Asianet Suvarna News Asianet Suvarna News

ಕಾಂಗ್ರೆಸ್ ಈಗಿನ ಸ್ಥಿತಿಗೆ ಶಿವಸೇನೆ ಕಾರಣವಾ..? ಹೀಗಂದ್ರು ನಟಿ ಕಂಗನಾ

ಶಿವಸೇನೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮುಂದುವರಿದಿದ್ದು, ಕಾಂಗ್ರೆಸ್ ಕುರಿತ ಟ್ವೀಟ್ ಮಾಡಿದ್ದಾರೆ ನಟಿ. ಏನ್ ಹೇಳಿದ್ರು..? ಇಲ್ಲಿ ಓದಿ.

Is shivasena is responsible for condition of congress party at present asks kangana Ranaut
Author
Bangalore, First Published Sep 11, 2020, 1:21 PM IST

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮುಂದುವರಿಯುತ್ತಲೇ ಇದೆ. ಈ ನಡುವೆ ಕಂಗನಾ ಟ್ವೀಟ್ ಮಾಡಿದ್ದು, ಈಗಿನ ಕಾಂಗ್ರೆಸ್ ಪರಿಸ್ಥಿತಿಗೆ ಶಿವಸೇನೆ ಕಾರಣವೇ ಎಂದು ಪ್ರಶ್ನಿಸಿದ್ದಾರೆ.

ಬಾಲಾ ಸಾಬ್ ಥ್ಯಾಕರೆ ನನ್ನ ನೆಚ್ಚಿನ ವ್ಯಕ್ತಿಯಲ್ಲೊಬ್ಬರು. ಒಂದು ದಿನ ಶಿವಸೇನೆ ಘಟಬಂದನ್ ಮಾಡಿಕೊಂಡು ಕಾಂಗ್ರೆಸ್ ಆಗಬಹುದೆಂಬ ಭಯ ಅವರಿಗಿತ್ತು. ಈಗ ಕಾಂಗ್ರೆಸ್ ಪಕ್ಷದ ಪರಿಸ್ಥತಿಯ ಬಗ್ಗೆ ಅಂದೇ ಊಹಿಸಿದ್ದರಾ ಬಾಲಾ ಸಾಹೇಬ್ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಶಿವಸೇನೆ ಈಗ ಸೋನಿಯಾ ಸೇನೆ: ಉದ್ಧವ್‌ ವಿರುದ್ಧ ಕಂಗನಾ ಗರಂ

ನಾನೊಬ್ಬ ಮಹಿಳೆಯಾಗಿ ನನ್ನನ್ನು ನಿಮ್ಮ ಸರ್ಕಾರ ಈ ರೀತಿ ನಡಿಸಿಕೊಂಡ ಬಗ್ಗೆ ನಿಮಗೆ ಯಾವುದೇ ಆಕ್ಷೇಪ ಇಲ್ಲವೇ..? ಎಂದು ಕಂಗನಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಕೇಸು ದಾಖಲು..!

ಕಂಗನಾಳ ಮುಂಬೈ ಬಂಗಲೆಯನ್ನು ಬಿಎಂಸಿ ಅಕ್ರಮ ಕಟ್ಟಡ ಎಂದು ಗುರುತಿಸಿ ತೆರವು ಮಾಡಿತ್ತು. ಮಹಾರಾಷ್ಟ್ರ ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ನಡುವೆ ಕಂಗನಾ ವಿರುದ್ಧ ಮಾನನಸ್ಟ ದೂರು ಕೂಡಾ ದಾಖಲಾಗಿದೆ.

Follow Us:
Download App:
  • android
  • ios