ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಆಸಿನ್, ಮಲಯಾಳಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಏಳು ಭಾಷೆಗಳನ್ನು ಬಲ್ಲವರಾಗಿದ್ದ ಅವರು, ಆರಂಭದಲ್ಲಿ ಬಾಲಿವುಡ್ ಅವಕಾಶಗಳನ್ನು ತಿರಸ್ಕರಿಸಿದರು. ನಂತರ, ವಿವಾದಗಳಿಂದ ತಮಿಳು ಚಿತ್ರರಂಗದಿಂದ ಬ್ಯಾನ್ ಆದರು. 2016ರಲ್ಲಿ ರಾಹುಲ್ ಜೊತೆ ವಿವಾಹವಾಗಿ, ಪ್ರಸ್ತುತ ಕೇರಳದಲ್ಲಿ ನೆಲೆಸಿದ್ದಾರೆ ಮತ್ತು ಕುಟುಂಬದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ನಟಿ ಆಸಿನ್ (Asin) ಯಾರಿಗೆ ಗೊತ್ತಿಲ್ಲ? ಸೌತ್ ಹಾಗೂ ನಾರ್ತ್ ಎಲ್ಲಾ ಕಡೆ ನಟಿಸಿ ಸೈ ಎನ್ನಿಸಕೊಂಡ ಈ ನಟಿ ಒಂದು ಕಾಲದಲ್ಲಿ ಇಡೀ ಭಾರತದ ಸ್ಟಾರ್ ನಟಿಯಾಗಿ ಮಿಂಚಿದವರು. ಅವರನ್ನು ಆ ಕಾಲದಲ್ಲಿ 'ಲೇಡಿ ಲಕ್ಕಿ ಆಕ್ಟ್ರೆಸ್; ಎಂದೇ ಚಿತ್ರೋದ್ಯಮ ಕರೆಯುತ್ತಿತ್ತು. ಕಾರಣ, ಆಸಿನ್ ನಟಿಸಿದ್ದ ಮೊದಲ ಮೂರೂ ಚಿತ್ರಗಳೂ ಸೂಪರ್ ಹಿಟ್ ಆದವು. ಆ ಬಳಿಕ ನಟಿ ಆಸಿನ್‌ ಸ್ಟಾರ್ ಪಟ್ಟ ಪಡೆದು, ಹಿಂತಿರುಗಿ ನೋಡಿದ್ದೇ ಇಲ್ಲ. ಆಸಿನ್ ಮೊದಲ ಚಿತ್ರ 2001ರಲ್ಲಿ ತೆರೆಗೆ ಅಪ್ಪಳಿಸಿತು. ಅದು ಮಲಯಾಂಳನ 'Narendran Makan Jayakanthan Vaka', ಸೂಪರ್ ಹಿಟ್ ಆಗಿತ್ತು. 

ಸೈಬೋ ಮಲಾಬರ್‌ನ ಕ್ಯಾಥೋಲಿಕ್ ಸಮುದಾಯದ ಹುಡುಗಿ, ಕೇರಳದ ಕೊಚ್ಚಿಯಲ್ಲಿ ಜನಿಸಿದವರು ತಂದೆ ಬಿಸಿನೆಸ್‌ಮ್ಯಾನ್, ತಾಯಿ ಸರ್ಜನ್. ಈ ಆಸಿನ್. ಭಾಷೆಗಳನ್ನು ಬೇಗ ಕಲಿಯುವ ಜಾಣ್ಮೆ ಹೊಂದಿದ್ದ ಆಸಿನ್, ಏಳು ಭಾಷೆಗಳಲ್ಲಿ ನಿರಾಯಾಸವಾಗಿ ಮಾತನಾಡುತ್ತಿದ್ದರು. ಮೊಟ್ಟಮದಲ ಸಿನಿಮಾದಲ್ಲಿ ನಟಿಸಿದಾಗ ಆಸಿನ್‌ಗೆ ಕೇವಲ 15 ರಿಂದ 16 ವರ್ಷ. ಆ ಸಿನಿಮಾ ಗೆಲ್ಲಲೀ ಬಿಡಲೀ ತಾನ ಆ ಬಳಿಕ ಸಿವಿಲ್ ಪರೀಕ್ಷೆ ಬರೆದು ಸರ್ಕಾರಿ ಅಧಿಕಾರಿಯಾಗಬೇಕೆಂದು ಆಸೆ ಪಟ್ಟಿದ್ದರು. ಆದರೆ ಆಗಿದ್ದೇ ಬೇರೆ.

ಚಿಕ್ಕಣ್ಣನ ದೊಡ್ಡ ಸೀಕ್ರೆಟ್ ಮ್ಯಾಟರ್ ಲೀಕ್ ಆಗೋಯ್ತು, ಈ 'ಲಕ್ಷ್ಮೀ ಪುತ್ರ'ನ ಭವಿಷ್ಯವೇನು?

ಆದರೆ, ಮೊದಲ ಚಿತ್ರದ ಯಶಸ್ಸು ಅವರನ್ನು ಸಿನಿಮಾರಂಗದಲ್ಲೇ ಉಳಿಯುವಂತೆ ಮಾಡಿತು. ಆ ಬಳಿಕ ಅವರಿಗೆ ಬಹಳಷ್ಟು ಅವಕಾಶಗಳು ಬಂದವು. ಸೌತ್ ಸ್ಟಾರ್ ನಟಿಯಾಗಿದ್ದ ಆಸಿನ್ ಬಾಲಿವುಡ್‌ಗೆ ಕಾಲಿಡುವ ಮೊದಲೇ ತಾನು ಅಭಿಷೇಕ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಜೊತೆ ನಟಿಸುವುದಿಲ್ಲ ಎಂದು ಆಫರ್ ತಿರಸ್ಕರಿಸಿ ಸುದ್ದಿಯಾಗಿದ್ದರು. ಬಳಿಕ ಅವರು ನಟ ಸಲ್ಮಾನ್ ಖಾನ್ ಕೋಪಕ್ಕೆ ತುತ್ತಾದ್ರು. ಅಕ್ಷಯ್ ಕುಮಾರ್ ಕೂಡ ಆಸಿನ್‌ರನ್ನು ದೂರ ಇಟ್ಟರು. ಯಾಕೆ ಹೀಗೆಲ್ಲಾ ಆಯ್ತು?

'ಆಸಿನ್‌ ಒಬ್ಬ ಮೋಸಗಾರ್ತಿ ಹಾಗೂ ಸುಳ್ಳುಗಾರ್ತಿ' ಅಂತ ಬಾಲಿವುಡ್‌ನ ಒಬ್ಬ ನಟ ಹೇಳಿದ ಮೇಲೆ ನಟಿ ಆಸಿನ್‌ ಅವರನ್ನು ಬಾಲಿವುಡ್‌ನಲ್ಲಿ ಮೂಲೆಗುಂಪು ಮಾಡಲಾಯ್ತು. ಬಳಿಕ ನಟ ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಚಿತ್ರದ ಬಳಿಕ ಅವರಿಗೆ ಬಾಲಿವುಡ್‌ನಲ್ಲಿ ಶಾಶ್ವತವಾಗಿ ಬಾಗಿಲು ಬಂದಾಯ್ತು. ಅಷ್ಟು ಸುಂದರಿ, ಅಷ್ಟು ದೊಡ್ಡ ಸ್ಟಾರ್ ನಟಿ ಆಸಿನ್‌ ಅದ್ಯಾಕೆ ಮೂಲೆ ಸೇರುವಂತಾಯ್ತು, ಅವರನ್ನು ಯಾಕೆ ಬ್ಯಾನ್ ಮಾಡಲಾಯ್ತು ಅನ್ನೋ ಸ್ಟೋರಿ ಇಲ್ಲಿದೆ ನೋಡಿ.. 

ಕನ್ನಡ ಸ್ಟಾರ್ ನಟರ ಕೈ ತಪ್ಪಿದ ಸಿನಿಮಾಗಳಿವು, ಅವ್ರ ಫ್ಯಾನ್ಸ್‌ಗೆ ಹೇಳ್ಬೇಡಿ.. ಜಸ್ಟ್ ನೋಡಿ..!

ತೆಲುಗಿನಲ್ಲಿ ರವಿತೇಜ, ಜಯಂ ರವಿ, ಸೇರಿದಂತೆ ಸ್ಟಾರ್‌ಗಳ ಜೊತೆ ನಟಿಸಿದ್ದ ನಟಿ ಆಸಿನ್ ತಮಿಳಿನಲ್ಲಿ ವಿಜಯ್, ಕಮಲ್ ಹಾಸನ್, ಸೂರ್ಯ, ಅಜಿತ್ ಹೀಗೆ ಬಹುತೇಕ ಎಲ್ಲಾ ಸ್ಟಾರ್‌ ನಟರ ಜೊತೆ ಅಭಿನಯಿಸಿದ್ದಾರೆ. 2008ರಲ್ಲಿ ಘಜನಿ ಎಂಬ ತಮಿಳು ರೀಮೇಕ್ ಬಾಲಿವುಡ್ ಚಿತ್ರದಲ್ಲೂ ನಟಿ ಆಸಿನ್ ನಟಿಸಿ ಬಾಲಿವುಡ್‌ಗೆ ಕಾಲಿಟ್ಟರು. 2009ರಲ್ಲಿ 'ಲಂಡನ್‌ ಡ್ರಿಂಕ್ಸ್' ಬಾಲಿವುಡ್ ಚಿತ್ರದಲ್ಲಿ ಆಸಿನ್ ನಟ ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಜೊತೆ ನಟಿಸಿದ್ದಾರೆ. 

ಆಸಿನ್‌ಗೆ ಮುಳುವಾಗಿದ್ದು ಐಫಾ (2010) ಚಲನಚಿತ್ರ ಸಮಾರಂಭ. ಅದು ಶ್ರೀಲಂಕಾದಲ್ಲಿ ನಡೆದಿತ್ತು. ಆ ವೇಳೆ ತಮಿಳಿಗರಿಗೂ ಹಾಗೂ ಲಂಕಾಗೂ ತೀವ್ರ ಮನಸ್ತಾಪ ಇತ್ತು. ಅದನ್ನು ಕೇರ್ ಮಾಡದೇ ಶ್ರೀಲಂಕಾಗೆ ಹೋಗಿ ಭಾಗಿಯಾದ ನಟಿ ಆಸಿನ್‌ರನ್ನು ತಮಿಳು ಚಿತ್ರರಂಗ ಬ್ಯಾನ್ ಮಾಡಿತು. ತೆಲುಗಿನಲ್ಲಿ ಅವಕಾಶ ಕಡಿಮೆ ಆಯ್ತು. ಆದರೆ ಆಸಿನ್‌ಗೆ ಬಾಲಿವುಡ್‌ನಲ್ಲಿ ಬೇಕಾದಷ್ಟು ಆಫರ್ ಇತ್ತು. ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದರು ಆಸಿನ್. 

ಶ್ರೇಯಾ ಘೋಷಾಲ್ ಹಾರ್ಟ್ ಓಲ್ಡ್‌ ಅಂತೆ.. ಐಶ್ವರ್ಯಾ ರೈ ಬಗ್ಗೆ ಈ ಸಿಂಗರ್ ಹೀಗ್ ಹೇಳೋದಾ?

ನಟಿ ಅಸಿನ್‌ಗೆ 2016ರಲ್ಲಿ ಮದುವೆ ಆಯ್ತು. ರಾಹುಲ್ ಎಂಬ ಉದ್ಯಮಿ ಜೊತೆ ಲವ್ ಮ್ಯಾರೇಜ್ ಮ್ಯಾರೇಜ್ ಮಾಡಿಕೊಂಡು ಈಗ ಸುಖವಾಗಿದ್ದಾರೆ. ಆದರೆ ಅವರು ನಟಿಸಿದ ಘಜನಿ, ಶಿವಕಾಶಿ, ಪೋಕಿರಿ, ವೇಲಂ, ದಶಾವತಾರಂ ಹೀಗೆ ಸಾಕಷ್ಟು ಸಿನಿಮಾಗಳು ಅವರನ್ನು ಎಂದೂ ಯಾರೂ ಮರೆಯಲಾಗದಂತೆ ಮಾಡಿವೆ. ಈಗವರು ಇರೋದು ಕೇರಳದಲ್ಲಿ. ಆದರೆ, ಅವರ ಗಂಡ ದೊಡ್ಡ ಉದ್ಯಮಿ. ಈಗ ಕೇರಳ, ಹೈದ್ರಾಬಾದ್, ಮುಂಬೈ ಹಾಗೂ ಚೆನ್ನೈ ಎಲ್ಲಾ ಕಡೆ ಆಸಿನ್ ಫ್ಯಾಮಿಲಿ ಬಿಸನೆಸ್ ಜೋರಾಗಯೇ ನಡಿತಿದೆ.