Asianet Suvarna News Asianet Suvarna News

ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ ಇಲಿಯಾನ; ಫೋಟೋ ಶೇರ್ ಮಾಡಿ ಹೇಳಿದ್ದೇನು?

ನಟಿ ಇಲಿಯಾನಾ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Ileana D Cruz admitted to hospital shares photo and health update sgk
Author
First Published Feb 1, 2023, 11:23 AM IST

ಬಾಲಿವುಡ್ ನಟಿ ಇಲಿಯಾನಾ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ ಬೆಡ್ ಮೇಲಿರುವ ಫೋಟೋವನ್ನು ನಟಿ ಇಲಿಯಾನಾ ಶೇರ್ ಮಾಡಿದ್ದಾರೆ. ದಿಢೀರ್ ಆಸ್ಪತ್ರೆ ದಾಖಲಾದ ನಟಿಯನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟಿಗೆ ಏನಾಯಿತು ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಏನಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲಿಯಾನಾ ಸದ್ಯ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ, ದಿನ ಎಷ್ಟು ವ್ಯತ್ಯಾಸವನ್ನು ಮಾಡುತ್ತದೆ ಎಂದು ಹೇಳಿದ್ದಾರೆ.  

ಫೋಟೋದಲ್ಲಿ ಇಲಿಯಾನಾ ಕೈಗೆ ಡ್ರಿಪ್ ಹಾಕಿರುವುದು ಕೂಡ ಕಾಣಿಸುತ್ತಿದೆ. ಮತ್ತೊಂದು ಫೋಟೋ ಶೇರ್ ಮಾಡಿ, ಸರಿಯಾದ ಸಮಯಕ್ಕೆ ಉತ್ತಮ ವೈದ್ಯಕೀಯ ಸಹಾಯ ಸಿಕ್ಕಿತು' ಎಂದು ಹೇಳಿದ್ದಾರೆ. ಇಲಿಯಾನಾಗೆ ನಿಜಕ್ಕೂ ಏನಾಗಿದೆ ಎನ್ನುವ ಬಗ್ಗೆ ಬಹಿರಂದ ಪಡಿಸಿಲ್ಲ. ಆದರೆ ಅಭಿಮಾನಿಗಳು, ಆಪ್ತರು ಮತ್ತು ಕುಟುಂಬದವರು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ತನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ನು ಸ್ವಲ್ಪ ಸಮಯದ ವರೆಗೂ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.  

Ileana D'Cruz ಬ್ಯಾಕ್ ದಪ್ಪ ಸೊಂಟ ಸಣ್ಣ; ನೆಗೆಟಿವ್ ಕಾಮೆಂಟ್ ಮಾಡ್ರಿ ಉತ್ತರ ಕೊಡ್ತೀನಿ ಎಂದೇಳಿದ ನಟಿ

ನಟಿ ಇಲಿಯಾನಾ ಇತ್ತೀಚಿಗಷ್ಟೆ ಬಾಲಿವುಡ್‌ನಲ್ಲಿ 10 ವರ್ಷಗಳನ್ನು ಪೂರೈಸಿದ್ದಾರೆ. ಇತ್ತೀಚಿಗಷ್ಟೆ ನಟಿ ಇಲಿಯಾನಾ, ಕತ್ರಿನಾ ಕೈಫ್ ಕುಟುಂಬದ ಜೊತೆ ಪ್ರವಾಸ ಎಂಜಾಯ್ ಮಾಡಿದ್ದ ಫೋಟೋಗಳನ್ನು ಶೇರ್ ಮಾಡಿದ್ದರು. ಅಲ್ಲದೇ ಕತ್ರಿನಾ ಕೈಫ್ ಸಹೋದರನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಕೂಡ ವೈರಲ್ ಆಗಿದೆ. ಕತ್ರಿನಾ ಸಹೋದರನ ಜೊತೆಗಿನ ಫೋಟೋ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದಕ್ಕೂ ಮೊದಲು ಇಲಿಯಾನಾ ಛಾಯಾಗ್ರಾಹಕ  ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಅವರ ಜೊತೆ ಸಂಬಂಧ ಕಡಿದುಕೊಂಡು ದೂರ ಆಗಿದ್ದರು. ಇದೀಗ ಕತ್ರಿನಾ ಸಹೋದರನ ಜೊತೆ ಡೇಟಿಂಗ್ ನಲ್ಲಿದ್ದಾರೆ. ಈ ನಡುವೆ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿರುವುದು ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ. 

Ileana Bikini Look: ಯಾಕಮ್ಮ ಪದೇ ಪದೇ ಮೈ ತೋರಿಸ್ತ್ಯಾ ಎಂದ ನೆಟ್ಟಿಗರು!

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಇಲಿಯಾನಾ ಕೊನೆಯದಾಗಿ ಬಿಗ್ ಬುಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜೊತೆ ನಟಿಸಿದ್ದರು. ಈ ಸಿನಿಮಾಗೆ ಅಜಯ್ ದೇಗನ್ ನಿರ್ಮಾಣ ಮಾಡಿದ್ದರು. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಸದ್ಯ ರಣದೀಪ್ ಹೂಡ ಜೊತೆ ನಟಿಸುತ್ತಿದ್ದಾರೆ. 

Follow Us:
Download App:
  • android
  • ios