ವಿದೇಶಿ ಟ್ರಿಪ್ ಮುಗಿಸಿ ಭಾರತಕ್ಕೆ ವಾಪಾಸ್ ಆಗಿರುವ ಐಶ್ವರ್ಯಾ ನೋಡಿ ನೆಟ್ಟಿಗರು ಐಶ್ವರ್ಯಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಐಶ್ವರ್ಯಾ ಮಗಳು ಮತ್ತು ಪತಿ ಜೊತೆ ಹೊರಗೆ ಬರುತ್ತಿರುವ ವಿಡಿಯೋದಲ್ಲಿ ಐಶ್ವರ್ಯಾ ಗರ್ಭಿಣಿಯ ಹಾಗೆ ಕಾಣಿಸುತ್ತಿದ್ದಾರೆ. 

ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ. ಐಶ್ವರ್ಯಾ ರೈ ಇತ್ತೀಚಿಗಷ್ಟೆ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಸುದ್ದಿಯಲ್ಲಿದ್ದರು. ಇದೀಗ ವೈಯಕ್ತಿಕ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಹೌದು, ಐಶ್ವರ್ಯಾ ರೈ ಮತ್ತೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಐಶ್ವರ್ಯಾ ಎರಡನೇ ಬಾರಿ ತಾಯಿಯಾಗುತ್ತಿದ್ದಾರೆ ಎನ್ನುವ ಅನುಮಾನಕ್ಕೆ ಕಾರಣವಾಗಿದ್ದು ಐಶ್ವರ್ಯಾ ಅವರ ಆ ಒಂದು ವಿಡಿಯೋ. ಮಾಜಿ ವಿಶ್ವ ಸುಂದರಿ ಕುಟುಂಬದ ಜೊತೆ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಅಭಿಷೇಕ್ ಬಚ್ಚನ್, ಆರಾಧ್ಯ ಮತ್ತು ಐಶ್ವರ್ಯಾ ವಿದೇಶದಲ್ಲಿ ಹಾಲಿಡೇ ಎಂಜಾಯ್ ಮಾಡಿದ ಫೋಟೋಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದೀಗ ಭಾರತಕ್ಕೆ ವಾಪಾಸ್ ಆಗಿರುವ ಐಶ್ವರ್ಯಾ ನೋಡಿ ನೆಟ್ಟಿಗರು ಐಶ್ವರ್ಯಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ವಿಮಾನ ನಿಲ್ದಾಣದಿಂದ ಐಶ್ವರ್ಯಾ ಮಗಳು ಮತ್ತು ಪತಿ ಜೊತೆ ಹೊರಗೆ ಬರುತ್ತಿರುವ ವಿಡಿಯೋದಲ್ಲಿ ಐಶ್ವರ್ಯಾ ಗರ್ಭಿಣಿಯ ಹಾಗೆ ಕಾಣಿಸುತ್ತಿದ್ದಾರೆ. ಕಪ್ಪು ಬಣ್ಣದ ಸಡಿಲ ಬಟ್ಟೆ ಧರಿಸಿದ್ದ ಐಶ್ವರ್ಯಾ ತನ್ನ ಹೊಟ್ಟೆಯ ಭಾಗವನ್ನು ಡ್ರೆಸ್ ಮೇಲೆ ಹಾಕಿದ್ದ ಕೋಟ್ ನಿಂದ ಮುಚ್ಚಿಕೊಳ್ಳುತ್ತಾರೆ. ಐಶ್ವರ್ಯಾ ಅವರ ಈ ವಿಡಿಯೋ ನೋಡಿದ ಬಹುತೇಕರು ಮಾಜಿ ವಿಶ್ವ ಸುಂದರಿ ಮತ್ತೆ ಗರ್ಭಿಣಿ ಆಗಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಗ್ಲಾಮರ್ ಬಟ್ಟೆಯಲ್ಲಿ ಕಾಣಿಸುತ್ತಾರೆ. ಆದರೆ ಐಶ್ವರ್ಯಾ ಧರಿಸಿದ್ದ ಬಟ್ಟೆ ಹೈಲೆಟ್ ಆಗಿದೆ. ಈ ಬಗ್ಗೆ ಐಶ್ವರ್ಯಾ ಅಥವ ಅವರ ಕಟುಂಬದ ಕಡೆಯಿಂದ ಅಧಿಕೃತ ಮಾಹಿತಿ ಯಾವುದೇ ಬಂದಿಲ್ಲ. ಅಂದಹಾಗೆ ಐಶ್ವರ್ಯಾ ಬಗ್ಗೆ ಈ ರೀತಿಯ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಸಾಕಷ್ಟು ಬಾರಿ ಈ ರೀತಿಯ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಾರಿ ಅನುಮಾನ ಮತ್ತಷ್ಟು ಬಲವಾಗಿದೆ.

View post on Instagram

ಮುಖಕ್ಕೆ ಐಶ್ವರ್ಯಾ ರೈ ಬಳಸೋದು ಇದೇ ಪ್ರಾಡಕ್ಟ್...!

ಅಂದಹಾಗೆ ನಟಿಯರು ಮದುವೆಯಾದ ಬಳಿಕ ಪ್ರೆಗ್ನೆಂಟ್ ಎಂದು ವದಂತಿ ಹಬ್ಬುವುದು ಇದೇ ಮೊದಲ್ಲ. ಸಾಕಷ್ಟು ನಟಿಮಣಿಯರು ಈ ರೀತಿಯ ಗಾಸಿಪ್ ಗೆ ಗುರಿಯಾಗಿದ್ದಾರೆ. ಇತ್ತೀಚಿಗಷ್ಟೆ ನಟಿ ಕರೀನಾ ಕಪೂರ್ ಸಹ ಮೂರನೇ ಬಾರಿ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಕರೀನಾ ಫೋಟೋಗಳನ್ನು ಗಮನಿಸಿದ ನೆಟ್ಟಿಗರು ಮತ್ತೆ ಗರ್ಭಿಣಿನಾ ಎಂದು ಕಾಮೆಂಟ್ ಮಾಡಿದ್ದರು. ಆದರೆ ಈ ಬಗ್ಗೆ ಕರೀನಾ ಅಥವಾ ಅವರ ಕುಟುಂಬದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. 

ಐಶ್ವರ್ಯಾ ರೈಯಿಂದ ಪ್ರಿಯಾಂಕಾ ಚೋಪ್ರಾವರೆಗೆ; ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಲ್ಲಿ ಹೀಗಿದ್ದಾರೆ ಸ್ಟಾರ್ಸ್

ಇನ್ನು ಕತ್ರಿನಾ ವಿಚಾರದಲ್ಲೂ ಸಹ ಈ ರೀತಿಯ ವದಂತಿ ಹರಿದಾಡುತ್ತಿದೆ. ಈ ವರ್ಷ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ಹಸೆಮಣೆ ಏರಿದ ನಟಿ ಕತ್ರಿನಾ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಕತ್ರಿನಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಬಾಲಿವುಡ್‍‌ನ ಮತ್ತೋರ್ವ ನಟಿ ಅಲಿಯಾ ಭಟ್ ಈ ಎಲ್ಲಾ ವದಂತಿಗಳಿಗೆ ಎಡೆಮಾಡಿಕೊಡದೆ ಮದುವೆಯಾಗಿ ಎರಡು ತಿಂಗಳಿಗೆ ಗರ್ಭಿಣಿ ಎಂದು ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದರು.