Asianet Suvarna News Asianet Suvarna News

ಅಕಾಡಿಮಿ ನಿರ್ಧಾರವನ್ನು ಗೌರವಿಸುತ್ತೇನೆ; ಆಸ್ಕರ್ ನಿಂದ ಬ್ಯಾನ್ ಆದ ವಿಲ್ ಸ್ಮಿತ್ ಪ್ರತಿಕ್ರಿಯೆ

ನಟ ಕ್ರಿಸ್ ರಾಕ್(Chris Rock) ಕಪಾಳಕ್ಕೆ ಹೊಡೆದ ಪ್ರಕರಣ ಸಂಬಂಧ ಖ್ಯಾತ ನಟ ವಿಲ್ ಸ್ಮಿತ್(Will Smith) ಅವರನ್ನು ಆಸ್ಕರ್ ನಿಂದ 10 ವರ್ಷ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ನಟ ವಿಲ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದು 'ನಾನು ಅಕಾಡೆಮಿಯ ನಿರ್ಧಾರವನ್ನು ಸ್ವೀಕರಿಸುತ್ತೇನೆ ಮತ್ತು ಗೌರವಿಸುತ್ತೇನೆ' ಎಂದು ಹೇಳಿದರು.

I Accept And Respect The Academy Decision says Will Smith On 10-Year Oscars Ban
Author
Bengaluru, First Published Apr 9, 2022, 5:58 PM IST

ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್(Chris Rock) ಕಪಾಳಕ್ಕೆ ಹೊಡೆದ ಪ್ರಕರಣ ಸಂಬಂಧ ಖ್ಯಾತ ನಟ ವಿಲ್ ಸ್ಮಿತ್(Will Smith) ಅವರನ್ನು ಆಸ್ಕರ್ ನಿಂದ 10 ವರ್ಷ ಬ್ಯಾನ್ ಮಾಡಲಾಗಿದೆ. ಆಸ್ಕರ್ ಪ್ರಶಸ್ತಿ ವಿತರಿಸುವ 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆಂಡ್ ಸೈನ್ಸ್' ಸಂಸ್ಥೆಯೂ ಶುಕ್ರವಾರ (ಏಪ್ರಿಲ್ 08) ಈ ನಿರ್ಧಾರ ತಿಳಿಸಿದೆ. ಈ ಬಗ್ಗೆ ನಟ ವಿಲ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. ಪೇಜ್ ಸಿಕ್ಸ್ ನೊಂದಿಗೆ ಮಾತನಾಡಿದ ಸ್ಮಿತ್, 'ನಾನು ಅಕಾಡೆಮಿಯ ನಿರ್ಧಾರವನ್ನು ಸ್ವೀಕರಿಸುತ್ತೇನೆ ಮತ್ತು ಗೌರವಿಸುತ್ತೇನೆ' ಎಂದು ಹೇಳಿದರು.

ಶುಕ್ರವಾರ ನಡೆದ ಸಭೆಯಲ್ಲಿ ವಿಲ್ ಸ್ಮಿತ್ ವಿರುದ್ಧ ಶಿಕ್ತು ಕ್ರಮ ಜರುಗಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ ವಿಲ್ ಸ್ಮಿತ್ ಅವರನ್ನು ಮುಂದಿನ 10 ವರ್ಷಗಳು ಆಸ್ಕರ್ ನಲ್ಲಿ ಭಾಗವಹಿಸುವಂತಿಲ್ಲ ಎಂದು ನಿರ್ಧಾರ ತೆಗುದುಕೊಳ್ಳಲಾಗಿದೆ. ಇದು ವಿಲ್ ಸ್ಮಿತ್ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ.

ಮುಂದಿನ 10 ವರ್ಷಗಳಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಅಂಡ್ ಸೈನ್ಸ್ ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಸ್ಮಿತ್ ಭಾಗವಹಿಸುಂತಿಲ್ಲ. ಆದರೆ ಸ್ಮಿತ್ ಈ ಬಾರಿ ಪಡೆದ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯನ್ನು ಹಿಂಪಡೆದಿಲ್ಲ.

ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದ ಪ್ರಕರಣ; ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ ವಿಲ್ ಸ್ಮಿತ್

ಪತ್ನಿ ಬಗ್ಗೆ ತಮಾಷೆ ಮಾಡಿದ್ದಕ್ಕೆ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ಸ್ಮಿತ್

ಮಾರ್ಚ್ 27ರಂದು ನಡೆದ ಆಸ್ಕರ್ ಸಮಾರಂಭದಲ್ಲಿ ಡಾಕ್ಯುಮೆಂಟರಿ ಫೀಚರ್ ವಿಭಾಗದ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್, ನಟ ವಿಲ್ ಸ್ಮಿತ್ ಪತ್ನಿ, ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ತಮಾಷೆ ಮಾಡಿದ್ದರಿಂದ ನಟ ವಿಲ್ ಸ್ಮಿತ್ ಅವರಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು, ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕ್ರಿಸ್ ರಾಕ್ ತನ್ನ ಪತ್ನಿಯ ಬಗ್ಗೆ ತಮಾಷೆ ಮಾಡಿದ ಕಾರಣಕ್ಕೆ ವೇದಿಕೆಯ ಮೇಲೆ ಹೋಗಿ ವಿಲ್ ಸ್ಮಿತ್ ಕಪಾಳಕ್ಕೆ ಬಾರಿಸುವ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದ್ದರು. ಕಪಾಳಕಕ್ಕೆ ಬಾರಿಸಿ ಬಂದ ಸ್ಮಿತ್ ನನ್ನ ಪತ್ನಿ ಬಗ್ಗೆ ಮಾತನಾಬೇಡ ಎಂದು ಕಿರುಚಾಡಿದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು' ಎಂದು ಸ್ಮಿತ್ ಕೂಗಾಡಿದ್ದರು.

ಈ ಘಟನೆ ಎಲ್ಲರಿಗೂ ಶಾಕ್ ನೀಡಿದ್ದು. ಕಪಾಳಕ್ಕೆ ಬಾರಿಸಿದ ಕೆಲವೇ ನಿಮಿಷಗಳಲ್ಲಿ ವಿಲ್ ಸ್ಮಿತ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದು ಬೀಗಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಲ್ ಸ್ಮಿತ್ ಕಣ್ಣೀರು ಹಾಕಿದ್ದರು. ವಿವಾದ ಬಳಿಕ ವಿಲ್ ಸ್ಮಿತ್ ಕ್ಷಮೆ ಕೇಳಿದರು ಸಹ ಈ ಬಗ್ಗೆ ಚರ್ಚೆ ಮುಂದುವರೆದಿತ್ತು. ವಿಲ್ ಸ್ಮಿತ್ ವಿರುದ್ಧಕ್ರಮ ತೆಗೆದುಕೊಳ್ಳುವಂತೆ ಅನೇಕರು ಆಗ್ರಹಿಸಿದ್ದರು.

Oscar ವೇದಿಕೆಯಲ್ಲಿ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ವಿಲ್ ಸ್ಮಿತ್ ಬಗ್ಗೆ ತಾಯಿ ಪ್ರತಿಕ್ರಿಯೆ

ಈ ಪ್ರಕರಣ ಬಳಿಕ ನಟ ವಿಲ್ ಸ್ಮಿತ್ ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ್ದರು. ಅಲ್ಲದೆ ಸಂಸ್ಥೆಯು ವಿಧಿಸುವ ಯಾವುದೇ ಶಿಕ್ಷೆಯನ್ನು ಸ್ವೀಕರಿಸುವುದಾಗಿ ಹೇಳಿದರು. 'ನನ್ನ ನಡವಳಿಕೆ 94ನೇ ಅಕಾಡೆಮಿ ಅವಾರ್ಡ್ ನಲ್ಲಿ ನನ್ನ ಕ್ರಮ ಆಘಾತಕಾರಿಯಾಗಿತ್ತು. ಅತಿಯಾದ ನೋವು ಮತ್ತು ಕ್ಷಮಿಸಲಾಗದ್ದು ಎಂದು ಹೇಳಿದ್ದರು. ನಾನು ಅಕಾಡೆಮಿಗೆ ನಂಬಿಕೆ ದ್ರೋಹ ಮಾಡಿದ್ದೇನೆ. ಇತರ ನಾಮನಿರ್ದೇಶಿತರು ಮತ್ತು ವಿನ್ನರ್ಸ್ ಅವರ ಅಸಮಾನ್ಯ ಶ್ರಮಕ್ಕೆ ಸಿಕ್ಕ ಸಂತಸವನ್ನು ಆಚರಿಸುವ ಅವಕಾಶ ನಾನು ಕಿತ್ತುಕೊಂಡೆ. ನಾನು ಕುಸಿದುಹೋಗಿದ್ದೀನಿ. ಹಿಂಸಾಚಾರಕ್ಕೆ ನಾನು ಇನ್ನೆಂದಿಗೂ ಅನುಮತಿಸಲ್ಲ' ಎಂದು ಹೇಳಿದ್ದರು.

ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್, ನಮ್ಮ ಮುಂದಿನ ಮಂಡಳಿಯ ಸಭೆಯ ಮುಂಚಿತವಾಗಿ ನಡವಳಿಕೆಯ ಮಾನದಂಡನೆಗಳ ಉಲ್ಲಂಘನೆಗಾಗಿ ಸ್ಮಿತ್ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಇದೀಗ 10 ವರ್ಷಗಳ ಕಾಲ ಬ್ಯಾನ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಸ್ಮಿತ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

Follow Us:
Download App:
  • android
  • ios