ಏಷ್ಯಾನೆಟ್ ಸುವರ್ಣ ನ್ಯೂಸ್ ಬಹಿರಂಗ ಮಾಡಿದ್ದ ಸುದ್ದಿ/ ನಮಾಜ್ ಮಾಡುತ್ತೇನೆ ಎಂದು ಒಪ್ಪಿಕೊಂಡ ಸಂಜನಾ/ ಲೈವ್ ನಲ್ಲಿ ಅವರೇ ಹೇಳಿದರು/ ಪೂಜೆ ಮತ್ತು ನಮಾಜ್ ಎರಡು ವಿಚಾರ
ಬೆಂಗಳೂರು(ಫೆ. 12 ) ದಿನ ನಿತ್ಯ ನಮಾಜ್ ಮಾಡ್ತಾರ ನಟಿ ಸಂಜನಾ..? ಹೌದು ಫೇಸ್ ಬುಕ್ ಲೈವ್ ನಲ್ಲಿ ನಮಾಜ್ ಮಾಡುತ್ತೇನೆ ಎಂದು ನಟಿ ಹೇಳಿಕೊಂಡಿದ್ದಾರೆ. ಸಂಜನಾ ಅವರೇ ಲೈವ್ ನಲ್ಲಿ ವಿಚಾರ ಹೇಳಿಕೊಂಡಿದ್ದಾರೆ.
ನಟಿ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಬ್ರೇಕ್ ಮಾಡಿತ್ತು. ವೈದ್ಯ ಅಜೀಝ್ ಜೊತೆ ಸಂಜನಾ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಬ್ರೇಕ್ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಹ ವೈರಲ್ ಆಗಿತ್ತು.
ಒಂದೆರಡು ಮಾತು ಹೇಳಿದ್ದರೆ ಸ್ಪಷ್ಟನೆ ಕೊಡಬಹುದು.. ಸಾವಿರಾರು ಮಾತು ಹೇಳಿದರೆ ಯಾರಿಗೆ ಸ್ಪಷ್ಟನೆ ಕೊಡೋಣ ಎಂದು ಸಂಜನಾ ಹೇಳಿಕೊಂಡು ಹೋಗಿದ್ದಾರೆ.
ಸಂಜನಾ ಇಸ್ಲಾಂಗೆ ಮತಾಂತರ..ದಾಖಲೆ ಸಮೇತ ವರದಿ ಬ್ರೇಕ್!
ನಮಾಜ್ ಮಾಡುವಾಗ ನಾನು ಕೇಳಿಕೊಂಡಿದ್ದು ಭಗವಂತ ನನಗೆ ಸಾವು ಕೊಡು ಅಂತ ಎಂದು ಸಂಜನಾ ಹೇಳಿದ್ದಾರೆ. ಆದರೆ ಈಗಲೂ ಸಂಜನಾ ತಾವು ಮದುವೆ ಆಗಿಲ್ಲ ಎಂದೇ ವಾದ ಮಾಡುತ್ತಿದ್ದಾರೆ.
ಅರ್ಚನಾ ಮನೋಹರ್ ಗರ್ಲಾನಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡುವಾಗ ಸಂಜನಾ ಗರ್ಲಾನಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಂಜನಾ, ವೈದ್ಯ ಅಜೀಝ್ ಪಾಶಾ ಮದುವೆಯಾಗಿರುವ ವಿಚಾರ ಇತ್ತೀಚೆಗೆ ಬಹಿರಂಗೊಂಡಿತ್ತು. ಸಂಜನಾಳ ಈ ಪ್ರೀತಿ ಹಾಗೂ ಮದುವೆ ಇಷ್ಟಕ್ಕೆ ನಿಲ್ಲಲಿಲ್ಲ. 2018ರಲ್ಲಿ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲೂಮ್ ಶಾಹ್ ವಲ್ಲಿಉಲ್ಲಾ ಮಸೀದಿಯಲ್ಲಿ ಸಂಜನಾ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿಯನ್ನು ಸುವರ್ಣ ನ್ಯೂಸ್ ಬಹಿರಂಗ ಮಾಡಿತ್ತು.
ಸಂಜನಾ ಅಲ್ಲ..ಮಹೀರಾ.. ಏನಿದು ಮತಾಂತರದ ಕತೆ?
ನಟಿ ಸಂಜನಾ ಗಲ್ರಾನಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ವಕೀಲ ಎನ್.ಪಿ.ಅಮೃತೇಶ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾಟನ್ ಪೇಟೆ ಪೊಲೀಸ್ ಠಾಣೆ, ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಡಿಸೆಂಬರ್ ನಲ್ಲಿ ದೂರು ನೀಡಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 12, 2021, 4:51 PM IST