Asianet Suvarna News Asianet Suvarna News

Kylian Mbappe:ಸೌದಿ ಕ್ಲಬ್‌ ರಾಜಾತಿಥ್ಯ ತಿರಸ್ಕರಿಸಿ ಎಂಬಾಪೆ ಕಳೆದುಕೊಂಡಿದ್ದೇನು?

ಸೌದಿ ಅರೇಬಿಯಾದ ಅಲ್- ಹಿಲಾಲ್ ಆಫರ್ ತಿರಸ್ಕರಿಸಿದ ಎಂಬಾಪೆ

What luxuries did Kylian Mbappe miss by not going to Saudi Arabia Al Hilal kvn
Author
First Published Jul 29, 2023, 11:50 AM IST

ಪ್ಯಾರಿಸ್(ಜು.29): ಸೌದಿ ಅರೇಬಿಯಾದ ಅಲ್- ಹಿಲಾಲ್ ತಂಡದ ವಿಶ್ವ ದಾಖಲೆಯ 332 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 2.720 ಕೋಟಿ ರು.) ಆಫರ್ ಅನ್ನು ಫ್ರಾನ್‌ಸ್ನ ತಾರಾ ಫುಟ್ಬಾಲಿಗ ಕಿಲಿಯಾನ್ ಎಂಬಾಪೆ ಏಕೆ ಒಪ್ಪಿಕೊಳ್ಳಲಿಲ್ಲ ಎನ್ನುವ ಬಗ್ಗೆ ಸಾಮಾಜಿಕ ತಾಣಗ ಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದರ ಜೊತೆಗೆ ಎಂಬಾಪೆ ಆಫರ್ ತಿರಸ್ಕರಿಸಿ ಕಳೆದುಕೊಂಡಿದ್ದೇನು ಎನ್ನುವ ಕುತೂಹಲವೂ ಹಲವರಲ್ಲಿ ಇದೆ. 

ಸೌದಿಯಲ್ಲೀಗ ತಾರಾ ಫುಟ್ಬಾಲಿಗರನ್ನು ರಾಜರಂತೆ ಕಾಣಲಾಗುತ್ತಿದೆ. ಬ್ರಿಟನ್‌ನ ಪ್ರತಿಷ್ಠಿತ ಪತ್ರಿಕೆಯೊಂದು ಇತ್ತೀಚೆಗೆ ಸೌದಿ ಲೀಗ್‌ನ ಅಲ್-ನಸ್‌ರ್ ತಂಡ ಸೇರಿದ ಕ್ರಿಸ್ಟಿಯಾನೋ ರೊನಾಲ್ಡೋಗೆ ಏನೆಲ್ಲಾ ಸಿಕ್ಕಿತ್ತು, ಅದಕ್ಕಿಂತ ಹೆಚ್ಚು ಎಂಬಾಪೆಗೆ ಸಿಗುತಿತ್ತು ಎಂದು ವಿವರಿಸಿದೆ. ರೊನಾಲ್ಡೋಗೆ ವಾರ್ಷಿಕ 200 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 1644 ಕೋಟಿ ರು.) ವೇತನದ ಜೊತೆಗೆ ಸೌದಿಗೆ ಕಾಲಿಡುತ್ತಿದ್ದಂತೆ ಕೋಟ್ಯಂತರ ರು. ಬೆಲೆ ಬಾಳುವ 18 ಕ್ಯಾರಟ್ ಚಿನ್ನದ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆ ಕೈ ಗಡಿಯಾರದಲ್ಲಿ 338 ಅತ್ಯಮೂಲ್ಯ ರತ್ನದ ಕಲ್ಲುಗಳನ್ನು ಸಹ ಇವೆ ಎನ್ನಲಾಗಿದೆ. 

ಆರಂಭದಲ್ಲಿ ರೊನಾಲ್ಡೋ ಹಾಗೂ ಕುಟುಂಬ ಉಳಿದುಕೊಂಡಿದ್ದ ಹೋಟೆಲ್‌ನ ಒಂದು ದಿನದ ಬಾಡಿಗೆ 26 ಲಕ್ಷ ರು. ಅಂತೆ. ಬಳಿಕ ಅವರಿಗೆ ಸಾವಿರಾರು ಚದರ ಅಡಿಯಲ್ಲಿ ನಿರ್ಮಿಸಿರುವ ಭವ್ಯ ಬಂಗಲೆ ನೀಡಲಾಯಿತು. ರೊನಾಲ್ಡೋ ವಾಸವಿರುವ ಮನೆಗೆ ನೂರಾರು ಭದ್ರತಾ ಸಿಬ್ಬಂದಿಗಳಿದ್ದು, ಮನೆಯ ಆವರಣದಲ್ಲೇ ಅಂಗಡಿ, ರೆಸ್ಟೋರೆಂಟ್‌ಗಳು, ಜಿಮ್ ಎಲ್ಲವೂ ಇದೆ. ಇನ್ನು ರೊನಾಲ್ಡೋ ಹಾಗೂ ಕುಟುಂಬದ ಓಡಾಟಕ್ಕೆ ಪ್ರತ್ಯೇಕ ವಿಶೇಷ ವಿಮಾನವನ್ನೂ ತಂಡ ಒದಗಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಂಬಾಪೆಗೆ ರೊನಾಲ್ಡೋಗಿಂತ ದೊಡ್ಡ ಮೊತ್ತದ ವೇತನ ಆಫರ್ ಮಾಡಲಾಗಿತ್ತು. ಅವರಿಗೆ ರೊನಾಲ್ಡೋಗಿಂತ ಹೆಚ್ಚಿನ ಐಷಾರಾಮಿ ಸೌಕರ್ಯಗಳು ಸಿಗುತ್ತಿದ್ದವು ಎನ್ನಲಾಗಿದೆ.  

ಸೆಮೀಸ್‌ಗೇರಿದ ಲಕ್ಷ್ಯ ಸೆನ್

ಟೋಕಿಯೋ: ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಎಚ್.ಎಸ್. ಪ್ರಣಯ್ ಹಾಗೂ ಡಬಲ್‌ಸ್ ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಯ ಅಭಿಯಾನಗೊಂಡಿದೆ. ವಿಶ್ವ ನಂ.13 ಸೇನ್, ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಳೀಯ ಆಟಗಾರ ಕೊಕಿ ವಟನಾಬೆ ವಿರುದ್ಧ 21-15, 21-19 ರಲ್ಲಿ ಗೆದ್ದು ಸತತ 3ನೇ ಟೂರ್ನಿಯಲ್ಲಿ ಸೆಮೀಸ್‌ಗೇರಿದರು. 

ಕೆನಡಾ ಹಾಗೂ ಅಮೆರಿಕ ಓಪನ್‌ಗಳಲ್ಲೂ ಸೇನ್ ಉಪಾಂತ್ಯ ಪ್ರವೇಶಿಸಿದ್ದರು. ಸೆಮೀಸ್ ನಲ್ಲಿ ಲಕ್ಷ್ಯ, ಇಂಡೋನೇಷ್ಯಾದ ಅನು ಭವಿ ಶಟ್ಲರ್ ಜೊನಾಥನ್ ಕ್ರಿಸ್ಟಿ ವಿರುದ್ಧ ಸೆಣಸಲಿದ್ದಾರೆ. ವಿಶ್ವ ನಂ.10 ಪ್ರಣಯ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.1 ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 21-19, 18-21, 8-21 ಗೇಮ್ ಗಳಲ್ಲಿ ಪರಾಭವಗೊಂಡರು. 

ಈ ವರ್ಷದ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಸಾತ್ವಿಕ್ ಹಾಗೂ ಚಿರಾಗ್, ಒಲಿಂಪಿಕ್‌ಸ್ ಚಾಂಪಿಯನ್ನರಾದ ಚೈನೀಸ್ ತೈಪೆಯ ಲೀ ಯಾಂಗ್-ವಾಂಗ್ ಚೀ-ಲಾನ್ ವಿರುದ್ಧ 15-21, 25-23, 16-21ರಲ್ಲಿ ವೀರೋಚಿತ ಸೋಲುಂಡರು. ಸತತ 12 ಪಂದ್ಯ ಗೆದ್ದಿದ್ದ ಸಾತ್ವಿಕ್-ಚಿರಾಗ್‌ರ ಜಯದ ಓಟಕ್ಕೆ ತೆರೆಬಿತ್ತು.  

ರಾಷ್ಟ್ರೀಯ ಕಾರ್‌ ರ‍್ಯಾಲಿಗೆ ದಾಖಲೆಯ 76 ತಂಡ..!

ಕೊಯಮತ್ತೂರು: ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಶಿಪ್(ಐಎನ್‌ಆರ್‌ಸಿ)ನ 3ನೇ ಸುತ್ತು ರ್ಯಾಲಿ ಆಫ್ ಕೊಯಮತ್ತೂರು ಶನಿವಾರ ಹಾಗೂ ಭಾನುವಾರ (ಜು.29, 30) ನಡೆಯಲಿದ್ದು, ಒಟ್ಟು 76 ತಂಡಗಳು ಸ್ಪರ್ಧಿಸಲಿವೆ. ರಾಷ್ಟ್ರೀಯ ಚಾಂಪಿ ಯನ್‌ಶಿಪ್‌ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಾರ್‌ಗಳು ಸ್ಪರ್ಧಿಸುತ್ತಿರುವುದು ಇದೇ ಮೊದಲು. 2023ರ ಐಎನ್‌ಆರ್‌ಸಿ ಚಾಂಪಿಯನ್‌ಶಿಪ್‌ನ ಮೊದಲ ಸುತ್ತು ಚೆನ್ನೈನಲ್ಲಿ, 2ನೇ ಸುತ್ತು ಅರುಣಾಚಲದಲ್ಲಿ ನಡೆದಿತ್ತು. 4ನೇ ಸುತ್ತು ಹೈದರಾಬಾದ್, 5ನೇ ಸುತ್ತು ಬೆಂಗಳೂರಲ್ಲಿ ನಡೆಯಲಿದೆ. 6ನೇ ಹಾಗೂ ಅಂತಿಮ ಸುತ್ತಿಗೆ ಸ್ಥಳ ಇನ್ನೂ ನಿಗದಿಯಾಗಿಲ್ಲ.  
 

Follow Us:
Download App:
  • android
  • ios