Asianet Suvarna News Asianet Suvarna News

ಪಾಪ್​ಕಾರ್ನ್​ ರೇಟ್​ ಕಮ್ಮಿ ಮಾಡಿ: ಸಿಎಂಗೆ ಬೇಡಿಕೆ ಇಟ್ರು ನಟ ಜಾಕಿ ಶ್ರಾಫ್​!

ಮುಂಬೈಗೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಳಿ ಖ್ಯಾತ ನಟ ಜಾಕಿ ಶ್ರಾಫ್​ ಪಾಪ್​ಕಾರ್ನ್​ ಬಗ್ಗೆ ಪ್ರಸ್ತಾಪಿಸಿದ್ದೇಕೆ?

Jackie Shroffs plea to Yogi Adityanath get cinemas to lower popcorn prices
Author
First Published Jan 9, 2023, 12:22 PM IST

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಮುಂಬೈ ಪ್ರವಾಸಲಿದ್ದು, ಅವರನ್ನು ನೋಡಲು ಬಾಲಿವುಡ್‌ ತಾರೆಯರ ದಂಡೇ ಹರಿದು ಬಂದಿತ್ತು. ಸುನೀಲ್​ ಶೆಟ್ಟಿ. ಮನೋಜ್ ಜೋಶಿ, ಕೈಲಾಶ್ ಖೇರ್, ಸೋನು ನಿಗಮ್, ಬೋನಿ ಕಪೂರ್ ಮತ್ತು ಜಾಕಿ ಶ್ರಾಫ್ (jackie shroff) ಸೇರಿದಂತೆ ಬಾಲಿವುಡ್‌ನ ಸ್ಟಾರ್‌ಗಳು ಸಿಎಂ ಅವರನ್ನು ಭೇಟಿಯಾಗಿ ಚಿತ್ರರಂಗ ಬಗ್ಗೆ ಸಾಕಷ್ಟು ಸಮಾಲೋಚನೆ ನಡೆಸಿದರು. ಸಿನಿಮಾರಂಗ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ ತಾರೆಯರು ಯೋಗಿ ಅವರ ಮುಂದೆ ಹಲವಾರು ಬೇಡಿಕೆಗಳನ್ನೂ ಇಟ್ಟಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿರುವುದು ನಟ ಜಾಕಿ ಶ್ರಾಫ್‌ ಅವರ ಬೇಡಿಕೆ.

ಹೌದು. ಜಾಕಿ ಶ್ರಾಫ್‌ ಅವರು, ಕುತೂಹಲದ ಬೇಡಿಕೆಯೊಂದನ್ನು ಯೋಗಿ ಆದಿತ್ಯನಾಥ (Yogi Adityanath) ಅವರ ಮುಂದೆ ಇಟ್ಟಿದ್ದಾರೆ. ಅದೀಗ ಭಾರಿ ಸುದ್ದಿಯಾಗಿದೆ. ಅಷ್ಟಕ್ಕೂ ಜಾಕಿ ಶ್ರಾಫ್‌ ಅವರು ಇಟ್ಟಿರೋ ಬೇಡಿಕೆ ಪಾಪ್‌ಕಾರ್ನ್‌‌ಗೆ ಸಂಬಂಧಿಸಿದ್ದು. ಈ ಬೇಡಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. 

ನೋರಾ ಆಯ್ತು ಈಗ ಸಾದಿಯಾನಾ? 35 ವರ್ಷದವಳ ಜತೆ ಶಾರುಖ್‌ ಪುತ್ರಂದು ಇದೆಂಥ ಸುದ್ದಿ?

ಈ ಬೇಡಿಕೆ ಇಡುವುದಕ್ಕೂ ಮುನ್ನ ಜಾಕಿ ಶ್ರಾಫ್‌ ಅವರು ಯೋಗಿ ಆದಿತ್ಯನಾಥ ಅವರನ್ನು ಆತ್ಮೀಯವಾಗಿ ಸ್ವಾಗತ ಮಾಡಿಕೊಂಡರು. ‘ನಿಮಗೆ ಮನೆಯಲ್ಲಿ ಅಡುಗೆ ಮಾಡುವ ಆಹಾರ ಬೇಕಾದರೆ ನನಗೆ ಹೇಳಿ ನಾನು ಹೇಳಿಕಳುಹಿಸುತ್ತೇನೆ‘ ಎನ್ನುವ ಮೂಲಕ ಅವರನ್ನು ಸ್ವಾಗತಿಸಿದರು.

ನಂತರ ಹೀಗೆ ಸಿನಿಮಾ ಜಗತ್ತಿನ ಬಗ್ಗೆ  ಮುಖ್ಯಮಂತ್ರಿಗಳಲ್ಲಿ ಜಾಕಿ ಶ್ರಾಫ್‌ ಸಮಾಲೋಚನೆ ನಡೆಸುತ್ತಾ ನಂತರ ವಿಷಯವನ್ನು ಪಾಪ್‌ಕಾರ್ನ್‌‌ನತ್ತ ತಿರುಗಿಸಿದರು. ಅಷ್ಟಕ್ಕೂ ಜಾಕಿ ಶ್ರಾಫ್‌ ಅವರ ಚಿಂತೆ ಇರುವುದು ಚಿತ್ರಮಂದಿರಗಳಲ್ಲಿ ಪಾಪ್‌ಕಾರ್ನ್‌ ಬೆಲೆ ಹೆಚ್ಚು ಇರುವುದರ ಕುರಿತು. ಪಾಪ್‌ಕಾರ್ನ್‌ (Popcorn) ಬಾಕ್ಸ್‌ ಕೈಯಲ್ಲಿ ಹಿಡಿದು ಸಿನಿಮಾ ನೋಡಿದರೆ ಅದಕ್ಕೊಂದು ಘನತೆ ಎನ್ನುವ ಸ್ಥಿತಿ ಇಂದಿನದ್ದು. ಆದರೆ ಎಲ್ಲರಿಗೂ ತಿಳಿದೇ ಇರುವಂತೆ  ಸಿನಿಮಾ ಮಂದಿರಗಳಲ್ಲಿ ಅದರಲ್ಲಿಯೂ ಮಲ್ಟಿಪ್ಲೆಕ್ಸ್‌ಗಳಲ್ಲಿ  (Multiplex) ಪಾಪ್ ಕಾರ್ನ್ ಬೆಲೆ 500 ರೂಪಾಯಿಗೂ ಜಾಸ್ತಿ ಇದೆ. ಸಿನಿಮಾ ಟಿಕೆಟ್​​ಗಿಂತ ಪಾಪ್​ ಕಾರ್ನ್​ ಬೆಲೆ ಜಾಸ್ತಿ ಎನ್ನುವಂಥ ಸ್ಥಿತಿ ಇದೆ. ಇದೇ ನಟ ಜಾಕಿ ಅವರ ಚಿಂತೆಗೂ ಕಾರಣವಾಗಿದೆ.

ಈ ಕುರಿತು ಯೋಗಿ ಅವರಿಗೆ ವಿಷಯ ತಿಳಿಸಿದ ನಟ, ಇಂದು ಪಾಪ್‌ಕಾರ್ನ್‌ ಬೆಲೆ ನೋಡಿಯೇ ಜನರು ಮಲ್ಟಿಪ್ಲೆಕ್ಸ್‌ಗಳಿಗೆ ಬರಲು ಹೆದರುತ್ತಿದ್ದಾರೆ. ಜನರು ಸಿನಿಮಾ ನೋಡಲು ಯಾರೂ ಬರದಿದ್ದರೆ ನಾವು ಸಿನಿಮಾ (Cinema) ಮಾಡಿ ಏನು ಪ್ರಯೋಜನ? ಆದ್ದರಿಂದ ದಯವಿಟ್ಟು ಬೆಲೆ ಕಮ್ಮಿ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳದ್ದು ನಗುವೇ ಉತ್ತರವಾಗಿತ್ತು. 

ಜಾಕಿ ಶ್ರಾಫ್ ನಮ್ಮವರಲ್ಲ ಆತನ ಯಶಸ್ಸು ನಾನು ಸಹಿಸಿಕೊಳ್ಳುವುದಿಲ್ಲ: Anil Kapoorಗೆ ಹೊಟ್ಟೆ ಕಿಚ್ಚು?

ಸಾಮಾನ್ಯ ಚಿತ್ರಮಂದಿರಕ್ಕಿಂತ 8-10 ಪಟ್ಟು ಹೆಚ್ಚು ಟಿಕೆಟ್‌ ದರ ಕೊಟ್ಟು ಮಲ್ಟಿಪ್ಲೆಕ್ಸ್‌ಗೆ ಹೋಗುವವರಿಗೆ ಪಾಪ್‌ಕಾರ್ನ್‌ ಪ್ರೆಸ್ಟೀಜ್‌ ಸಂಕೇತ. ಅದನ್ನು ಕೈಯಲ್ಲಿ ಹಿಡಿದು ಸಿನಿಮಾ (Cinema) ನೋಡಿದರೆನೇ ಏನೋ ಖುಷಿ.  ಅದಕ್ಕಾಗಿಯೇ ಮೊದಲು ಒಂದೇ ಫ್ಲೇವರ್‌ನಲ್ಲಿ ಬರುತ್ತಿದ್ದ ಪಾಪ್‌ಕಾರ್ನ್‌ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ  ಬಗೆಬಗೆ ಫ್ಲೇವರ್‌ ಆಕ್ರಮಿಸಿಕೊಂಡಿದೆ. ಈಗ ಇದು ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರವನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಕುದುರಿಸುತ್ತಿದೆ. 
 
ಇದನ್ನು ಕಡಿಮೆ ರೇಟ್‌ನಲ್ಲಿ ಮಾರಬಹುದಾದರೂ ಬೇಡಿಕೆ ಹೆಚ್ಚಿದೆ ಜನರೂ ಖುಷಿ ಪಡುತ್ತಿದ್ದಾರೆ. ದುಡ್ಡಿನ ಲೆಕ್ಕ ಹಾಕುತ್ತಿಲ್ಲ ಎನ್ನೋ ಕಾರಣಕ್ಕೆ ರೇಟ್‌ ಕಮ್ಮಿ ಮಾಡಲು ಹೋಗುವುದೇ ಇಲ್ಲ. ಆದರೆ ಜನಸಾಮಾನ್ಯರಿಗೆ ಇದು ತುಸು ದುಬಾರಿ ಎನ್ನಿಸುವ ಕಾರಣ, ಅದರ ರೇಟ್‌ ಕಡಿಮೆ ಮಾಡಿ ಎಂದು ನಟ ಜಾಕಿಶ್ರಾಫ್‌ ಕೇಳಿಕೊಂಡಿದ್ದಾರೆ.

ಅಷ್ಟಕ್ಕೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ಕಾರ್ನ್‌‌ಗಳ ಬೆಲೆ ಗಗನಕ್ಕೆ ಏರಿರುವ ಹಿಂದೆಯೂ ಕುತೂಹಲದ ಕಾರಣವಿದೆ. ಫಿಲ್ಮ್‌ ಟಾಕೀಸ್‌ ಎಂದರೆ ಅದರ ಸಿಂಬಾಲ್‌ ಪಾಪ್‌ಕಾರ್ನ್‌ ಎನ್ನುವಂತಾಗಿದೆ. ಈ ಪಾಪ್‌ಕಾರ್ನ್‌ ಇತಿಹಾಸ ಏನು ಗೊತ್ತಾ? ಮೊದಲು ಸಿನಿಮಾ ಟಾಕೀಸ್‌ ಒಳಗೆ ಪಾಪ್‌ಕಾರ್ನ್‌ ಬಂದಿದ್ದು 1938 ರಲ್ಲಿ ಎನ್ನಲಾಗುತ್ತಿದೆ. ತುಂಬಾ ಈಸಿಯಾಗಿ ರೆಡಿ ಮಾಡಬಹುದಾದ ಇದನ್ನು ಹೆಚ್ಚು ಹೊತ್ತು ತಿನ್ಬೋದು, ಕೈ ಕೊಳೆ ಆಗಲ್ಲ, ಸ್ಪೂನ್‌ ಬೇಕಾಗಿಲ್ಲ, ಪ್ಲೇಟೂ ಬೇಡ... ಇವೆಲ್ಲಾ ಕಾರಣಕ್ಕೆ ಸಕತ್‌ ಫೇಮಸ್‌ (Famous) ಆಗಿದೆ. ಆದರೆ ಬರಬರುತ್ತಾ ಇದರ ಬೇಡಿಕೆ ಹೆಚ್ಚುತ್ತಿದ್ದಂತೆಯೇ ದರನೂ ಗಗನಕ್ಕೇರುತ್ತಿದೆ. 

ನಟ ಜಾಕಿ ಶ್ರಾಫ್​ ಮನವಿಯ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೋ ಎನ್ನೋ ಕಾತರ ಸಿನಿಪ್ರಿಯರದ್ದು, ವರಿ ಪಾಪ್​ಕಾರ್ನ್​ ಮಾರಾಟಗಾರರದ್ದು!

Follow Us:
Download App:
  • android
  • ios