'ಮೀಡಿಯಾ ಫೊಟೋ ಕ್ಲಿಕ್ಕಿಸಿದ್ರೆ ಜಂಭ ಪಡ್ಬೇಡಿ': ಮಕ್ಕಳಿಗೆ ರಿತೇಶ್ ಹೇಳೋದಿಷ್ಟು

  • ಸ್ಟಾರ್‌ಗಳಿಗೆ ಮಕ್ಕಳನ್ನು ಕ್ಯಾಮೆರಾದಿಂದ ಅಡಗಿಸೋ ಕಷ್ಟ
  • ಗುಂಪು ಗುಂಪಾಗಿ ಬಂದು ಫೋಟೊ ಕ್ಲಿಕ್ಕಿಸಿದರೆ ಮಕ್ಕಳು ತಾವು ಸ್ಪೆಷಲ್ ಅಂದುಕೊಳ್ಳೋದು ಸಹಜ
  • ಇದಕ್ಕೆ ಮಕ್ಕಳಿಗೆ ರಿತೇಶ್ ಹೇಳ್ಕೊಡೋ ಪಾಠ ಏನು ಗೊತ್ತಾ?
I teach my kids not to feel special if paparazzi click their pics says Riteish Deshmukh dpl

ಮಾಧ್ಯಮಗಳು ಸ್ಟಾರ್ ಕಿಡ್‌ಗಳ ಫೋಟೋ ಬಹಳಷ್ಟು ವೈರಲ್ ಮಾಡುತ್ತವೆ. ಪಾಪ್ಪರಾಜಿಗಳಂತೂ ಸ್ಟಾರ್ ಮಕ್ಕಳ ಹಿಂದೆಯೇ ಇರುತ್ತಾರೆ. ತೈಮೂರ್ ಅಂತೂ ಪಪ್ಪರಾಜಿಗಳ ಎವರಿಡೇ ಕ್ಲಿಕ್. ಹೀಗೆಯೇ ಎಲ್ಲ ಸ್ಟಾರ್‌ಗಳೂ ತಮ್ಮ ಮಕ್ಕಳನ್ನು ಕ್ಯಾಮೆರಾದಿಂದ ಅಡಗಿಸೋ ಒಂದು ಸವಾಲು ಎದುರಿಸುತ್ತಾರೆ. ನಟ ರಿತೇಶ್ ಹಾಗೂ ಜೆನಿಲಿಯಾ ಕೂಡ ಇದಕ್ಕೆ ಹೊರತಲ್ಲ. ಕಳೆದ ಕೆಲವು ವರ್ಷಗಳಲ್ಲಿ, ಪಾಪರಾಜಿಗಳು ಸೆಲೆಬ್ರಿಟಿಗಳ ಜೀವನದ ಪ್ರಮುಖ ಭಾಗವಾಗಿದ್ದಾರೆ. ಜೆನಿಲಿಯಾ ದೇಶಮುಖ್ ಮತ್ತು ರಿತೇಶ್ ದೇಶಮುಖ್ ಇದಕ್ಕೆ ಹೊರತಲ್ಲ. ದಂಪತಿಗಳು ಆಗಾಗ ಪಾಪರಾಜಿಗಳಿಗೆ ಪೋಸ್ ನೀಡುತ್ತಾರೆ. ಕ್ಯಾಮೆರಾಗಳು ಅವರ ಮಕ್ಕಳಾದ ರಿಯಾನ್ ದೇಶಮುಖ್ ಮತ್ತು ರಹೈಲ್ ದೇಶಮುಖ್ ಅವರ ಫೋಟೋ ಕೂಡಾ ವೈರಲ್ ಆಗುತ್ತವೆ.

ಜೆನಿಲಿಯಾ ಮತ್ತು ರಿತೀಶ್ ಅವರ ಮಕ್ಕಳಿಗೆ ಪಾಪರಾಜಿ ಬಗ್ಗೆ ತಿಳಿದಿದ್ದರೂ, ಈ ಸ್ಟಾರ್ ಜೋಡಿ ಎಲ್ಲಿ ಮಕ್ಕಳ ಫೋಟೋ ತೆಗೆಯಬಹುದು ಮತ್ತು ಎಲ್ಲಿ ಫೋಟೊ ತೆಗೆಯಬಾರದು ಎಂಬುದರ ಮೇಲೆ ಕಂಡೀಷನ್ ಹಾಕಿದ್ದಾರೆ. ಅಂತಹ ಒಂದು ಸ್ಥಳವೆಂದರೆ ಅವರ ಶಾಲೆ.

ಬ್ಯೂಟಿ ಮತ್ತು ಸ್ಟೈಲ್‌ ಎರಡರಲ್ಲೂ ಶಾರುಖ್‌ ಮಗಳಿಗಿಂತ ಪತ್ನಿನೇ ಮುಂದೆ!

ಮಕ್ಕಳು ಚಿಕ್ಕದಾಗಿದ್ದಾಗ, ಶಾಲೆಗಳು ಇದ್ದಾಗ, ಒಂದೆರಡು ಛಾಯಾಗ್ರಾಹಕರು ರಿತೇಶ್ ಅಥವಾ ನನ್ನನ್ನು ಕ್ಲಿಕ್ ಮಾಡಲು ಬರುತ್ತಿದ್ದರು. ನೀವು ನನ್ನಿಂದ ಎಷ್ಟು ಫೋಟೋ ಬೇಕಾದರೂ ಕ್ಲಿಕ್ ಮಾಡಿ. ಆದರೆ ಇತರ ಮಕ್ಕಳಿಗೂ ಮತ್ತು ನಮ್ಮ ಮಕ್ಕಳಿಗೂ ಇದು ಸರಿಯಾಗುವುದಿಲ್ಲ. ಶಾಲೆಯ ಸಮಯದಲ್ಲಿ ಅದು ನಮ್ಮ ಸ್ಥಳವಲ್ಲ ಎಂದಿದ್ದಾರೆ.

ಅವರು ಶಾಲೆಗೆ ಬಂದಾಗ, ನಾನು ಬೇರೆಲ್ಲಿಯಾದರೂ ಕ್ಲಿಕ್ ಮಾಡುವಂತೆ ವಿನಂತಿಸಿದೆ. ಶಾಲೆಗೆ ಬರಬೇಡಿ ಎಂದೆ. ಪಪ್ಪಾರಜಿಗಳು ಅದನ್ನು ಫಾಲೋ ಮಾಡಿದರು. ಅವರು ಎಂದಿಗೂ ಶಾಲೆಗೆ ಬರಲಿಲ್ಲ. ಅದಕ್ಕಾಗಿ ನಾನು ಅವರನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಮಕ್ಕಳು ಕ್ಯಾಮರಾವನ್ನು ಕಂಡಾಗ ತಮ್ಮನ್ನು ತಾವು ವಿಶೇಷ ಎಂದುಕೊಳ್ಳಬಾರದು ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಏಕೆಂದರೆ ಅವರ ಫೋಟೋ ಕ್ಲಿಕ್ಕಿಸಲು ಅಲ್ಲಿ ಯಾರಾದರೂ ಇದ್ದರೆ ಇಂದು ಅವರು ಇದ್ದಾರೆ, ನಾಳೆ ಅವರು ಇಲ್ಲದಿರಬಹುದು. ಅವರು ಅಲ್ಲಿರುವಾಗ, ಗೌರವಿಸಿ.. ನಿಮ್ಮ ಫೋಟೋ ಕ್ಲಿಕ್ ಮಾಡಲು ಜನರು ಅಲ್ಲಿ ಇರುತ್ತಾರೆ ಎಂದು ನಿರೀಕ್ಷಿಸಬೇಡಿ ಎಂದು ಮಕ್ಕಳಿಗೆ ಮನವರಿಕೆ ಮಾಡುತ್ತಾರೆ ಈ ಬಾಲಿವುಡ್ ಜೋಡಿ.

 

Latest Videos
Follow Us:
Download App:
  • android
  • ios