ನಾನೆಂದೂ ಪರ್ಫೆಕ್ಟ್ ಗಂಡನಾಗಲು ಸಾಧ್ಯವಿಲ್ಲ; ಕತ್ರಿನಾ ಮದ್ವೆಯಾದ ಒಂದೇ ವರ್ಷಕ್ಕೆ ವಿಕ್ಕಿ ಕೌಶಾಲ್ ಶಾಕಿಂಗ್ ಹೇಳಿಕೆ
ನನ್ನ ಹೆಂಡತಿ ಇಷ್ಟ, ನನ್ನ ಫ್ಯಾಮಿಲಿ ಇಷ್ಟ...ಒಟ್ಟಾರೆ ಜೀವನ ಅಂದ್ರೆನೇ ತುಂಬಾನೇ ಇಷ್ಟವೆಂದ ನಟ ವಿಕ್ಕಿ ಕೌಶಾಲ್.....

ಬಾಲಿವುಡ್ ಸೆಲೆಬ್ರಿಟಿ ಕಪಲ್ ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಗಾಗ ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ಫೋಟೋ ಅಪ್ಲೋಡ್ ಮಾಡುವ ಕಾರಣ ವಿಕ್ಕಿ ಪರ್ಫೆಕ್ಟ್ ಗಂಡ, ಪರ್ಫೆಕ್ಟ್ ಅಪ್ಪ ಆಗಬಹುದು ಎನ್ನುವ ಕಾಮೆಂಟ್‌ಗಳು ಬರುತ್ತದೆ. ಈ ಪರ್ಫೆಕ್ಟ್ ಅನ್ನೋ ಪದಕ್ಕೆ ನಾನು ಸೂಕ್ತನಲ್ಲ ಅದರಲ್ಲೂ ಕತ್ರಿನಾ ಕೈಫ್ ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ಲೈಫ್ ಎಷ್ಟು ಬದಲಾಗಿದೆ ಎಂದು ವಿಕ್ಕಿ ಹಂಚಿಕೊಂಡಿದ್ದಾರೆ.
'ಯಾವ ರೀತಿಯಲ್ಲೂ ನಾನು ಪರ್ಫೆಕ್ಟ್ ಅಲ್ಲ. ಪತಿಯಾಗಿ ಪರ್ಫೆಕ್ಟ್ ಆಗಿಲ್ಲ, ಮಗನಾಗಿ ಪರ್ಫೆಕ್ಟ್ ಆಗಿಲ್ಲ, ಫ್ರೆಂಡ್ ಮತ್ತು ನಟನಾಗಿಯೂ ಪರ್ಫೆಕ್ಟ್ ಅಲ್ಲ. ಇದು ಜೀವನದಲ್ಲಿ ಪ್ರತಿಯೊಬ್ಬರೂ ಎದುರಿಸುವ ಕ್ಷಣಗಳು ಹಾಗೂ ದಿನವೂ ಒಂದೊಂದು ಪಾಠ ಕಲಿಯಬೇಕು ಹೀಗಾಗಿ ಪರ್ಫೆಕ್ಟ್ ಅಲ್ಲ. ಪರ್ಫೆಕ್ಟ್ ಆಗಿರಬೇಕು ಅನ್ನೋದು ಒಂದು ರೀತಿ ಕಂಡಿಷನ್ ಹಾಕಿದ ಹಾಗೆ. ಆ ನಿರೀಕ್ಷೆ ತಲುಪುತ್ತಿದ್ದೀವಿ ಅಂದುಕೊಳ್ಳುತ್ತೀವಿ ಆದರೆ ಅದು ಅಸಾಧ್ಯ. ಹೀಗಾಗಿ ಯಾವ ಕಾರಣಕ್ಕೂ ನಾನು ಪರ್ಫೆಕ್ಟ್ ಗಂಡನಲ್ಲ. ಯಾವ ರೀತಿಯಲ್ಲೂ ನಾನು ಪರ್ಫೆಕ್ಟ್ ಆಗಿರುವ ವ್ಯಕ್ತಿ ಅಲ್ಲ. ಆದರೆ ಯಾವುದೇ ಕಷ್ಟ ಬರಲಿ ಪತಿಯಾಗಿ ನನ್ನ ಕಾರ್ಯವನ್ನು ನಾನು ನಿಭಾಯಿಸುತ್ತಿರುವೆ. ಗಂಡನ ಸ್ಥಾನದಲ್ಲಿ ನಿಂತು ಕೊರತೆ ಆಗದಂತೆ ನೋಡಿಕೊಂಡಿರುವೆ' ಎಂದು ವಿಕ್ಕಿ ಕೌಶಾಲ್ ಲೈಫ್‌ಸ್ಟೈಲ್ ಏಷ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ.
'ಖಂಡಿತಾ ಮುಂಬರುವ ದಿನಗಳಲ್ಲಿ ನಾನು ಬೆಟರ್ ವ್ಯಕ್ತಿಯಾಗುವೆ. ನಿನ್ನೆಗಿಂತ ನಾಳೆ ಎನ್ನುವುದರಲ್ಲಿ ಬದಲಾವಣೆ ಕಾಣಬಹುದು. ಯಾವ ಸ್ಥಾನವಿರಲಿ ಯಾವುದೇ ಕೆಲಸವಿರಲಿ ನನ್ನ 100 ಶ್ರಮ ಹಾಕುವೆ. ಕತ್ರಿನಾ ಕೈಫ್ ಬಂದ ಒಂದು ವರ್ಷದಲ್ಲಿ ನನ್ನ ಜೀವನ ಚೆನ್ನಾಗಿದೆ, ಸಿಂಗಲ್ ಆಗಿದ್ದ ವಿಕ್ಕಿಗಿಂತ ನಾನು ಮದುವೆಯಾದ ಮೇಲೆ ಆಗಿರುವ ವಿಕ್ಕಿ ಇಷ್ಟವಾಗುತ್ತಿದೆ. ಇದೊಂದು ಬ್ಯೂಟಿಫುಲ್ ಜರ್ನಿ ಆಗಿದ್ದು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಆರಂಭಿಸುತ್ತೀವಿ, ಒಟ್ಟಿಗೆ ಬೆಳೆಯುತ್ತಿವಿ' ಎಂದು ವಿಕ್ಕಿ ಮಾತನಾಡಿದ್ದಾರೆ.
ಕತ್ರಿನಾ ಕೈಫ್ ಪ್ರೀತಿಯಿಂದ ನಾನು ಒಳ್ಳೆಯ ವ್ಯಕ್ತಿಯಾಗುತ್ತಿರುವೆ ಎಂದು ಹೆಮ್ಮೆಯಿಂದ ವಿಕ್ಕಿ ಹೇಳಿಕೊಂಡಿದ್ದಾರೆ. 'ಪ್ರೀತಿಸುವಾಗ ನಮ್ಮಲ್ಲಿರುವ ಬೆಸ್ಟ್ ಗುಣವನ್ನು ನಾನು ಹೊರ ತೆಗೆಯುತ್ತೇವೆ. 100% ಪ್ರೀತಿ ಕೊಡುತ್ತೇವೆ. ಅದೇ ನನ್ನ ಮುಖದಲ್ಲಿ ನನ್ನ ಕೆಲಸಗಳಲ್ಲಿ ಕಾಣಿಸುತ್ತಿರುವುದು. ನನ್ನ ಕೆಲದಸ ಬಗ್ಗೆ ಅಭಿಮಾನಿಗಳು ಒಳ್ಳೆಯ ಪದಗಳನ್ನು ಹೇಳುತ್ತಿದ್ದಾರೆ ಅಂದ್ರೆ ಅವರಿಗೆ ನಾನು ಆಭಾರಿ. ನನ್ನಲ್ಲೂ ಲೋಪದೋಷಗಳು ಇದೆ. ಅದನ್ನು ಲೆಕ್ಕ ಮಾಡದೆ ಅಭಿಮಾನಿಗಳು ಕೊಡುತ್ತಿರುವ ಪ್ರೀತಿಗೆ ಖುಷಿಯಾಗಿರುವೆ.' ಎಂದಿದ್ದಾರೆ.
ಕತ್ರಿನಾಳನ್ನು ಮದುವೆಯಾಗ್ತೀನಿ ಎಂದಾಗ ತಂದೆ-ತಾಯಿ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ವಿಕ್ಕಿ ಕೌಶಲ್
ಈ ಹಿಂದೆ ನಡೆದ ಸಂದರ್ಶನದಲ್ಲಿ ವಿಕ್ಕಿ ಕೌಶಾಲ್ ಪ್ರೀತಿಯ ಮತ್ತು ಕಿರಿಕಿರಿ ಅಭ್ಯಾಸದ ಬಗ್ಗೆ ಕತ್ರಿನಾ ಕೈಫ್ ಹಂಚಿಕೊಂಡಿದ್ದರು. 'ನನಗೆ ತುಂಬಾ ಇಷ್ಟ ಆಗುವುದು ಅಂದ್ರೆ ವಿಕ್ಕಿ ಹಾಡುವುದು ಮತ್ತು ಡ್ಯಾನ್ಸ್ ಮಾಡುವುದು. ಸುಮ್ಮನೆ ಸಂಗೀತ ಕೇಳಿದ್ದರೆ ಸಾಕು ಸಖತ್ ಎಂಜಾಯ್ ಮಾಡುತ್ತಾನೆ ಡ್ಯಾನ್ಸ್ ಮಾಡುವುದು ನೋಡಲು ಸಖತ್ ಖುಷಿಯಾಗುತ್ತದೆ. ಅದೆಷ್ಟೋ ಸಲ ನಿದ್ರೆ ಮಾಡಲು ಆಗದ ಸಮಯದಲ್ಲಿ ಪ್ಲೀಸ್ ನನಗೆ ಹಾಡು ಹೇಳು ಎಂದು ಒತ್ತಾಯ ಮಾಡುತ್ತೀನಿ. ಕಿರಿಕರಿ ಅಭ್ಯಾಸ ಅಂದ್ರೆ ವಿಕ್ಕಿ ಕೆಲವೊಮ್ಮೆ ತುಂಬಾ ಹಠವಾದಿ' ಎಂದಿದ್ದರು.