ಜಾಕ್ವೆಲಿನ್ ತಾಯಿಗೆ ಹೃದಯಾಘಾತ ವಂಚನೆ ಕೇಸ್‌ನಲ್ಲಿ ನಟಿಯ ಹೆಸರು, ಹೆಚ್ಚಿದ ತನಿಖೆ

ಬಾಲಿವುಡ್(Bollywood) ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ(Jacqueline Fernandez) 2022 ವರ್ಷವು ಅಷ್ಟೇನೂ ಸುಂದರವಾಗಿ ಆರಂಭವಾಗಿಲ್ಲ. ಭೂತ್ ಪೊಲೀಸ್ ನಟಿಯ ತಾಯಿ ಕಿಮ್ ಫೆರ್ನಾಂಡಿಸ್ ಬಹ್ರೇನ್‌ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ, ಜಾಕ್ವೆಲಿನ್ ಅವರ ಪೋಷಕರು ಈಗ ಒಂದೆರಡು ವರ್ಷಗಳಿಂದ ಬಹ್ರೇನ್‌ನಲ್ಲಿ ನೆಲೆಸಿದ್ದಾರೆ. ಪಾರ್ಶ್ವವಾಯುವಿಗೆ ಒಳಗಾದ ಕೂಡಲೇ ಕಿಮ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಅವರು ಪ್ರಸ್ತುತ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಅವರ ಆರೋಗ್ಯದ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.

ಜಾಕ್ವೆಲಿನ್‌ಗೆ ಇದು ತುಂಬಾ ಕಷ್ಟದ ಸಮಯ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಹಿಂದೆ ಸಂದರ್ಶನದಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ ಅವರು ಕೊರೋನಾ ಮಧ್ಯೆ ಅವರ ಯೋಗಕ್ಷೇಮದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಅವರು ಬಹ್ರೇನ್‌ಗೆ ಹೋಗಬೇಕೆಂದು ಬಯಸಿದ್ದರು ಎಂದು ಹೇಳಿದ್ದಾರೆ. ಶ್ರೀಲಂಕಾದ ನನ್ನ ಸ್ನೇಹಿತರು ಮತ್ತು ಬಹ್ರೇನ್‌ನಲ್ಲಿ ವಾಸಿಸುವ ನನ್ನ ಪೋಷಕರು ಭಾರತದ ಪರಿಸ್ಥಿತಿಯನ್ನು ನೋಡಿದಾಗ ಭಯಭೀತರಾಗಿದ್ದಾರೆ. ನನ್ನ ಹೆತ್ತವರು ನಾನು ಬಹ್ರೇನ್‌ನಲ್ಲಿ ಅವರೊಂದಿಗೆ ವಾಸಿಸಬೇಕೆಂದು ಬಯಸುತ್ತಾರೆ. ಶ್ರೀಲಂಕಾದಲ್ಲಿರುವ ನನ್ನ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳು ಸಹ ಬಂದು ಅವರೊಂದಿಗೆ ಇರಲು ನನ್ನನ್ನು ಕೇಳುತ್ತಿದ್ದಾರೆ ಎಂದು ನಟಿ ಹೇಳಿಕೆ ನೀಡಿದ್ದರು. ಆದರೂ ನಟಿ ತನ್ನ ಕೆಲಸದ ಬದ್ಧತೆಯ ಕಾರಣದಿಂದ ಅವಳು ಭಾರತದಲ್ಲಿ ಉಳಿಯಲು ನಿರ್ಧರಿಸಿದ್ದರು. ಹಾಗೆಯೇ ಕೊರೋನಾ ಸಂದರ್ಭ ಜನರಿಗೆ ನೆರವಾಗಿದ್ದರು.

ಅರೆಸ್ಟ್ ಆಗಲಿದ್ದಾರಾ ನಟಿ ? ನೆರವಿಗೆ ಬರ್ತಾರಾ ಸಲ್ಮಾನ್ ಖಾನ್ ?

ಕೆಲಸದ ವಿಚಾರವಾಗಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಅಕ್ಷಯ್ ಕುಮಾರ್ ಮತ್ತು ನುಶ್ರತ್ ಭರುಚ್ಚ ಅಭಿನಯದ ರಾಮ್ ಸೇತು ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದಲ್ಲದೆ, ರೋಹಿತ್ ಶೆಟ್ಟಿ ಅವರು ಹೆಲ್ಮ್ ಮಾಡುತ್ತಿರುವ ಅಕ್ಷಯ್ ಮತ್ತು ಕೃತಿ ಸನನ್, ರಣವೀರ್ ಸಿಂಗ್ ಅಭಿನಯದ ಸರ್ಕಸ್ ಹಾಗೆಯೇ ಜೊತೆಗೆ ಬಚ್ಚನ್ ಪಾಂಡೆಯಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬಾರಿ ಉಡುಗೊರೆಗಳ ಆಸೆಗೆ ಬಿದ್ದು ಈಗ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ ಆರೋಪಿ ಸುಕೇಶ್ ಚಂದ್ರಶೇಖರ್ ಹಾಗೂ ಅತನ ಪತ್ನಿ ಲೀನಾ ಮರಿಯಾ ಪೌಲ್ ಹಾಗೂ ಇನ್ನೂ ಆರು ಮಂದಿಯ ವಿರುದ್ಧ ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 200 ಕೋಟಿ ಹಣ ವಂಚನೆ ಕೇಸ್‌ನಲ್ಲಿ ಇವರೆಲ್ಲರ ವಿರುದ್ಧ ಕೇಸ್ ದಾಖಲಾಗಿದೆ, ಚಾರ್ಜ್‌ಶೀಟ್ ಪ್ರಕಾರ ಆರೋಪಿ ಸುಕೇಶ್ ತಾನು ಜಾಕ್ವೆಲಿನ್‌ಗೆ ಕೊಟ್ಟ ದುಬಾರಿ ಉಡುಗೊರೆಗಳ ಕುರಿತು ಸೀಕ್ರೆಟ್ ರಿವೀಲ್ ಮಾಡಿದ್ದಾನೆ.

ಶ್ರೀಲಂಕಾ ಸುಂದರಿ ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ 52 ಲಕ್ಷ ರುಪಾಯಿಯ ಕುದುರೆ ಹಾಗೂ 9 ಲಕ್ಷ ರೂಪಾಯಿಯ ಪರ್ಷಿಯನ್ ಬೆಕ್ಕು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾನೆ. ಚಾರ್ಜ್‌ಶೀಟ್‌ನಲ್ಲಿ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರ ಹೆಸರನ್ನೂ ನಮೂದಿಸಲಾಗಿದೆ. ನಟಿಗೆ ಸುಕೇಶ್ ಚಂದ್ರಶೇಖರ್ ದುಬಾರಿ ಕಾರು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾರೆ.

ಖಾಸಗಿ ಕಿಸ್ಸಿಂಗ್ ಫೋಟೋ ಲೀಕ್, ನಾಚ್ಕೊಂಡ ಶ್ರೀಲಂಕಾ ಸುಂದರಿ ಜೊತೆಗಿದ್ದಿದ್ದು ಯಾರು?

ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಸುಕೇಶ್ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರು, ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಸಂಗಾತಿಗಳಿಗೆ ₹200 ಕೋಟಿ ವಂಚಿಸಿದ್ದಾರೆ ಎಂದು ಆರೋಪದ ಮೇಲೆ ಕೇಸ್ ದಾಖಲಿಸಲಾಗಿತ್ತು. ಪೊಲೀಸ್ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿತ್ತು. ಪ್ರಕರಣದಲ್ಲಿ ವ್ಯಕ್ತಿಯು ಗೃಹ ಸಚಿವಾಲಯದ ಅಧಿಕಾರಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡು ಪ್ರಕರಣದಲ್ಲಿ ಪತಿಯಂದಿರನ್ನು ಬಿಡುಗಡೆ ಮಾಡಲು ನೆರವಾಗುವುದಾಗಿ ವಂಚಿಸಿದ್ದರು. ಈ ವಿಚಾರವಾಗಿ ಸುಕೇಶ್ 2019ರಲ್ಲಿ ಅರೆಸ್ಟ್ ಆಗಿದ್ದರು. ರೆಲಿಗೇರ್ ಫಿನ್‌ವೆಸ್‌ ಲಿಮಿಟೆಡ್‌ಗೆ 2000 ಕೋಟಿ ವಂಚಿಸಿದ್ದರು.