Asianet Suvarna News Asianet Suvarna News

ಪೂನಂ ಪಾಂಡೆ ಸರ್ಕಾರದ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಅಂಬಾಸಿಡರ್?

ಮೊನ್ನೆ ತಾನೇ ಸಾವಿನ ನಾಟಕ ಆಡಿದ್ದ ಪೂನಂ ಪಾಂಡೆ ಇದೀಗ ಕೇಂದ್ರ ಸರ್ಕಾರದ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ರಾಯಭಾರಿ ಆಗ್ತಿದ್ದಾರ?

Is Poonam pandey ambassador of cervical cancer awareness campaign of indian government
Author
First Published Feb 8, 2024, 11:12 AM IST

ಕಳೆದ ವಾರದ ಎರಡು ದಿನ ಸುದ್ದಿಮನೆಯಲ್ಲಿ ಕೋಲಾಹಲ ಎಬ್ಬಿಸಿದ್ದು ಪೂನಂ ಪಾಂಡೆ ಸಾವಿನ ಸುದ್ದಿ. ಹಾಟ್ ಬೆಡಗಿಯ ಸಡನ್ ಸಾವು ಇಡೀ ದೇಶದಲ್ಲಿ ಸೃಷ್ಟಿಸಿದ ಸಂಚಲನ ಸಣ್ಣದಲ್ಲ. ಮೂವತ್ತೆರಡಕ್ಕೆ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾದ್ರಾ ಈ ನಟಿ ಅನ್ನೋದೇ ಹಲವರಿಗೆ ಆಶ್ಚರ್ಯ ತಂದಿತ್ತು. ಯಾಕೆಂದರೆ ಮೂರು ದಿನದ ಹಿಂದೆ ಈಕೆ ಸೋಷಿಯಲ್ ಮೀಡಿಯಾದಲ್ಲಿ ತನ್ನ ಮಾದಕ ಫೋಟೋ ಪೋಸ್ಟ್ ಮಾಡಿದ್ದರು. ಅದಕ್ಕೆ ಲೈಕ್ ಒತ್ತಿದವರಿದ್ದರು. ಆ ಬಗ್ಗೆ ಸುದ್ದಿ ಓದಿದವರಿದ್ದರು. ಅಷ್ಟು ಲವಲವಿಕೆಯಿಂದ ಕಾಣಿಸಿಕೊಂಡ ಹುಡುಗಿ ಸಡನ್ನಾಗಿ ಸಾಯೋದಂದ್ರೆ ಹೇಗೆ ಸಾಧ್ಯ ಅನ್ನೋದೆ ಜನರಿಗೆ ಅರ್ಥ ಆಗಿರಲಿಲ್ಲ. ಜೊತೆಗೆ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುವ ಯಾವೊಂದು ಚಿಹ್ನೆಯೂ ಆಕೆಯಲ್ಲಿ ಕಂಡವರಿರಲಿಲ್ಲ.

ಆದರೆ ಗರ್ಭಕಂಠ ಕ್ಯಾನ್ಸರ್‌ನಿಂದ ಇವರು ಮೃತಪಟ್ಟಿರುವುದಾಗಿ ಸ್ವತಃ ಪೂನಂ ಪಾಂಡೆ ಮ್ಯಾನೇಜರ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಈ ಸುದ್ದಿ ದೇಶಾದ್ಯಂತ ಸಂಚಲನ ಉಂಟು ಮಾಡಿತ್ತು, ಸಾಕಷ್ಟು ಜನರಿಗೆ ಆಘಾತ ಉಂಟಾಗಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ನಟಿಗೆ ಸಾವು ಉಂಟಾಯಿತೇ ಎಂದು ಸಾಕಷ್ಟು ಜನರು ಮಮ್ಮಲ ಮರುಗಿದರು. ಆದರೆ, ಮರುದಿನ ನಡೆದದ್ದೇ ಬೇರೆ. ಪೂನಂ ಪಾಂಡೆ ಅವರು ಸಾವಿನ ನಾಟಕ ಆಡಿದ್ದು, ಬಹಿರಂಗವಾಗಿತ್ತು. ಗರ್ಭಕಂಠ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ಹೀಗೆ ಮಾಡಿದೆ ಎಂದು ಅವರೇ ಸ್ಪಷ್ಟನೆ ನೀಡಿದ್ದರು. ಸರ್ವೈಕಲ್‌ ಕ್ಯಾನ್ಸರ್‌ ಕುರಿತು ಮಾಡೆಲ್‌ ಮತ್ತು ನಟಿ ಪೂನಂ ಪಾಂಡೆ ಸುಳ್ಳು ಸಾವಿನ ಸುದ್ದಿ ಹಬ್ಬಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೆಲವರು ಆಕೆಯ ಉದ್ದೇಶವನ್ನು ಸ್ವಾಗತಿಸಿದ್ದರು. ಆದರೆ, ಸಾಕಷ್ಟು ಜನರು ಇದನ್ನು ಕಟುವಾಗಿ ಟೀಕಿಸಿದ್ದರು.

'ಇದೇನಿದು ನಿಮ್ಮ ಕಾಲು ಇಷ್ಟು ಕಪ್ಪಗಿದೆ..' ಎಂದ ನೆಟ್ಟಿಗರಿಗೆ ಖಡಕ್‌ ಉತ್ತರ ನೀಡಿದ ಗಾಯಕಿ!

ಆದರೆ ಇದೀಗ ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ (cervical cancer)  ಕುರಿತಾದ ಸರಕಾರದ ಜಾಗೃತಿ ಕಾರ್ಯಕ್ರಮಕ್ಕೆ ರಾಯಭಾರಿ ಆಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಇದಕ್ಕೆ ಕಾರಣ ಪೂನಂ ಸರ್ವೈಕಲ್ ಕ್ಯಾನ್ಸರ್ ಬಗೆಗಿನ ಜಾಗೃತಿಗೆ ಅಷ್ಟೆಲ್ಲ ರಿಸ್ಕ್ (Risk) ತಗೊಂಡಿದ್ದು. ಈಕೆ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ 'ನಿಮ್ಮ ಬಳಿ ಪ್ರಮುಖ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಜೀವಂತವಾಗಿದ್ದೇನೆ. ಆದರೆ, ದುಃಖದ ಸಂಗತಿಯೆಂದರೆ ಗರ್ಭಕಂಠದ ಕ್ಯಾನ್ಸರ್ ರೋಗವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಜ್ಞಾನದ ಕೊರತೆ ಎಲ್ಲರಲ್ಲೂ ಇದೆ. ಇದರಿಂದಾಗಿ ಸಾವಿರಾರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಕ್ಯಾನ್ಸರ್‌ಗಿಂತಲೂ ಇದು ವಿಭಿನ್ನ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. ಅದರ ಜಾಗೃತಿ (Awareness) ಮೂಡಿಸುವ ಸಲುವಾಗಿಯೇ ನಾನು ಈ ರೀತಿ ಮಾಡಿದೆ' ಎಂದು ಹೇಳಿದ್ದರು.

ಪೂನಂ ಅವರ ನಕಲಿ ಡೆತ್‌ ಸ್ಟೆಂಟ್‌ನಲ್ಲಿ ಭಾಗಿಯಾಗಿರುವ ಮಾಧ್ಯಮ ಕಂಪನಿ ಸ್ಟಬಾಂಗ್‌ ನಂತರ ಕ್ಷಮೆ ಯಾಚಿಸಿತ್ತು. "ಪೂನಂ ಪಾಂಡೆ ಅವರ ಸಾವಿನ ಸುದ್ದಿ ವಿಚಾರಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆ. ಆದರೆ, ಈ ಅಭಿಯಾನವು ಸಾಕಷ್ಟು ಜನರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲು ನೆರವಾಗಿದೆ" ಎಂದು ಸ್ಟಬಾಂಗ್‌ ತಿಳಿಸಿತ್ತು. "ನಿಮ್ಮಲ್ಲಿ ಅನೇಕರಿಗೆ ತಿಳಿದಿರಬಹುದು. ಪೂನಂ ಅವರ ತಾಯಿ ಅವರು ಧೈರ್ಯದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದಾರೆ. ತಾಯಿಯ ಆರೋಗ್ಯವನ್ನು ಹತ್ತಿರದಿಂದ ನೋಡಿರುವ ಪೂನಂ ಪಾಂಡೆ ಅವರು ಈ ಕಾಯಿಲೆ ಕುರಿತು ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾರೆ" ಎಂದು ಸೋಷಿಯಲ್‌ ಮೀಡಿಯಾದಲ್ಲಿ (social media) ಸ್ಟಬಾಂಗ್‌ ವಿವರ ನೀಡಿತ್ತು.

ಐಶ್ವರ್ಯಾ ರೈಗೆ ಟಾಂಟ್ ಕೊಟ್ಟ ನಾದಿನಿ ಶ್ವೇತಾ ಬಚ್ಚನ್; ನಿನ್ನ ಮದ್ವೆನ ಮೊದ್ಲು ಸಂಭಾಳಿಸ್ಕೋ ಅಂದ್ರು ನೆಟ್ಟಿಗರು!

ಇದನ್ನೆಲ್ಲ ನೋಡಿ ಬಹುಶಃ ಇವರು ಸರ್ಕಾರದ ಈ ಜಾಗೃತಿ ಕಾರ್ಯಕ್ರಮಕ್ಕೆ ರಾಯಭಾರಿ ಆಗಿರಬಹುದು ಎಂಬ ಊಹೆ ಬರುವುದು ಸಹಜ. ಆದರೆ ಕೇಂದ್ರ ಸರಕಾರವು (Indian government) ದೇಶಾದ್ಯಂತ ಗರ್ಭಕಂಠ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಪೂನಂ ಪಾಂಡೆ ಅವರನ್ನು ಬ್ರಾಂಡ್‌ ಅಂಬಾಸಿಡರ್‌ ಆಗಿ ಆಯ್ಕೆ ಮಾಡಲಾಗಿಲ್ಲ ಎನ್ನುವುದು ಇದೀಗ ತಿಳಿದುಬಂದಿದೆ. ಸುದ್ದಿಸಂಸ್ಥೆ ಪಿಟಿಐಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ಈ ಕುರಿತು ವಿಚಾರಿಸಿದ್ದು 'ಪೂನಂ ಪಾಂಡೆ ಅವರನ್ನು ರಾಯಭಾರಿಯಾಗಿ ಪರಿಗಣಿಸಿಲ್ಲ' ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios