Asianet Suvarna News Asianet Suvarna News

ಕಾನ್ ಕಣದಲ್ಲಿ ಭಾರತೀಯ ಸಿನಿಮಾ

ಕಾನ್ ಚಲನಚಿತ್ರೋತ್ಸವ ಪ್ರಪಂಚದ ಚಲನಚಿತ್ರೋತ್ಸವಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಈ ಚಿತ್ರೋತ್ಸವದಲ್ಲಿ ಪ್ರಪಂಚದ ಹೆಸರಾಂತ ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ. ಭಾರತೀಯ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಸ್ಪರ್ಧಿಸಿರುವುದು ಬಹಳ ಕಡಿಮೆಯೇ. ಈ ಹಿಂದೆ 1994ರಲ್ಲಿ ಶಾಜಿ ಕರುಣ್‌ರ ʻಸ್ವಾಹಂʼ ಮತ್ತು 1983ರಲ್ಲಿ ಮೃಣಾಲ್‌ ಸೇನ್‌ ಅವರ ʻಕಾರಿಜ್‌ʼ ಚಿತ್ರಗಳು ಸ್ಪರ್ಧಿಸಿದ್ದವು.

Indian Cinema in Cannes Film Festival Vin
Author
First Published May 12, 2024, 11:45 AM IST | Last Updated May 12, 2024, 11:45 AM IST

- ಎ. ಎನ್.‌ ಪ್ರಸನ್ನ

ಕಾನ್ ಚಲನಚಿತ್ರೋತ್ಸವ ಪ್ರಪಂಚದ ಚಲನಚಿತ್ರೋತ್ಸವಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಈ ಚಿತ್ರೋತ್ಸವದಲ್ಲಿ ಪ್ರಪಂಚದ ಹೆಸರಾಂತ ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ. ಚಿತ್ರಗಳು ಈ ಚಿತ್ರೋತ್ಸವದಲ್ಲಿ ಸ್ಪರ್ಧಿಸುವುದಕ್ಕೆ ಸಾಧ್ಯವಾಗುವುದೇ ಅವುಗಳ ಹಿರಿಮೆಯ ಸಂಗತಿ ಎನ್ನುವ ಅಭಿಪ್ರಾಯವಿದೆ. ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದರೆ ಅದು ತಮ್ಮ ಜೀವಮಾನದ ಅತ್ಯಂತ ಶ್ರೇಷ್ಠ ಸಾಧನೆ ಎಂದು ನಿರ್ಮಾಪಕರು, ನಿರ್ದೇಶಕರು, ನಟರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಮತ್ತು ಚಿತ್ರ ನಿರ್ಮಾಣದ ವಿವಿಧ ಕ್ಷೇತ್ರದವರು ಭಾವಿಸುತ್ತಾರೆ.

ಭಾರತೀಯ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಸ್ಪರ್ಧಿಸಿರುವುದು ಬಹಳ ಕಡಿಮೆಯೇ. ಈ ಹಿಂದೆ 1994ರಲ್ಲಿ ಶಾಜಿ ಕರುಣ್‌ರ ʻಸ್ವಾಹಂʼ ಮತ್ತು 1983ರಲ್ಲಿ ಮೃಣಾಲ್‌ ಸೇನ್‌ ಅವರ ʻಕಾರಿಜ್‌ʼ ಚಿತ್ರಗಳು ಸ್ಪರ್ಧಿಸಿದ್ದವು.

ದಾದಾಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾದ ಕನ್ನಡದ 'ಕೆಂಡ'

ಈಗ ಮೇ 14ರಿಂದ ಮೇ 25ರವರೆಗೆ ಜರುಗುವ 77ನೇ ಕಾನ್‌ ಚಿತ್ರೋತ್ಸವದಲ್ಲಿ ಪಾಯಲ್‌ ಕಪಾಡಿಯಾ ಅವರ ʻಆಲ್‌ ವಿ ಇಮ್ಯಾಜಿನ್‌ ಆ್ಯಸ್‌ ಲೈಟ್‌ʼ ಚಿತ್ರ 22 ಚಲನಚಿತ್ರಗಳೊಂದಿಗೆ ಸ್ಪರ್ಧಿಸುತ್ತಿರುವುದು ನಿಜಕ್ಕೂ ವಿಶೇಷವೇ. ಸ್ಪರ್ಧಾವಿಭಾಗದಲ್ಲಿ ಸೀನ್‌ ಬೇಕರ್‌ರ ʻಅನೋರʼ, ಆ್ಯಂಡ್ರಿಯ ಆರ್ನಾಲ್ಡ್‌ರ ʻಬರ್ಡ್‌ʼ, ಅಗತೆ ರೀಡಿಂಗರ್‌ರ ʻವೈಲ್ಡ್‌ ಡೈಮಂಡ್‌ʼ, ಮಿಗೆಲ್‌ ಗೋಮ್ಸ್‌ ನಿರ್ದೇಶನದ ʻಗ್ರ್ಯಾಂಡ್‌ ಟೂರ್‌ʼ ಚಿತ್ರಗಳೂ ಸೇರಿವೆ.

ಕತೆ ಏನು? 38ರ ಹರೆಯದ ಮುಂಬೈಯಲ್ಲಿ ಜನಿಸಿದ ಪಾಯಲ್ ಕಪಾಡಿಯಾರ ಚಿತ್ರದಲ್ಲಿ ಇಬ್ಬರು ನರ್ಸ್‌ಗಳ ಪ್ರಮುಖ ಪಾತ್ರವಿದೆ. ಪ್ರಭಾಳಿಗೆ ತನ್ನಿಂದ ದೂರವಾದ ಗಂಡನಿಂದ ಅನಿರೀಕ್ಷಿತವಾಗಿ ಉಡುಗೊರೆಯೊಂದು ತಲುಪುತ್ತದೆ. ಅವಳ ರೂಮ್‌ಮೇಟ್ ಅನು ತಾನು ಪ್ರೇಮಿಸುವವನ ಜೊತೆ ವಾಸಿಸಲು ಸ್ಥಳ ಹುಡುಕುತ್ತಿರುತ್ತಾಳೆ. ಅವರಿಬ್ಬರೂ ಸಮುದ್ರ ತೀರದಲ್ಲಿರುವ ಊರಿಗೆ ಹೋಗುತ್ತಾರೆ. ಅದು ಅವರಿಬ್ಬರ ಸಮಸ್ಯೆಗಳಿಗೆ ಹಾಗೂ ಮನಸ್ಥಿತಿಗೆ ಪರಿಹಾರ ಒದಗಿಸುವ ಸ್ಥಳವಾಗಿರುತ್ತದೆ. 

ಫಿಲಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ನಿರ್ದೇಶನ ಅಭ್ಯಾಸ ಮಾಡಿದ ಪಾಯಲ್ ಕಪಾಡಿಯಾ ಮುಂಬೈನಲ್ಲಿ ನೆಲೆಸಿರುವ ಚಲನಚಿತ್ರ ನಿರ್ದೇಶಕಿ. ಆಕೆಯ ಚಿತ್ರಗಳಲ್ಲಿ ಸ್ತ್ರೀಯೊಬ್ಬಳ ವರ್ತನೆ, ಸೂಕ್ಷ್ಮ ಸಂಜ್ಞೆಗಳ ಮೂಲಕ ಸತ್ಯವನ್ನು ಪರಿಶೋಧಿಸುವ ಚಿತ್ರಣವನ್ನು ಕಾಣಬಹುದು. ಅವರ ಮೊದಲ ಚಿತ್ರ ʻಆಫ್ಟರ್‌ನೂನ್‌ ಕ್ಲೌಡ್ʼ 2017ರ ಕಾನ್‌ ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಆ ವರ್ಷದಲ್ಲಿ ಭಾಗವಹಿಸಿದ ಭಾರತೀಯ ಚಿತ್ರ ಅದೊಂದೇ. 2021ರಲ್ಲಿ ಅವರ ʻಎ ನೈಟ್‌ ಆಫ್‌ ನೋಯಿಂಗ್‌ ನಥಿಂಗ್‌ʼ ಕಾನ್‌ ಚಿತ್ರೋತ್ಸವದ ಡಾಕ್ಯುಮೆಂಟರಿ ವಿಭಾಗದಲ್ಲಿ ಗೋಲ್ಡನ್‌ ಐ ಪ್ರಶಸ್ತಿಯನ್ನು ಪಡೆಯಿತು. 

ಕೇರಳದಲ್ಲಿ 'ವಡಕ್ಕನ್'ಎಂದ ಕನ್ನಡ ನಟ ಕಿಶೋರ್; ಮಲಬಾರ್ ಥ್ರಿಲ್ಲರ್‌ಗೆ ಬಂತು ಭಾರೀ ಜೈ ಹೋ !

ಅವರು ಸ್ಪರ್ಧಿಸಿದ ವಿಭಾಗದಲ್ಲಿ ಪ್ರಖ್ಯಾತರಾದ ಆ್ಯಂಡ್‌ರಿಯ ಅರ್ನಾಲ್ಡ್ ಅವರ, ʻಕೌʼ, ಮಾರ್ಕೋ ಬಿಲೋಚಿಯೋರ ʻಮಾರ್ಕ್ಸ್ ಕೆನ್ ವೇಟ್ʼ, ಹೇನೆಸ್‌ರ, ʻದ ವೆಲ್ವೆಟ್ ಅಂಡರ್ ಗ್ರೌಂಡ್ʼ ಚಿತ್ರಗಳು ಕೂಡ ಪ್ರದರ್ಶಿತಗೊಂಡಿದ್ದವು.ಅವರು ಪ್ರಯೋಗಾತ್ಮಕವಾಗಿ ನಿರ್ಮಿಸಿದ ಡಾಕ್ಯುಮೆಂಟರಿ ಚಿತ್ರ‌, ʻಆ್ಯಂಡ್ ವಾಟ್ ಇಸ್ ದ ಸಮ್ಮರ್ ಸೇಯಿಂಗ್ʼ ಮೊದಲ ಪ್ರದರ್ಶನ ಕಂಡದ್ದು 2018ರ ಬರ್ಲಿನ್ ಚಲನಚಿತ್ರೋತ್ಸವದಲ್ಲಿ. ಅವರ ಕಿರುಚಿತ್ರ ʻದ ಲಾಸ್ಟ್ ಮ್ಯಾಂಗೋ ಬಿಫೋರ್ ಮಾನ್ಸೂನ್ʼ, 2015ರ ಉಬರ್ ಹಾಸನ್ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಫಿಪ್ರಿಸ್ಕಿ ಬಹುಮಾನ ಮತ್ತು ಸ್ಪೆಷಲ್ ಜ್ಯೂರಿ ಬಹುಮಾನವನ್ನು ಗಳಿಸಿತು. ಈಗ ಕಾನ್‌ ಚಿತ್ರೋತ್ಸವದಲ್ಲಿ ಸ್ಪರ್ಧಿಸುತ್ತಿರುವುದು ಅವರ ಮೊಟ್ಟ ಮೊದಲ ಚಲನಚಿತ್ರ. ಇದನ್ನು ಅವರು ಫ್ರಾನ್ಸ್, ನೆದರ್ಲ್ಯಾಂಡ್, ಭಾರತ ಮತ್ತು ಇಟಲಿಯಲ್ಲಿ ಚಿತ್ರಿಸಿದ್ದಾರೆ. ಅದರಲ್ಲಿ ಮಲಯಾಳಂ, ಫ್ರೆಂಚ್, ಮರಾಠಿ ಹಾಗೂ ಹಿಂದಿ ಭಾಷೆಗಳನ್ನು ಬಳಸಿದ್ದಾರೆ.

ಚಿತ್ರೋತ್ಸವದ ಲಾ ಸಿನೆಫ್‌ (ಫಿಲ್ಮ್‌ ಸ್ಕೂಲ್‌ ಫಿಕ್ಷನ್‌ ಅಥವಾ ಆ್ಯನಿಮೇಟೆಡ್‌ ಚಿತ್ರ) ವಿಭಾಗದಲ್ಲಿ ಚಿದಾನಂದ ಎಸ್‌ ನಾಯಕ್‌ ಅವರ ʻಸನ್‌ಫ್ಲವರ್ಸ್‌ ವೇರ್‌ ಫಸ್ಟ್‌ ವನ್ಸ್‌ ಟು ನೋʼ ಸ್ಪರ್ಧಿಸುತ್ತಿದೆ. ಇದರೊಂದಿಗೆ ಬ್ರಿಟನ್‌ನ ಮಾನಸಿ ಮಹೇಶ್ವರಿಯ ʻಬನ್ನಿಹುಡ್‌ʼ, ಗ್ಯಾಬ್ರಿಯಲ್‌ ಎಸ್ಡ್ರಾಸ್‌ರ ʻಎಲಿವೇಷನ್‌ʼ,‌ ಯೂರಿ ಲಿಮ್‌ರ ʻಫಾರೆಸ್ಟ್‌ ಆಫ್ ಎಖೋಸ್‌ʼ ಮುಂತಾದ ಚಿತ್ರಗಳು ಸ್ಪರ್ಧಿಸುತ್ತಿವೆ.

Latest Videos
Follow Us:
Download App:
  • android
  • ios