Asianet Suvarna News Asianet Suvarna News

'ಇದೇನಿದು ನಿಮ್ಮ ಕಾಲು ಇಷ್ಟು ಕಪ್ಪಗಿದೆ..' ಎಂದ ನೆಟ್ಟಿಗರಿಗೆ ಖಡಕ್‌ ಉತ್ತರ ನೀಡಿದ ಗಾಯಕಿ!


ಬಾಡಿ ಶೇಮಿಂಗ್‌ ಎನ್ನುವುದು ಸೋಶಿಯಲ್‌ ಮೀಡಿಯಾದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇತ್ತಿಚೆಗೆ, ತಮಿಳು ಹಾಗೂ ಮಲಯಾಳಂ ಸಿನಿಮಾ ರಂಗದ ಗಾಯಕಿ ಸೈನೋರಾ ಫಿಲಿಪ್‌ ಕೂಡ ಬಾಡಿ ಶೇಮಿಂಗ್‌ಗೆ ತುತ್ತಾಗಿದ್ದಾರೆ.

Sayanora philip reply to the moralists  Proud of these black legs will still show san
Author
First Published Feb 7, 2024, 10:11 PM IST

ಬೆಂಗಳೂರು (ಫೆ.7): ಗಾಯಕಿ ಸೈನೋರಾ ಫಿಲಿಪ್ಸ್ ಬಾಡಿ ಶೇಮಿಂಗ್ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ನಿರಂತರವಾಗಿ ಮಾತನಾಡುತ್ತಾರೆ. ಸೈನೋರಾ ಬಾಡಿ ಶೇಮಿಂಗ್‌ ಕುರಿತಾಗಿ ತಮ್ಮ ನಿಲುವನ್ನು ಹೇಳಿಕೊಳ್ಳಲು ಒಂಚೂರು ಹಿಂಜರಿಯೋದಿಲ್ಲ. ಸೈನೋರಾ ಹಾಕಿಕೊಳ್ಳುವ ಡ್ರೆಸ್‌ಗಳು ಹಾಗೂ ಅವರ ಮೈಬಣ್ಣದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಆಗುವಷ್ಟು ಟೀಕೆ ಮತ್ತೆಲಲ್ಲೂ ಆಗುವುದಿಲ್ಲ. ಆದರೆ, ಅದೆಷ್ಟೇ ಟೀಕೆ ಬಂದರೂ ಅದಕ್ಕೆ ಉತ್ತರ ನೀಡುತ್ತಾ ಸೈನೋರಾ ಫಿಲಿಪ್ಸ್‌ ಮುಂದೆ ಸಾಗಿತ್ತಾರೆ. ಇತ್ತೀಚೆಗೆ ತಮ್ಮ ಕಾಲುಗಳು ಬಗ್ಗೆ ಮಾಡಿದ ಕಾಮೆಂಟ್‌ಗೆ ಸಿಟ್ಟಾಗಿರುವ ಸೈನೋರಾ ಫಿಲಿಪ್ಸ್‌, ನೆಟ್ಟಿಗರಿಗೆ ಖಡಕ್‌ ಆಗಿ ಉತ್ತರ ನೀಡಿ ಸುದ್ದಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಸೈನೋರಾ ಫಿಲಿಪ್ಸ್‌ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋಗೆ ಬಂದಿರುವ ಹೆಚ್ಚಿನ ಕಾಮೆಂಟ್‌ಗಳು ಬಾಡಿ ಶೇಮಿಂಗ್‌ ಕುರಿತಾಗಿಯೇ ಇತ್ತು. ಈ ಡ್ರೆಸ್‌ ನಿಮಗೆ ಸೂಟ್‌ ಆಗೋದಿಲ್ಲ. ಇಂಥ ಡ್ರೆಸ್‌ಗಳನ್ನು ನೀವು ಹಾಕಿದರೆ ಚೆನ್ನಾಗಿ ಕಾಣೋದಿಲ್ಲ ಎನ್ನುವ ಕೆಟ್ಟ ಕಾಮೆಂಟ್‌ಗಳೇ ಅದರಲ್ಲಿ ತುಂಬಿದ್ದವು. ಇದಕ್ಕೆ ಸ್ವತಃ ಸೈನೋರಾ ಫಿಲಿಪ್ಸ್‌ ಅವರೇ ಉತ್ತರ ನೀಡಿದ್ದಾರೆ. ಇದು ನನ್ನ ದೇಹ ಹಾಗೂ ನಾನು ಆಯ್ದುಕೊಂಡಿರುವುದು ನನ್ನದೇ ದಾರಿ. ಇಲ್ಲಿ ಕಾಮೆಂಟ್‌ ಮಾಡುವವರು ಈ ದಾರಿಯಿಂದ ಹೋದರೆ ಅವರಿಗೆ ನಾನು ಕೃತಜ್ಞನಾಗಿರುತ್ತೇನೆ ಎಂದು ಆಕೆ ಬರೆದಿದ್ದಾರೆ.

ನನ್ನದು ಕಪ್ಪು ಕಾಲುಗಳಾಗಿದ್ದರೆ, ಅದರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಹಾಗೂ ಈ ಕಪ್ಪು ಕಾಲುಗಳನ್ನೇ ತೋರಿಸಲು ಇಷ್ಟಪಡುತ್ತೇನೆ ಎಂದು ಸೈನೋರಾ ಫಿಲಿಪ್ಸ್‌ ಹೇಳಿದ್ದಾರೆ. ಇಲ್ಲಿ ಯಾರಿಗೂ ನಾನು ಬಲವಂತವಾಗಿ ಹಿಡಿದಿಟ್ಟುಕೊಂಡಿಲ್ಲ. ಅದಲ್ಲದೆ, ನಾನು ಹೇಳಿದ ಮಾತಿನ ಅರ್ಥವನ್ನು ತಿಳಿಯಲು ಕಷ್ಟವಾದವರಿಗೆ ಈ ಪುಟ ಅವರ ನೋಡಬೇಕಾದ ಪೇಜ್‌ ಅಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

'ಹೊಕ್ಕಳು ಮುಚ್ಚಿಕೊಳ್ಳಲು ಪ್ರಯತ್ನಿಸಿದೆ, ಅಷ್ಟರಲ್ಲಿ ಸೀರೆ ಜಾರಿತು..' ಟ್ರೋಲ್‌ಗೆ ಉತ್ತರಿಸಿದ ನಟಿ ಚೈತ್ರಾ ಪ್ರವೀಣ್‌!

ನನ್ನ ಇನ್ಸ್‌ಟಾಗ್ರಾಮ್‌ ಪೇಜ್‌ಗೆ ಬಂದು ನೈತಿಕ ಪೊಲೀಸ್‌ಗಿರಿ ಮಾಡುವ ಜನರಿಗೆ ನನ್ನದೊಂದು ಸಣ್ಣ ವಿನಂತಿ ಇದೆ. ಇದು ನನ್ನ ಜೀವನ, ನನ್ನ ದಾರಿ ಹಾಗೂ ನನ್ನ ದೇಹ! ನೀವು ಇದನ್ನು ಇಲ್ಲಿಯೇ ಬಿಟ್ಟರೆ ನಾನು ತುಂಬಾ ಕೃತಜ್ಞನಾಗಿರುತ್ತೇನೆ. ಇಷ್ಟು ಜನ ನನ್ನ ಫಾಲೋವರ್‌ ಆಗಿರಬೇಕು ಎನ್ನುವ ಯಾವುದೇ ಪೂರ್ವಾಗ್ರಹ ನನಗಿಲ್ಲ. ಕಾಲುಗಳು ಕಪ್ಪಾದರೂ ಅವು ನನ್ನದೇ ಕಾಲುಗಳು! ಇದರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಮತ್ತು ನನ್ನ ಕಾಲುಗಳನ್ನು ತೋರಿಸುವುದನ್ನು ಮುಂದುವರಿಸುತ್ತೇನೆ.  ನೀವು ನನ್ನ ಬಗ್ಗೆ ಏನು ಯೋಚಿಸುತ್ತೀರಿ ಎಂಬುದು ಮುಖ್ಯವಲ್ಲ. ಇಲ್ಲಿ ಯಾರನ್ನೂ ಬಲವಂತವಾಗಿ ಬಂಧಿಸಿಲ್ಲ. ಬದುಕಿ ಮತ್ತು ಬದುಕಲು ಬಿಡಿ! ನೀವು ಇದರ ಅರ್ಥವನ್ನು ಅರ್ಥಮಾಡಿಕೊಳ್ಳದವರಾಗಿದ್ದರೆ, ಈ ಪುಟವು ನಿಮಗಾಗಿ ಅಲ್ಲ ಎಂದು ಸೈನೋರಾ ಫಿಲಿಪ್ಸ್‌ ತಿಳಿಸಿದ್ದಾರೆ.

ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್‌ ಕೊಡಬೇಡಿ, ಎಂಜಾಯ್‌ ಮಾಡಿ: ನಟಿ ರೇಖಾ ನಾಯರ್‌ ಮಾತು!

Follow Us:
Download App:
  • android
  • ios