ದಕ್ಷಿಣದ ಮತ್ತೊಂದು ಹಿಟ್ ಚಿತ್ರ ಮಲಯಾಳಂನ ಹೃದಯಂ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಬಗ್ಗೆ ಈ ಹಿಂದೆಯೆ ಸುದ್ದಿಯಾಗಿತ್ತು. ಮಲಯಾಳಂನ ಸೂಪರ್ ಹಿಟ್ ರೊಮ್ಯಾಂಟಿಕ್ ಸಿನಿಮಾ ಹೃದಯಂ(Hridayam) ಚಿತ್ರವನ್ನು ಮೂರು ಭಾಷೆಗೆ ರಿಮೇಕ್ ಮಾಡುವುದಾಗಿ ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಬಹಿರಂಗ ಪಡಿಸಿದ್ದರು. ಇದೀಗ ಹೃದಯಂ ಹಿಂದಿ ರಿಮೇಕ್ ಬಗ್ಗೆ ಹೊಸ ಸುದ್ದಿ ಬಹಿರಂಗವಾಗಿದೆ.

ದಕ್ಷಿಣ ಭಾರತದ ಅನೇಕ ಸಿನಿಮಾಗಳು ಬಾಲಿವುಡ್‌ಗೆ ರಿಮೇಕ್ ಆಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಅನೇಕ ಸಿನಿಮಾಗಳು ಹಿಂದಿ ಮಂದಿಯನ್ನು ಸೆಳೆಯುತ್ತಿವೆ. ತಮಿಳು, ತೆಲುಗು, ಮಲಯಾಳಂನಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಬಾಲಿವುಡ್ ಮಂದಿ ರಿಮೇಕ್ ಮಾಡಲು ತಯಾರಿ ನಡೆಸುತ್ತಾರೆ. ಇದೀಗ ದಕ್ಷಿಣದ ಮತ್ತೊಂದು ಹಿಟ್ ಚಿತ್ರ ಮಲಯಾಳಂನ ಹೃದಯಂ ಸಿನಿಮಾ ಕೂಡ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಬಗ್ಗೆ ಈ ಹಿಂದೆಯೆ ಸುದ್ದಿಯಾಗಿತ್ತು. ಮಲಯಾಳಂನ ಸೂಪರ್ ಹಿಟ್ ರೊಮ್ಯಾಂಟಿಕ್ ಸಿನಿಮಾ ಹೃದಯಂ(Hridayam) ಚಿತ್ರವನ್ನು ಮೂರು ಭಾಷೆಗೆ ರಿಮೇಕ್ ಮಾಡುವುದಾಗಿ ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್(karan Johar) ಬಹಿರಂಗ ಪಡಿಸಿದ್ದರು. ಇದೀಗ ಹೃದಯಂ ಹಿಂದಿ ರಿಮೇಕ್ ಬಗ್ಗೆ ಹೊಸ ಸುದ್ದಿ ಬಹಿರಂಗವಾಗಿದೆ.

ಹೃದಯಂ ಹಿಂದಿ ರಿಮೇಕ್‌ನಲ್ಲಿ ಬಾಲಿವುಡ್ ಸ್ಟಾರ್ ನಟನ ಪುತ್ರ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅದು ಮತ್ಯಾರು ಅಲ್ಲ ಸೈಫ್ ಅಲಿ ಖಾನ್(Saif Ali Khan) ಪುತ್ರ ಇಬ್ರಾಹಿಂ ಅಲಿ ಖಾನ್(Ibrahim Ali Khan). ಅಂದಹಾಗೆ ಸೈಫ್ ಪುತ್ರಿ ಸಾರಾ ಅಲಿ ಖಾನ್(Sara Ali Khan) ಈಗಾಗಲೇ ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದಾರೆ. ಇದೀಗ ಪುತ್ರ ಇಬ್ರಾಹಿಂ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹಾಗಾಗಿ ಹೃದಯಂ ರಿಮೇಕ್ ಮೂಲಕ ಲಾಂಚ್ ಮಾಡುವುದು ಉತ್ತಮ ಎಂದು ಭಾವಿಸಿ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ. ಬಾಲಿವುಡ್‌ನಲ್ಲಿ ಬಹುತೇಕ ಸ್ಟಾರ್ ಕಿಡ್‌ಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್ ಜೋಹರ್. ಹಾಗಾಗಿ ಇಬ್ರಾಹಿಂ ಜವಾಬ್ದಾರಿ ಕೂಡ ಕರಣ್ ಮೇಲಿದೆ. ಉತ್ತಮ ಕಥೆ ಹುಡುಕುತ್ತಿದ್ದ ಕರಣ್‌ಗೆ ಹೃದಯಂ ಸರಿಯಾದ ಆಯ್ಕೆ ಎನಿಸಿದೆ ಎನ್ನಲಾಗಿದೆ.

ಅಂದಹಾಗೆ ಇಬ್ರಾಹಿಂ ಸದ್ಯ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರಂತೆ. ಈ ಸಿನಿಮಾ ಬಳಿಕ ಹೃದಯಂ ಮೂಲಕ ಹಿರೋ ಆಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

ಸಿನಿಮಾಗಳಿಗೆ ಮಾತ್ರವಲ್ಲ ವಿವಾದಗಳಿಗೂ ಫೇಮಸ್‌ Karan Johar

ಹೃದಯಂ ಸಿನಿಮಾದ ಬಗ್ಗೆ

ಸೂಪರ್ ಹಿಟ್ ಹೃದಯಂ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಲಯಾಳಂನ ಅದ್ಭುತ ಸಿನಿಮಾಗಳ ಪಟ್ಟಿಯಲ್ಲಿ ಹೃದಯಂ ಕೂಡ ಸೇರಿದೆ. ವಿನೀತ್ ಶ್ರೀನಿವಾಸನ್ ನಿರ್ದೇಶದಲ್ಲಿ ಸಿನಿಮಾ ಮೂಡಿಬಂದ ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ನಾಯಕನಾಗಿ ಮಿಂಚಿದ್ದಾರೆ. ನಾಯಕಿಯರಾಗಿ ಕಲ್ಯಾಣಿ ಪ್ರಿಯದರ್ಶನ್ ಮತ್ತು ದರ್ಶನಾ ರಾಜೇಂದ್ರ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಗಾನಪ್ರಿಯರ ಹೃದಯ ಗೆದ್ದಿವೆ.

ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಕೆಟ್ಟದಾಗಿ ಡ್ರೆಸ್‌ ಮಾಡಿದ್ದ ಸ್ಟಾರ್ಸ್ ಟ್ರೋಲ್‌!

ಇಂಥ ಬ್ಲಾಕ್ ಬಸ್ಟರ್ ಸಿನಿಮಾದ ರಿಮೇಕ್ ಹಕ್ಕು ಖರೀದಿಸಿರುವ ಕರಣ್ ಮೂರು ಭಾಷೆಯಲ್ಲಿ ಅಂದರೆ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಮಾಡಲು ಸಜ್ಜಾಗಿದೆ. ಹಿಂದಿಯಲ್ಲಿ ನಾಯಕನಾಗಿ ಇಬ್ರಾಹಿಂ ಹೆಸರು ಕೇಳಿಬರುತ್ತಿದೆ. ಇನ್ನು ಉಳಿದಂತೆ ತಮಿಳು ಮತ್ತು ತೆಲುಗಿನಲ್ಲಿ ಯಾರು ಬಣ್ಣಹಚ್ಚದ್ದಾರೆ ಎಂದು ಕಾದುನೋಡಬೇಕು.