Asianet Suvarna News Asianet Suvarna News

ಈ ಬಾಲಿವುಡ್ ಹೀರೋಯಿನ್‌ಗಳು ಮನೆ ಮುರಿದರೇ?

 ನಮ್ಮ ನಾಯಕಿಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಗಳ ನಡುವೆ ಅಂತರ ಇಡುವಲ್ಲಿ ಪರಿಣತರು, ಆದರೆ ಕೆಲವೊಮ್ಮೆ ಅವರೂ ತಪ್ಪುಗಳನ್ನು ಮಾಡುತ್ತಾರೆ. ಅಂತಹ ಸುಂದರಿಯರಿಗೆ 'ಮನೆಮುರುಕಿಯರು' ಎಂಬ ಪಟ್ಟವೂ ಬಂದಿದೆ.

Is these bollywood actresses Influence on Relationships breakups
Author
First Published Jun 13, 2024, 11:37 AM IST

ಬಾಲಿವುಡ್ ನಟಿಯರು ತೆರೆಯ ಮೇಲೆ ಅತ್ಯುತ್ತಮವಾದ ಪ್ರಣಯ ಭ್ರಮೆಗಳನ್ನು ಸೃಷ್ಟಿಸುತ್ತಾರೆ. ಅದಕ್ಕಾಗಿ ಅವರು ತಮ್ಮ ಹೀರೋಗಳಿಗೆ ತುಂಬಾ ಹತ್ತಿರವಾಗಿ ನಟಿಸಬೇಕು. ನಮ್ಮ ನಾಯಕಿಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಗಳ ನಡುವೆ ಅಂತರ ಇಡುವಲ್ಲಿ ಪರಿಣತರು, ಆದರೆ ಕೆಲವೊಮ್ಮೆ ಅವರೂ ತಪ್ಪುಗಳನ್ನು ಮಾಡುತ್ತಾರೆ. ಅಂತಹ ಸುಂದರಿಯರಿಗೆ 'ಮನೆಮುರುಕಿಯರು' ಎಂಬ ಪಟ್ಟವೂ ಬಂದಿದೆ. ನಿಜವಾಗಿ ನೋಡಿದರೆ ಇದರಲ್ಲಿ ನಟಿಯರ ಜೊತೆಗೆ ಅವರ ಪ್ರಣಯಸಂಗ ಬಯಸಿದ ಪುರುಷರ ಪಾತ್ರವೂ ಅಷ್ಟೇ ಇದೆ. ಆದರೆ ಅಪಖ್ಯಾತಿ ಮಾತ್ರ ನಟಿಯರ ಪಾಲು. ಯಾರವರು? ನೋಡೋಣ.

ಶಿಲ್ಪಾ ಶೆಟ್ಟಿ:
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ನವೆಂಬರ್ 22, 2009 ರಂದು ವಿವಾಹ ಆದರು. ರಾಜ್ ಕುಂದ್ರಾ ಶಿಲ್ಪಾಗಾಗಿ ಮೊದಲ‌ ಮದುವೆ ಮುರಿದರು ಎನ್ನಲಾಗುತ್ತದೆ. ಈಗ ಶಿಲ್ಪಾ ತಮ್ಮ ಮಗನ ಜೊತೆಗೆ ತಮ್ಮ ಕುಟುಂಬ ಜೀವನವನ್ನು ಆನಂದಿಸುತ್ತಿದ್ದರೂ, ರಾಜ್ ಕುಂದ್ರಾ ಅವರ ಮಾಜಿ ಪತ್ನಿ ತಮ್ಮ ವಿಚ್ಛೇದನಕ್ಕೆ ಶಿಲ್ಪಾ ಕಾರಣ ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಪ್ರಿಯಾಂಕಾ ಚೋಪ್ರಾ ಮೈದುನನಿಗೆ ಚರ್ಮದ ಕ್ಯಾನ್ಸರ್​: ಲಕ್ಷಣ ಹೇಳುತ್ತಲೇ ಎಚ್ಚರಿಕೆ ಕೊಟ್ಟ ಗಾಯಕ

ರಾಣಿ ಮುಖರ್ಜಿ:
ರಾಣಿ ಮುಖರ್ಜಿ, ಯಶ್ ಚೋಪ್ರಾ ಅವರ ಸಿನಿಮಾ ನಾಯಕಿಯಾಗಿದ್ದರು. ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಅಂತಿಮವಾಗಿ, ರಾಣಿ ಆದಿತ್ಯ ಚೋಪ್ರಾ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಅದು ಅವರಿಬ್ಬರನ್ನು ಹತ್ತಿರ ತಂದಿತು. ರಾಣಿ ಮುಖರ್ಜಿಯ ಕಾರಣದಿಂದ ಏಳು ವರ್ಷಗಳ ವೈವಾಹಿಕ ಜೀವನದ ನಂತರ ಆದಿತ್ಯ ತನ್ನ ಪತ್ನಿ ಪಾಯಲ್ ಚೋಪ್ರಾಗೆ ವಿಚ್ಛೇದನ ನೀಡಿದರು.

ಲಾರಾ ದತ್ತಾ:
ಮಹೇಶ್ ಭೂಪತಿ, ಪ್ಯಾರಿಸ್ ನಲ್ಲಿ ಲಾರಾ ದತ್ತಾಗೆ ಪ್ರಪೋಸ್ ಮಾಡಿದ್ದನಂತೆ. ಆದರೆ ಮಹೇಶ್ ಅವರ ಮಾಜಿ ಪತ್ನಿ ಶ್ವೇತಾ ಜೈಶಂಕರ್ ಅವರ ಮಾತನ್ನು ನಂಬುವುದಾದರೆ, ಮಾಜಿ ವಿಶ್ವ ಸುಂದರಿ ಲಾರಾ ಈ ಇಬ್ಬರ ಸ್ವರ್ಗದಂತಹ ದಾಂಪತ್ಯದಲ್ಲಿ ತೊಡಕು ತಂದವಳು. ತಮ್ಮ ಮದುವೆಯಾಗುವಾಗಲೇ ಮಹೇಶ್ ಲಾರಾಳತ್ತ ಆಕರ್ಷಿತರಾಗಿದ್ದರು ಎಂದು ಶ್ವೇತಾ ಜೈಶಂಕರ್ ಹೇಳಿಕೊಂಡಿದ್ದಾರೆ.

ಸ್ಮಿತಾ ಪಾಟೀಲ್:
ಸ್ಮಿತಾ ಪಾಟೀಲ್ ಅವರನ್ನು ಭೇಟಿ ಮಾಡುವ ಮೊದಲು ರಾಜ್ ಬಬ್ಬರ್ ಮತ್ತು ನಾದಿರಾ ಬಬ್ಬರ್ ತಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದರು. ಸ್ಮಿತಾ ಮತ್ತು ರಾಜ್ ವಿವಿಧ ಚಲನಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದು ಅವರ ಆಫ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಬಲಪಡಿಸಿತು. ನಾದಿರಾಗೆ ವಿಚ್ಛೇದನ ನೀಡದೆ ರಾಜ್ ಬಬ್ಬರ್ ಸ್ಮಿತಾ ಪಾಟೀಲ್ ಅವರನ್ನು ವಿವಾಹವಾದರು. ಆದರೆ ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ, ಏಕೆಂದರೆ ಹೆರಿಗೆಯ ಸಮಯದಲ್ಲಿ ಉಂಟಾದ ತೊಂದರೆಗಳಿಂದಾಗಿ ಸ್ಮಿತಾ 31 ನೇ ವಯಸ್ಸಿನಲ್ಲಿ ನಿಧನರಾದರು. ರಾಜ್ ಬಬ್ಬರ್ ನಂತರ ತನ್ನ ಮೊದಲ ಹೆಂಡತಿಯ ಬಳಿಗೆ ಹೋದರು.

ಶಬಾನಾ ಅಜ್ಮಿ:
ಶಬಾನಾ ಅವರು ಆಗಲೇ ವಿವಾಹವಾಗಿದ್ದ ಜಾವೇದ್ ಅಖ್ತರ್ ಅವರನ್ನು ಮದುವೆಯಾಗುವುದಾಗಿ ಘೋಷಿಸಿದಾಗ, ಜಾವೇದ್ ಅವರ ಮೊದಲ ಹೆಂಡತಿಯೊಂದಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದರು. ಆದರೆ ಜಾವೇದ್ ತನ್ನ ಮಕ್ಕಳು ಮತ್ತು ಹೆಂಡತಿಯನ್ನು ಶಬಾನಾಗಾಗಿ ಬಿಡಲು ನಿರ್ಧರಿಸಿದರು.

ನಟಿಯ ತುಟಿಗೆ ತುಟಿ ಸೇರಿಸಿದ ಚೆಲುವೆಯರ ಕಿಸ್ಸಿಂಗ್ ಕಥೆಗಳು!

ಶ್ರೀದೇವಿ:
ಕನಸಿನ ಕನ್ಯೆ ಶ್ರೀದೇವಿ ಅವರ ವೈಯಕ್ತಿಕ ಜೀವನ ಯಾವಾಗಲೂ ಚರ್ಚಿತ. ಮಿಥುನ್ ಚಕ್ರವರ್ತಿ ಜೊತೆಗಿನ ಶ್ರೀದೇವಿ ರಹಸ್ಯ ವಿವಾಹ ಬಹಳ ಚರ್ಚೆಯಾಗಿತ್ತು. ನಂತರ ಈಕೆ ಬೋನಿ ಕಪೂರ್ ಮನೆಗೆ ಅತಿಥಿಯಾಗಿ ತೆರಳಿದವಳ, ಆ ಸಂಸಾರಕ್ಕೇ ಮಾರಕಳಾದಳು. ಬೋನಿ ಮತ್ತು ಶ್ರೀದೇವಿ ನಡುವಿನ ನಿಕಟ ಸಂಬಂಧವು ಇಬ್ಬರ ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು. ಬೋನಿ ಮಡದಿ ಮೋನಾ ಸಾಯುವವರೆಗೂ ವಿಚ್ಛೇದನಕ್ಕೆ ಒಪ್ಪಿರಲಿಲ್ಲ.

ರವೀನಾ ಟಂಡನ್:
ಅನಿಲ್ ಥಡಾನಿ ಜೊತೆ ರವೀನಾ ಟಂಡನ್‌ಗೆ ಮದುವೆಯಾಗುವ ಮೊದಲು ಆತ ರಾಮು ಸಿಪ್ಪಿಯ ಮಗಳು ನತಾಶಾ ಸಿಪ್ಪಿಯನ್ನು ಮದುವೆಯಾಗಿದ್ದ. ರವೀನಾ ಸಂಪರ್ಕಕ್ಕೆ ಬಂದ ಬಳಿಕ ಆತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ. ರವೀನಾಳ ಬಗ್ಗೆ ಅನಿಲ್‌ಗೆ ಇದ್ದ ಒಲವು ಅವನ ಮದುವೆ ವಿಫಲವಾಗಲು ಕಾರಣ ಎಂದು ಊಹಿಸಲಾಗಿದೆ.

ಹೇಮಾಮಾಲಿನಿ:
28 ಯಶಸ್ವಿ ಹಿಟ್‌ಗಳನ್ನು ಜೊತೆಯಾಗಿ ನೀಡುವ ಮೂಲಕ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ತೆರೆಯ ಮೇಲಿನ ಕನಸಿನ ಜೋಡಿಯಾದರು. ಧರಮ್- ಹೇಮಾ ಅವರ ಆಫ್‌ಸ್ಕ್ರೀನ್ ಹಾಗೂ ಆನ್-ಸ್ಕ್ರೀನ್ ರೋಮ್ಯಾನ್ಸ್ ನಡೆಯುತ್ತಿದ್ದಾಗ, ಆತ ಇನ್ನೂ ಪ್ರಕಾಶ್ ಕೌರ್ ಜೊತೆ ದಾಂಪತ್ಯದಲ್ಲಿ ಇದ್ದ. ಪ್ರಕಾಶ್ ಕೌರ್ ವಿಚ್ಛೇದನ ನೀಡಲು ನಿರಾಕರಿಸಿದ ಕಾರಣ ಧರಮ್ ಮತ್ತು ಹೇಮಾ ಓಡಿಹೋದರು, ಧರ್ಮವನ್ನು ಬದಲಾಯಿಸಿದರು ಮತ್ತು ನಂತರ ವಿವಾಹವಾದರು.

ಕಿರಣ್ ರಾವ್:
ರೀನಾ ದತ್ತಾ ಅಮೀರ್ ಅವರ ನೆರೆಹೊರೆಯವರು ಮತ್ತು ಮೊದಲ ಪತ್ನಿ. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಅವರು 19ನೇ ವಯಸ್ಸಿನಲ್ಲಿ ಓಡಿಹೋಗಿ ಮದುವೆಯಾದರು. ಲಗಾನ್ ಚಿತ್ರೀಕರಣದ ಸಮಯದಲ್ಲಿ ಅಶುತೋಷ್ ಗ್ವಾರಿಕರ್ ಅವರ ಸಹಾಯಕರಾಗಿದ್ದ ಕಿರಣ್ ರಾವ್ ಅವರನ್ನು ಅಮೀರ್ ಭೇಟಿಯಾದರು. 2002ರಲ್ಲಿ, ಅಮೀರ್ ರೀನಾ ದತ್ತಾ ಅವರೊಂದಿಗಿನ ತನ್ನ 15 ವರ್ಷಗಳ ಸುದೀರ್ಘ ದಾಂಪತ್ಯವನ್ನು ಕೊನೆಗೊಳಿಸಿದರು.

ಸಾರಿಕಾ:
ಕಮಲ್ ಹಾಸನ್ ಮತ್ತು ವಾಣಿ ಗಣಪತಿ 1978ರಲ್ಲಿ ವಿವಾಹವಾದರು. ಮದುವೆ ನಂತರ ವಾಣಿ ನೃತ್ಯಗಾರ್ತಿಯಾಗಿದ್ದ ತಮ್ಮ ವೃತ್ತಿಜೀವನವನ್ನು ತೊರೆದರು. ಮದುವೆಯಾದ ಏಳು ವರ್ಷಗಳ ನಂತರ, ಕಮಲ್ ತನ್ನ ಚಲನಚಿತ್ರಗಳಿಗೆ ವಿಭಿನ್ನ ಗೆಟಪ್‌ಗಳನ್ನು ಧರಿಸಲು ಇಷ್ಟಪಟ್ಟಿದ್ದರಿಂದ ಮೇಕಪ್ ಕಲಾವಿದೆಯಾಗಲು ವಾಣಿ USAಗೆ ಹೋದರು. ಆ ಒಂದು ವರ್ಷದಲ್ಲಿ ಕಮಲ್ ಸಾರಿಕಾಳನ್ನು ಭೇಟಿಯಾಗಿ ಅವಳೊಂದಿಗೆ ವಾಸಿಸಲು ಪ್ರಾರಂಭಿಸಿದರು.

Latest Videos
Follow Us:
Download App:
  • android
  • ios