Asianet Suvarna News Asianet Suvarna News

Ishita Dutta: ಗರ್ಭಿಣಿ, ಹೆಚ್ಚು ಟೊಮ್ಯಾಟೋ ತಿನ್ನುವ ರಹಸ್ಯ ಬಿಚ್ಚಿಟ್ಟ ನಟಿ

ನಟಿ ವತ್ಸಲಾ ದತ್ತಾ ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿ ತಾವು ಟೊಮ್ಯಾಟೋ ಹಣ್ಣನ್ನು ಏಕೆ ಹೆಚ್ಚಾಗಿ ಸೇವಿಸುತ್ತೇನೆ ಎಂಬುದನ್ನು ತಿಳಿಸಿದ್ದಾರೆ. ಏನಿದರ ರಹಸ್ಯ? 
 

Ishita Dutta eating more tomatoes and veggies during her pregnancy actress reveals the reason herself
Author
First Published Apr 5, 2023, 3:04 PM IST | Last Updated Apr 5, 2023, 3:04 PM IST

2015ರಲ್ಲಿ ತೆರೆ ಕಂಡ ಕನ್ನಡದ `ರಾಜ ರಾಜೇಂದ್ರ’ (Raja Rajendra) ಸಿನಿಮಾದಲ್ಲಿ ಶರಣ್‌ಗೆ ನಾಯಕಿಯಾಗಿದ್ದ ಇಶಿತಾ ದತ್ತಾ ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು.  ನಟಿ ಇಶಿತಾ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಗುಡ್​ ನ್ಯೂಸ್​ ನೀಡಿದ್ದರು. ಈ ಕುರಿತು  ಇಶಿತಾ ಹಾಗೂ ಅವರ ಪತಿ ವತ್ಸಲ್ ಶೇಠ್ (Vatsal Sheth) ಸಾಮಾಜಿಕ ಜಾಲತಾಣದಲ್ಲಿ ಶೇರ್​  ಮಾಡಿಕೊಂಡಿದ್ದರು. ಕಿರುತೆರೆಯ ಸಾಕಷ್ಟು ಹಿಂದಿ ಸೀರಿಯಲ್‌ಗಳಲ್ಲಿ ನಾಯಕಿಯಾಗಿ ಇಶಿತಾ ಮಿಂಚಿದ್ದಾರೆ.  ಇದಕ್ಕೂ ಮುನ್ನ ಇಶಿತಾ (Ishita Dutta) ಅವರು ಅಜಯ್​ ದೇವಗನ್​ ಪುತ್ರಿ ಎಂದೇ ಚಿರಪರಿಚಿತರು. ಇದಕ್ಕೆ ಕಾರಣ 'ದೃಶ್ಯಂ' (ಫ್ರಾಂಚೈಸ್) ಚಿತ್ರದಲ್ಲಿ ಅಜಯ್ ದೇವಗನ್ ಅವರ ಮಗಳಾಗಿ ನಟಿಸಿದ್ದಾರೆ.  ಅವರು ಮತ್ತು ಅವರ ಪತಿ ವತ್ಸಲ್ ಸೇಠ್ ಇದೀಗ ಸಂದರ್ಶನವೊಂದರಲ್ಲಿ ಗರ್ಭಾವಸ್ಥೆಯ ಕುರಿತು ಮಾಹಿತಿ ನೀಡಿದ್ದಾರೆ. ಇದರಲ್ಲಿ ನಟಿ ತಾವು  ಗರ್ಭಾವಸ್ಥೆಯಲ್ಲಿ ಸಮಯದಲ್ಲಿ  ಏನು ಆಹಾರ ಸೇವಿಸುತ್ತೇನೆ ಎನ್ನುವುದನ್ನು ತಿಳಿಸಿದ್ದಾರೆ.
 
ಅಂದಹಾಗೆ ನಟಿ  ಇಶಿತಾ ಮತ್ತು ವತ್ಸಲ್​ ಅವರ ಮದುವೆ 2017ರಲ್ಲಿ ನಡೆದಿದೆ.  ಮದುವೆಯಾಗಿ ಐದೂವರೆ ವರ್ಷಗಳ ಬಳಿಕ ಇಶಿತಾ ಗರ್ಭಿಣಿಯಾಗಿದ್ದು, (Pregnant) ಇದೀಗ ತಮ್ಮ ಆಹಾರ ಸೇವನೆ ಕುರಿತು ತಿಳಿಸಿದ್ದಾರೆ. ವತ್ಸಲ್ ಸೇಠ್ ಅವರು ಟೊಮ್ಯಾಟೊ ಹಣ್ಣನ್ನು  ಇಷ್ಟಪಡುವುದಿಲ್ಲವಂತೆ. ಆದರೆ  ಇಶಿತಾ ಮಾತ್ರ ಟೊಮ್ಯಾಟೊ ಮತ್ತು ಇತರ ಎಲ್ಲಾ ತರಕಾರಿಗಳನ್ನು ತನ್ನ ಆಹಾರದಲ್ಲಿ ಸೇರಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರಂತೆ. ಈ ಕುರಿತು ಜೋಡಿ ತಮಾಷೆಯಾಗಿ (Joke) ಶೇರ್​ ಮಾಡಿದ್ದಾರೆ. ಪತಿಗೆ ಟೊಮ್ಯಾಟೊ ಆಗುವುದಿಲ್ಲ, ಪತ್ನಿ ಟೊಮ್ಯಾಟೊ ಬಿಡುವುದಿಲ್ಲ ಎಂದಿದ್ದಾರೆ. 'ಇಶಿತಾ ಟೊಮೆಟೊ ಮತ್ತು ಇತರ ಎಲ್ಲಾ ತರಕಾರಿಗಳನ್ನು ತಿನ್ನುತ್ತಿದ್ದಾಳೆ, ಇದರಿಂದ ನಮ್ಮ ಮಗು ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನುತ್ತದೆ. ಆದ್ದರಿಂದ ಅದು ಕೂಡ ಅಮ್ಮನಂತೆಯಾ  ಆಗುತ್ತದೆ' ಎಂದು ನಕ್ಕಿದ್ದಾರೆ  ವತ್ಸಲ್.

ಉತ್ತಮ ಆಯ್ಕೆಯಿರುವಾಗ ರಾಜಕಾರಣಿಯನ್ಯಾಕೆ ಮದ್ವೆಯಾಗ್ಲಿ ಎಂದಿದ್ರು ಪರಿಣಿತಿ!

ವತ್ಸಲ್ ತಮ್ಮ ಫಿಟ್ನೆಸ್ ಮತ್ತು ಡಯಟ್ (Diet) ಬಗ್ಗೆ ಜಾಗೃತರಾಗಿದ್ದಾರೆ. ಆದರೆ ಗರ್ಭವತಿ ಇಶಿತಾ ಸಂತೋಷದಿಂದ ಇರಬೇಕೆಂದು ಎನ್ನುವ ಕಾರಣಕ್ಕೆ ಆಕೆ  ಬಯಸಿದ ಆಹಾರವನ್ನು ಆಕೆಯ ಜೊತೆಗೆ ತಾವೂ ಸೇವಿಸುವುದಾಗಿ ಹೇಳಿದ್ದಾರೆ. 'ನಾನು ಬೆಂಗಾಲಿ ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತೇನೆ ಮತ್ತು ನಾನು ಹೆಚ್ಚು ಸಿಹಿತಿಂಡಿಗಳನ್ನು (Sweets) ತಪ್ಪಿಸಬೇಕು ಎಂದು ವತ್ಸಲ್ ನನಗೆ ಹೇಳುತ್ತಿದ್ದರು. ಆದರೆ ಈಗ ನಾನು ಸಿಹಿತಿಂಡಿ ತಿಂದೇ ತಿನ್ನುತ್ತೇನೆ. ವತ್ಸಲ್​ಗೂ ತಿನ್ನಿಸುತ್ತೇನೆ. ಅವರು ಅದನ್ನು ಹೇಗಾದರೂ ತಿನ್ನುವಂತೆ ನೋಡಿಕೊಳ್ಳುತ್ತೇನೆ' ಎಂದು ಇತಿಷಾ ಹೇಳಿದ್ದಾರೆ.  'ಅವನು ಟೊಮ್ಯಾಟೊ ತಿನ್ನುವುದನ್ನು ದ್ವೇಷಿಸುತ್ತಾರೆ ಎಂದು ನನಗೆ ತಿಳಿದಿದೆ. ಆದರೆ ನಾನು ಅದನ್ನು ನಿರಂತರವಾಗಿ ತಿನ್ನುತ್ತೇನೆ. ಏಕೆಂದರೆ ನನ್ನ ಮಗು ಕಿರಿಕಿರಿ ಮಗುವಾಗಿ ಹುಟ್ಟಲು  ನಾನು ಬಯಸುವುದಿಲ್ಲ. ಅವನು ಯಾವಾಗಲೂ ನಗುತ್ತಿರಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಟೊಮ್ಯಾಟೊ (Tomato) ತಿನ್ನುತ್ತೇನೆ' ಎಂದಿದ್ದಾರೆ. 

ವತ್ಸಲ್ ಸೇಠ್ ಚಲನಚಿತ್ರಗಳು (Films) ಮತ್ತು ವೆಬ್ ಸರಣಿಗಳ (Web Series) ಚಿತ್ರೀಕರಣದಲ್ಲಿ ನಿರತರಾಗಿದ್ದರೆ, ಇಶಿತಾ ಕೂಡ ಗರ್ಭಾವಸ್ಥೆಯಲ್ಲಿ ಕೆಲಸ ಮಾಡಲು ಬಯಸುತ್ತಾರೆ. 'ಚಿತ್ರ ನಿರ್ಮಾಪಕರು  ನನ್ನ ಗರ್ಭಾವಸ್ಥೆಯಲ್ಲಿ  ಆರಾಮ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಆದರೆ  ನಾನು ಗರ್ಭಧಾರಣೆಯ ನಂತರವೂ ಶೂಟಿಂಗ್ ಮುಂದುವರಿಸಲು ಬಯಸುತ್ತೇನೆ. ಮಗು ಬಂದ ನಂತರ ನಿಸ್ಸಂಶಯವಾಗಿ ಎಲ್ಲವೂ ಬದಲಾಗುತ್ತದೆ ಮತ್ತು ಜೀವನವು ಹೊಸ ತಿರುವು ಪಡೆಯುತ್ತದೆ. ಆದರೆ ಸದ್ಯ ಕೆಲ ತಿಂಗಳು ಕೆಲಸ ಮಾಡಲು ಬಯಸುತ್ತೇನೆ' ಎಂದಿದ್ದಾರೆ. '

ಇಬ್ಬರು ಮಕ್ಕಳ ಅಪ್ಪನೊಂದಿಗೆ ಲವ್​ ಆದಾಗ... ನೆನಪು ಬಿಚ್ಚಿಟ್ಟ ನಟಿ ಶಬನಾ ಅಜ್ಮಿ

Latest Videos
Follow Us:
Download App:
  • android
  • ios