Asianet Suvarna News Asianet Suvarna News

ನಾ ನೋಡಲು ನಿನ್ನಂತಿಲ್ಲ, ಗುಣವೂ ನಿನ್ನದಲ್ಲ: ಮಾತಲ್ಲೇ ಅಮ್ಮನ ತಿವಿದ ಮಲೈಕಾ ಪುತ್ರ

ಸಂದರ್ಶನದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದ್ದು, ಈ ವಿಡಿಯೋ ತುಣುಕನ್ನು ಅರ್ಜುನ್ ಕಪೂರ್‌ಗೆ ಟ್ಯಾಗ್ ಮಾಡಬೇಕಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

I am not like you in appearance, nor are you in character, Arhan Khan verbally roasted mother Malaika akb
Author
First Published Jan 4, 2023, 3:23 PM IST

ಮುಂಬೈ: ಬಾಲಿವುಡ್‌  ನಟಿ ಮಲೈಕಾ ಆರೋರಾ ಪತಿಗೆ ವಿಚ್ಛೇದನ ನೀಡಿ ತನಗಿಂತ 12 ವರ್ಷ ಕಿರಿಯ ನಟ ಅರ್ಜುನ್ ಕಪೂರ್ ಜೊತೆ ಸುತ್ತಾಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. 49ರ ಹರೆಯದಲ್ಲಿರುವ ಮಲೈಕಾ ಈಗಲೂ ತಮ್ಮ ಮಾದಕ ಲುಕ್‌ನಿಂದ ಅನೇಕರನ್ನು ಸೆಳೆಯುತ್ತಿದ್ದಾರೆ. ತುಂಡುಡುಗೆಯ ಜೊತೆ ಜಿಮ್ ಸೂಟ್‌ನಲ್ಲಿ ಪಪಾರಾಜಿಗಳ ಕ್ಯಾಮರಾ ಕಣ್ಣಲ್ಲಿ ಸದಾ ಸೆರೆಯಾಗುವ ಮಲೈಕಾ ಇದೇ ಕಾರಣಕ್ಕೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಈಗ ಸಂದರ್ಶನವೊಂದರಲ್ಲಿ ಮಲೈಕಾ ಹಾಗೂ ಅರ್ಬಾಜ್‌ ಖಾನ್ ಪುತ್ರ ತನ್ನ ತಾಯಿ ಬಗ್ಗೆ ಮಾತನಾಡಿದ್ದು, ಈ ವಿಚಾರವೂ ಈಗ ಟ್ರೋಲ್‌ಗೆ ಕಾರಣವಾಗಿದೆ.

ಈ ಸಂದರ್ಶನದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದ್ದು, ಈ ವಿಡಿಯೋ ತುಣುಕನ್ನು ಅರ್ಜುನ್ ಕಪೂರ್‌ಗೆ ಟ್ಯಾಗ್ ಮಾಡಬೇಕಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ (Disney hotstar) ಪ್ರಸಾರವಾಗುವ ವೆಬ್ ಶೋ ಮೂವಿಂಗ್ ವಿತ್ ಮಲೈಕಾ (Moving with Malika) ಎಂಬ ಶೋದಲ್ಲಿ ಮಾತನಾಡಿದ ಆತ ನಾನು ನಿನ್ನಂತೆ ಇಲ್ಲ, ನಿನ್ನಂತೆ ವರ್ತಿಸುವುದೂ ಇಲ್ಲ ಎಂದು ತಾಯಿಯ ಮುಖದ ಮೇಲೆ ಹೊಡೆದಂತೆ ಮಾತನಾಡಿದ್ದೇನೆ. ಮಗನ ಮಾತು ಕೇಳಿ ಮಲೈಕಾಗೆ ವಿಷಾದ ಎನಿಸಿದರೂ ನಗುವಿನ ಮೂಲಕ ಅದನ್ನು ಮುಚ್ಚಲು ಯತ್ನಿಸಿದ್ದಾರೆ. 

ರೊಮ್ಯಾಂಟಿಕ್ ಮೂಡ್‌ನಲ್ಲಿ ಮಲೈಕಾ; ಅರ್ಜುನ್ ಕಪೂರ್‌ಗೆ ಕಿಸ್ ಮಾಡಿ 2023 ಸ್ವಾಗತಿಸಿದ ಹಾಟ್ ನಟಿ

ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಈ ವಿಡಿಯೋವನ್ನು ಮಲೈಕಾ ಗೆಳೆಯ ನಟ ಅರ್ಜುನ್ ಕಪೂರ್‌ಗೆ (Arjun kapoor) ಟ್ಯಾಗ್ ಮಾಡುವಂತೆ ಕೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಸ್ಟಾರ್‌ಕಿಡ್‌ಗಳು (Starkid) ಪೋಷಕರನ್ನು ಗೌರವಿಸುವುದಿಲ್ಲ ಎಂದು ಹೇಳಿದರೆ ಮತ್ತೆ ಕೆಲವರು ಡಿವೋರ್ಸ್‌ ಪ್ರಕರಣಗಳಲ್ಲಿ ಮಕ್ಕಳು ಸಂತ್ರಸ್ತರಾಗುತ್ತಾರೆ ಎಂದು ಹೇಳಿದ್ದಾರೆ. 

ಸಾಮಾನ್ಯವಾಗಿ ಹೆತ್ತಮ್ಮನ ಅವಮಾನವನ್ನು ಯಾರೂ ಕೂಡ ಸಹಿಸಲಾರರು. ಅದರಲ್ಲೂ ಎದೆಯೆತ್ತರಕ್ಕೆ ಬೆಳೆದ ಗಂಡು ಮಕ್ಕಳು ಅದನ್ನು ಅರಗಿಸಿಕೊಳ್ಳುವುದು ಬಲು ಕಷ್ಟದ ವಿಚಾರ. ಇಲ್ಲಿ ಮಲೈಕಾ ಅರ್ಬಾಜ್‌ ಖಾನ್ (Arbaaz Khan) ಪುತ್ರನಿಗೆ ಈಗಿನ್ನು 20 ವರ್ಷದ ಹರೆಯ ಇಂತಹ ಸಂದರ್ಭದಲ್ಲಿ ಅಮ್ಮ ತನಗಿಂತ 12 ವರ್ಷ ಕಿರಿಯ ಪ್ರಾಯದ ನಟ ಅರ್ಜುನ್ ಕಪೂರ್ ಜೊತೆ ಸಂಬಂಧದಲ್ಲಿರುವುದು, ತುಂಡುಡುಗೆ ಧರಿಸಿ ಪೋಸ್‌ ಕೊಡುವುದು ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಪಾಲಿಗೆ ಆಹಾರವಾಗುವುದನ್ನು ಬಹುಶಃ ಪುತ್ರ ಅರ್ಹಾನ್‌ಗೆ ಸಹಿಸಲಾಗುತ್ತಿಲ್ಲ. ಇದೇ ಕಾರಣಕ್ಕೆ ಆತ ಅಮ್ಮನೊಂದಿಗೆ ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಇದನ್ನು ಆತ ನೇರಾನೇರವಾಗಿ ಈ ಶೋನಲ್ಲಿ ತೋರಿಸಿಕೊಂಡಿದ್ದಾನೆ ಅಷ್ಟೇ.

ಓ ಮೈ ಗಾಡ್ ಏನಮ್ಮ ಇದು..!; ಇಯರ್ ಎಂಡ್‌ಗೆ ಹಾಟ್ ಫೋಟೋ ಹಂಚಿಕೊಂಡ ಮಲೈಕಾ ಸಖತ್ ಟ್ರೋಲ್

ಈ ಶೋಗೆ ಮಲೈಕಾ ತನ್ನ ಸಹೋದರಿ ಅಮೃತಾ ಅರೋರಾ (Amruta arora), ತಾಯಿ ಜಾಯ್ಸ್ ಪಾಲಿಕಾರ್ಪ್ ಮತ್ತು ಮಗ ಅರ್ಹಾನ್ ಅವರನ್ನು ಆಹ್ವಾನಿಸಿದ್ದರು. ಇದಕ್ಕೂ ಮೊದಲು ಅಮ್ಮನ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಅರ್ಹಾನ್ ಟೀಕೆ ಮಾಡಿದ ವಿಚಾರವೂ ಸಾಕಷ್ಟು ಸುದ್ದಿಯಾಗಿತ್ತು. ಮಲೈಕಾ ಕಪ್ಪು ಮತ್ತು ಬಿಳಿ ಪಟ್ಟೆಯುಳ್ಳ ತೋಳುಗಳಿಲ್ಲದ ಮತ್ತು ಬೀಜ್ ಪ್ಯಾಂಟ್‌ನೊಂದಿಗೆ ಕ್ರಾಪ್ ಟಾಪ್ ಅನ್ನು ತೊಟ್ಟಿದ್ದರು. ಮಲೈಕಾ ಅವರ ಮಗ ಅರ್ಹಾನ್ ಅವರ ಟಾಪ್ ಅನ್ನು ಟೇಬಲ್ ನ್ಯಾಪ್ಕಿನ್‌ಗೆ ಹೋಲಿಸಿದ್ದರು. ಮಲೈಕಾಗೆ ‘ಟೇಬಲ್ ನ್ಯಾಪ್ಕಿನ್ ತರಹ ಯಾಕೆ ಡ್ರೆಸ್ ಮಾಡಿಕೊಂಡಿದ್ದೀಯಾ ಎಂದು ಅರ್ಹಾನ್ ಕೇಳಿದ್ದಾರೆ. ಮಲೈಕಾ ಅವರು ಈ ಉಡುಪಿನಲ್ಲಿ ಖೈದಿಯಂತೆ ಕಾಣುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಮಗನ ಮಾತಿಗೆ ಮಲೈಕಾರ ಬಳಿ ಉತ್ತರವಿಲಲ್ದೇ ಸುಮ್ಮನೆ ನಕ್ಕಿದ್ದಾರೆ.  

ತನ್ನ ಚಿಕ್ಕಮ್ಮ ಅಂದರೆ ಅಮೃತಾಗೆ ತಾನು ಹತ್ತಿರವಾಗಿದ್ದೇನೆ ಎಂದು ಅರ್ಹಾನ್ ಈ ಕಾರ್ಯಕ್ರಮದ ಸಮಯದಲ್ಲಿ ಹೇಳಿದರು. ಅರ್ಹಾನ್ ಅಮೃತಾಳನ್ನು ಅಮ್ಮು ಎಂದು ಕರೆಯುತ್ತಾನೆ. ಅಮ್ಮು ತನ್ನ ಎರಡನೇ ತಾಯಿಯಂತೆ ಮತ್ತು ತನ್ನ  ಮೊದಲ ತಾಯಿಯಾಗಲು ಅವರು ತನ್ನಿಂದಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರ್ಹಾನ್‌ ಅವರು ಈ ಶೋದಲ್ಲಿ ಹೇಳಿದರು.

ಅರ್ಹಾನ್ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಮಗ. ಮಲೈಕಾ ಮತ್ತು ಅರ್ಬಾಜ್ ಮೊದಲ ಬಾರಿಗೆ 1998ರಲ್ಲಿ ಕಾಫಿ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಇಲ್ಲಿಂದ ಅವರಿಬ್ಬರ ಆತ್ಮೀಯತೆ ಹೆಚ್ಚಾಯಿತು ಮತ್ತು 12 ಡಿಸೆಂಬರ್ 1998 ರಂದು ಅವರು ವಿವಾಹವಾದರು. 9 ನವೆಂಬರ್ 2002 ರಂದು, ಮಲೈಕಾ ತನ್ನ ಮಗ ಅರ್ಹಾನ್‌ಗೆ ಜನ್ಮ ನೀಡಿದರು. 18 ವರ್ಷಗಳ ಕಾಲ ದಾಂಪತ್ಯದಲ್ಲಿದ್ದ ಈ ಜೋಡಿ  ಮೇ 2017 ರಲ್ಲಿ ವಿಚ್ಛೇದನ ಪಡೆದರು. ಬಳಿಕ ತನಗಿಂತ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಅರ್ಬಾಜ್ ಖಾನ್ ಮಾಡೆಲ್ ಮತ್ತು ನಟಿ ಜಾರ್ಜಿಯಾ ಆಂಡ್ರಿಯಾನಿ (Georgia Andriani) ಅವರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ.

 


 

Follow Us:
Download App:
  • android
  • ios