ಜೈಪುರದಲ್ಲಿ ನಡೆದ IIFA ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ 18 ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡರು. ಈ ಹಿಂದೆ ಪ್ರೇಮಿಗಳಾಗಿದ್ದ ಈ ಜೋಡಿ, ಜಬ್ ವಿ ಮೆಟ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಸಮಾರಂಭದಲ್ಲಿ ಪರಸ್ಪರ ಮಾತನಾಡಿಕೊಂಡು, ತಬ್ಬಿಕೊಂಡು, ಫೋಟೋಗೆ ಪೋಸ್ ನೀಡಿದರು.
ಬಾಲಿವುಡ್ ನಟರಾದ ಶಾಹಿದ್ ಕಪೂರ್ (Shahid Kapoor) ಮತ್ತು ಕರೀನಾ ಕಪೂರ್ ಅವರ ಆನ್-ಸ್ಕ್ರೀನ್ ಜೋಡಿ ಸಾಕಷ್ಟು ಜನಪ್ರಿಯವಾಗಿದ್ದ ಸಮಯವಿತ್ತು. ಜಬ್ ವಿ ಮೆಟ್ ನಲ್ಲಿನ ಅವರ ಲವ್ ಕೆಮೆಸ್ಟ್ರಿ ಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಆ ಸಮಯದಲ್ಲಿ, ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳೂ ಇದ್ದವು. ಅಷ್ಟೇ ಅಲ್ಲ, ಈ ಜೋಡಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಈ ಜೋಡಿ ಬೇರ್ಪಟ್ಟರು. ಅದಾಗಿ 18 ವರ್ಷಗಳ ಬಳಿಕ ಇದೀಗ ಈ ಜೋಡಿ ಮತ್ತೊಮ್ಮೆ, ಒಟ್ಟಿಗೆ ಕಾಣಿಸಿಕೊಂಡರು, ಮತ್ತು ಅಷ್ಟೇ ಅಲ್ಲ, ಪರಸ್ಪರ ತಬ್ಬಿಕೊಂಡು, ಫೋಟೊಗೆ ಜೊತೆಯಾಗಿ ಪೋಸ್ ಕೂಡ ಕೊಟ್ಟಿದ್ದಾರೆ.
ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರುವ IIFA ಕಾರ್ಯಕ್ರಮದಲ್ಲಿ ಕರೀನಾ ಕಪೂರ್ (Kareena Kapoor) ಮತ್ತು ಶಾಹಿದ್ ಕಪೂರ್ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಯರಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅವಾರ್ಡ್ ನೈಟ್ ಮೊದಲು ಪತ್ರಿಕಾಗೋಷ್ಠಿಯಲ್ಲಿ ಜೊತೆಯಾಗಿ ಸಮಯ ಕಳೆದಿರೋದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಮಾತನಾಡಿದ್ದು, ಕೈ ಕೈ ಕುಲುಕಿದ್ದು, ಹಗ್ ಕೂಡ ಮಾಡಿದ್ದಾರೆ. ಜೊತೆಗೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ. IIFA ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತಿರುವ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ನಟ ಕಾರ್ತಿಕ್ ಆರ್ಯನ್ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಂಡರು. ಮಾರ್ಚ್ 9 ರಂದು, ಶಾಹಿದ್ ಕಪೂರ್ ಮುಖ್ಯ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿರುವ ಮುಖ್ಯ ಕಲಾವಿದರಲ್ಲಿ ಒಬ್ಬರು, ಕರೀನಾ ಕಪೂರ್ ಖಾನ್ ತಮ್ಮ ಮುತ್ತಜ್ಜ ರಾಜ್ ಕಪೂರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ, ಅವರ ಸಿನಿ ಪರಂಪರೆಯ 100 ವರ್ಷಗಳನ್ನು ಈ ಸಮಾರಂಭದಲ್ಲಿ ಸೆಲೆಬ್ರೇಟ್ ಮಾಡಲಾಗುತ್ತೆ .
ಒಂದೇ ಫ್ರೇಮ್ ನಲ್ಲಿ ಹಳೆ ಲವರ್ ಕರೀನಾ, ಶಾಹಿದ್ ! ಪರಸ್ಪರ ಮಕ್ಕಳಿಗೆ ಮಾಡಿದ್ರಾ ಚಿಯರ್?
2007ರಲ್ಲಿ ಬಿಡುಗಡೆಯಾದ ಇಮ್ತಿಯಾಜ್ ಅಲಿ ನಿರ್ದೇಶನದ ಜಬ್ ವೀ ಮೆಟ್ ಸಿನಿಮಾದಲ್ಲಿ ಶಾಹಿದ್ ಮತ್ತು ಕರೀನಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಕರೀನಾ ಈ ಚಿತ್ರದಲ್ಲಿ ಬಬ್ಲಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದರೆ, ಶಾಹಿದ್ ಆದಿತ್ಯ ಎನ್ನುವ ತುಂಬಾನೆ ಸೈಲೆಂಟ್ ಆಗಿರುವ ಹುಡುಗನ ಪಾತ್ರದಲ್ಲಿ ನಟಿಸಿದ್ದರು. ಅಂದಿನಿಂದ, ಈ ಜೋಡಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು.ಈ ಹಿಂದೆ, ಶಾಹಿದ್ ಮತ್ತು ಕರೀನಾ ಕೊನೆಯ ಬಾರಿಗೆ ಡಿಸೆಂಬರ್ 2024 ರಲ್ಲಿ ತಮ್ಮ ಮಕ್ಕಳ ಶಾಲಾ ಸಮಾರಂಭಕ್ಕಾಗಿ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು.
ಇನ್ನು ಹಲವಾರು ವರ್ಷಗಳ ಬಳಿಕ ತಮ್ಮ ಮೋಸ್ಟ್ ಫೇವರಿಟ್ ಜೋಡಿಯನ್ನು ಜೊತೆಯಾಗಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಅವರಿಗೆ ತಮ್ಮ ಕಣ್ಣುಗಳಲ್ಲಿ ಇದನ್ನ ನಂಬೋದಕ್ಕೆ ಸಾಧ್ಯಾನೆ ಆಗುತ್ತಿಲ್ಲ. ಇದು ನಿಜವೇ? ಅಥವಾ ಎಐ ನಿಂದ ಮಾಡಿರೋದೆ ಎನ್ನುವ ಪ್ರಶ್ನೆಗಳು ಸಹ ಕೇಳಿ ಬಂದಿವೆ. ಒಟ್ಟಲ್ಲಿ ತಮ್ಮ ಫೇವರಿಟ್ ಗೀತ್- ಆದಿತ್ಯಾ ಜೋಡಿಯನ್ನು ನೋಡಿ ಜನ ಕಳೆದು ಹೋಗಿರೋದಂತೂ ನಿಜಾ.
ಕರೀನಾ ಮತ್ತು ಶಾಹಿದ್ ಈ ಹಿಂದೆ ರಿಲೇಶನ್’ಶಿಪ್ ನಲ್ಲಿದ್ದರು, ಅದು 2007 ರ ಸುಮಾರಿಗೆ ಕೊನೆಗೊಂಡಿತು. ಬಳಿಕ ಶಾಹಿದ್ ಕಪೂರ್ ಅವರು ಮೀರಾ ರಜಪೂತ್ ಅವರನ್ನು ವಿವಾಹವಾಗಿದ್ದು, ಅವರಿಗೆ ಮಿಶಾ ಮತ್ತು ಜೈನ್ ಎಂಬ ಇಬ್ಬರು ಮಕ್ಕಳಿದ್ದಾರೆ, ಕರೀನಾ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಅವರಿಗೆ ತೈಮೂರ್ ಮತ್ತು ಜಹಾಂಗೀರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
