Asianet Suvarna News Asianet Suvarna News

ಐಶ್ವರ್ಯಾ ರೈಗೆ ಟಾಂಟ್ ಕೊಟ್ಟ ನಾದಿನಿ ಶ್ವೇತಾ ಬಚ್ಚನ್; ನಿನ್ನ ಮದ್ವೆನ ಮೊದ್ಲು ಸಂಭಾಳಿಸ್ಕೋ ಅಂದ್ರು ನೆಟ್ಟಿಗರು!

ಐಶ್ವರ್ಯಾ ರೈ ಅಭಿಷೇಕ್ ಹುಟ್ಟು ಹಬ್ಬಕ್ಕೆ ವಿಶ್ ಮಾಡುವ ಮೂಲಕ ವಿಚ್ಚೇದನ ವದಂತಿಗಳಿಗೆ ಬ್ರೇಕ್ ಹಾಕಿದರು. ಆದರೆ, ಅವರ ನಾದಿನಿ ಶ್ವೇತಾ ಬಚ್ಚನ್ ಮಾತ್ರ ಐಶ್‌ ಪೋಸ್ಟ್‌ಗೆ ಟಾಂಗ್ ನೀಡಿ ಪೋಸ್ಟ್ ಹಾಕಿದ್ದು, ಇದು ನೆಟಿಜನ್‌ಗಳನ್ನು ಕೆರಳಿಸಿದೆ. 

Shweta Bachchan Takes A Dig At Aishwarya Rai With a Post Netizen Says Khud Ki Shadi Sambhal skr
Author
First Published Feb 7, 2024, 5:55 PM IST

ಐಶ್ವರ್ಯಾ ರೈ ಬಚ್ಚನ್ ಎಲ್ಲರಿಗೂ ಅಚ್ಚುಮೆಚ್ಚಿನ ನಟಿ. ಜಗತ್ತಿನ ಅತಿ ಸುಂದರ ಮಹಿಳೆಯರಲ್ಲೊಬ್ಬರು ಎನಿಸಿದ ಐಶ್ವರ್ಯಾ ಅಭಿಷೇಕ್ ಬಚ್ಚನ್ ಜೊತೆ ವಿವಾಹವಾಗಿ ಆರಾಧ್ಯ ಎಂಬ ಮಗಳನ್ನು ಹೊಂದಿದ್ದಾರೆ.
ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಈ ಜೋಡಿಗೆ ಏನಾಯಿತೋ ಏನೋ, ಇತ್ತೀಚೆಗೆ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ. ವಿಶೇಷವಾಗಿ ಜಯಾ ಬಚ್ಚನ್ ಮತ್ತು ಐಶ್ವರ್ಯಾಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಗಾಸಿಪ್ ಹರಿದಾಡುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಬಚ್ಚನ್ ಕುಟುಂಬದ ಕಾರ್ಯಕ್ರಮಗಳಲ್ಲಿ ಐಶ್ ಕಾಣಿಸಿಕೊಳ್ಳದಿರುವುದು ಹಾಗೂ ಆಕೆ ತಮ್ಮ ಇನ್ಸ್ಟಾ ಖಾತೆಯಿಂದ ಅಮಿತಾಬ್ ಬಚ್ಚನ್ ಅವರನ್ನು ಅನ್‌ಫಾಲೋ ಮಾಡಿರುವುದು ಎಲ್ಲವೂ ಜನರ ಅನುಮಾನದ ಬೆಂಕಿಗೆ ತುಪ್ಪ ಸುರಿದಂತಿತ್ತು.
ಅಭಿಷೇಕ್ ಐಶ್ವರ್ಯಾ ವಿಚ್ಚೇದನ ವದಂತಿಯು ಜೋರಾಗಿ ಹಬ್ಬುತ್ತಿದ್ದ ಸಮಯದಲ್ಲೇ ಫೆಬ್ರವರಿ 5, 2024 ರಂದು, ಅಭಿಷೇಕ್‌ಗೆ 48 ವರ್ಷ ತುಂಬುತ್ತಿದ್ದಂತೆ, ಐಶ್ವರ್ಯಾ ಅವರಿಗಾಗಿ ಹೃತ್ಪೂರ್ವಕ ಪೋಸ್ಟ್‌ನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. ನಟನ ಫೋಟೋಗಳೊಂದಿಗೆ ಅವರ ಜನ್ಮದಿನಕ್ಕೆ ಶುಭ ಹಾರೈಸಿದ್ದರು. ನಟಿ ಅಭಿಷೇಕ್‌ರಿಂದ ಬೇರ್ಪಡುವ ಬಗ್ಗೆ ನಡೆಯುತ್ತಿರುವ ಎಲ್ಲಾ ವದಂತಿಗಳೂ ಸುಳ್ಳು ಎಂದು ಸಾಬೀತಾಯಿತು ಎನ್ನುವ ಹೊತ್ತಲ್ಲೇ, ಅಭಿಷೇಕ್ ಅಕ್ಕ- ಶ್ವೇತಾ ಬಚ್ಚನ್ ಐಶ್‌ಗೆ ಟಾಂಟ್ ಕೊಡುವಂಥ ಪೋಸ್ಟ್ ಹಂಚಿಕೊಂಡಿದ್ದು ನೆಟ್ಟಿಗರನ್ನು ಕೆರಳಿಸಿದೆ. 

ಅಭಿಷೇಕ್ ಬಚ್ಚನ್‌ಗೆ ಬರ್ತ್‌ಡೇ ವಿಶ್ ಮಾಡಿ ಡೈವೋರ್ಸ್ ವದಂತಿಗಳಿಗೆ ಬೈ ಹೇಳಿದ ಐಶ್ವರ್ಯಾ ರೈ

ಶ್ವೇತಾ ಬಚ್ಚನ್ ಅವರ ಪೋಸ್ಟ್
ತೋಳವೊಂದರ ಫೋಟೋ ಇರುವ ಪೋಸ್ಟ್‌ನಲ್ಲಿ 'ಹೆಣ್ಣು ತೋಳವು ತಾನು ಗುಣಮುಖವಾಗಲು ಏನನ್ನು ಬೇಕಾದರೂ ಮಾಡುತ್ತದೆ. ಇಂಥ ತೋಳಗಳಿಂದ ಕಲಿಯುವುದು ಸಾಕಷ್ಟಿದೆ' ಎನ್ನುವ ಅರ್ಥ ಹೊಮ್ಮುವ ಪೋಸ್ಟ್ ಹಂಚಿಕೊಂಡಿದ್ದಾರೆ. 

Shweta Bachchan Takes A Dig At Aishwarya Rai With a Post Netizen Says Khud Ki Shadi Sambhal skr

ಶ್ವೇತಾ ಬಚ್ಚನ್ ಪೋಸ್ಟ್‌ಗೆ ನೆಟಿಜನ್‌ಗಳ ಪ್ರತಿಕ್ರಿಯೆ
ಶ್ವೇತಾ ಬಚ್ಚನ್ ಅವರ ನಿಗೂಢ ಪೋಸ್ಟ್ ನೆಟಿಜನ್‌ಗಳಿಗೆ ಸ್ವಲ್ಪವೂ ಇಷ್ಟವಾಗಿಲ್ಲ.. 
ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ, 'ನಾನು ಅಭಿಷೇಕ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಆದರೆ ಅವರು ಈ ಕೌಟುಂಬಿಕ ಕಲಹದಲ್ಲಿ ಅವರ ಹೆಂಡತಿ ಮತ್ತು ಮಗಳ ಪರವಾಗಿ ಇರದಿದ್ದರೆ ನಾನು ಅವರ ಮೇಲಿನ ಎಲ್ಲಾ ಗೌರವವನ್ನು ಕಳೆದುಕೊಳ್ಳುತ್ತೇನೆ.'
 ಮತ್ತೊಬ್ಬರು, 'ಏನೇ ಇರಲಿ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಹಸ್ಯವಾದ ಉಲ್ಲೇಖಗಳನ್ನು ಪೋಸ್ಟ್ ಮಾಡುವುದು, ಟಾಂಟ್ ನೀಡುವುದು ಹದಿಹರೆಯದವರ ಕೆಲಸ. ಶ್ವೇತಾ, ಗ್ರೋ ಅಪ್' ಎಂದು ಪ್ರತಿಕ್ರಿಯಿಸಿದ್ದಾರೆ. 
ಮೂರನೇ ಬಳಕೆದಾರರು ಬರೆದಿದ್ದಾರೆ, 'ಈಕೆಯ ಸಂಸಾರವನ್ನೇ ನಿಭಾಯಿಸಲು ಬಾರದವಳು ಬೇರೆಯವರಿಗೆ ಉಪದೇಶ ಕೊಡುತ್ತಾಳೆ.'
ಇನ್ನೂ ಸಾಕಷ್ಟು ಬಳಕೆದಾರರು ಶ್ವೇತಾಳನ್ನು ಸಂಪೂರ್ಣ ದೂಷಿಸುತ್ತಾ ಐಶ್ವರ್ಯಾ ಪರವಾಗಿ ನಿಂತಿದ್ದಾರೆ. 

Follow Us:
Download App:
  • android
  • ios