Asianet Suvarna News Asianet Suvarna News

ಉಗ್ರರ ಹೆಸರು ಭೋಲಾ, ಶಂಕರ್! ಹಿಂದೂಗಳ ಪ್ರತಿಭಟನೆಗೆ ಕೊನೆಗೂ ಸತ್ಯ ರಿವೀಲ್​ ಮಾಡಿದ ನೆಟ್​ಫ್ಲಿಕ್ಸ್​

 IC 814: ಕಂದಹಾರ್ ಹೈಜಾಕ್ ಚಲನಚಿತ್ರದಲ್ಲಿ ಭಯೋತ್ಪಾದಕರಿಗೆ ಹಿಂದೂ ಹೆಸರಿಟ್ಟು ವಿವಾದಕ್ಕೆ ಸಿಲುಕಿದ್ದ ನೆಟ್​ಫ್ಲಿಕ್ಸ್​ ಈಗ ಸತ್ಯ ರಿವೀಲ್​ ಮಾಡಿದೆ. ಏನಿದು ವಿಷಯ?
 

IC 814 row Netflix adds real names of hijackers to opening disclaimer after protest from hindus suc
Author
First Published Sep 3, 2024, 6:06 PM IST | Last Updated Sep 3, 2024, 6:06 PM IST

 IC 814: ಕಂದಹಾರ್ ಹೈಜಾಕ್ ಹೆಸರಿನ ಚಲನಚಿತ್ರ ಕಳೆದ ಕೆಲವು ದಿನಗಳಿಂದ ಭಾರಿ ವಿವಾದಕ್ಕೆ ಕಾರಣವಾಗಿದೆ. ಅನುಭವ್ ಸಿನ್ಹಾ ನಿರ್ದೇಶನದ ಈ ಸರಣಿಯು 1999 ರಲ್ಲಿ ಭಯೋತ್ಪಾದಕರು ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಹೃದಯವಿದ್ರಾವಕ ಘಟನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಸತ್ಯಘಟನೆ ಆಧರಿತ ಈ ಚಿತ್ರದಲ್ಲಿರುವ ಭಯೋತ್ಪಾದಕರ ಹೆಸರಿನ ವಿವಾದದಿಂದಾಗಿ ಬೈಕಾಟ್​ ನೆಟ್​ಫ್ಲಿಕ್ಸ್​ ಟ್ರೆಂಡ್​ ಶುರುವಾಗಿತ್ತು. ಅಷ್ಟಕ್ಕೂ ಈ ಚಿತ್ರವು ಕಳೆದ ವಾರ ಬಿಡುಗಡೆಯಾಗಿತ್ತು. ವಿಜಯ್ ವರ್ಮಾ, ದಿಯಾ ಮಿರ್ಜಾ, ಪತ್ರಲೇಖಾ, ಕುಮುದ್ ಮಿಶ್ರಾ ಮತ್ತು ಅರವಿಂದ್ ಸ್ವಾಮಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.  

ಅಷ್ಟಕ್ಕೂ ಇದು ವಿವಾದಕ್ಕೆ ಕಾರಣವಾಗಿದ್ದು, ನೆಟ್​ಫ್ಲಿಕ್ಸ್​ ವಿಮಾನ ಹೈಜಾಕ್​ ಮಾಡಿದ ಭಯೋತ್ಪಾದಕರ ಹೆಸರನ್ನು ಭೋಲಾ, ಶಂಕರ್, ಡಾಕ್ಟರ್, ಬರ್ಗರ್ ಮತ್ತು ಚೀಫ್ ಎಂದು ಇಡಲಾಗಿತ್ತು. ಇದು  ಸಾಂಕೇತಿಕ ಹೆಸರುಗಳಷ್ಟೇ ಎಂದು ಸರಣಿಯಲ್ಲಿ ತೋರಿಸಲಾಗಿತ್ತು. ಇದರ ವಿರುದ್ಧ ಹಲವು ಹಿಂದೂಗಳು ತಿರುಗಿ ಬಿದ್ದಿದ್ದರು. ಬೈಕಾಟ್​ ಟ್ರೆಂಡ್​ ಶುರುವಾಗಿತ್ತು. ನೆಟ್​ಫ್ಲಿಕ್ಸ್​ ಅನ್ನೇ ಬೈಕಾಟ್​ ಮಾಡುವುದಾಗಿ ಸೋಷಿಯಲ್​ ಮೀಡಿಯಾಗಳಲ್ಲಿ ಭಾರಿ ಗಲಾಟೆ ಆಗಿತ್ತು. ಹಿಂದೂಗಳ ಈ ಪರಿಯ ಪ್ರತಿಭಟನೆಯ ಬಳಿಕ ನೆಟ್​ಫ್ಲಿಕ್ಸ್​ ಕೊನೆಗೂ ಎಚ್ಚತ್ತುಕೊಂಡಿದೆ. 

ಮಲಗಿದ್ದ ಶಿಲ್ಪಾ ಶೆಟ್ಟಿ ಮೇಲೆ ಎರಗಿ ತಬ್ಬಿ, ಉರುಳಾಡಿದ ಅಮೆರಿಕನ್​ ನಟ! ಶಾಕಿಂಗ್​ ವಿಡಿಯೋ ವೈರಲ್​

ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನೆಟ್‌ಫ್ಲಿಕ್ಸ್‌ನ ಕಂಟೆಂಟ್‌ನ ಉಪಾಧ್ಯಕ್ಷ ಮೋನಿಕಾ ಶೆರ್ಗಿಲ್, "1999 ರಲ್ಲಿ ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814 ರ ಅಪಹರಣದ ಬಗ್ಗೆ ತೋರಿಸಲಾಗಿರುವ ಸಿನಿಮಾದಲ್ಲಿ ನೈಜ ಹೆಸರುಗಳನ್ನು ಮರೆಮಾಚಲಾಗಿತ್ತು. ಇದೀಗ ಅಪ್​ಡೇಟ್​ ಮಾಡಲಾಗಿದ್ದು, ನಿಜವಾದ ಭಯೋತ್ಪಾದಕರ ಹೆಸರುಗಳನ್ನು ತೋರಿಸಲಾಗಿದೆ ಎಂದು ಹೇಳಿದೆ. ವಾಸ್ತವದಲ್ಲಿ, ಅಪಹರಣಕಾರರನ್ನು ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ, ಅಹ್ಮದ್ ಖಾಜಿ, ಜಹೂರ್ ಮಿಸ್ತ್ರಿ ಮತ್ತು ಶಾಕಿರ್ ಎಂದು ಹೆಸರಿಸಲಾಗಿದೆ.   

ಇನ್ನು ಕಂದಹಾರ್​ ಹೈಜಾಕ್​ ಕುರಿತು ಹೇಳುವುದಾದರೆ, ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814 ಅನ್ನು ಸಾಮಾನ್ಯವಾಗಿ IC 814 ಎಂದು ಕರೆಯಲಾಗುತ್ತದೆ, ಇದು ಇಂಡಿಯನ್ ಏರ್‌ಲೈನ್ಸ್ ಏರ್‌ಬಸ್ A300 ಆಗಿದ್ದು , ಇದನ್ನು  24 ಡಿಸೆಂಬರ್ 1999 ರಂದು ಅಪಹರಿಸಲಾಗಿತ್ತು.   ವಿಮಾನದಲ್ಲಿ ಕ್ಯಾಪ್ಟನ್ ದೇವಿ ಶರಣ್, ಫಸ್ಟ್ ಆಫೀಸರ್ ರಾಜಿಂದರ್ ಕುಮಾರ್ ಮತ್ತು ಫ್ಲೈಟ್ ಇಂಜಿನಿಯರ್ ಅನಿಲ್ ಕುಮಾರ್ ಜಗ್ಗಿಯಾ ಸೇರಿದಂತೆ 179 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಸೇರಿದಂತೆ 190 ಪ್ರಯಾಣಿಕರು ಇದ್ದರು. ಕೊನೆಗೆ, ಅಪಹರಣಕಾರರು ತೀವ್ರವಾಗಿ ಗಾಯಗೊಂಡ ಪುರುಷ ಒತ್ತೆಯಾಳು ಸೇರಿದಂತೆ 27 ಪ್ರಯಾಣಿಕರನ್ನು ಬಿಡುಗಡೆ ಮಾಡಿದರು, ಅವರು ಅಪಹರಣಕಾರರಿಂದ ಅನೇಕ ಬಾರಿ ಇರಿದಿದ್ದರು.  ಭಾರತೀಯ ಕಾರಾಗೃಹಗಳಲ್ಲಿ ಭಯೋತ್ಪಾದನೆ ಆರೋಪದಡಿಯಲ್ಲಿ ಬಂಧಿತರಾಗಿರುವ ವಿವಿಧ ಪಾಕಿಸ್ತಾನಿ ಕೈದಿಗಳನ್ನು ಬಿಡುಗಡೆಗೊಳಿಸುವುದು ಅಪಹರಣದ ಉದ್ದೇಶವಾಗಿತ್ತು. ಇದರ ಸುತ್ತ ಕಥೆ ಸುತ್ತತ್ತದೆ! 
 

ಮದುಮಗಳಿಗೆ ಆಶೀರ್ವಾದ ಮಾಡಬೇಕೆ? ಹಾಗಿದ್ರೆ ಅವಳ ಮೇಲೆ ಉಗುಳಿ ಹೋಗಿ! ಇದೆಲ್ಲಿ ಗೊತ್ತಾ?

Latest Videos
Follow Us:
Download App:
  • android
  • ios