Asianet Suvarna News Asianet Suvarna News

ನಾನು ಸಿನಿಮಾ ಮಾಡೋದು ಹಣಕ್ಕಾಗಿ, ವಿಮರ್ಶಕರ ಮೆಚ್ಚುಗೆಗೆ ಅಲ್ಲ; RRR ನಿರ್ದೇಶಕ ರಾಜಮೌಳಿ

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಭಾರತಕ್ಕೆ ವಾಪಾಸ್ ಆಗಿದ್ದಾರೆ.  ಅಮರಿಕಾದಲ್ಲಿ ಮಾತನಾಡಿದ ರಾಜಮೌಳಿ ನಾನು ಹಣಕ್ಕಾಗಿ ಸಿನಿಮಾ ಮಾಡುವುದು' ಎಂದು ಹೇಳಿದ್ದಾರೆ.

I make films for money not for critical acclaim says RRR director SS Rajamouli sgk
Author
First Published Jan 20, 2023, 11:34 AM IST

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿರುವ ರಾಜಮೌಳಿ ಅಮೆರಿಕಾ ಪ್ರವಾಸದ ಬಳಿಕ ತವರಿಗೆ ಮರಳಿದ್ದಾರೆ. ಹಾಲಿವುಡ್ ನಲ್ಲಿ ರಾಜಮೌಳಿ ಅನೇಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ರಾಜಮೌಳಿ, 'ನಾನು  ಹಣಕ್ಕಾಗಿ ಸಿನಿಮಾ ಮಾಡುವುದು' ಎಂದು ಹೇಳಿದ್ದಾರೆ. ರಾಜಮೌಳಿ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಂದರ್ಶನವೊಂದರಲ್ಲಿ ಆರ್ ಆರ್ ಆರ್ ನಿರ್ದೇಶಕ, 'ನಾನು ಹಣಕ್ಕಾಗಿ ಸಿನಿಮಾ ಮಾಡುವುದು, ನಾನು ಪ್ರೇಕ್ಷಕರಿಗಾಗಿ ಹಣ ಮಾಡುತ್ತೇನೆ. ನಾನು ವಿಮರ್ಶಕರ ಮೆಚ್ಚುಗೆ ಪಡೆಯಲು ಸಿನಿಮಾ ಮಾಡಲ್ಲ. ಆರ್ ಆರ್ ಆರ್ ಕಮರ್ಷಿಯಲ್ ಸಿನಿಮಾ. ನನ್ನ ಸಿನಿಮಾ ಕಮರ್ಷಿಯಲಿ ಹಿಟ್ ಆದರೆ ನನಗೆ ತುಂಬಾ ಖುಷಿ. ಪ್ರಶಸ್ತಿಗಳು ಇದರ ವಿಸ್ತರೆಯಾಗಿದೆ. ಇದು ನನ್ನ ತಂಡದ ಕಠಿಣ ಶ್ರಮವಾಗಿದೆ. ತುಂಬಾ ಖುಷಿಯಾಗುತ್ತಿದೆ' ಎಂದು ಹೇಳಿದ್ದಾರೆ.  

ಪಾಶ್ಚಿಮಾತ್ಯರ ಸ್ಟೈಲಿನಲ್ಲಿ ಜೂ.ಎನ್‌ಟಿಆರ್ ಮಾತು; ಟ್ರೋಲ್‌ಗೆ RRR ಸ್ಟಾರ್ ಹೇಳಿದ್ದೇನು?

ಆಸ್ಕರ್ ಅಂಗಳದಲ್ಲಿರುವ ಚೆಲ್ಲೋ ಶೋ ಬಗ್ಗೆ ರಾಜಮೌಳಿ ಮಾತು 

ಭಾರತಿಂದ ಅಧಿಕೃತವಾಗಿ ಆಸ್ಕರ್‌ಗೆ ಪ್ರವೇಶ ಪಡೆದಿರುವ ಚೆಲ್ಲೋ ಶೋ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ.  RRR ಹಿಂದಿಕ್ಕಿ ಭಾರತದಿಂದ ಆಸ್ಕರ್‌ಗೆ ಚೆಲ್ಲೋ ಶೋ ಎಂಟ್ರಿ ಕೊಟ್ಟ ಬಗ್ಗೆ ಮಾತನಾಡಿರುವ ರಾಜಮೌಳಿ, ಇದು ಬೇಸರ ಆಗಿದೆ ಆಧರೆ ಅದೂ ಕೂಡ ಭಾರತೀಯ ಸಿನಿಮಾ ಎನ್ನುವ ಖುಷಿ ಇದೆ ಎಂದು ಹೇಳಿದರು. 

'ಹೌದು, ಇದು ಬೇಸರವಾಗಿದೆ. ಆದರೆ ಏಕೆ ಹೀಗಾಯಿತು ಎಂದು ಕುಳಿತು ಯೋಚಿಸುವವರು ನಾವಲ್ಲ. ಏನೇ ಆದರೂ ಮುಂದುವರಿಸಬೇಕು. ಆದರೆ ನಾನು ಸಂತೋಷಪಡುತ್ತೇನೆ ಏಕೆಂದರೆ ಚೆಲ್ಲೋ ಶೋ ಸಹ ಭಾರತೀಯ ಚಲನಚಿತ್ರವಾಗಿದೆ. ಅದು ಆಸ್ಕರ್‌ಗೆ ಆಯ್ಕೆಯಾಗಿದೆ.  ಸಹಜವಾಗಿ, ಎಲ್ಲರಿಗೂ RRRಗೆ ದೊಡ್ಡ ಅವಕಾಶವಿದೆ ಎಂದು ತಿಳಿದಿತ್ತು. ಇಲ್ಲಿ (US ನಲ್ಲಿ) RRR ದೊಡ್ಡ ಅವಕಾಶವಿದೆ ಎಂದು ಎಲ್ಲರೂ ಭಾವಿಸಿದರು' ಎಂದು ರಾಜಮೌಳಿ ಹೇಳಿದರು. 

ರಾಜಮೌಳಿ RRRಗೆ ಜೇಮ್ಸ್ ಕ್ಯಾಮರೂನ್ ಫಿದಾ; ಸಿನಿಮಾ ನೋಡಿ 'ಅವತಾರ್' ನಿರ್ದೇಶಕ ಹೇಳಿದ್ದೇನು?

ಗೋಲ್ಡನ್ ಗ್ಲೋಬ್ಸ್‌ನಲ್ಲಿ 2 ಪ್ರಶಸ್ತಿ ಗೆದ್ದ RRR 

ಗೋಲ್ಡನ್ ಗ್ಲೋಬ್ಸ್‌ನಲ್ಲಿ ಆರ್ ಆರ್ ಆರ್ ಸಿನಿಮಾತಂಡ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಹಾಡು ಮತ್ತು ಅತ್ಯುತ್ತಮ ಸಿನಿಮಾ ವಿದೇಶಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ನಾಟು ನಾಟು  ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಎಂ ಎಂ ಕೀರವಾಣಿ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಗೋಲ್ಡನ್ ಗ್ಲೋಬ್ಸ್ ಬಳಿಕ ರಾಜಮೌಳಿ ಮತ್ತು ತಂಡ ಅಂತಾರಾಷ್ಟ್ರೀಯ ಮಟ್ಟದ ಗಣ್ಯರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್,  ಸ್ಟೀವನ್ ಸ್ಪೀಲ್‌ಬರ್ಗ್ ಸೇರಿದಂತೆ ಅನೇಕನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಆರ್ ಆರ್ ಆರ್ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಬಗ್ಗೆಯೂ ರಾಜಮೌಳಿ ಹೇಳಿದ್ದಾರೆ. ಸದ್ಯ ಗೋಲ್ಡನ್ ಗ್ಲೋಬ್ಸ್ ಗೆದ್ದಿರುವ ಆರ್ ಆರ್ ಆರ್ ಆಸ್ಕರ್ ಮೇಲೆ ಕಣ್ಣಿಟ್ಟಿದೆ. 

 

Follow Us:
Download App:
  • android
  • ios