Asianet Suvarna News Asianet Suvarna News

ಇದು ಲವ್‌ ಜಿಹಾದ್‌ ಅಲ್ಲ, ಲವ್‌ ಮ್ಯಾರೇಜ್‌ : ಶ್ರುತಿ

  • ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ ನಟನೆಯ ಸಿನಿಮಾ 13
  • ನರೇಂದ್ರ ಬಾಬು ನಿರ್ದೇಶನದ ಚಿತ್ರ 
  • ಶ್ರುತಿ ಪಾತ್ರದ ಹೆಸರು ಸಾಯಿರಾ ಬಾನು
Its Not Love jihad its a love Marriage Kannada Actress Shruthi speak about her New Movie 13 akb
Author
Bangalore, First Published Apr 10, 2022, 5:00 AM IST | Last Updated Apr 10, 2022, 5:00 AM IST

ತುಂಬಾ ವರ್ಷಗಳ ನಂತರ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಶ್ರುತಿ '13' ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. ನರೇಂದ್ರ ಬಾಬು ನಿರ್ದೇಶನದ ಈ ಚಿತ್ರವನ್ನು ಸಂಪತ್‌ ಕುಮಾರ್‌ ನಿರ್ಮಿಸುತ್ತಿದ್ದು, ಮಂಜುನಾಥ್‌ ನಿರ್ಮಾಣಕ್ಕೆ ಸಾಥ್‌ ನೀಡುತ್ತಿದ್ದಾರೆ. ಇಲ್ಲಿ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರುತಿ ಟೀ ಅಂಗಡಿ ನಡೆಸುವ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಇಡೀ ಚಿತ್ರವನ್ನು ರೂಪಿಸಲಾಗಿದೆಯಂತೆ. ಶ್ರುತಿ ಪಾತ್ರದ ಹೆಸರು ಸಾಯಿರಾ ಬಾನು. ರಾಘಣ್ಣ ಪಾತ್ರಕ್ಕೆ ಮೋಹನ್‌ ಎಂದು ಹೆಸರು.

‘ನನ್ನ ಸಿನಿಮಾ ಜೀವನದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಹೆಣ್ಣು ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಪೂರ್ವ ತಯಾರಿಗಾಗಿಯೇ 20 ದಿನ ಸಮಯ ಕೇಳಿದ್ದೇನೆ. ಯಾಕೆಂದರೆ ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಎನ್ನುವ ಕಾರಣಕ್ಕೆ. ಗೆಲುವಿನ ಸರದಾರ ಚಿತ್ರದ ನಂತರ ರಾಘಣ್ಣ ಮತ್ತು ನಾನು ಮತ್ತೆ ಜೋಡಿಯಾಗುತ್ತಿದ್ದೇವೆ. ಅಂತರ್‌ಧರ್ಮಿಯ ಪ್ರೇಮ ಕತೆಯ ಸಿನಿಮಾ. ಹಾಗಂತ ಇದು ಲವ್‌ ಜಿಹಾದ್‌ ಅಲ್ಲ, ಲವ್‌ ಮ್ಯಾರೇಜ್‌ ಸ್ಟೋರಿ ಸಿನಿಮಾ’ ಎಂದರು ಶ್ರುತಿ. ‘13 ಎಂಬುದು ತುಂಬಾ ಕುತೂಹಲಕಾರಿಯಾಗಿರುವ ಹೆಸರು. ಚಿತ್ರದ ಕತೆಯಲ್ಲೂ ಅಷ್ಟೇ ಕುತೂಹಲ ಮತ್ತು ಸಸ್ಪೆನ್ಸ್‌ ಇದೆ. ಮಾಜಿ ಪೊಲೀಸ್‌ ಅಧಿಕಾರಿ ಆಗಿದ್ದು, ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಮೋಹನ್‌ (Mohan) ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದರು ರಾಘಣ್ಣ(Raghanna) .

Malavika Avinash ಹುಟ್ಟುಹಬ್ಬಕ್ಕೆ ಕೇಕ್‌ ಜತೆ ಸರ್ಪ್ರೈಸ್‌ ಕೊಟ್ಟ ಸುಧಾರಾಣಿ ಮತ್ತು ಶ್ರುತಿ!

ಕೊಟ್ಟಿಗೆಹಾರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆಯಂತೆ. ಹಿಂದು (Hindu) ಮತ್ತು ಮುಸ್ಲಿಂ (Muslim) ಪ್ರೇಮ ಕತೆಯ (romantic cinema) ಸಿನಿಮಾ ಇದಾಗಿದ್ದರೂ ಪ್ರಸ್ತುತ ನಡೆಯುತ್ತಿರುವ ಘಟನೆಗಳಿಗೆ ಸಂಬಂಧವಿಲ್ಲ. ಪರಸ್ಪರ ದ್ವೇಷ ಕಾರುತ್ತಿರುವ ಹೊತ್ತಿನಲ್ಲಿ, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎಂಬುದನ್ನು ನಮ್ಮ ಚಿತ್ರ ನೋಡಿ ಹೇಳುವ ಮಟ್ಟಿಗೆ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕತೆಯನ್ನು ಇಲ್ಲಿ ಹೇಳಿದ್ದೇನೆ. 13 ಎಂಬುದು ತುಂಬಾ ನಕರಾತ್ಮಕ ಸಂಖ್ಯೆ. ಅದು ಯಾಕೆ ಎಂಬುದೇ ಚಿತ್ರದ ಕತೆ’ ಎಂದು ನಿರ್ದೇಶಕ ನರೇಂದ್ರ ಬಾಬು (Narendra Babu) ಹೇಳಿದರು.

ಮಂಜುನಾಥ್‌ ನಾಯ್ಡು (Manjunath Naidu) ಕ್ಯಾಮೆರಾ, ಸೋಹನ್‌ ಬಾಬು (Sohan Babu) ಸಂಗೀತ ಚಿತ್ರಕ್ಕಿದೆ. ಕನ್ನಡ ಚಿತ್ರರಂಗದ ಮೂವರು ಬೆಸ್ಟ್‌ ಫ್ರೆಂಡ್ಸ್‌ ಅಂದ್ರೆ ಶ್ರುತಿ (Shruti), ಸುಧಾರಾಣಿ (Sudharani) ಹಾಗೂ ಮಾಳವಿಕಾ ಅವಿನಾಶ್ (Malavika Avinash). ಯಾರದ್ದೇ ಬರ್ತಡೇ ಇರಲಿ, ಹಬ್ಬವಿರಲಿ, ಶುಭಾ ಸಮಾರಂಭವಿರಲಿ ಅಥವಾ ಒಬ್ಬ ಕಲಾವಿದ ಕಷ್ಟದಲ್ಲಿದ್ದರೂ ಮೂವರು ಒಟ್ಟಾಗಿ ನಿಲ್ಲುತ್ತಾರೆ. ಈ ಮೂವರು ಬೆಸ್ಟ್‌ ಫ್ರೆಂಡ್ಸ್ ಆಗಾಗ ಸಣ್ಣ ಪುಟ್ಟ ಪಾರ್ಟಿ ಮಾಡುತ್ತಲೇ ಇರುತ್ತಾರೆ. ಇದೀಗ ರಾಗಿ ಮುದ್ದೆ ಪಾರ್ಟಿ (Ragi Mudde Party) ಕೂಡ ಮಾಡಿದ್ದಾರೆ. 

ಗಿಚ್ಚಿ ಗಿಲಿಗಿಲಿ ಶೋಗೆ ರೀಲ್ಸ್‌ ಮಾಡುವವರ ಎಂಟ್ರಿ ಆಗಿದೆ, ಶ್ರುತಿ ಅವರೇ ಆಫ್‌ ಸ್ಕ್ರೀನ್‌ ತರ್ಲೆ: ಸೃಜನ್ ಲೋಕೇಶ್

ಮೊನ್ನೆ ನಟಿ ಶ್ರುತಿ ಮನೆಯಲ್ಲಿ ರಾಗಿ ಮುದ್ದೆ ತಯಾರಿಸಿದ್ದಾರೆ. ಸುಧಾರಾಣಿ ಹಾಗೂ ಮಾಳವಿಕಾ ಸಖತ್ ಎಂಜಾಯ್ ಮಾಡಿದ್ದಾರೆ. ಶ್ರುತಿ ಮನೆಯಲ್ಲಿ ಮುದ್ದೆ ಹೇಗೆ ತಯಾರಿಸುತ್ತಾರೆಂದು ಸುಧಾರಾಣಿ ವಿಡಿಯೋ ಹಂಚಿಕೊಂಡಿದ್ದಾರೆ. 'ರಾಗಿ ಮುದ್ದೆ ಪಾರ್ಟಿ' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಪುತ್ರಿ ಗೌರಿ, ಸುಮನಾ ಕಿತ್ತೂರ್, ನಿರ್ದೇಶಕ ಪನ್ನಗಾಭರಣ ಸೇರಿದಂತೆ ಅನೇಕರು ಮುದ್ದೆ ಸವಿಯಬೇಕು ಎನ್ನುವ ಆಸೆ ವ್ಯಕ್ತ ಪಡಿಸಿದ್ದಾರೆ. 
 

Latest Videos
Follow Us:
Download App:
  • android
  • ios