ರಣಬೀರ್​ ಕಪೂರ್​, ರಶ್ಮಿಕಾ ಅಭಿನಯದ 'ಅನಿಮಲ್' ಚಿತ್ರ ಅಮಿತಾಭ್​ರ ವಕ್ತ್​ ಚಿತ್ರದಿಂದ ಕದ್ದಿದ್ದಾ? ವೈರಲ್​ ಆಗ್ತಿರೋ  ವಿಡಿಯೋ ಹೇಳ್ತಿರೋದೇನು?

ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಸಿನಿಮಾದ ಟ್ರೇಲರ್ ಬಿಡುಗಡೆಯಾದಾಗಿದ್ದು, ಸಕತ್​ ರೆಸ್ಪಾನ್ಸ್​ ಸಿಗುತ್ತಿದೆ. ಚಿತ್ರದ ಟ್ರೇಲರ್‌ನಲ್ಲಿ ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ನಡುವಿನ ದೃಶ್ಯದ ನಂತರ, ಈ ಟ್ರೇಲರ್​ ಬಗ್ಗೆ ಎಲ್ಲೆಡೆ ಚರ್ಚೆ ತೀವ್ರಗೊಂಡಿದೆ. ಈ ಚಿತ್ರದಲ್ಲಿ ತಂದೆ ಮಗನ ಬಾಂಧವ್ಯ ಜನರನ್ನು ಹೆಚ್ಚು ಆಕರ್ಷಿಸುತ್ತಿದ್ದು, ಟ್ರೇಲರ್‌ನಿಂದ ಅಭಿಮಾನಿಗಳು ಈ ಚಿತ್ರ ಬಿಡುಗಡೆಗೆ ದಿನಗಳನ್ನು ಎಣಿಸುತ್ತಿರುವುದು ಕಂಡುಬಂದಿದೆ. ಈ ಚಿತ್ರದ ಕಥೆ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಬರುವ ಡಿಸೆಂಬರ್​ 1ರಂದು ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇದರ ನಡುವೆಯೇ ಇದೀಗ ಅಮಿತಾಭ್​ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಚಿತ್ರದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಅಮಿತಾಭ್​ ಮತ್ತು ಅಕ್ಷಯ್​ ಕುಮಾರ್​ ಚಿತ್ರವನ್ನೇ ಅನಿಮಲ್​ ಚಿತ್ರ ಕದ್ದಿದ್ದಾ ಎಂದು ಪ್ರಶ್ನಿಸುತ್ತಿದ್ದಾರೆ! ಲಕ್ಷಾಂತರ ಚಿತ್ರಗಳನ್ನು ಮಾಡುವಾಗ ಒಂದರ ಕಥೆ ಇನ್ನೊಂದರಂತೆ ಇರುವ ಸಂಭಾವ್ಯ ಹೆಚ್ಚು. ಆದರೆ ರಣಬೀರ್ ಅವರ ಅನಿಮಲ್​ ಚಿತ್ರಕ್ಕೂ ಅಮಿತಾಭ್​ ಅವರ ವಕ್ತ್​ ಚಿತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ ಎನ್ನುವುದು ಸಿನಿ ಪ್ರಿಯರ ಅಭಿಮತ. 


ಇದೇ ಕಾರಣಕ್ಕೆ ಅನಿಮಲ್​ ಚಿತ್ರದ ಜೊತೆ, ಅಮಿತಾಭ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ವಕ್ತ್ ಚಿತ್ರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಕ್ತ್​​ ಚಿತ್ರದಲ್ಲಿ ತಂದೆ -ಮಗನ ಸಂಬಂಧವನ್ನು ತೋರಿಸಲಾಗಿದೆ. ಚಿತ್ರದಲ್ಲಿ ಅಮಿತಾಭ್​ ಬಚ್ಚನ್ ಅವರ ಮಗನ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಇಬ್ಬರೂ ಪ್ರತಿಯೊಂದು ವಿಷಯದಲ್ಲೂ ಜಗಳವಾಡುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ. ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸುತ್ತಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಅನಿಮಲ್​ ಚಿತ್ರಕ್ಕೆ ಹೊಂದಿಕೆಯಾಗುವ ಕೆಲವು ಸಂಭಾಷಣೆಗಳು ಮತ್ತು ದೃಶ್ಯಗಳಿವೆ.

ಆಗ ಹೋಟೆಲ್​ ಮಾಣಿ, ಈಗ ಎರಡೂವರೆ ಸಾವಿರ ಕೋಟಿಯ ಒಡೆಯ! ನಟ ಅಕ್ಷಯ್​ ಕುಮಾರ್​ ರೋಚಕ ಸ್ಟೋರಿ

ವಿಡಿಯೋದಲ್ಲಿ ಅಮಿತಾಭ್​ ಬಚ್ಚನ್, ಮಗ ಅಕ್ಷಯ್ ಕುಮಾರ್ ವಿರುದ್ಧ ತುಂಬಾ ಕೋಪಗೊಂಡಿರುವುದನ್ನು ನೋಡಬಹುದು. ಅಕ್ಷಯ್ ಕುಮಾರ್​ ಅಪ್ಪ ಅಮಿತಾಭ್‌ಗೆ ಪದೇ ಪದೇ ವಿವರಿಸುತ್ತಿದ್ದರೂ ಅಪ್ಪ ತುಂಬಾ ಕಟ್ಟುನಿಟ್ಟಾಗಿ ವರ್ತಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋ ನೋಡಿದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಯಾರೋ ಆಕಸ್ಮಿಕವಾಗಿ ಅನಿಮಲ್​ ಚಿತ್ರದ ತಪ್ಪಾದ ಟ್ರೇಲರ್​ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ, ಅಕ್ಷಯ್ ಮತ್ತು ಅಮಿತಾಭ್ ಅಭಿನಯದ ಈ ಚಿತ್ರದ ಅನಿಮಲ್ ಚಿತ್ರ ರಿಮೇಕ್ ಎಂದು ಕೆಲವರು ಹೇಳುತ್ತಿದ್ದಾರೆ. ಮೊದಲ ಬಾರಿಗೆ ಅಕ್ಷಯ್ ಕುಮಾರ್ ಅವರ ಚಿತ್ರದ ರೀಮೇಕ್ ಮಾಡಲಾಗುತ್ತಿದೆ, ಅವರು ತುಂಬಾ ಸಂತೋಷಪಡಬಹುದು ಎಂದಿದ್ದರೆ, ಮತ್ತೆ ಕೆಲವರು, ಹೊಸ ಕಥೆ ಹೆಣೆಯುವಲ್ಲಿ ತಲೆ ಕೆಡಿಸಿಕೊಳ್ಳದೇ, ಒಂದಿಷ್ಟು ಹಣ ಉಳಿಸಲಾಗಿದೆ ಎಂದಿದ್ದಾರೆ. 

ಅನಿಮಲ್ ಚಿತ್ರದ ಬಗ್ಗೆ ಹೇಳುವುದಾದರೆ, ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರಲ್ಲಿ ಬಾಬಿ ಡಿಯೋಲ್ ನೆಗೆಟಿವ್ ರೋಲ್ ನಲ್ಲಿದ್ದು, ಅವರ ಲುಕ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಚಿತ್ರದಲ್ಲಿ ಸೌತ್ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 1, 2023 ರಂದು ಬಿಡುಗಡೆಯಾಗಲಿದೆ.

ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ನಟ ಸಲ್ಮಾನ್​ ಖಾನೇ ಟಾರ್ಗೆಟ್​?

View post on Instagram