ಅಪ್ಪ-ಅಮ್ಮನ ಜೊತೆ ಹುಟ್ಟುಹಬ್ಬ ಆಚರಿಸಿದ ಆಮೀರ್ ಖಾನ್ ಪುತ್ರಿ; ಸರಿಯಾಗಿ ಬಟ್ಟೆ ಧರಿಸಬಾರದಾ ಎಂದ ನೆಟ್ಟಿಗರು

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಪುತ್ರ ಇರಾ ಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ. ಇರಾ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಂದೆ ಆಮೀರ್ ಖಾನ್ ಮತ್ತು ತಾಯಿ ದತ್ತಾ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಬ್ರಮಿಸಿದ್ದಾರೆ. ಇರಾ ಖಾನ್ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Ira Khan Birthday Celebrations With Dad Aamir Khan and Mom Reena Dutta photo viral on social media sgk

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಪುತ್ರ ಇರಾ ಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ. ಇರಾ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಂದೆ ಆಮೀರ್ ಖಾನ್ ಮತ್ತು ತಾಯಿ ರೀನಾ ದತ್ತಾ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಬ್ರಮಿಸಿದ್ದಾರೆ. ಇರಾ ಖಾನ್ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ವಿಮ್ಮಿಂಗ್ ಡ್ರೆಸ್‌ನಲ್ಲಿರುವ ಇರಾ ಖಾನ್ ಕೇಕ್ ಕತ್ತರಿಸುತ್ತಿದ್ದಾರೆ. ಪಕ್ಕದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಪುತ್ರ ಆಜಾದ್ ಖಾನ್ ಮತ್ತು ಇರಾ ಖಾನ್ ತಾಯಿ ರೀನಾ ದತ್ತಾ ಜೊತೆಯಲ್ಲಿದ್ದಾರೆ.

ಈ ಸಮಯದಲ್ಲಿ ಇರಾ ಖಾನ್ ಧರಿಸಿದ್ದ ಬಟ್ಟೆ ನಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಾದರೂ ಸರಿಯಾದ ಬಟ್ಟೆ ಧರಿಸಬಾರದಾ ಎಂದು ಹೇಳುತ್ತಿದ್ದಾರೆ. ಅಪ್ಪನ ಮುಂದೆ ಇಂಥ ಬಟ್ಟೆ ಧರಿಸಲು ಧೈರ್ಯ ಬೇಕು.. ಯಾರು ಹೀಗೆ ಧರಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಅವರ ಬಟ್ಟೆ ಅವರ ಇಷ್ಟ ಎಂದು ಕಾಮೆಂಟ್ ಮಾಡುವ ಮೂಲಕ ಇರಾ ಪರ ನಿಂತಿದ್ದಾರೆ. ಇರಾ ಖಾನ್ ಸ್ವಿಮಿಂಗ್ ಪೂಲ್ ಪಕ್ಕದಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾಗಾಗಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸೆಲೆಬ್ರಿಟಿ ಮಕ್ಕಳು ಅಂದ್ಮೇಲೆ ಸದಾ ಸುದ್ದಿಯಲ್ಲಿರುತ್ತಾರೆ. ಇರಾ ಖಾನ್ ಕೂಡ ಆಗಾಗ ಸುದ್ದಿಯಲ್ಲಿರುತ್ತಾರೆ. ಇರಾ ಖಾನ್ ಪ್ರೀತಿಯ ವಿಚಾರ ಕಳೆದ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇರಾ ಖಾನ್ ಫಿಟ್ನೆಸ್ ಕೋಚ್ ನೂಪೂರ್ ಶಿಖಾರೆ ಜೊತೆಗೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಇಬ್ಬರ ಪ್ರೀತಿಯ ವಿಚಾರ ಏನು ಗುಟ್ಟಾಗಿ ಉಳಿದಿಲ್ಲ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಅಂದಹಾಗೆ ನೂಪೂರ್ ಸಹ ಪ್ರೇಯಸಿಗೆ ಪ್ರೀತಿಯ ವಿಶ್ ಮಾಡಿದ್ದಾರೆ. ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳು ನನ್ನ ಲವ್. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.

ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಆಮೀರ್ ಪುತ್ರಿ ಬಹಿರಂಗ; ಹೊರಬರಲು ಒದ್ದಾಡುತ್ತಿದ್ದೀನಿ ಎಂದ ಇರಾ

ಇನ್ನು ವೃತ್ತಿಪರ ವಿಚಾರವಾಗಿ ಹೇಳುವುದಾದರೇ ಇರಾ ಖಾನ್ ಡ್ರಾಮದಲ್ಲಿ ಆಕ್ಟೀವ್ ಆಗಿದ್ದಾರೆ. ನಾಟಕಗಳನ್ನು ನಿರ್ದೇಶನ ಮಾಡುವ ಮೂಲಕ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ. ಭಾರತದಾದ್ಯಂತ ಪ್ರದರ್ಶನ ನೀಡುತ್ತಿರುತ್ತಾರೆ. ಇನ್ನು ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಬಾಲಿವುಡ್ ನ ಅನೇಕ ಸ್ಟಾರ್ ಮಕ್ಕಳು ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಇನ್ನು ಕೆಲವರು ಬಾಲಿವುಡ್ ಎಂಟ್ರಿಗೆ ಸಜ್ಜಾಗಿದ್ದಾರೆ. ಆದರೆ ಇರಾ ಖಾನ್ ರಂಗಭೂಮಿಯಲ್ಲಿ ತೊಡಗಿಸಿಕೊೆಂಡಿದ್ದಾರೆ. ಬಾಲಿವುಡ್ ಎಂಟ್ರಿಯ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.

 
 
 
 
 
 
 
 
 
 
 
 
 
 
 

A post shared by POP Diaries (@ipopdiaries)


Aamir Khan ಪುತ್ರಿ Ira Khan ಈದ್‌ ಪಾರ್ಟಿಯಲ್ಲಿ ಈತನನ್ನು ನೋಡಿ ಫ್ಯಾನ್ಸ್‌ ಆಶ್ಚರ್ಯ!

 

ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಕೊನೆಯದಾಗಿ ಆಮೀರ್ ಖಾನ್ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ಅಭಿನಯಸಿದ್ದಾರೆ.

 

Latest Videos
Follow Us:
Download App:
  • android
  • ios