Asianet Suvarna News Asianet Suvarna News

ಸಲಿಂಗಿಯಲ್ಲ, ನಾನೂ ಗಂಡ್ಸೇ: ಬಾಲಿವುಡ್ ಸ್ಟಾರ್ಸ್ ಜೊತೆ ಕಾಣಿಸಿಕೊಳ್ಳೋ ಓರಿ ಸ್ಪಷ್ಟನೆ!

ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಮೂಲಕ ಸಖತ್ ಫೇಮಸ್ ಆಗಿರುವ ಓರ್ಹಾನ್ ಅಲಿಯಾಸ್ ಓರಿ ಈಗ ತನ್ನನ್ನು ಹಿಜಿಡಾ, ಸಲಿಂಗಿ ಚಕ್ಕಾ ಎಂದೆಲ್ಲಾ ಕರೆಯುವ ನೆಟ್ಟಿಗರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದು,  ತಾನು ಹಿಜ್ಡಾ ಅಲ್ಲ ನಾನೊರ್ವ ಪುರುಷ ಎಂದು ಹೇಳಿಕೊಂಡಿದ್ದಾರೆ.

I am a Man Orhan Awatramani replies netizens Abusive comments in Social Media akb
Author
First Published Nov 25, 2023, 4:25 PM IST

ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಮೂಲಕ ಸಖತ್ ಫೇಮಸ್ ಆಗಿರುವ ಓರ್ಹಾನ್ ಅಲಿಯಾಸ್ ಓರಿ ಈಗ ತನ್ನನ್ನು ಹಿಜಿಡಾ, ಸಲಿಂಗಿ ಚಕ್ಕಾ ಎಂದೆಲ್ಲಾ ಕರೆಯುವ ನೆಟ್ಟಿಗರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದು,  ತಾನು ಹಿಜ್ಡಾ ಅಲ್ಲ ನಾನೊರ್ವ ಪುರುಷ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯವಾಗಿ ಅಸಭ್ಯವಾಗಿ ಕಾಮೆಂಟ್ ಮಾಡುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

ಇಶಾ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್‌ನಲ್ಲಿ ಮ್ಯಾನೇಜರ್ ಆಗಿರುವ ಓರಿ ಬಾಲಿವುಡ್‌ನ ಸೆಲೆಬ್ರಿಟಿಗಳಿಗೆಲ್ಲಾ ಬಲು ಅಚ್ಚುಮೆಚ್ಚು ಬಾಲಿವುಡ್ ನಟಿ ಸಾರಾ ಅಲಿಖಾನ್ ಕ್ಲಾಸ್‌ಮೇಟ್ ಆಗಿರುವ ಓರಿ ಕೇವಲ ಬಾಲಿವುಡ್ ನಟ ನಟಿಯರು ಮಾತ್ರವಲ್ಲದೇ ಭಾರತದ ಹಲವು ಅತೀ ಶ್ರೀಮಂತರ ಮಕ್ಕಳ ಜೊತೆಯೂ ಬಹಳ ಆತ್ಮೀಯ ಸಂಬಂಧ ಹೊಂದಿದ್ದು, ಬಾಲಿವುಡ್‌ನ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಈ ಓರಿ ಇದ್ದೇ ಇರುತ್ತಾರೆ.  ಬರೀ ಇರೋದು ಮಾತ್ರ ಅಲ್ಲ ಅಲ್ಲಿಗೆ ಬರುವ ಬಹುತೇಕ ನಟ ನಟಿಯರ ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತಾರೆ.

ಇಶಾ ಅಂಬಾನಿ ಅವಳಿ ಮಕ್ಕಳ ಬರ್ತ್‌ಡೇ ಪಾರ್ಟಿಗೆ ಓರಿ ಹಾಕ್ಕೊಂಡು ಬಂದ ಡ್ರೆಸ್ ಬೆಲೆ ಇಷ್ಟೊಂದಾ?

ನಟಿಯರು ಕೂಡ ಯಾವುದೇ ಮುಜುಗರವಿಲ್ಲದೇ ಓರಿಯನ್ನು ತಬ್ಬಿಕೊಂಡು ಫೋಸ್ ಕೊಡುತ್ತಾರೆ. ಬಾಲಿವುಡ್‌ ನಟಿಯರಾದ ಕರೀನಾ, ಕರೀಷ್ಮಾ, ಇಬ್ರಾಹಿಂ ಅಲಿಖಾನ್, ವರುಣ್ ಧವನ್, ದೀಪಿಕಾ ಪಡುಕೋಣೆ, ಶಾರೂಕ್ ಪುತ್ರಿ ಸುಹಾನಾ, ಅಲಿಯಾ ಭಟ್, ಕರಣ್ ಜೋಹರ್, ಖುಷಿ ಕಪೂರ್, ಅನನ್ಯಾ ಪಾಂಡೆ ಹೀಗೆ ಓರಿ ಜೊತೆ ಫೋಟೋ ತೆಗೆಸಿಕೊಂಡು ಮುದ್ದಾಡುವ ಬಾಲಿವುಡ್ ನಟ ನಟಿಯರ ಉದ್ದಲಿಸ್ಟೇ ಇದೆ. 

ಆದರೆ ಈ ಓರಿ ಫೋಟೋಗೆ ಫೋಸ್ ನೀಡುವ ಸ್ಟೈಲೇ ಒಂಥರಾ ವಿಚಿತ್ರ ನೋಡಿ, ಬಹುತೇಕ ಫೋಟೋಗಳಲ್ಲಿ ಆತ ನಟಿಯರ ಎದೆ ಮೇಲೆ ಕೈ ಇಡುತ್ತಾನೆ ಅಥವಾ ತೊಡೆ ಮೇಲೆ ಕೈ ಇಡುತ್ತಾನೆ. ನಟಿಯರು ಕೂಡ ಯಾವುದೇ ಮುಜುಗರವಿಲ್ಲದೇ ಅದೇ ರೀತಿ ಫೋಟೋ ತೆಗೆಸಿಕೊಳ್ಳುತ್ತಾರೆ. ಇದು ಬಹುತೇಕ ತಾರೆಯರ ಅಭಿಮಾನಿಗಳು ಮಾತ್ರವಲ್ಲದೇ ಜನ ಸಾಮಾನ್ಯರ ಕುತೂಹಲಕ್ಕೆ ಕಾರಣವಾಗಿದ್ದು, ಈತನ ಫೋಟೋಗಳನ್ನು ಪಾಪರಾಜಿಗಳು ಪೋಸ್ಟ್ ಮಾಡಿದಾಗಲೆಲ್ಲಾ ಅನೇಕರು ಈತ ಯಾರು ಎಂಬ ಕುತೂಹಲದ ಜೊತೆ ಯಾಕೆ ಈತ ಈ ರೀತಿ ವಿಚಿತ್ರವಾಗಿ ಪೋಸ್ ನೀಡ್ತಾನೆ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಆತನ ಡ್ರೆಸ್ಸಿಂಗ್ ಸ್ಟೈಲ್ ಕೂಡ ಕಾರಣ. ಬಹುತೇಕ ವೈರಲ್ ಆದ ಫೋಟೋಗಳಲ್ಲಿ ಓರಿ ಹೂಗಳ ಪ್ರಿಂಟ್ ಇರುವ ಡ್ರೆಸ್ ಅಥವಾ ಹೆಣ್ಣು ಮಕ್ಕಳು ಇಷ್ಟಪಡುವಂತಹ ಶೈನಿ ಶೈನಿ ಡ್ರೆಸ್‌ಗಳನ್ನು ಧರಿಸಿದ್ದಾನೆ.

ಬಿಟೌನ್ ನಟಿಯರ ಜೊತೆ ಮತ್ತೆ ಮಿಂಚಿದ ಓರಿ: ಈತ ತೊಡೆ ಎದೆ ಮೇಲೆ ಕೈ ಇಟ್ರೂ ಇವರು ತಣ್ಣಗಿರೋದೇಕೆ?

ಇದೇ ಕಾರಣಕ್ಕೆ ಬಹುತೇಕರು ಈತನ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡ್ತಾರೆ. ಫೋಟೋಗಳು ಪೋಸ್ಟ್ ಆದಾಗಲೆಲ್ಲಾ ಬಹುತೇಕರು ಈತನನ್ನು ಹಿಜ್ಡಾ ಕೋಜಾ, ಮಂಗಳಮುಖಿ, ಸಲಿಂಗಿ, ಈತ ಹೆಣ್ಣು, ಈತ ಗಂಡಲ್ಲ, ಹೀಗೆಲ್ಲಾ ಅವಮಾನಕಾರಿಯಾಗಿ ನಿಂದನೆಗಿಳಿಯುತ್ತಾರೆ. ಇವುಗಳನ್ನೆಲ್ಲಾ ಇಷ್ಟು ದಿನ ನೋಡ್ತಾನೆ ಇದ್ದ ಓರಿ ಈ ನಿಂದನಾತ್ಮಕ ಕಾಮೆಂಟ್ ಬಗ್ಗೆ ಈಗ ಫುಲ್ ಗರಂ ಆಗಿದ್ದು, ನಾನು ಗಂಡ್ಸೆ ಎಂದು ಪೋಸ್ಟ್ ಮಾಡಿದ್ದಾನೆ ಓರಿ.

ಹುಡುಗಿಯೊಬ್ಬಳು ಇನ್ಸ್ಟಾಗ್ರಾಮ್‌ಗೆ ನೀವು ಯಾವ ಪೇಜ್‌ಗೆ ಹೋಗಲಿ ಅಲ್ಲಿ ಈ ಟ್ರಾನ್ಸ್‌ ಇರುತ್ತಾನೆ. ಈ ಇಡಿಯಟ್ ಅನ್ನು ಯಾಕೆ ಸೋಶಿಯಲ್ ಮೀಡಿಯಾದಿಂದ ಬ್ಯಾನ್ ಮಾಡ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾಳೆ. ಈಕೆಯ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ಓರಿ, ಆಕೆಗೆ ನಿನ್ನ ಬಾಯನ್ನು ಸೋಪಿನಿಂದ ತೊಳೆದು ಬಿಡು, ಈ ರೀತಿ ಮಾತನಾಡುವುದು ನಿನ್ನ ಪೋಷಕರಿಗೆ ಅವಮಾನಿಸಿದಂತೆ, ಏಕೆಂದರೆ ಅವರು ಮಕ್ಕಳನ್ನು ಹೇಗೆ ಬೆಳೆಸಿದ್ದಾರೆ ಎಂದು ಯೋಚಿಸುವಂತಾಗಿದೆ. ಡಿಪಿ ನೋಡಿದರೆ ಮುಗ್ಧ ಮುದ್ದಾದ ಹುಡುಗಿಯಂತೆ ಕಾಣುವೆ. ಆದರೆ ನೀನು ವಿಷ ತುಂಬಿದ ಹಾವು. ನಾನೊಬ್ಬ ಪುರುಷ. ಆದರೆ ಒಂದು ಸಮುದಾಯವನ್ನು ನೀನು ನಿನ್ನ ಕೆಟ್ಟ ಪದಗಳಿಂದ ಅವಮಾನಿಸುತ್ತಿದ್ದೀಯಾ ಎಂದು ಓರಿ ಬರೆದುಕೊಂಡಿದ್ದಾನೆ. 

ನೋಡಲು ವಿಚಿತ್ರ ಅನಿಸೋ ಈ ಓರಿ ನೋಡಿದ್ರೆ ಬಾಲಿವುಡ್ ಮಂದಿ ಹಿಂಗ್ಯಾಕೆ ಆಡ್ತಾರೆ? ಡ್ರಗ್ ಪೆಡ್ಲರ್ ಅಂತನಾ?

ಸದ್ಯ ಓರಿ ಹಿಂದಿ ಬಿಗ್‌ಬಾಸ್ 17ರ ಮನೆಗೆ ವೈಲ್ಡ್‌ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಓರಿ ಯಾರು ಎಂಬ ಕೋಟ್ಯಾಂತರ ಜನರ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

Follow Us:
Download App:
  • android
  • ios