Asianet Suvarna News Asianet Suvarna News

ತೆರೆಮೇಲೆ ಬರಲಿದೆ ಕಾಫಿ ಕಿಂಗ್ ಸಿದ್ಧಾರ್ಥ್‌ ಬಯೋಪಿಕ್‌

ದೇಶಕ್ಕೆ ವಿಶ್ವಮಟ್ಟದ ಕಾಫಿಯ ಘಮಲನ್ನು ನೀಡಿದ್ದ ಕಾಫಿ ಅಂದ್ರೆ ಕಾಫಿ ಡೇ ಎಂದು ಜನ ಗುನುಗುವಂತೆ ಮಾಡಿದ ಕಾಫಿ ಡೇ ಸಂಸ್ಥೆ ಸಂಸ್ಥಾಪಕ ಸಿದ್ಧಾರ್ಥ್‌ ಹೆಗ್ಡೆ ಅವರ ಜೀವನಕತೆ ಸಿನಿಮಾವಾಗಿ ಬರಲಿದೆ. 

Indias coffee day founder entrepreneur Siddharth hedge biopic will on screen akb
Author
Bangalore, First Published Jun 17, 2022, 1:23 PM IST | Last Updated Jun 17, 2022, 2:24 PM IST

ಬೆಂಗಳೂರು: ದೇಶಕ್ಕೆ ವಿಶ್ವಮಟ್ಟದ ಕಾಫಿಯ ಘಮಲನ್ನು ನೀಡಿದ್ದ ಕಾಫಿ ಅಂದ್ರೆ ಕಾಫಿ ಡೇ ಎಂದು ಜನ ಗುನುಗುವಂತೆ ಮಾಡಿದ ಕಾಫಿ ಡೇ ಸಂಸ್ಥೆ ಸಂಸ್ಥಾಪಕ ಸಿದ್ಧಾರ್ಥ್‌ ಹೆಗ್ಡೆ ಅವರ ಜೀವನಕತೆ ಸಿನಿಮಾವಾಗಿ ಬರಲಿದೆ. ಅವರ ಬಯೋಪಿಕ್‌ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಸಿಸಿಡಿ ಸಂಸ್ಥಾಪಕ ಸಿದ್ದಾರ್ಥ ಅವರ ಬಯೋಪಿಕ್ ಮಾಡಲು ನಿರ್ಮಾಣ ಸಂಸ್ಥೆಗಳಾದ ಟೀ ಸಿರೀಸ್ ಫಿಲ್ಮ್ಸ್ ,  ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಹಾಗು ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಸಜ್ಜಾಗಿವೆ. ಈ ಬಗ್ಗೆ ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್ ಅವರು ಸಾಮಾಜಿಕ ಜಾಲತಾಣ ಕೂನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಫಿ ದೊರೆಯ ಜೀವನ ಗಾಥೆಯನ್ನು ಈ ನಿರ್ಮಾಣ ಸಂಸ್ಥೆಗಳು ಪ್ರಸ್ತುತ ಪಡಿಸಲಿವೆ. 

ಇತ್ತೀಚೆಗಷ್ಟೇ ಟೀ ಸಿರೀಸ್ ಫಿಲ್ಮ್ಸ್ , ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗಳು ಉದ್ಯಮಿ ರತನ್ ಟಾಟಾ ಹಾಗೂ ಅವರ ಕುಟುಂಬದವರ ಬಯೋಪಿಕ್ ಮಾಡುವುದಾಗಿ ಘೋಷಿಸಿದ್ದವು. ಸಿದ್ಧಾರ್ಥ್‌ ಅವರು ಮಲೆನಾಡಿನ ಕಾಫಿ ಘಮಲನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದವರು. ಐಶ್ವರ್ಯದ ಜೊತೆ ಹೃದಯದಲ್ಲೂ ಶ್ರೀಮಂತಿಕೆಯನ್ನು ಹೊಂದಿದ್ದ ಸಿದ್ಧಾರ್ಥ್‌ ತಾನು ಬೆಳೆಯುವುದರ ಜೊತೆ ತಮ್ಮ ಮಲೆನಾಡಿನ ಸಾವಿರಾರು ಯುವಕ ಯುವತಿಯರನ್ನು ಬೆಳೆಸಿದರು. ಸಾವಿರಾರು ಮಂದಿಗೆ ತರಬೇತಿ ಜೊತೆ ಉದ್ಯೋಗ ನೀಡಿ ಅವರ ಬದುಕನ್ನು ಹಸನಾಗಿಸಿದ್ದರೂ. 

Indias coffee day founder entrepreneur Siddharth hedge biopic will on screen akb

ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅವರು ಹಠಾತ್ ಆಗಿ ನಿಧನರಾಗಿದ್ದರು. ಪ್ರಾಮಾಣಿಕ ನಿಷ್ಕಳಂಕ ಆದರ್ಶಪ್ರಾಯರೆನಿಸಿದ ಅವರ ನಿಗೂಢ ಸಾವು ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಾವಿರಾರು ಕೋಟಿಯ ಆಸ್ತಿ ಹೊಂದಿದ್ದರು ಅವರು ಯಾವತ್ತೂ ಸಂಪತ್ತಿನ ಗತ್ತನ್ನು ತೋರಿದವರಲ್ಲ. ಸದಾ ಸರಳವಾಗಿದ ಅವರ ಸಾವು ಅನೇಕರಿಗೆ ಆಘಾತವನ್ನೇ ಉಂಟು ಮಾಡಿತ್ತು. 

'ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ಕಾರಣವೇ ಇದು'


ರಾಜ್ಯ ಮಾತ್ರವಲ್ಲ ದೇಶಾದ್ಯಂತ ಸಂಚಲನ ಮೂಡಿಸಿ ಅಚ್ಚರಿಗೆ ಕಾರಣವಾಗಿದ್ದ ಕಾಫಿ ಡೇ ಮಾಲೀಕ, ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡು ಜು.31ಕ್ಕೆ ಮೂರು ವರ್ಷ ಪೂರ್ತಿಯಾಗುತ್ತದೆ. 2019 ರ ಜು.31ರಂದು ಅವರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ಬೆಂಗಳೂರಿನಿಂದ ಹೊರಟಿದ್ದ ಸಿದ್ಧಾರ್ಥ, ಸಕಲೇಶಪುರ ಮೂಲಕ ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ ಜು.29ರಂದು ಮಂಗಳೂರಿಗೆ ಆಗಮಿಸಿದ್ದರು. ಸಂಜೆ ವೇಳೆ ಕೇರಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಜಪ್ಪಿನಮೊಗರು ನೇತ್ರಾವತಿ ಸೇತುವೆಯಿಂದ ಸಿದ್ಧಾರ್ಥ ದಿಢೀರ್‌ ಕಣ್ಮರೆಯಾಗಿದ್ದರು. ಅವರು ನದಿಗೆ ಧುಮುಕಿರಬಹುದು ಎಂಬ ಸಂಶಯದಲ್ಲಿ ಇಡೀ ಜಿಲ್ಲಾಡಳಿತವೇ ಲಕ್ಷಗಟ್ಟಲೆ ವ್ಯಯಿಸಿ ಹುಡುಕಾಟ ನಡೆಸಿತ್ತು.

ಅಂತಾರಾಷ್ಟ್ರೀಯ ಕಾಫಿ ದಿನ: ಫಿಲ್ಟರ್ ಕಾಫಿಯಿಂದ ಕ್ಯಾಪಚೂನೋ ತನಕ..! ಆಹಾ ಕಾಫಿ ರುಚಿ
 

ಎರಡು ದಿನಗಳ ಬಳಿಕ ಜು.31ರಂದು ಸಿದ್ಧಾರ್ಥ ಮೃತದೇಹ 4 ಕಿ.ಮೀ. ದೂರದ ಹೊಯಿಗೆ ಬಜಾರ್‌ ಎಂಬಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ನದಿಗೆ ಹಾರಿ ಆತ್ಮಹತ್ಯೆಯಂತೆ ಕಂಡುಬಂದರೂ ಸಿದ್ಧಾರ್ಥ ಸಾವಿನ ಬಗ್ಗೆ ಸಾಕಷ್ಟುಅನುಮಾನ, ಜಿಜ್ಞಾಸೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪ್ರತ್ಯೇಕ ತನಿಖಾಧಿಕಾರಿಯಿಂದ ತನಿಖೆಗೆ ಸರ್ಕಾರ ಸೂಚಿಸಿತ್ತು.
 

Latest Videos
Follow Us:
Download App:
  • android
  • ios