ಪಾಶ್ಚಿಮಾತ್ಯರ ಸ್ಟೈಲಿನಲ್ಲಿ ಜೂ.ಎನ್‌ಟಿಆರ್ ಮಾತು; ಟ್ರೋಲ್‌ಗೆ RRR ಸ್ಟಾರ್ ಹೇಳಿದ್ದೇನು?
ಜೂ.ಎನ್ ಟಿ ಆರ್ ಗೋಲ್ಡನ್ ಗ್ಲೋಬ್ಸ್ ಕಾರ್ಪೆಟ್‌ನಲ್ಲಿ ಮಾತನಾಡಿದ ಸ್ಟೈಲ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಟ್ರೋಲ್ ಬಗ್ಗೆ ಜೂ.ಎನ್ ಟಿ ಆರ್ ಪ್ರತಿಕ್ರಿಯೆ ನೀಡಿದ್ದಾರೆ.
ಟಾಲಿವುಡ್ ನಟ, ಆರ್ ಆರ್ ಆರ್ ಸ್ಟಾರ್ ಜೂ.ಎನ್ ಟಿ ಆರ್ ಗೋಲ್ಡನ್ ಗ್ಲೋಬ್ಸ್ ಕಾರ್ಪೆಟ್‌ನಲ್ಲಿ ಫಾರಿನ್ ಆ್ಯಕ್ಸೆಂಟ್‌ನಲ್ಲಿ ಮಾತನಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಜೂ.ಎನ್ ಟಿ ಆರ್ ಅವರದ್ದು ನಕಲಿ ಉಚ್ಚಾರಣೆ ಎಂದು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಜೂ.ಎನ್ ಟಿ ಆರ್ ಪರೋಕ್ಷವಾಗಿ ಮಾತನಾಡಿದ್ದಾರೆ. ಗೋಲ್ಡನ್ ಗ್ಲೋಬ್ಸ್ ಗೆದ್ದ ಸಂಭ್ರಮದಲ್ಲಿರುವ ಜೂ.ಎನ್ ಟಿ ಆರ್ ಮತ್ತು ತಂಡ ಅಮರಿಕಾದ ಸುಂದರ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು...ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಬಂದಿದ್ದು ಇಡೀ ತಂಡ ಸಂತಸದಲ್ಲಿದೆ.
80ನೇ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಆರ್ ಆರ್ ಆರ್ ತಂಡ ರೆಡ್ ಕಾರ್ಪೆಟ್ ಮೇಲೆ ಭಾರಿ ಉತ್ಸುಕರಾಗಿ ಎಂಟ್ರಿ ಕೊಟ್ಟರು. ಆಗ ಮಾಧ್ಯಮಗಳ ಕೆಲವು ಪ್ರಶ್ನೆಗೆಳಿಗೆ ಉತ್ತರ ನೀಡಿದರು. ಆಗ ಸಿನಿಮಾದ ಬಗ್ಗೆ ಮಾತನಾಡಿದ್ದ ಜೂ.ಎನ್ ಟಿ ಆರ್, 'ರಾಜಮೌಳಿ ಅವರ ದಾಖಲೆಗಳನ್ನು ನೋಡಿದರೆ ಖಂಡಿತವಾಗಿಯೂ ನಾವು ವಿಜೇತರು ಎಂದು ಭಾವಿಸುತ್ತೇನೆ. ಆದರೆ ಇದು ಗೆಲುವಿಗಿಂತ ಹೆಚ್ಚಿನದಾಗಿದೆ' ಎಂದಿದ್ದರು.
ಜೂ.ಎನ್ ಟಿ ಆರ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕ್ಷಣಾರ್ಥದಲ್ಲಿ ವೈರಲ್ ಆಯಿತು. ನೆಟ್ಟಿಗರು ಈ ಸ್ಟೈಲ್ ಬೇಕಿತ್ತಾ ಎಂದು ಜರಿದರು. ಅನೇಕರು ಇದು 'ನಕಲಿ ಉಚ್ಚಾರಣೆ' ಎಂದು ಕಾಲೆಳೆದರು. ಆದರೆ ಜೂ.ಎನ್ ಟಿ ಆರ್ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತರು. ಈ ನಡುವೆ ಜೂ.ಎನ್ ಟಿ ಆರ್ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೋಲ್ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ಗೋಲ್ಡನ್ ಗ್ಲೇಬ್ಸ್ ಗೂ ಮೊದಲು ಆರ್ ಆರ್ ಆರ್ ಟಿಕೆಟ್ ಲಾಸ್ ಏಂಜಲೀಸ್‌ನಲ್ಲಿ ಅತೀ ವೇಗವಾಗಿ ಮಾರಾಟವಾಯಿತು ಎಂದು ಹೇಳಿದರು. ಕೇವಲ 98 ಸೆಕೆಂಡ್‌ಗಳಲ್ಲಿ ಸೇಲ್ ಆಯಿತು ಎಂದು ಹೇಳಿದರು.
'ನಾಟು ನಾಟು'ಗೆ ಪ್ರಶಸ್ತಿ ಬೆನ್ನಲ್ಲೇ ಜ್ಯೂ. ಎನ್‌ಟಿಆರ್ ಟ್ರೋಲ್: ಬೇಕಿತ್ತಾ ಈ ಸ್ಟೈಲು?
ಮಾಧ್ಯಮದ ಜೊತೆ ಮಾತನಾಡಿದ ಜೂ.ಎನ್ ಟಿ ಆರ್ 'ಮ್ಯಾಗಿಯನ್ನು ಬೇಯಿಸುವುದಕ್ಕಿಂತ ವೇಗವಾಗಿ ಮಾರಾಟವಾಯಿತು. ಇಂಡಿಯಾದಲ್ಲಿ ಅತೀ ವೇಗದಲ್ಲಿ ಮಾಡಬಹುದಾದ ಆಹಾರವಾಗಿದೆ' ಎಂದು ಹೇಳಿದರು. ಬಳಿಕ ರಾಜಮೌಳಿ ಅವರನ್ನು ಹೊಗಳಿದರು. 'ಈ ವ್ಯಕ್ತಿ (ರಾಜಮೌಳಿ) ತೆಲುಗಿನಲ್ಲಿ ಅಥವಾ ಭಾರತದಲ್ಲಿ ಮಾತ್ರ ಸಿನಿಮಾ ಮಾಡಲು ಉದ್ದೇಶಿಸಿಲ್ಲ ಎಂದು ನಾನು ಯಾವಾಗಲೂ ಭಾವಿಸಿದ್ದೆ. ಜಗತ್ತಿನಾದ್ಯಂತ ಪ್ರಯಾಣಿಸುವ ಅಪರೂಪದ ವ್ಯಕ್ತಿ. ಪ್ರತಿ ಸಿನಿಮಾಗಳಲ್ಲೂ ಉತ್ತಮವಾದುದನ್ನೂ ನೀಡಿದ್ದಾರೆ. ದಕ್ಷಿಣ ಭಾರತದ ಚಿಕ್ಕ ಉದ್ಯಮ ಟಾಲಿವುಡ್ ಆರ್ ಆರ್ ಆರ್ ಮೂಲಕ ಜಾಗತಿಕ ಚಿತ್ರರಂಗಕಕ್ಕೆ ಬಾಗಿಲು ತೆರೆಯುತ್ತಿದೆ. ನಮ್ಮನ್ನು ಇಲ್ಲಿಗೆ ಕರೆತರುತ್ತದೆ ಎಂಬುದು ನಮಗೆ ತುಂಬಾ ಹೆಮ್ಮೆಯ ವಿಷಯಾವಾಗಿದೆ' ಎಂದು ಹೇಳಿದರು.
ಇದೇ ಸಮಯದಲ್ಲಿ ತನ್ನ ಉಚ್ಚಾರಮೆಯಿಂದ ಟ್ರೋಲ್ ಆದ ಬಗ್ಗೆ ಮಾತನಾಡಿದರು. ನಾವು ಕೇವಲ ಸಮಯ ಮತ್ತು ಉಚ್ಚಾರಣೆಯಿಂದ ವಿಂಗಡಿಸಲ್ಪಟ್ಟಿದ್ದೇವೆ' ಎಂದು ಹೇಳಿದ್ದಾರೆ.
ಭಾರತೀಯರಿಗಿಂತ ಜಪಾನರು RRR ಮೆಚ್ಚಿಕೊಂಡರು; ಆಸ್ಕರ್ ನಂತರ ವರಸೆ ಬದಲಾಯಿಸಿದ ಜ್ಯೂ. ಎನ್‌ಟಿಆರ್
ಗೋಲ್ಡನ್ ಗ್ಲೋಬ್ಸ್‌ನಲ್ಲಿ ಆರ್ ಆರ್ ಆರ್ ಸಿನಿಮಾತಂಡ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಹಾಡು ಮತ್ತು ಅತ್ಯುತ್ತಮ ಸಿನಿಮಾ ವಿದೇಶಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ನಾಟು ನಾಟು ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಎಂ ಎಂ ಕೀರವಾಣಿ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಗೋಲ್ಡನ್ ಗ್ಲೋಬ್ಸ್ ಬಳಿಕ ರಾಜಮೌಳಿ ಮತ್ತು ತಂಡ ಅಂತಾರಾಷ್ಟ್ರೀಯ ಮಟ್ಟದ ಗಣ್ಯರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಸ್ಟೀವನ್ ಸ್ಪೀಲ್‌ಬರ್ಗ್ ಸೇರಿದಂತೆ ಅನೇಕನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಆರ್ ಆರ್ ಆರ್ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಬಗ್ಗೆಯೂ ರಾಜಮೌಳಿ ಹೇಳಿದ್ದಾರೆ.