 14, 2021, 2:58 PM IST
  • Facebook
  • Twitter
  • Whatsapp

ಇಡೀ ಭಾರತೀಯ ಚಿತ್ರರಂಗವೇ ವೀಕ್ಷಿಸಲು ಕಾಯುತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2 ಹಾಗೂ ಸಲಾರ್ ಸಿನಿಮಾ. ಎರಡೂ ಚಿತ್ರಗಳಿಗೆ ನಾಯಕರು ಬೇರೆ ಬೇರೆಯಾದರೂ ನಿರ್ದೇಶಕ ಒಬ್ಬರೇ.  ಹಿಸ್ಟರಿ ಕ್ರಿಯೇಟರ್ ಪ್ರಶಾಂತ್ ನೀಲ್. ಕೆಜಿಎಫ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ನಡುವೆ ಸಲಾರ್ ಅಡ್ಡದಿಂದ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ನೀಡುತ್ತಿದ್ದಾರೆ.

ಸಲಾರ್‌ಗೂ ಮೈಸೂರಿಗೂ ಇದೆ ನಂಟು..! ಏನದು ?

ಹೌದು! ಪ್ರಶಾಂತ್‌ ನೀಲ್‌ ಹಾಗೂ ಪ್ರಭಾಸ್‌ ಕಾಂಬಿನೇಶನ್‌ನ ‘ಸಲಾರ್‌’ ಚಿತ್ರಕ್ಕೆ ಖಡಕ್‌ ವಿಲನ್‌ ಎಂಟ್ರಿ ಆಗಿದ್ದಾರೆ. ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ವಿಲನ್‌ ಆಗಿ ಮಿಂಚುತ್ತಿರುವ ಆ ದಿನಗಳ ಫ್ಯಾಮಿಲಿ ಹೀರೋ ಜಗಪತಿ ಬಾಬು ಈಗ 'ಸಲಾರ್‌' ಅಡ್ಡಾಗೆ ಎಂಟ್ರಿ ನೀಡಿದ್ದಾರೆ. ಸಲಾರ್ ಚಿತ್ರದಲ್ಲಿ ಮಾತ್ರವಲ್ಲ ಶ್ರೀಮುರಳಿ ನಟನೆಯ, ಮಹೇಶ್‌ ನಿರ್ದೇಶನದ 'ಮದಗಜ' ಚಿತ್ರದಲ್ಲೂ ಖಳನಾಯಕನಾಗಿ ನಟಿಸಿದ್ದಾರೆ. ಸಲಾರ್ ಚಿತ್ರದಲ್ಲಿ ಜಗಪತಿ ಅವರ ದೃಶ್ಯಗಳ ಭಾಗದ ಚಿತ್ರೀಕರಣ ಶುರುವಾಗಿದೆ.

Jagapathi Babu to play villain role in Prabhas Salaar film vcs

ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಚಿತ್ರದಲ್ಲಿರುವ ಸ್ಪೆಷಲ್ ಹಾಡಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ಜಗಪತಿ ಎಂಟ್ರಿ. ದೊಡ್ಡ ತಾರಾಬಳಗದ ಜೊತೆ ಪ್ರಭಾಸ್ ಮತ್ತೊಂದು ಹಿಸ್ಟರಿ ಕ್ರಿಯೇಟ್ ಮಾಡಲು ರೆಡಿಯಾಗುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಸಲಾರ್‌ ಬಿಡುಗಡೆ ಮಾಡಲಾಗುತ್ತದೆ.

Follow Us:
Download App:
  • android
  • ios