ಹೈದರಾಬಾದ್ ಚಿತ್ರೀಕರಣದ ವೇಳೆ ತೆಲುಗು ನಟನೊಬ್ಬ ಜಯಂತಿಯವರ ಕಪಾಳಕ್ಕೆ ಹೊಡೆದ ಘಟನೆಯನ್ನು ಜೂಲಿ ಲಕ್ಷ್ಮಿ ವಿವರಿಸಿದ್ದಾರೆ. ಚಿತ್ರೀಕರಣ ವಿಳಂಬ ಮಾಡುತ್ತಿದ್ದ ನಟನಿಗೆ ಜಯಂತಿ ಆಕ್ಷೇಪಿಸಿದ್ದಕ್ಕೆ ಕೋಪಗೊಂಡ ನಟ ಹೊಡೆದನಂತೆ. ಘಟನೆ ಕಂಡು ಜೂಲಿ ಲಕ್ಷ್ಮಿ ಅಳುತ್ತಿದ್ದ ಜಯಂತಿಯವರನ್ನು ಸಮಾಧಾನಪಡಿಸಿದರು.
ಕನ್ನಡದ ನಟಿ ಜಯಂತಿಗೆ (Jayanthi) ತೆಲುಗು ನಟನೊಬ್ಬ ಕಪಾಳಕ್ಕೆ ಹೊಡೆದ ಘಟನೆಯನ್ನು ನಟಿ ಜೂಲಿ ಲಕ್ಷ್ಮಿಯವರು (Julie Lakshmi) ಹಂಚಿಕೊಂಡಿದ್ದಾರೆ. ಅದೊಂದು ದಿನ ನಟಿಯರಾದ ಜಯಂತಿ ಹಾಗೂ ಜೂಲಿ ಲಕ್ಷ್ಮಿ ಇಬ್ಬರೂ ಹೈದ್ರಾಬಾದ್ ಸ್ಟುಡಿಯೋದಲ್ಲಿ ಚಿತ್ರವೊಂದರ ಶೂಟಿಂಗ್ ಮಧ್ಯೆ ಊಟದ ಸಮಯದಲ್ಲಿ ಒಟ್ಟಿಗೇ ಕುಳಿತು ಮಾತುಕತೆ ನಡೆಸುತ್ತಿದ್ದರು.
ಆಗ ನಟಿ ಜಯಂತಿಯವರು 'ಬೆಂಗಳೂರಲ್ಲಿ ಸಂಜೆ ಶೂಟಿಂಗ್ ಇದೆ. ಬೇಗ ಹೊರಡಬೇಕು. ಆದ್ರೆ ಈ ಯಪ್ಪ ಬಿಡ್ತಾ ಇಲ್ಲ ನನ್ನನ್ನು.. ಇಲ್ಲಿಂದ ಏರ್‌ಪೊರ್ಟಿಗೆ ಹೋಗೋದಕ್ಕೇ ಒಂದು ಗಂಟೆ ಸಮಯ ಬೇಕು' ಎಂದು ಹೇಳಿದ್ದರಂತೆ. ಅದಕ್ಕೆ ಲಕ್ಷ್ಮೀಯವರು 'ಅಲ್ಲ, ಕೇಳ್ಕೊಂಡು ಹೋಗೋದಲ್ವಾ? ಅದೂ ಕೂಡ ನಿಮ್ಗೆ ಇಂಪಾರ್ಟೆಂಟ್ ಅಲ್ವಾ?' ಎಂದು ಜೂಲಿಯವರು ಹೇಳಿದಾಗ ಜಯಂತಿಯವರು ಕೊಟ್ಟ ಉತ್ತರ ಕೇಳಿ ಜೂಲಿ ಲಕ್ಷ್ಮಿಯವರು ಶಾಕ್ ಆಗಿದ್ದರಂತೆ.
'ತೊಡೆ ಚೆನ್ನಾಗಿ ಇದ್ಯಾ ನೋಡಿ ನಂದು' ಅಂದ್ಬಿಟ್ಟು ಲಂಗ ಎತ್ತಿಬಿಟ್ರಂತೆ ಜೂಲಿ ಲಕ್ಷ್ಮೀ..!
ಜಯಂತಿಯವರು 'ಆ ನಟ ಮಹಾ ಕೋಪಿಷ್ಠ..' ಎಂದು ಹೇಳಿದ್ರಂತೆ. ಅದಾಗಿ ಅರ್ಧ ಗಂಟೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಓಡಿ ಬಂದು ನಟಿ ಜಯಂತಿ ಕೆನ್ನೆಗೆ 'ಫಟಾರ್' ಅಂತ ಹೊಡದೇಬಿಟ್ಟನಂತೆ. ಆತ ಆ ಸಿನಿಮಾದ ನಟ ಹಾಗೂ ನಿರ್ಮಾಪಕರ ಆಗಿದ್ದರಂತೆ. ಅದನ್ನು ನೋಡಿದ ನಟಿ ಜೂಲಿ ಲಕ್ಷ್ಮಿಗೆ ಮೈಯೆಲ್ಲಾ ಉರಿದುಹೋಯ್ತು. ಓಡಿಬಂದು ಜೂಲಿ ಲಕ್ಷ್ಮಿಯವರು ಅಳುತ್ತಿದ್ದ ನಟಿ ಜಯಂತಿಯನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ರಂತೆ. ಹಾಗಿದ್ರೆ ಆ ಘಟನೆಗೆ ಕಾರಣ ಹಾಗೂ ಪರಿಣಾಮ ಏನು ಅಂದ್ರೆ..
ನಟಿ ಜಯಂತಿಯವರು ಆ ನಟನಿಗೆ 'ನೀವು ಸುಮ್ನೆ ನಂಗೆ ಲೇಟ್ ಮಾಡ್ತಾ ಇದೀರ. ನಿಮ್ ಜೊತೆ ಇರೋ ನನ್ ಕ್ಲೋಸ್‌ಅಪ್ ಶಾಟ್ ತೆಗೆದು ನಂಗೆ ಹೋಗೋದಕ್ಕೆ ಬಿಡಿ..' ಅಂತ ಹೇಳಿ ಜಯಂತಿಯವರು ಆ ನಟನಿಗೆ ಹೇಳಿದ್ರಂತೆ. ಅದನ್ನು ಕೇಳಿದ ಆ ನಟ ಭಾರೀ ಕೋಪದಿಂದ ನಟಿ ಜಯಂತಿಯತ್ತ ಓಡಿ ಬಂದು ಕೆನ್ನೆಗೆ ಜೋರಾಗಿಯೇ ಬಾರಿಸಿದ್ದಾನೆ. ಅನಾವಶ್ಯಕ ಲೇಟ್ ಮಾಡ್ತಿರೋ ನಟನಿಗೆ ಅಷ್ಟು ಹೇಳಿದ್ದಕ್ಕೆ ಆತ ಜಯಂತಿಯನ್ನು ಹೊಡೆದೇಬಿಟ್ಟನಂತೆ!
ಶಿವರಾಜ್‌ಕುಮಾರ್‌ಗೆ 'ಹ್ಯಾಟ್ರಿಕ್ ಹೀರೋ' ಬಿರುದು ಬಂದಿದ್ಯಾಕೆ? ಬೇರೆ ಯಾರಿಗೂ ಇಲ್ಲದ್ದು..!
ಇದನ್ನು ತಮ್ಮ ಸಂದರ್ಶನದಲ್ಲಿ ನಟಿ ಜೂಲಿ ಲಕ್ಷ್ಮಿಯವರು ಹಂಚಿಕೊಂಡಿದ್ದಾರೆ. 'ನಾನು ಯಾವುದಕ್ಕೂ ಹೆದರುತ್ತಿರಲಿಲ್ಲ. ಶೂಟಿಂಗ್ ಸೆಟ್‌ನಲ್ಲಿ ನನಗೆ ಅನ್ಯಾಯ ಆದರೆ, ಯಾರಾದ್ರೂ ಅನಾವಶ್ಯಕ ಕಿರುಕುಳ ಕೊಟ್ಟರೆ ಅವರನ್ನು ನಾನೇ ತರಾಟೆಗೆ ತೆಗದುಕೊಳ್ತಿದ್ದೆ. ನಾನು ಅಳುತ್ತಾ ಕೂರುತ್ತಿರಲಿಲ್ಲ. ಆದರೆ ಪಾಪ, ಜಯಂತಿಯಂಥವರು ಸಹಿಸಿಕೊಂಡು ಅಳುತ್ತಿದ್ದರು' ಎಂದಿದ್ದಾರೆ ನಟಿ ಜೂಲಿ ಲಕ್ಷ್ಮಿ.
