ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಾ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಚೆಲುವೆ ಜಾಕ್ವೆಲಿನ್‌ ಇದ್ದಕ್ಕಿದ್ದಂತೆ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವತಃ ಜಾಕ್ವೆಲಿನ್ನೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್‌ರ ಟಾಪ್‌ಲೆಸ್‌ ಫೋಟೋ ವೈರಲ್‌! 

ಹೌದು! ಶಿವಮೊಗ್ಗದಲ್ಲಿರುವ ಕಿಮ್ಮನೆ ಗಾಲ್ಫ್‌ ವಿಲೇಜ್‌ನಲ್ಲಿ ಲಂಕಾ ಚೆಲುವೆ ಗಾಲ್ಫ್ ಆಟವಾಡುತ್ತಿದ್ದಾರೆ. ಜನವರಿ 15ರಿಂದ ಅಲ್ಲಿಯೇ ವಾಸವಿರುವ ಜಾಕ್ವೆಲಿನ್‌ರನ್ನು ನೋಡಿ ನೆಟ್ಟಿಗರು ಇದ್ಯಾವ ಸಿನಿಮಾ, ಅಲ್ಲಿಯೂ ಪ್ರಚಾರ ಮಾಡುತ್ತಿದ್ದೀರಾ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ.

ಜಾಕ್ವೆಲಿನ್‌ ಕೈತುಂಬಾ ಸಿನಿಮಾಗಳು ಇರುವುದು ಹೌದು ಆದರೆ ಶಿವಮೊಗ್ಗಕ್ಕೆ ಯಾವುದೋ ಖಾಸಗಿ ವಿಚಾರದಿಂದ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಮೇಲ್ನೋಟಕ್ಕೆ ಇದು ಫ್ಯಾಂಟಮ್‌ ಚಿತ್ರದ ಮಾತುಕತೆಗಾಗಿ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದಲ್ಲಿ ಕತ್ರಿನಾ ಕೈಫ್ ಅಥವಾ ಜಾಕ್ವೆಲಿನ್ ನಟಿಸುವುದಾಗಿ ಕೇಳಿ ಬರುತ್ತಿತು, ಡೇಟ್ ಕ್ಲಾಶ್ ಆಗುತ್ತಿದ್ದ ಕಾರಣ ಕತ್ರಿನಾ ಹಿಂದೆ ಸರಿದಿದ್ದಾರೆ ಆದರೆ ಕಥೆ ಕೇಳಿ ಜಾಕ್ವೆಲಿನ್ ಕೊಂಚ ಸಮಯ ತೆಗೆದುಕೊಂಡಿದ್ದಾರೆ. ಶೀಘ್ರವೇ ಚಿತ್ರತಂಡದಿಂದ ಸಂಪೂರ್ಣ ಮಾಹಿತಿ ಸಿಗಲಿದೆ.