Asianet Suvarna News

ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಸಂಜನಾ ಗಲ್ರಾಣಿ; ಈಗಿನ ಹೆಸರು ಮಾಹಿರಾ!

ಸ್ಯಾಂಡಲ್‌ವುಡ್ ಡ್ಗರ್ಸ್ ಪ್ರಕರಣ ತನಿಖೆ ಬೆನ್ನಲ್ಲೇ ಸುವರ್ಣನ್ಯೂಸ್ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗ ಪಡಿಸುತ್ತಿದೆ. 2 ವರ್ಷಗಳ ಹಿಂದೆ ಸಂಜನಾ ಗಲ್ರಾಣಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಸಂಜನಾ ಈಗಿನ ಹೆಸರು ಮಾಹಿರಾ. ಈ ಕುರಿತು ದಾಖಲೆ ಸಮೇತ ಸುವರ್ಣನ್ಯೂಸ್ ಮಾಹಿತಿ ಬಹಿರಂಗ ಪಡಿಸುತ್ತಿದೆ.

Exclusive Sandalwood actress sanjana galrani converted to islam she got herself rechristened as Mahira ckm
Author
Bengaluru, First Published Sep 18, 2020, 9:57 PM IST
  • Facebook
  • Twitter
  • Whatsapp

"

ಬೆಂಗಳೂರು(ಸೆ.18): ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿಸಿಬಿ ವಿಚಾರಣೆಯಲ್ಲಿ ನಟಿ ಸಂಜನಾ ಹಲವು ಮಾಹಿತಿ ಬಹಿರಂಗ ಪಡಿಸಿದ್ದಾರೆ. ಇದೀಗ ಸುವರ್ಣನ್ಯೂಸ್ ದಾಖಲೆ ಸಮೇತ ಸಂಜನಾ ಗಲ್ರಾಣಿ ಅಸತಿ ಕತೆ ಬಹಿರಂಗ ಪಡಿಸಿದೆ. 2 ವರ್ಷಗಳ ಹಿಂದೆ ಸಂಜನಾ ಗಲ್ರಾಣಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ.

"

ಅರ್ಚನಾ ಮನೋಹರ್ ಗಲ್ರಾಣಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡುವಾಗ ಸಂಜನಾ ಗಲ್ರಾಣಿಯಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಂಜನಾ, ವೈದ್ಯ ಅಝೀಝ್ ಪಾಶಾ ಮದುವೆಯಾಗಿರುವ ವಿಚಾರ ಇತ್ತೀಚೆಗೆ ಬಹಿರಂಗೊಂಡಿತ್ತು. ಸಂಜನಾಳ  ಈ ಪ್ರೀತಿ ಹಾಗೂ ಮದುವೆ ಇಷ್ಟಕ್ಕೆ ನಿಲ್ಲಲಿಲ್ಲ. 2018ರಲ್ಲಿ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲೂಮ್ ಶಾಹ್ ವಲ್ಲಿಉಲ್ಲಾ ಮಸೀದಿಯಲ್ಲಿ ಸಂಜನಾ ಇಸ್ಲಾಂಗೆ ಮತಾಂತರಗೊಂಡಿದ್ದಾರೆ.

"

 

ಅಕ್ಟೋಬರ್ 09 , 2018ರಂದು ದಾರುಲ್ ಉಲೂಮ್ ಶಾಹ್ ವಲ್ಲಿಉಲ್ಲಾ ಮಸೀದಿ ನೀಡಿರುವ ರಿಜಿಸ್ಟ್ರೇಶನ್ ದಾಖಲೆಯನ್ನು ಸುವರ್ಣನ್ಯೂಸ್ ಬಹಿರಂಗ ಪಡಿಸಿದೆ. ಈ ದಾಖಲೆಯಲ್ಲಿ ಅಕ್ಟೋಬರ್ 9, 2018ರಿಂದ ಸಂಜನಾ ಗಲ್ರಾಣಿ ಮಾಹೀರಾ ಆಗಿ ಬದಲಾಗಿದ್ದಾರೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳಲು ಯಾರು ಒತ್ತಡ ಹಾಕಿಲ್ಲ, ಸ್ವಯಂ ಇಚ್ಚೆಯಿಂದ ಇಸ್ಲಾಂಗೆ ಮತಾಂತರವಾಗಿರುವುದಾಗಿ ದಾಖಲೆಯಲ್ಲಿ ಹೇಳಿದೆ. 

"

Follow Us:
Download App:
  • android
  • ios