Asianet Suvarna News Asianet Suvarna News

ಮದುವೆ ಬಗ್ಗೆ ನಂಬಿಕೆ ಇಲ್ಲ, ಮಗಳಿಗೂ ಮದ್ವೆ ಆಗ್ಬೇಡ ಎನ್ನುತ್ತೇನೆ; ಕಿರುತೆರೆ ನಟಿ ಶಾಕಿಂಗ್ ಹೇಳಿಕೆ

ಎರಡು ವರ್ಷಗಳ ನಂತರ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿರುವ ಶ್ವೇತಾ ತಿವಾರಿ ಮದುವೆ ಮತ್ತು ಮಗಳ ಬಗ್ಗೆ ಮಾತನಾಡಿದ್ದಾರೆ. ಮದುವೆಯಿಂದ ಆಗುವ ಗುಡ್ ಆಂಡ್ ಬ್ಯಾಡ್‌ಗಳ ಬಗ್ಗೆ ಹೇಳಿದ್ದಾರೆ.

I dont believe in institution of marriage says actress Shweta tiwari vcs
Author
First Published Sep 13, 2022, 3:35 PM IST

ಮೇರೆ ಡ್ಯಾಡ್ ಕಿ ದುಲ್ಹನ್ ಖ್ಯಾತಿಯ ಶ್ವೇತಾ ತಿವಾರಿ ಎರಡು ವರ್ಷಗಳ ನಂತರ ಮೈಂ ಹೂಂ ಅಪರಾಜಿತಾ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.  ಮೂರು ಹೆಣ್ಣು ಮಕ್ಕಳ ಜೊತೆ ಜೀವನ ನಡೆಸುವ ಒಂಟಿ ಮಹಿಳೆ ಅಪರಾಜಿತಾ ಪಾತ್ರದಲ್ಲಿ ಶ್ವೇತಾ ಕಾಣಿಸಿಕೊಳ್ಳಲಿದ್ದಾರೆ. ಪಾತ್ರ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಶ್ವೇತಾ ಬದುಕುತ್ತಿರುವ ರೀತಿ ಹೀಗೆ ಇರುವ ಕಾರಣ ಮದುವೆ, ಮಕ್ಕಳು ಮತ್ತು ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಟ್ರೋಲ್:

'ನನ್ನ ಮೊದಲ ಮದುವೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವೆ ಏಕೆಂದರೆ ನಾನು ಸಮಾಜದಲ್ಲಿ ಬೆಳೆದಿರುವ ರೀತಿ ಇದು. ಆದರೆ ಎರಡನೇ ಮದುವೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕೆ ಇಷ್ಟವಿರಲಿಲ್ಲ. ಸಂಬಂಧ ಹಾಳಾಗಬೇಕು ಅಂದ್ರೆ ಹಾಳಾಗುತ್ತದೆ ಏನೂ ಮಾಡುವುದಕ್ಕೂ ಆಗುವುದಿಲ್ಲ . ಒಂದು ಹಂತ ತಲುಪಿದ ನಂತರ ಸಂಬಂಧ ನಿಲ್ಲಿಸಬೇಕು ಅನಿಸಿತ್ತು. ಒಂದು ಕ್ಷಣವೂ ಜನರು ಏನೆಂದು ಹೇಳುತ್ತಾರೆ ಅಂತ ನಾನು ಯೋಚನೆ ಮಾಡಿರಲಿಲ್ಲ. Bread & Butter ನಾನು ನೋಡಿಕೊಳ್ಳುತ್ತಿರುವಾಗ ಯಾರ ಬಗ್ಗೆನೂ ಕೇರ್ ಮಾಡುವುದಿಲ್ಲ. ನನ್ನ ಪರ್ಸನಲ್ ಮತ್ತು ಪ್ರೋಫೆಷನಲ್ ಲೈಫ್‌ ನೋಡಿಕೊಂಡು ನೆಟ್ಟಿಗರು ಮಜಾ ತೆಗೆದುಕೊಳ್ಳಬಹುದು. ನೀವು ಬೇರೆ ಅವರ ಬಗ್ಗೆ ಕೇರ್ ಮಾಡುವುದನ್ನು ನಿಲ್ಲಿಸಿದಾಗ ಅವರ ಮಾತುಗಳು ಟೀಕೆಗಳು ಮ್ಯಾಟರ್ ಆಗುವುದಿಲ್ಲ' ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

I dont believe in institution of marriage says actress Shweta tiwari vcs

ಮದುವೆ:

'ಮದುವೆಯಲ್ಲಿ ನನಗೆ ನಂಬಿಕೆ ಇಲ್ಲ. ನನ್ನ ಮಗಳಿಗೂ ಮದುವೆ ಆಗಬೇಡ ಎಂದು ನಾನು ಹೇಳುತ್ತೀನಿ. ಇದು ಆಕೆಯ ಜೀವನ ಹೀಗೆ ನಡೆಸಬೇಕು ಎಂದು ನಾನು ಹೇಳುವುದಿಲ್ಲ ಏಕೆಂದರೆ ಆಕೆ ಯೋಚನೆ ಮಾಡಿ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಸಂಬಂಧದಲ್ಲಿ ಇದ್ದೀವಿ ಅಂತ ಮದುವೆನೇ ಆಗಬೇಕು ಅನ್ನೋದೇನು ಇಲ್ಲ. ಜೀವನದಲ್ಲಿ ಮದುವೆಯೆಂಬುದು ತುಂಬಾ ಮುಖ್ಯ. ಮದುವೆಯಿಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಮಾತು ಸರಿಯಲ್ಲ. ಮದುವೆ ಅನ್ನೋದು ಕೆಟ್ಟದಲ್ಲ. ನನ್ನ ಸ್ನೇಹಿತರು ಮದುವೆಯಲ್ಲಿ ಖುಷಿಯಾಗಿದ್ದಾರೆ ಅವನ್ನು ನೋಡಿ ನಾನು ಖುಷಿಯಾಗಿರುವೆ. ಆದರೆ ಇನ್ನೂ ಕೆಲವು ಸ್ನೇಹಿತರು ತುಂಬಾನೇ ಕಾಂಪ್ರಮೈಸ್ ಆಗಿದ್ದಾರೆ ಇದು ಅವರಿಗೆ ಮಾತ್ರವಲ್ಲ ಮಕ್ಕಳಿ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ನನ್ನ ಮಗಳಿಗೆ ಏನು ಖುಷಿ ಅನಿಸುತ್ತದೆ ಅದನ್ನು ಮಾಡಲು ಹೇಳುವೆ. ಸರಿಯಾಗುತ್ತದೆ ಎಂದು ಕಾಂಪ್ರಮೈಸ್ ಆಗಬಾರದು ಏಕೆಂದರೆ ಅದು ಸರಿ ಆಗುವುದಿಲ್ಲ ಬದಲಿಗೆ ವರ್ಸ್ಟ್‌ ಆಗುತ್ತದೆ. ನಾನು ಸಂಗಾತಿನ ಮಿಸ್ ಮಾಡಿಕೊಳ್ಳುವುದಿಲ್ಲ ಯಾಕೆ ಜನರು ನನ್ನನ್ನು ನೋಡುವ ರೀತಿ ಬದಲಾಗುತ್ತಾ?'

Shweta Tiwari ಬೋಲ್ಡ್‌ ಫೋಟೋ ಶೂಟ್‌; 2 ಮಕ್ಕಳ ತಾಯಿ ಅಂತ ಯಾರೂ ಹೇಳಲ್ಲ!

ಮುರಿದು ಬಿಟ್ಟ ಸಂಬಂಧ:

'ನನ್ನ ಮದುವೆ ನನ್ನ ಸಂಗಾತಿ ಬಿಟ್ಟಾಗ ನನ್ನನ್ನು ನಾನು ದೂರಿಕೊಳ್ಳುವುದಿಲ್ಲ. ಎಲ್ಲಿ ಜೀವನ ಹಾಳು ಮಾಡಿಕೊಂಡೆ ಎಂದು ನನಗೆ ಗೊತ್ತಿಲ್ಲ ಆದರೆ ಮಾಡಿರುವ ತಪ್ಪುಗಳು ನನಗೆ ಗೊತ್ತಿದೆ. ಸಂಬಂಧದಲ್ಲಿ ರೆಡ್‌ ಫ್ಲ್ಯಾಗ್ ಕಂಡರೂ ಮುಂದುವರೆದೂ ತಪ್ಪು ಮಾಡಿದೆ. ಪದೇ ಪದೇ ಮಾಡಿರುವ ತಪ್ಪುಗಳನ್ನು ಯೋಚನೆ ಮಾಡಿಕೊಂಡು ದೇವರನ್ನು ದೂರುವೆ ಏಕೆ ಈ ರೀತಿ ಮಾಡಿರುವೆ ಎಂದು. ಜೀವನದಲ್ಲಿ ಏನೂ ಪರ್ಮನೆಂಟ್ ಅಲ್ಲ ಅನ್ನೋದು ತಿಳಿದುಕೊಂಡಿರುವೆ. ಒಳ್ಳೆ ದಿನಗಳು ಕೆಟ್ಟ ದಿನಗಳು ಎಲ್ಲಾ ಬೆಳಗ್ಗೆ ರಾತ್ರಿ ಇದ್ದ ಹಾಗೆ. ಸಮಯ ಚೆನ್ನಾಗಿದೆ ಅಂತ ಅದೇ ಜೀವನ ಅಂದುಕೊಂಡು ತಲೆಗೆ ತೆಗೆದುಕೊಳ್ಳಬೇಡಿ. ನನ್ನ ಮಗಳು ಗುಡ್ ಆಂಡ್ ಬ್ಯಾಡ್‌ ಎರಡಕ್ಕೂ ರೆಡಿಯಾಗಿದ್ದಾಳೆ.

ಕೆಟ್ಟ ಕಾಮೆಂಟ್:

'ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳನ್ನು ನೋಡುವುದಿಲ್ಲ. ನೆಗೆಟಿವ್ ಕಾಮೆಂಟ್ ಮಾಡುವುದು ಫೇಸ್‌ ಖಾತೆಗಳಿಂದ. ಮುಖನೇ ರಿವೀಲ್ ಮಾಡುವುದಕ್ಕೆ ಇಷ್ಟವಿಲ್ಲ ಅಂದ್ರೆ ಅವರ ಕಾಮೆಂಟ್‌ಗಳಿಗೆ ಬೆಲೆ ಇಲ್ಲ.  ಯಾರ ಕಾಮೆಂಟ್ ಮತ್ತು ಸಲಹೆ ನನಗೆ ಬೇಡ...ನಾನು ಯಾರಿಗೂ ಸ್ಫೂರ್ತಿ ಅಗಬೇಕಿಲ್ಲ. ಎಲ್ಲರ ಜೀವನದಲ್ಲೂ ಕಷ್ಟಗಳು ಇರುತ್ತದೆ. ಏನೇ ಎದುರಾದರೂ ಎದುರಿಸುವುದಕ್ಕೆ ನಾನು ರೆಡಿಯಾಗಿರುವೆ ಏಕೆಂದರೆ ಆರ್ಥಿಕವಾಗಿ ಗಟ್ಟಿಯಾಗಿರುವೆ. Self Respect ತುಂಬಾನೇ ಮುಖ್ಯ. ಜೀವನದಲ್ಲಿ ಯಾರೂ ಬರ್ತಾರೆ ಅಂತ ಕಾಂಪ್ರಮೈಸ್ ಆಗಿ ಆಗಿ ಎಷ್ಟು ಸಲ ಬದಲಾಗುವುದಕ್ಕೆ ಆಗುತ್ತೆ'

Follow Us:
Download App:
  • android
  • ios