ಬ್ಯೂಟಿ ಮತ್ತು ಸ್ಟೈಲ್ ಎರಡರಲ್ಲೂ ಶಾರುಖ್ ಮಗಳಿಗಿಂತ ಪತ್ನಿನೇ ಮುಂದೆ!
ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಜನಪ್ರಿಯತೆಯಿಂದ ದೂರವಿರಬಹುದು. ಆದರೆ ಬ್ಯೂಟಿ ಮತ್ತು ಸ್ಟೈಲ್ ವಿಷಯದಲ್ಲಿ ಆಕೆ ಬಾಲಿವುಡ್‌ನ ಯಾವುದೇ ಹೀರೋಯಿನ್‌ಗಿಂತ ಕಡಿಮೆಯಿಲ್ಲ. ಕೆಲವೊಮ್ಮೆ, ಗೌರಿ ಖಾನ್ ತಮ್ಮ ಲುಕ್‌ನಿಂದ ಅವರ 21 ವರ್ಷದ ಮಗಳು ಸುಹಾನಾ ಖಾನ್‌ಗೂ ಬದಿ ಮಾಡಿದ್ದಾರೆ. ಇಲ್ಲಿವೆ ಅಮ್ಮ ಮಗಳ ಕೆಲವು ಫೋಟೋಗಳು.
ಕೆಲವು ದಿನಗಳ ಹಿಂದೆ ಸೆರ್ಬಿಯಾದ ಬ್ರೆಲ್‌ಗ್ರೇಡ್‌ನಲ್ಲಿ ಗೌರಿ ಖಾನ್ ಹಾಲಿಡೇಯಲ್ಲಿದ್ದರು. ಈ ಸಮಯದಲ್ಲಿ, ಗೌರಿ ಮತ್ತು ಅವರ ಮಗಳು ಸುಹಾನಾ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಅದರಲ್ಲಿ 50ನೇ ವಯಸ್ಸಿನಲ್ಲಿಯೂ ಗೌರಿ ಮಗಳು ಸುಹಾನಾಗಿಂತ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸುತ್ತಾರೆ.
ಗೌರಿ ಖಾನ್ ಬೆಲ್‌ಗ್ರೇಡ್, ಸೆರ್ಬಿಯಾದಲ್ಲಿ ಹೀಗೆ ಕಾಣಿಸಿಕೊಂಡರು. ಈ ಸಮಯದಲ್ಲಿ, ಸುಹಾನಾ ಕಟೌಟ್ ಡ್ರೆಸ್ ಧರಿಸಿದ್ದರೆ, ಗೌರಿ ಮಿಲಿಟರಿ ಗ್ರೀನ್ ಕಲರ್ ಹಾಟ್ ಶಾರ್ಟ್ ಪ್ಯಾಂಟ್ ಧರಿಸಿದ್ದರು. ಇದರ ಜೊತೆಯಲ್ಲಿ, ಅದೇ ಬಣ್ಣದ ಜಾಕೆಟ್ ಜೊತೆ ಬಿಳಿ ಬಣ್ಣದ ಟಾಪ್ ಧರಿಸಿದ್ದರು. ಈ ಲುಕ್‌ನಲ್ಲಿ ಗೌರಿ ಖಾನ್ ತುಂಬಾ ಕೂಲ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.
ಸುಹಾನಾ ಖಾನ್ ಯಾವಾಗಲೂ ತಮ್ಮ ಬೋಲ್ಡ್ ಲುಕ್‌ನಿಂದ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಆಕೆಯ ತಾಯಿ ಗೌರಿ 50 ನೇ ವಯಸ್ಸಿನಲ್ಲಿಯೂ ಯಾರಿಗೂ ಕಡಿಮೆಯಿಲ್ಲ. ಕೆಲವೊಮ್ಮೆ, ಬೋಲ್ಡ್‌ನೆಸ್ ವಿಷಯದಲ್ಲಿ ಗೌರಿ ಮಗಳು ಸುಹಾನಾಗಿಂತ ಹೆಚ್ಚೇ ಎನ್ನಬಹುದು.
ಶಾರುಖ್ ಅವರ ಪತ್ನಿ ಗೌರಿ ಖಾನ್ ಉತ್ತಮ ಡಿಸೈನರ್ ಮಾತ್ರವಲ್ಲ. ಜೊತೆಗೆ ಒಳ್ಳೆಯ ಅರ್ಕಿಟೆಕ್ಟ್ ಕೂಡ ಹೌದು. ಕೆಲವು ದಿನಗಳ ಹಿಂದೆ, ಆರ್ಕಿಟೆಕ್ಚರಲ್ ಡೈಜೆಸ್ಟ್ ಇಂಡಿಯಾ ಹೆಸರಿನ ಕಂಪನಿಯು 'AD100' ಪಟ್ಟಿಯಲ್ಲಿ ಗೌರಿ ಅವರ ಹೆಸರು ಸೇರಿಸಿತ್ತು ಮತ್ತು ಆವಾರ್ಡ್ ಸಹ ನೀಡಿತು.
ಶಾರುಖ್ ಖಾನ್ ಪುತ್ರಿ ಸುಹಾನಾ ಇನ್ನೂ ಓದುತ್ತಿದ್ದಾರೆ. ಜೊತೆಗೆ ಆ್ಯಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದಾರೆ. ಹಲವು ಬಾರಿ ಸುಹಾನಾರ ಎಕ್ಸ್‌ಪ್ರೆಶನ್ ನೋಡಿದಾಗ, ಅವರು ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ಬರಲು ತಯಾರಿ ನಡೆಸುತ್ತಿರುವಂತೆ ತೋರುತ್ತದೆ.
ಸುಹಾನಾ 'ದಿ ಗ್ರೇ ಪಾರ್ಟ್ ಆಫ್ ಬ್ಲೂ' ಕಿರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶಾರ್ಟ್ ಸಿನಿಮಾದಲ್ಲಿ ಸುಹಾನಾ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಫ್ಯಾನ್ಸ್ ಸುಹಾನಾಳ ಬಾಲಿವುಡ್ ಎಂಟ್ರಿಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಶಾರುಖ್ 36 ವರ್ಷಗಳ ಹಿಂದೆ ದೆಹಲಿಯ ಪಾರ್ಟಿಯಲ್ಲಿ ಗೌರಿಯನ್ನುಮೊದಲು ನೋಡಿದರು. ಮೊದಲ ನೋಟದಲ್ಲೇ ಗೌರಿಗೆ ತಮ್ಮ ಹೃದಯವನ್ನು ನೀಡಿದ್ದರು ಶಾರುಖ್. ಆ ಸಮಯದಲ್ಲಿ ಶಾರುಖ್ ಗೆ 19 ವರ್ಷ, ಗೌರಿಗೆ ಕೇವಲ 14 ವರ್ಷ.
ಸುಮಾರು 9 ವರ್ಷಗಳ ಕಾಲ ಡೇಟಿಂಗ್ ಮಾಡಿದ ಗೌರಿ ಮತ್ತು ಶಾರುಖ್ ಅಕ್ಟೋಬರ್ 25, 1991 ರಂದು ವಿವಾಹವಾದರು. ದಂಪತಿಗೆ ಮೂವರು ಮಕ್ಕಳು ಆರ್ಯನ್, ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಮ್ ಖಾನ್.