Rajinikanth: ಅಬ್ಬಬ್ಬಾ! ಮಗಳ ಚಿತ್ರಕ್ಕೂ ರಜನಿಕಾಂತ್ ಈ ಪರಿ ಸಂಭಾವನೆನಾ?
ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುವ ನಟ ಎಂದೇ ಗುರುತಿಸಲ್ಪಟ್ಟಿರುವ ನಟ ರಜನಿಕಾಂತ್ ಅವರು ಖುದ್ದು ಮಗಳ ಚಿತ್ರಕ್ಕೂ ಬೃಹತ್ ಮೊತ್ತ ಪಡೆಯಲಿದ್ದಾರೆ ಎನ್ನುವ ಸುದ್ದಿ ಇದೆ. ಏನಿದು?
ಸೂಪರ್‌ಸ್ಟಾರ್ ರಜನಿಕಾಂತ್ (Superstar Rajanikanth) ಯಾರಿಗೆ ತಾನೇ ಗೊತ್ತಿಲ್ಲ? 1950ರಲ್ಲಿ ಹುಟ್ಟಿರೋ ಈ ಕನ್ನಡಿಗ ನಟನಿಗೆ 73 ವರ್ಷ ವಯಸ್ಸಾಗಿದ್ದರೂ ಇನ್ನೂ ವರ್ಚಸ್ಸು ಮಾತ್ರ ನಿಂತಿಲ್ಲ. ಈ ವಯಸ್ಸಿನಲ್ಲೂ ರಜನಿಕಾಂತ್ ಬೇಡಿಕೆಯ ನಟ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಜನಿಕಾಂತ್ ಪ್ರತಿ ಸಿನಿಮಾನೂ ಸದ್ದು ಮಾಡುತ್ತೆ. ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ ಎಂಬ ಮಾತನ್ನು ರಜನಿಕಾಂತ್ ಅವರು ಸದಾ ಸತ್ಯ ಮಾಡುತ್ತಲೇ ತೋರಿಸುತ್ತಿದ್ದಾರೆ. ರಾಜಕೀಯಲ್ಲಿಯೂ ಗುರುತಿಸಿಕೊಂಡಿರೋ ನಟ ಮತ್ತೊಂದು ವಿಷಯದಲ್ಲಿ ಸದಾ ಚರ್ಚೆಯ ವಸ್ತುವಾಗಿದ್ದಾರೆ. ಅದು ಅವರ ಸಂಭಾವನೆಯ ವಿಷಯ.
ಹೌದು. ನಟ ರಜನಿಕಾಂತ್ ಅವರು ಸಂಭಾವನೆಯ ವಿಷಯದಲ್ಲಿ ಬಹಳ ಸುದ್ದಿಯಲ್ಲಿರುತ್ತಾರೆ. ಅವರು ಅಷ್ಟು ಪಡೆದರು, ಇಷ್ಟು ಪಡೆದರು ಎಂಬ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದೇ ಇನ್ನೊಂದೆಡೆ ವಯಸ್ಸು 73 ದಾಟಿದರೂ ರಜನಿಕಾಂತ್ ತಮ್ಮ ವಿಶೇಷ ಸ್ಟೈಲ್ನಿಂದಾಗಿ ಪ್ರತಿ ಸಿನಿಮಾಗೂ ಸಂಭಾವನೆ ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾರೆ. ಇದರಲ್ಲೇನು ಹೊಸ ವಿಷಯವಿಲ್ಲ. ರಜನಿಕಾಂತ್ ಅವರು ನಟಿಸಿರುವ 'ಜೈಲರ್' (Jailer) ಸಿನಿಮಾಗೂ ದುಬಾರಿ ಸಂಭಾವನೆ ಪಡೆದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ರಜನಿಕಾಂತ್ 140 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು ಸುದ್ದಿಯಿದೆ.
ಆದರೆ ಸದ್ಯದ ಹೊಸ ವಿಷಯ ಏನಪ್ಪಾ ಎಂದರೆ, ಇವರ ಮಗಳು ಐಶ್ವರ್ಯಾ ರಜನಿಕಾಂತ್ (Aishwarya Rajanikanth) ಹೊಸ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ರಜನೀಕಾಂತ್ ಅವರು ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಮಕ್ಕಳ ಸಿನಿಮಾಕ್ಕೆ ಅಪ್ಪ ಸದಾ ಸಪೋರ್ಟ್ ಮಾಡುತ್ತಲೇ ಇರುತ್ತಾರೆ. ಐಶ್ವರ್ಯ ಅವರು ನಿರ್ದೇಶಿಸುತ್ತಿರುವ 'ಲಾಲ್ ಸಲಾಮ್' ಸಿನಿಮಾದಲ್ಲೂ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಲೈಕಾ ಪ್ರೊಡಕ್ಷನ್ ನಿರ್ಮಾಣ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ 'ಲಾಲ್ ಸಲಾಮ್' (Laal Salam) ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ರಜನಿಕಾಂತ್ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾಗೆ ಎ ಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಬೆಸ್ಟ್ ಟೆಕ್ನಿಷಿಯನ್ಸ್ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರಂತೆ.
Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್ ಅನುಶ್ರೀ ಬಾಯಲ್ಲಿ!
ಆದರೆ ಕುತೂಹಲದ ಸಂಗತಿಯೆಂದರೆ ಈ ಚಿತ್ರಕ್ಕೂ ರಜನಿಕಾಂತ್ ಬೃಹತ್ ಮೊತ್ತದ ಸಂಭಾವನೆ ಕೇಳಿದ್ದಾರೆ ಎಂದು ಸುದ್ದಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಲೆಜೆಂಡರಿ ನಟ 7 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದಾರೆ ಮತ್ತು ಇದಕ್ಕೆ ಅವರು 25 ಕೋಟಿ (25 crores) ರೂಪಾಯಿಗಳ ಭಾರೀ ಸಂಭಾವನೆ ಪಡೆಯಲಿದ್ದಾರಂತೆ! ಇದು ಈಗ ಭಾರಿ ಸುದ್ದಿಯಾಗಿದೆ. ಇದರ ಬಗ್ಗೆ ಪರ- ವಿರೋಧಗಳ ಚರ್ಚೆ (Discussion) ಶುರುವಾಗಿದೆ. ಕೆಲವರು ನಟನ ಪರವಾಗಿ ಇದ್ದಾರೆ. ಸಿನಿಮಾ ಮಾಡುವಾಗ ಸಂಬಂಧಿಕರು ಅವರು, ಇವರು ಎಂದು ನೋಡಬಾರದು. ಇಷ್ಟು ಸಂಭಾವನೆ ಪಡೆಯುತ್ತಿರುವುದು ಸರಿಯಿದೆ ಎಂದಿದ್ದರೆ, ಕೊನೆಯ ಪಕ್ಷ ಮಗಳ ಚಿತ್ರಕ್ಕಾದರೂ ಇಷ್ಟೊಂದು ಸಂಭಾವನೆ ಅಗತ್ಯವಿರಲಿಲ್ಲ ಎಂದು ಇನ್ನು ಹಲವರು ಹೇಳುತ್ತಿದ್ದಾರೆ.
ರಜನಿಕಾಂತ್ ಅವರನ್ನು ಕುರಿತು ಲೇಖಕ ಅ.ನ.ಪ್ರಹ್ಲಾದ್ರಾವ್ ಅವರು `ನನ್ನ ದಾರಿ ವಿಭಿನ್ನ ದಾರಿ: ರಜನಿಕಾಂತ್` ಪುಸ್ತಕವನ್ನು ಬರೆದಿದ್ದಾರೆ. `ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಕೃತಿಯಲ್ಲಿ ಮೇರು ನಟ ರಜನಿಕಾಂತ್ ಅವರ ಜೀವನ-ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನು ಆಧರಿಸಿ ಚಿತ್ರಿಸಲಾಗಿದೆ. ರಜನಿಕಾಂತ್ ಚಿತ್ರಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ. ಚಿತ್ರರಂಗದಲ್ಲಷ್ಟೆ ಅಲ್ಲ, ಸಮಾಜ ಸೇವೆಯಲ್ಲೂ ರಜನಿಕಾಂತ್ ಅವರ ಪಾತ್ರ ಹಿರಿದೆಂಬುದನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಇವರ ಸಂಭಾವನೆಯ ಬಗ್ಗೆಯೂ ಇದರಲ್ಲಿ ಉಲ್ಲೇಖವಿದೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ನಾವಿಬ್ರೂ ಏನಾದ್ರೂ ಮಾಡ್ಕೋತೀವಿ, ನಿಮಗ್ಯಾಕೆ? ನರೇಶ್ ಕಿಡಿ: ಪೊಲೀಸರಿಗೆ ದೂರು