ಸಲಾರ್; ತೂಕ ಇಳಿಸಿಕೊಳ್ಳುವಂತೆ ಪ್ರಭಾಸ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರಾ ಪ್ರಶಾಂತ್ ನೀಲ್?
ಸದ್ಯ ಸಲಾರ್ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು ಸಿನಿಮಾ ತಡವಾಗುತ್ತಿರುವುದಕ್ಕೆ ಪ್ರಭಾಸ್ ಕಾರಣ ಎನ್ನಲಾಗುತ್ತಿದೆ. ಹೌದು, ಪ್ರಭಾಸ್ ದೇಹದ ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಸಲಾರ್ ಸಿನಿಮಾಗೆ ಫಿಟ್ ಅಂಡ್ ಫೈನ್ ಆಗಿರೋ ಹೀರೋ ಬೇಕು. ಅಲ್ಲದೆ ಈಗಾಗಲೇ ಚಿತ್ರೀಕರಣ ಆಗಿರುವ ದೃಶ್ಯದಲ್ಲಿ ಪ್ರಭಾಸ್ ಕೊಂಚ ತೆಳು ಇದ್ದರು.
ಕೆಜಿಎಫ್-2(KGF 2) ಸಿನಿಮಾ ಬಳಿಕ ಸಿನಿ ಪ್ರೇಕ್ಷಕರ ಗಮನವೀಗ ಸಲಾರ್(salaar) ಸಿನಿಮಾದ ಮೇಲಿದೆ. ಪ್ರಶಾಂತ್ ನೀಲ್(Prashanth Neel) ಸಿನಿಮಾದ ಮೇಲೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಕೆಜಿಎಫ್-2 ಬ್ಲಾಕ್ ಬಸ್ಟರ್ ಸಕ್ಸಸ್ ಕಂಡ ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಪ್ರಾರಂಭ ಮಾಡಬೇಕಿತ್ತು. ಅಂದುಕೊಂಡಂತೆ ಆಗಿದ್ದರೆ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭಿಸಬೇಕಿತ್ತು. ಆದರೆ ಇನ್ನು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿಲ್ಲ. ಆದರೆ ಅಭಿಮಾನಿಗಳು ಸಲಾರ್ ಸಿನಿಮಾದ ಬಗ್ಗೆ ಅಪ್ ನೀಡುವಂತೆ ಸಿನಿಮಾತಂಡದ ಬೆನ್ನುಬಿದ್ದಿದೆ. ಆದರೆ ಸಲಾರ್ ಕಡೆಯಿಂದ ಯಾವುದೇ ಅಪ್ ಡೇಟ್ ಹೊರಬಿದ್ದಿಲ್ಲ.
ಸದ್ಯ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು ಸಿನಿಮಾ ತಡವಾಗುತ್ತಿರುವುದಕ್ಕೆ ಪ್ರಭಾಸ್(Prabhas) ಕಾರಣ ಎನ್ನಲಾಗುತ್ತಿದೆ. ಹೌದು, ಪ್ರಭಾಸ್ ದೇಹದ ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಸಲಾರ್ ಸಿನಿಮಾಗೆ ಫಿಟ್ ಅಂಡ್ ಫೈನ್ ಆಗಿರೋ ಹೀರೋ ಬೇಕು. ಅಲ್ಲದೆ ಈಗಾಗಲೇ ಚಿತ್ರೀಕರಣ ಆಗಿರುವ ದೃಶ್ಯದಲ್ಲಿ ಪ್ರಭಾಸ್ ಕೊಂಚ ತೆಳು ಇದ್ದರು. ಬಳಿಕ ಪ್ರಭಾಸ್ ತೂಕ ತೀರ ಹೆಚ್ಚಾಗಿದೆ. ರಾಧೆ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ತುಂಬಾ ದಪ್ಪ ಕಾಣಿಸುತ್ತಿದ್ದರು. ಅಲ್ಲದೇ ಇತ್ತೀಚಿಗೆ ಪ್ರಭಾಸ್ ತೂಕ ಹೆಚ್ಚಾದ ಕಾರಣ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಇದೀಗ ಸಲಾರ್ ಸಿನಿಮಾಗೂ ಪ್ರಭಾಸ್ ತೂಕ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎನ್ನಲಾಗುತ್ತಿದೆ.
ಪ್ರಭಾಸ್ ತೂಕ ಕಡಿಮೆಯಾಗುವ ವರೆಗೂ ಸಲಾರ್ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರಂತೆ. ಪ್ರಭಾಸ್ ಮೊದಲಿನ ಹಾಗೆ ಕಾಣಿಸುವ ವರೆಗೂ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ ಎಂದು ಪ್ರಶಾಂತ್ ನೀಲ್ ಪಟ್ಟು ಹಿಡಿದಿದ್ದಾರಂತೆ. ಯಾವುದೇ ವಿಚಾರಗಳಲ್ಲಿಯೂ ಕಾಂಪ್ರಮೈಸ್ ಆಗದ ಪ್ರಶಾಂತ್ ನೀಲ್ ಪ್ರಭಾಸ್ ವಿಚಾರದಲ್ಲೂ ಖಡಕ್ ಆಗಿ ಹೇಳಿದ್ದಾರಂತೆ. ಹಾಗಾಗಿ ಪ್ರಭಾಸ್ ಸದ್ಯ ತೂಕ ಇಳಿಕೊಳ್ಳುವತ್ತ ಹೆಚ್ಚು ಗಮನ ಹರಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
'ಸಲಾರ್' ಟೀಸರ್ ಯಾವಾಗ ರಿಲೀಸ್? ನಿರ್ಮಾಪಕ ವಿಜಯ್ ಕಿರಗಂದೂರು ಕಡೆಯಿಂದ ಸಿಕ್ತು ಉತ್ತರ
ಪ್ರಭಾಸ್ ಯಾವಾಗ ತೂಕ ಇಳಿಕೊಂಡು ಸಲಾರ್ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ, ಸಲಾರ್ ಸಿನಿಮಾದಿಂದ ಬಿಗ್ ಅಪ್ ಡೇಟ್ ಯಾವಾಗ ಹೊರಬೀಳುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಭಾರಿ ನಿರೀಕ್ಷೆಯ ಸಲಾರ್ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇನ್ನು 6 ವರ್ಷ ಸ್ಯಾಂಡಲ್‌ವುಡ್‌ಗೆ ಸಿಗಲ್ಲ
ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಿಪುರುಷ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ನಟ ಪ್ರಭಾಸ್ ಸದ್ಯ ಸಲಾರ್ ಸಿನಿಮಾ ಪ್ರಾರಂಭಿಸಬೇಕಿದೆ. ಈ ಸಿನಿಮಾ ಜೊತೆಗೆ ಇನ್ನು ಹೆಸರಿಡದ ನಾಗ್ ಅಶ್ವಿನ್ ಸಿನಿಮಾ ಬಾಕಿ ಇದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ದಿಶಾ ಪಟಾಣಿ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ.