Asianet Suvarna News Asianet Suvarna News

ನೀವು ಹಾಗೆ ಕೇಳಿದ್ರೆ ಸಿನಿಮಾ ಮಾಡೋದನ್ನೆ ನಿಲ್ಲಿಸುತ್ತೇನೆ; ಅಭಿಮಾನಿಗಳ ಮೇಲೆ ಜೂ.ಎನ್‌ಟಿಆರ್ ಗರಂ

ನೀವು ಹಾಗೆ ಕೇಳಿದ್ರೆ ಸಿನಿಮಾ ಮಾಡೋದನ್ನೆ ನಿಲ್ಲಿಸುತ್ತೇನೆ ಎಂದು ಅಭಿಮಾನಿಗಳ ಮೇಲೆ ಜೂ.ಎನ್‌ಟಿಆರ್ ಗರಂ ಆಗಿದ್ದಾರೆ. 

If You Ask For Update I will Stop Doing Movies says Jr NTR sgk
Author
First Published Mar 18, 2023, 12:52 PM IST

ಗ್ಲೋಬಲ್ ಸ್ಟಾರ್ ಜೂ.ಎನ್ ಟಿ ಆರ್ ಸದ್ಯ ಆಸ್ಕರ್ ಗೆದ್ದ ಸಂತಸದಲ್ಲಿದ್ದಾರೆ. ಜೂ.ಅನ್ ಟಿ ಆರ್ ಮತ್ತು ರಾಮ್ ಚರಣ್ ನಟನೆಯ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಆರ್ ಆರ್ ಆರ್ ತಂಡದ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಅಲ್ಲದೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಮ್ ಚರಣ್ ಸದ್ಯ ಶಂಕರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಜೂ.ಎನ್ ಟಿ ಆರ್ ತಮ್ಮ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೂಎನ್ ಟಿ ಆರ್ ಮುಂದಿನ ಸಿನಿಮಾದ ಅಪ್ ಡೇಟ್ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ  ಮಾಡುತ್ತಲೇ ಇದ್ದಾರೆ. ಪದೇ ಪದೆ ಪೀಡಿಸುತ್ತಿದ್ದ ಅಭಿಮಾನಿಗಳಿಗೆ ಜೂ.ಎನ್ ಟಿ ಆರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಜೂ.ಎನ್ ಟಿ ಆರ್ RRR ಚಿತ್ರದ ಬಳಿಕ 30ನೇ ಸಿನಿಮಾ ಘೋಷಿಸಿದರು. ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಆ್ಕೆಯಾಗಿದ್ದಾರೆ. ಈ ಚಿತ್ರ ಘೋಷಣೆ ಆಗಿದ್ದಷ್ಟೇ, ಈವರೆಗೆ ಚಿತ್ರದ ಶೂಟಿಂಗ್ ಆರಂಭ ಆಗಿಲ್ಲ ಎನ್ನಲಾಗಿದೆ. ಒಂದು ವರ್ಷ ಕಾದರೂ ಸಿನಿಮಾ ಚಿತ್ರೀಕರಣದ ಬಗ್ಗೆ ಯಾವುದೇ ಅಪ್​ಡೇಟ್ ಸಿಗದೇ ಇರುವ ಕಾರಣ ಸಹಜವಾಗಿ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾದ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಪದೇ ಪದೇ ಪ್ರಶ್ನೆ ಎದುರಾಗುತ್ತಿದ್ದ ಕಾರಣ ಜೂ.ಎನ್ ಟಿ ಆರ್ ಸಿಟ್ಟಾಗಿದ್ದಾರೆ. 

ಇತ್ತೀಚಿಗಷ್ಟೆ ಪ್ರಿ ರಿಲೀಸ್ ಈವೆಂಟ್ ಒಂದಕ್ಕೆ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದ ಜೂ.ಎನ್ ಟಿ ಆರ್ ಅವರನ್ನು ಮತ್ತೆ ಪ್ರಶ್ನೆ ಮಾಡಲಾಗಿದೆ. ಇದರಿಂದ ಸಿಟ್ಟಾದ ಜೂ.ಎನ್ ಟಿ ಆರ್ ‘ನೀವು ಹೀಗೆ ನನಗೆ ಅಪ್‌ಡೇಟ್‌ಗಾಗಿ ಕೇಳುತ್ತಿದ್ರೆ ನಾನು ಸಿನಿಮಾ ಮಾಡುತ್ತಿಲ್ಲ ಎಂದು ಹೇಳುತ್ತೇನೆ. ನೀವು ಮತ್ತೆ ಮತ್ತೆ ಅದನ್ನೇ ಕೇಳಿದ್ರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ’ ಎಂದು ಗರಂ ಆದರು. 

ಆಸ್ಕರ್‌ನಲ್ಲಿ ಜೂ.ಎನ್‌ಟಆರ್-ರಾಮ್ ಚರಣ್ ಯಾಕೆ ಡಾನ್ಸ್ ಮಾಡಿಲ್ಲ? ಕಾರಣ ಬಿಚ್ಚಿಟ್ಟ ಆಸ್ಕರ್ ನಿರ್ಮಾಪಕ

ಮತ್ತೆ ಮಾತು ಮುಂದುವರೆಸಿದ ಜೂ.ಎನ್ ಟಿ ಆರ್ ‘ನಾನು ಸಿನಿಮಾ ಮಾಡುವುದನ್ನು ನಿಲ್ಲಿಸಲ್ಲ ಎನ್ನುವುದು ನನಗೂ ಗೊತ್ತು, ಹಾಗೆ ಆಗುವುದಕ್ಕೆ ನೀವು ಬಿಡುವುದೂ ಇಲ್ಲ. ಪದೇಪದೇ ಅಪ್​ಡೇಟ್ ಕೇಳಬೇಡಿ. ಶೀಘ್ರದಲ್ಲೇ ಶೂಟಿಂಗ್ ಶುರುವಾಗುತ್ತದೆ’ ಎಂದು ಜೂ.ಎನ್ ಟಿ ಆರ್ ಹೇಳಿದರು.  ಜೂನಿಯರ್ ಎನ್​ಟಿಆರ್ ಅವರು ಕಳೆದ ಒಂದು ವರ್ಷದಿಂದ ‘ಆರ್​ಆರ್​ಆರ್​’ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ಆರ್ ಆರ್ ಆರ್ ಬಳಿಕ ಮತ್ತೆ ತೆರೆಮೇಲೆ ಬಂದಿಲ್ಲ. ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜೂ.ಎನ್ ಟಿ ಆರ್ 30ನೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಇತ್ತೀಚಿಗಷ್ಟೆ ನಾಯಕಿ ಆಯ್ಕೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಹಾಕಿದ್ದರು. 

ಆಸ್ಕರ್ ಗೆದ್ದ ಬಳಿಕ ಹೈದರಾಬಾದ್‌ಗೆ ಬಂದಿಳಿದ ಜೂ.ಎನ್‌ಟಿಆರ್‌ಗೆ ಅದ್ದೂರಿ ಸ್ವಾಗತ; RRR ಸ್ಟಾರ್ ಹೇಳಿದ್ದೇನು?

ಇದೀಗ ಆರ್ ಆರ್ ಆರ್ ಪ್ರಮೋಷನ್, ಸೆಲೆಬ್ರೇಷನ್ ಮುಗಿಸಿರುವ ಜೂ.ಎನ್ ಟಿ ಆರ್ ಮುಂದಿನ ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸಲಿದ್ದಾರೆ. ಮತ್ತೆ ಅವರನ್ನು ತೆರೆಮೇಲೆ ನೋಡಲು ಇನ್ನೂ ಸ್ವಲ್ಪ ಸಮಯ ಕಾಯಲೇ ಬೇಕು. 

Follow Us:
Download App:
  • android
  • ios