Asianet Suvarna News Asianet Suvarna News

ಪ್ರಿಯಾಂಕಾ ಚೋಪ್ರಾ ಮೈದುನನಿಗೆ ಚರ್ಮದ ಕ್ಯಾನ್ಸರ್​: ಲಕ್ಷಣ ಹೇಳುತ್ತಲೇ ಎಚ್ಚರಿಕೆ ಕೊಟ್ಟ ಗಾಯಕ

ಪ್ರಿಯಾಂಕಾ ಚೋಪ್ರಾ ಮೈದುನ ಕೇವಿನ್​ ಅವರಿಗೆ  ಚರ್ಮದ ಕ್ಯಾನ್ಸರ್​ ಕಾಣಿಸಿಕೊಂಡಿದೆ. ಇದರ ಲಕ್ಷಣ ಹೇಳುತ್ತಲೇ ಎಚ್ಚರಿಕೆ ಕೊಟ್ಟಿರುವ ಗಾಯಕ ಹೇಳಿದ್ದೇನು? 
 

Nick Jonas brother Kevin Jonas shares skin cancer diagnosis through Instagram post suc
Author
First Published Jun 12, 2024, 6:20 PM IST

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರ ಮೈದುನ ಅಂದರೆ ಪತಿ ನಿಕ್​ ಜೋನಸ್​ ಅವರ ಸಹೋದರ ಕೇವಿನ್​ ಜೋನಸ್​ ಅವರಿಗೆ ಚರ್ಮದ ಕ್ಯಾನ್ಸರ್​ ಆಗಿದ್ದು, ಈ ಕುರಿತು ಶಾಕಿಂಗ್ ನ್ಯೂಸ್​ ಅನ್ನು ಅವರು ರಿವೀಲ್​  ಮಾಡಿದ್ದಾರೆ. ಇವರು ಕೂಡ ಖ್ಯಾತ ಗಾಯಕರಾಗಿದ್ದು, ಕ್ಯಾನ್ಸರ್​ ಕುರಿತು ಅವರು ವಿವರಣೆ ನೀಡಿದ್ದಾರೆ. ಹಣೆಯ ಮೇಲೆ ಮಚ್ಚೆ ಗುರುತು ಕಂಡುಬಂದಿತು. ಆಮೇಲೆ ಅದು ಕ್ಯಾನ್ಸರ್​ಗೆ ತಿರುಗಿತು ಎಂದಿರುವ ಕೇವಿನ್​ ಅವರು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇಬ್ಬರು ಮಕ್ಕಳ ತಂದೆಯಾಗಿರುವ ಕೇವಿನ್​ ಅವರು ಹಾಲಿ ಆರೋಗ್ಯ ಸ್ಥಿತಿಯನ್ನು ಹೇಳಿದ್ದು, ಈ ರೀತಿಯ ಮಚ್ಚೆ ಕಂಡುಬಂದಾಗ ಜಾಗೃತೆ ವಹಿಸಿ ಎಂದು ಹೇಳಿಕೊಂಡಿದ್ದಾರೆ. 

ಚರ್ಮದ ಮೇಲೆ ಕಂಡುಬರುವ ಗುಳ್ಳೆಗಳು, ಮಚ್ಚೆಗಳು, ಕಡು ಕಪ್ಪು ಬಣ್ಣದ ಚುಕ್ಕೆಗಳು ಎಲ್ಲವೂ ಕ್ಯಾನ್ಸರ್​ ಅಲ್ಲದಿದ್ದರೂ ಇದನ್ನು ಇಷ್ಟಕ್ಕೆ ನಿರ್ಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇದು ಯಾವುದೇ ಸಂದರ್ಭದಲ್ಲಿ ಕ್ಯಾನ್ಸರ್ ಸ್ವರೂಪಕ್ಕೆ ತಿರುಗಬಹುದು ಎಂದು ಇದಾಗಲೇ ವೈದ್ಯರು ಕೂಡ ಎಚ್ಚರಿಕೆ ಕೊಟ್ಟಿದ್ದು, ಗಾಯಕ ಕೂಡ ಅದನ್ನೇ ಹೇಳಿದ್ದಾರೆ. ಸದ್ಯ ನಾನು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದೇನೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸದ್ಯ  ಹುಷಾರಿಗಿದ್ದೇನೆ ಎಂದಿರುವ ಕೇವಿನ್​ ಅವರು ಅಭಿಮಾನಿಗಳು ಧೈರ್ಯಗೆಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಸೌಂದರ್ಯ ಸ್ಪರ್ಧೆ ಕಿರೀಟ ಮಾರಾಟಕ್ಕಿದೆ! ಬ್ಯೂಟಿ ಸ್ಪರ್ಧೆಯ ಶಾಕಿಂಗ್ ವಿಷ್ಯ ರಿವೀಲ್​ ಮಾಡಿದ ​ಮಿಸಸ್​ ವರ್ಲ್ಡ್​

ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಹೇಳುವ ಪ್ರಕಾರ, ಈ ರೀತಿ ಬಣ್ಣ, ಗಾತ್ರ ಹಾಗೂ ಆಕಾರದಲ್ಲಿ ಬದಲಾಗುವ ಗುಳ್ಳೆಗಳು ಮೆಲನೋಮ ಲಕ್ಷಣಗಳಾಗಿದ್ದು, ಇದೊಂದು ಅತ್ಯಂತ ಕೆಟ್ಟ ಸ್ವರೂಪದ ಚರ್ಮದ ಕ್ಯಾನ್ಸರ್ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯು ಪ್ರತಿದಿನ ಮಚ್ಚೆ ಹಾಗೂ ಗುಳ್ಳೆಗಳನ್ನು ಗಮನಿಸಬೇಕಾಗುತ್ತದೆ.​ ಕೆಲವೊಂದು ಬಾರಿ  ಚರ್ಮದ ಮೇಲೆ ಗುಳ್ಳೆಗಳು ಕಂಡುಬರುತ್ತವೆ, ಆದರೆ ಅವುಗಳು ಬೇಗ ವಾಸಿಯಾಗುವುದಿಲ್ಲ. ಗುಳ್ಳೆಗಳು ಒಡೆದುಕೊಳ್ಳುವುದು, ಚರ್ಮದ ಮೇಲೆ ರಕ್ತಸ್ರಾವ ಉಂಟಾಗುವುದು, ಇದ್ದಕ್ಕಿದ್ದಂತೆ ಗುಳ್ಳೆಗಳ ಭಾಗದಲ್ಲಿ ಊದಿಕೊಳ್ಳುವುದು ಇವೆಲ್ಲವೂ ಸಹ ಕಾರ್ಸಿನೋಮ ಲಕ್ಷಣಗಳಾಗಿ ತೋರಿಸುತ್ತವೆ. ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ, ಈ ರೀತಿಯ ಗುಳ್ಳೆಗಳು ಕೆಲವು ವಾರಗಳು ಕಳೆದರೂ ಸಹ ವಾಸಿಯಾಗದೆ ಹಾಗೆ ಉಳಿಯುತ್ತವೆ.

ಕೇವಿನ್​ ಅವರ ಪೋಸ್ಟ್​ಗೆ ಸಹಸ್ರಾರು ಅಭಿಮಾನಿಗಳು ಪ್ರತಿಕ್ರಿಯೆ ಮಾಡಿದ್ದಾರೆ. ಆರೋಗ್ಯದಲ್ಲಿ ಜಾಗೃತೆ ಎಂದು ಹೇಳಿದ್ದಾರೆ. ಜೊತೆಗೆ ಚರ್ಮದ ಕ್ಯಾನ್ಸರ್​ ಕುರಿತು ಅರಿವು ಮೂಡಿಸಿದುದರ ಬಗ್ಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. 

ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್​ ಫಾಲೋ ಮಾಡಿ: ಸೀತಾರಾಮ ವೈಷ್ಣವಿ ಗೌಡ ಸಲಹೆ

Latest Videos
Follow Us:
Download App:
  • android
  • ios