Asianet Suvarna News Asianet Suvarna News

KGF ನಿರ್ದೇಶಕರನ್ನೇ ನಗಿಸಿದ್ರು ಶ್ರುತಿ ಹಾಸನ್..!

  • KGF ನಿರ್ದೇಶಕರನ್ನು ನಗಿಸಿದ ಬಹುಭಾಷಾ ನಟಿ ಶ್ರುತಿ ಹಾಸನ್
  • ನೀಲ್ ಅವರನ್ನು ನಗಿಸಿದ ನಾನೇ ಲೆಜೆಂಡ್ ಎಂದ ನಟಿ
Its been so amazing working on Salaar says Shruti Haasan dpl
Author
Bangalore, First Published Aug 11, 2021, 2:05 PM IST
  • Facebook
  • Twitter
  • Whatsapp

ನಿರ್ದೇಶಕ ಪ್ರಶಾಂತ್ ನೀಲ್ ತುಂಬಾ ಕೂಲ್ ಅಲ್ಲ ಹಾಗೆ ತುಂಬಾ ಸ್ಟ್ರಿಕ್ಟ್ ಕೂಡಾ ಅಲ್ಲ. ನಗು ಇಲ್ಲದ, ಹಾಗಂತ ಸಿಡುಕುತ್ತಿರುವ ಮುಖವೂ ಅಲ್ಲ. ಆದ್ರೆ ಅವರ ನಗುಮುಖ ಕಾಣೋಕೆ ಸಿಗೋದು ಅಪರೂಪ. ಗಂಭೀರವಾಗಿರುತ್ತಾರೆ ಅವರು. ಅವರ ಫೋಟೋಗಳಲ್ಲಿಯೂ ಗಂಭೀರ ಮುಖವೇ ಹೆಚ್ಚು ಕಾಣಲು ಸಿಗುತ್ತದೆ. ಆದ್ರೆ ಇತ್ತೀಚೆಗೆ ನಿರ್ದೇಶಕ ಮುಗುಳ್ನಕ್ಕಿದ್ದಾರೆ. ಅಂದ ಹಾಗೆ ಕೆಜಿಎಫ್ ಡೈರೆಕ್ಟರನ್ನು ನಗಿಸಿದ್ದು ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್.

ಸಲಾರ್ ಸಿನಿಮಾಗಾಗಿ ಪ್ರಭಾಸ್‌ಗೆ ಜೋಡಿಯಾದ ಶ್ರುತಿ ಹಾಸನ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಬ್ಲಾಕ್‌ & ವೈಟ್ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಪ್ರಶಾಂತ್ ನೀಲ್ ಶ್ರುತಿ ಪಕ್ಕ ನಿಂತು ಮುಗುಳ್ನಗುವುದನ್ನು ಕಾಣಬಹುದು. ಇಬ್ಬರೂ ನಗುಮುಖದಲ್ಲಿದ್ದು ಬ್ಲಾಕ್‌ & ವೈಟ್ ಫೋಟೋಗೆ ಜೀವ ತುಂಬಿದ್ದಾರೆ.

ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್

ಬಹು ನಿರೀಕ್ಷಿತ ಆಕ್ಷನ್ ಸಿನಿಮಾ ಸಲಾರ್ ಚಿತ್ರದ ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಸಾಲಾರ್ ಚಿತ್ರದ ಸೆಟ್ ನಿಂದ ತನ್ನ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ ನಟಿ ಶೃತಿ ಹಾಸನ್. 'ನಾನು ಪ್ರಶಾಂತ್ ನೀಲ್ ನಗುವಂತೆ ಮಾಡಿದ್ದೇನೆ. ನಾನು ಒಬ್ಬ ಲೆಜೆಂಡ್ ಎಂದು ನಾನು ಭಾವಿಸುತ್ತೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಸಲಾರ್‌ನಲ್ಲಿ ಕೆಲಸ ಮಾಡುವುದು ತುಂಬಾ ಅದ್ಭುತವಾಗಿದೆ -  ಇದುಅತ್ಯುತ್ತಮವಾದದ್ದು ಎಂದು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.

ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಜೊತೆ ಶೃತಿ ಹಾಸನ್ ಅವರ ಮೊದಲ ಪ್ರಾಜೆಕ್ಟ್ ಆಗಿ ಸಲಾರ್ ಗುರುತಿಸಿಕೊಂಡಿದೆ. ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರು ಬಂಡವಾಳ ಹೂಡುತ್ತಿದ್ದು, ಸಾಲಾರ್ ಏಪ್ರಿಲ್ 14, 2022 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್: ಅಧ್ಯಾಯ 2 ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಬರಲಿದೆ. ಸಲಾರ್ ಹೊರತಾಗಿ, ಶ್ರುತಿ ಹಾಸನ್ ತನ್ನ ಕಿಟ್ಟಿಯಲ್ಲಿ ವಿಜಯ್ ಸೇತುಪತಿ ಅವರ ಜೊತೆಗಿನ ಲಾಬಮ್ ಸಿನಿಮಾ ಹೊಂದಿದ್ದಾರೆ.

Follow Us:
Download App:
  • android
  • ios